ಕುಂದಾಪುರ: ಮಂಗಳೂರಿನಿಂದ ನಾಗಪುರಕ್ಕೆ ಎಂ ಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಕೋಟೇಶ್ವರ ಸಮೀಪ ಅಂಕದ ಕಟ್ಟೆಯಲ್ಲಿ ಡಿವೈಡರಿಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿದೆ.
ಮಂಗಳೂರಿನ ಎಂಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸುತ್ತಿದ್ದ 17 ಚಕ್ರದ ಲಾರಿ ಇಂದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚೀಲಗಳೆಲ್ಲ ಸರ್ವಿಸ್ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.
ಅಪಘಾತದಲ್ಲಿ ಚಾಲಕ ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗಿನ ಜಾವ ರಸ್ತೆ ಸಂಚಾರ ವಿರಳವಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ಬೇರೆ ಯಾವುದೇ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದ್ದರೆ ಪ್ರಾಣಕ್ಕೆ ಕಂಟಕವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Jananudi News Network
ಕುಂದಾಪುರ – ಟೀಚರ್ ಟ್ರೈನಿಂಗ್ ಅಕಾಡೆಮಿ “ಸೈನ್ಸ್ಟೀಚಿಂಗ್ಸ್ಕಿಲ್ಸ್” ವಿಶೇಷಕಾರ್ಯಾಗಾರ
ಕುಂದಾಪುರ (ಡಿ. 4): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಗೆ “ಸೈನ್ಸ್ ಟೀಚಿಂಗ್ ಸ್ಕಿಲ್ಸ್” ಕುರಿತ ವಿಶೇಷ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕವಿತಾ ಭಟ್ ಮತ್ತು ರವಿಚಂದ್ರ ಇವರು ಪಾಲ್ಗೊಂಡು ತಮ್ಮ ಅನುಭವನ್ನು ಹಂಚಿಕೊಂಡರು.
ಪ್ರೀಸ್ಕೂಲ್ ಶಿಕ್ಷಕರಿಗೆ ಮಕ್ಕಳಿಗೆ ವಿಜ್ಞಾನ ಕಲಿಸುವುದು ಹೇಗೆ ಸರಳ ಮತ್ತು ಆಕರ್ಷಕವಾಗಿರಬಹುದು ಎಂಬುದರ ಬಗ್ಗೆ ತರಬೇತಿ ನೀಡುವುದರ ಮೂಲಕ ತಮ್ಮ ಪ್ರಸ್ತುತಿಯಲ್ಲಿ, “ಚಿಕ್ಕ ಮಕ್ಕಳಿಗೆ ಕಲಿಕೆ ಪ್ರಕ್ರಿಯೆ ಆಟದ ಆಧಾರದಲ್ಲಿ ನಡೆಯಬೇಕು” ಎಂಬುದನ್ನು ಒತ್ತಿಹೇಳಿ, ಕಲಿಕೆಯ ಸಲಕರಣೆಗಳ ರೂಪುರೇಷೆ, ಆಕರ್ಷಕ ಚಟುವಟಿಕೆಗಳ ಮಹತ್ವವನ್ನು ಕವಿತಾ ಭಟ್ ವಿವರಿಸಿದರು.
ರವಿಚಂದ್ರ ಇವರು ತಮ್ಮ ಅನನ್ಯ ಶೈಲಿಯ ಮೂಲಕ, ಚಿಕ್ಕ ಮಕ್ಕಳ ಮನಸ್ಸನ್ನು ಸೃಜನಶೀಲತೆಯಿಂದ ತುಂಬಿಸುವಂತೆ ಪ್ರಾಯೋಗಿಕ ಚಟುವಟಿಕೆಗಳನ್ನು ಹಾಗೂ ಮಕ್ಕಳಿಗೆ ಬಣ್ಣಗಳ ಸಂಯೋಜನೆ, ಬೆಳಕು ಮತ್ತು ನೆರಳಿನ ಆಟ, ಮತ್ತು ಸಣ್ಣ ರಸಾಯನ ಪ್ರಕ್ರಿಯೆಗಳ ಪ್ರಸ್ತುತಪಡಿಸಿದರು.
ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು. ಶಿಕ್ಷಕ ವಿದ್ಯಾರ್ಥಿನಿಯರಾದ ರಜನಿ, ಶಾಲಿನಿ ಮತ್ತು ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಎಸ್ಎಂ ಕೃಷ್ಣ ವಿಧಿ ವಶ: ರಾಜ್ಯದಲ್ಲಿ 3 ದಿನ ಶೋಕಾಚರಣೆ- ನಾಳೆ ಡಿಸೆಂಬರ್ 11 ರಂದು ಸರ್ಕಾರಿ ರಜೆ ಘೋಷಣೆ
ಬೆಂಗಳೂರು, ಡಿ. 10; ರಾಜ್ಯ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ 3 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ ಇದೇ ವೇಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಡಿಸೆಂಬರ್ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದ್ದು, ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಾಗುವುದು ಎಂದು. ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಇವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ಎಂ ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಡಾ. ಸತ್ಯನಾರಾಯಣ ಮೈಸೂರು, ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಕೃಷ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ನಲ್ಲೇ ಪ್ರಬಲ ನಾಯಕರಾಗಿದ್ದ ಎಸ್ಎಂ ಕೃಷ್ಣ, ರಾಜಕೀಯ ಜೀವನದ ಕೊನೆಗಾಲದಲ್ಲಿ, 2017 ರ ಜನವರಿ 29 ರಂದು ಕಾಂಗ್ರೆಸಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2017 ರ ಮಾರ್ಚ್ನಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.
ವಯೋಸಹಜ ಅನಾರೋಗ್ಯ ಮತ್ತು ಇತರ ಕಾರಣಗಳಿಂದಾಗಿ 2023 ರ ಜನವರಿ 7 ರಂದು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದರು. ಪ್ರೇಮಾ ಅವರನ್ನು ವಿವಾಹವಾಗಿದ್ದ ಎಸ್ಎಂ ಕೃಷ್ಣಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ತಲ್ಲೂರು ಸಂತ ಫ್ರಾನ್ಸಿಸ್ ಆಸ್ಟಿಸಿ ಇಗರ್ಜಿಯಲ್ಲಿ ಇಗರ್ಜಿಯ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಭ್ರಾತೃತ್ವ ಬಾಂಧವ್ಯ ದಿನ
REPORT / PHOTOS : JOHNSON MENEZES EDITOR : BERNARD DCOSTA
ಕುಂದಾಪುರಃ ತಲ್ಲೂರು, ಸಂತ ಫ್ರಾನ್ಸಿಸ್ ಆಸ್ಟಿಸಿ ಇಗರ್ಜಿಯಲ್ಲಿ ಡಿಸೆಂಬರ್ 8ರಂದು ಇಗರ್ಜಿಯ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಭ್ರಾತೃತ್ವ ಬಾಂಧವ್ಯ ದಿನದ (ಕೊಂಪ್ರಿ ಆಯ್ತಾರ್ ) ಪ್ರಯುಕ್ತ “ಪವಿತ್ರ ಬಲಿದಾನ, ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ ” ಬಹಳ ವಿಜೃಂಭಣೆಯಿಂದ ನಡೆಯಿತು.
ಪ್ರಧಾನ ಗುರುಗಳಾಗಿ ಬೈಂದೂರು ಹೊಲಿ ಕ್ರಾಸ್ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಫಾ.ವಿನ್ಸೆಂಟ್ ಕುವೆಲ್ಲೊ
ಧಾರ್ಮಿಕ ವಿಧಿಯನ್ನು ನಡೆಸಿಕೊಟ್ಟು ‘ಒಂದು ಕುಟುಂಬ ಯಾವಾಗ ಜೊತೆ ಜೊತೆಯಾಗಿ ಪ್ರಾರ್ಥನೆ ಮಾಡುವುದೋ, ಯಾವಾಗ ಜೊತೆಯಾಗಿ ಭೋಜನ ಮಾಡುವುದೋ ಆ ಕುಟುಂಬ ಜೊತೆಯಾಗಿ ಬಾಳುವುದು.ನಮ್ಮ ಕುಟುಂಬದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದನ್ನು
ಸರಿಪಡಿಸಿಕೊಂಡು, ನಮ್ಮ ಮನಸ್ಸನ್ನು ಶುದ್ಧೀಕರಿಸಿ ,ಜೀವನ ಬದಲಾಯಿಸಿ, ಉತ್ತಮ ಭಾಂದವ್ಯದೊಂದಿಗೆ ಬಾಳಿ ದೇವರ ಸನಿಹ ಬರಲು ಪ್ರತಿಯೊಬ್ಬರು ಪ್ರಯತ್ನಿಸಬೇಕು’ ಎಂದು ಅವರು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ,ಧರ್ಮಗುರುಗಳು,ಅಪಾರ ಭಕ್ತಾದಿಗಳೊಂದಿಗೆ ಭಕ್ತಿ ಭಾವದಿಂದ ಪರಮ ಪ್ರಸಾದದ ಪುರ ಮೆರವಣಿಗೆ ನಡೆಸಿ
ಪರಮ ಪ್ರಸಾದದ ಆಶೀರ್ವಾದ ನೀಡಿದರು. ಪಾಲನಾ ಮಂಡಳಿಯ ಸದಸ್ಯರು ಹಾಗೂ ಕ್ರೈಸ್ತ ಶಿಕ್ಷಣ ಶಿಕ್ಷಕರು ಮೆರವಣಿಗೆಯಲ್ಲಿ ಸಹಕರಿಸಿದರು.
ಧಾರ್ಮಿಕ ವಿಧಿ ವಿಧಾನಗಳು ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಫಾ.ಎಡ್ವಿನ್ ಡಿಸೋಜರ ಯಲ್ಲಿ
ನಡೆಯಿತು. ಅವರು ಧ್ರರ್ಮಗುರುಗಳಿಗೆ, ದಾನಿಗಳಿಗೆ ಮೇಣದ ಬತ್ತಿ ನೀಡಿ ಗೌರವಿಸಿದರು ಹಾಗೂ ಪ್ರಾರ್ಥನಾ ವಿಧಿಯಲ್ಲಿ.
ಸಹಕರಿಸಿದ ಸರ್ವರಿಗೂ ವಂದಿಸಿದರು.
ಶ್ರೀನಿವಾಸಪುರ – ಮೀಸಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ವರಸಿದ್ಧ ವಿನಾಯಕ, ಆದಿನಾಗ ಸಮೇತ ಏಕಾದಶ ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ
ಶ್ರೀನಿವಾಸಪುರ ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ವರಸಿದ್ಧ ವಿನಾಯಕ, ಆದಿನಾಗ ಸಮೇತ ಏಕಾದಶ ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು.
ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ
ಶ್ರೀನಿವಾಸಪುರ: ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ವರಸಿದ್ಧ ವಿನಾಯಕ, ಆದಿನಾಗ ಸಮೇತ ಏಕಾದಶ ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಕಳಶಾರಾಧನೆ, ಹಣಹೋಮ, ಮೂರ್ತಿಹೋಮ, ರುದ್ರಹೋಮ, ನಾಗಹೋಮ, ಕಳಸ್ಯಾಸಹೋಮ, ನೇತ್ರೋನ್ಮಿಲನ, ಪ್ರಾಣಪ್ರತಿಷ್ಠೆ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಶೀರ್ವಚನ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇವಾಲಯದ ಧರ್ಮದರ್ಶಿ ಎಂ.ಗೋಪಾಲಕೃಷ್ಣ ಮಾತನಾಡಿ, ಹಿಂದೆ ಈಗ ದೇವಾಲಯವಿರುವ ಸ್ಥಳದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ನಾಗರ ಪಂಚಮಿ ಆಚರಿಸುತ್ತಿದ್ದರು. ಆದ್ಧರಿಂದ ಭಕ್ತಾದಿಗಳ ಆಶಯದಂತೆ ಹಾಗೂ ದೈವಾದೇಶದ ಮೇರೆಗೆ ನಮ್ಮ ಸ್ವಂತ ಜಮೀನಿನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುಂತೆ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಸಾರ್ವಜನಿಕರು ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಅರ್ಚಕರು ಹಾಗೂ ಪ್ರಧಾನ ಆಗಮಿಕರಾದ ಅನಿಲ್ ಕುಮಾರ್ಶರ್ಮ, ಶಿಲ್ಪಿ ಎಸ್.ಮಂಜುನಾಥಾಚಾರಿ, ಧರ್ಮಕರ್ತರಾದ ಮುನಿಯಮ್ಮ, ಎಂ.ಎಲ್.ಮುನಿವೆಂಕಟಪ್ಪ, ಮುಖಂಡರಾದ ಸೊಣ್ಣಪ್ಪರೆಡ್ಡಿ, ರಾಘವೇಂದ್ರ, ರಘು, ಸುನಿಲ್, ಶ್ರೀರಾಮಪ್ಪ, ಕೃಷ್ಣಪ್ಪ, ಶ್ರೀನಿವಾಸ್, ಗಿರೀಶ್, ಮುನಿವೆಂಕಟಪ್ಪ, ಸುರೇಶ್ ರೆಡ್ಡಿ, ಶ್ರೀನಾಥರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀನಿವಾಸಪುರ : ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಬಲಾಢ್ಯರು ಒತ್ತುವರಿ ಮಾಡಿ ಕೊಂಡಿರುವ ಜಮೀನುಗಳಿಗೆ ಸಂಬಂಧಿಸಿತಂತೆ ಅರೆ ಬೆತ್ತಲೆ ಪ್ರತಿಭಟನೆ
ಶ್ರೀನಿವಾಸಪುರ : ಸೋಮವಾರ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಬಲಾಢ್ಯರು ಸಾವಿರಾರು ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಜಮೀನುಗಳಿಗೆ ಸಂಬಂಧಿಸಿತಂತೆ ಜಂಟಿ ಸರ್ವೆ ನಡೆಸಬೇಕು ಎಂದು ಆಗ್ರಹಿಸಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಲು ಕುಳತ್ತಿದ್ದರು.
ಪ್ರತಿಭಟನೆ ವೇಳೆ ಅಂಬೇಡ್ಕರ್, ಮಹಾತ್ಮ ಗಾಂದಿ ಹಾಗು ರಮೇಶ್ ಕುಮಾರ ರವರ ಭಾವಚಿತ್ರವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಇದನ್ನು ಗೌನಿಪಲ್ಲಿ ಗ್ರಾ.ಪಂ.ಮಾಜಿ ಸದ್ಯಸ ರಮೇಶ್ ಬಾಬು ರಮೇಶ್ ಕುಮಾರ್ ಪೋಟೋ ಏಕೆ ಇಟ್ಟುಕೊಳ್ಳಬೇಕು ಅವರಿಗೆ ಹೆಸರಿಗೆ ತೇಜೋವಧೆ ತರಬೇಡಿ ಎಂದು ಪ್ರಶ್ನಿದಾಗ ರೈತ ಮುಖಂಡರ ಹಾಗು ರಮೇಶ್ ಬಾಬುರವರ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರು ತಹಶೀಲ್ದಾರ್ ಕಚೇರಿ ಅವರವಣನ್ನು ಸೇರಿಕೊಂಡರು. ಪ್ರತಿಭಟನಾ ನಿತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿದ್ದು ಪೊಲೀಸರು ಮಧ್ಯಪ್ರವೇಶಿಸಿ ಎರಡು ಕಡೆ ಕಾರ್ಯಕರ್ತರನ್ನು ಚದುರಿಸಿದರು.
ರೈತರಲ್ಲ ಪೇಮೆಂಟ್ ಗಿರಾಕಿಗಳು ಕಾಂಗ್ರೆಸ್ ಕಾರ್ಯಕರ್ತರು ಕೂಗಿದರು : ಇಂದು ರೈತ ಸಂಘದ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ಮುಖಂಡ ನಾರಾಯಣಗೌಡ ಬಣದವರು ನಿಜವಾದ ರೈತರಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಇವರು ನಿಜವಾದ ರೈತರಲ್ಲ ಪೇಮೆಂಟ್ ಗಿರಾಕಿಗಳು ಎಂದು ರೈತ ಮುಖಂಡರ ವಿರುದ್ಧ ದಿಕ್ಕಾರ ಕೂಗಿ, ರಮೇಶ್ ಕುಮಾರ್ ರವರಿಗೆ ಜೈಕಾರ ಹೇಳುತ್ತಾ ರೈತ ಸಂಘದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧ ಮುಗಿಬಿದ್ದರು. ಈ ಸಮಯದಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆ ಜಾಸ್ತಿ ಇದ್ದರಿದ್ದು, ಇದರ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ರೈತ ಮುಖಂಡರನ್ನು ತಹಶೀಲ್ದಾರ್ ಕಚೇರಿ ಆವರಣದ ಒಳಗೆ ಕರೆದೊಯ್ದು ರಕ್ಷಿಸಿದರು. ಇದೇ ಸಮಯದಲ್ಲಿ ರೈತ ಮುಖಂಡರು ನ್ಯಾಯಕ್ಕಾಗಿ ಘೋಷನೆ ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರನ್ನ ಹಾಗು ರೈತ ಮುಖಂಡರನ್ನ ಸಮಾದಾನ, ಸಂದಾನ ಪ್ರಕಿಯೆಗಳು ನಡೆಸುವ ಪ್ರಸಂಗಗಳು ನಡೆಯುತ್ತಲೇ ಇತ್ತು.
ತಾಲೂಕು ದಲಿತ ಮುಂಖಡರಾದ ರಾಮಾಂಜಮ್ಮ ಮಾತನಾಡಿ ರಮೇಶ್ ಕುಮಾರ್ ರವರ ಬಾವಚಿತ್ರ ಇಟ್ಟು ಅವರ ಹೆಸರಿಗೆ ತೇಜೋವಧೆ ಮಾಡುತ್ತಿದ್ಧೀರಿ ಎಂದು ಪ್ರಶ್ನಿಸಿ, ಇದಕ್ಕೆ ಸಂಬAದಿಸಿದAತೆ ನ್ಯಾಯಾಲಯದಲ್ಲಿ ದಾವೆ ಇದ್ದು, ಈಗಾಗಲೇ ಜಂಟಿ ಸರ್ವೇ ಆಗಿದೆ ಎಂದು ಮಾಹಿತಿ ನೀಡದ್ದರು. ಆದರೂ ಸಹ ಒಬ್ಬ ಪರಿಶಿಷ್ಟ ಜಾತಿಗೆ ಸೇರಿದೆ ರಮೇಶ್ ಬಾಬು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಾವು ರಮೇಶ್ಕುಮಾರ್ ರವರ ಬಾವ ಚಿತ್ರವನ್ನು ತೆಗೆಯುವಂತೆ ಒತ್ತಡ ಹೇರಿದಾಗ ರಮೇಶ್ ಕುಮಾರ್ ಬಾವಚಿತ್ರವನ್ನು ತೆಗದು ಪ್ರತಿಭಟನಾ ನಿರತರು ಅಂಬೇಡ್ಕರ್ ಬಾವಚಿತ್ರವನ್ನು ಅಸಡ್ಡೆಯಾಗಿ ಎಲ್ಲಿ ಹಾಕಿದ್ದರೂ ಗೊತ್ತಿಲ್ಲ. ಅಂಬೇಡ್ಕರ್ರವರಿಗೆ ಅಪಮಾನವನ್ನು ವೆಸಗೆದ್ದಾರೆ ಇದನ್ನ ನಾವು ಖಂಡಿಸುತ್ತೇವೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣ ಗಾಡಿ ಮಾತನಾಡಿ.
ಜಂಟಿ ಸರ್ವೆಗೆ ಆಗ್ರಹಿಸಿ ಸಮಯ ನಿಗದಿ ಮಾಡಿದ್ದ ರೈತ ಸಂಘ: ರೈತ ಮುಖಂಡ ನಾರಾಯಣಗೌಡ ಹೇಳುವಂತೆ ರಾಯಲ್ಪಾಡು ಹೋಬಳಿ ಜನಗಲಕುಂಟೆ ರಾಜ್ಯ ಅರಣ್ಯ ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಸರ್ವೆ ನಂ೧ ಮತ್ತು ೨ ರಲ್ಲಿ ೬೧ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಕುರಿತಾಗಿ ನ.೬ ರ ರಂದು ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ದಿನಾಂಕ ನಗದಿಪಡಿಸಲಾಗಿತ್ತು ಆದರೆ ಜಂಟಿ ಸರ್ವೆ ಮಾಡಲು ಎರಡು ಇಲಾಖೆಗಳು ಆಸಕ್ತಿ ತೊರದೆ ಕಂದಾಯ ಇಲಾಖೆ ಸಬೂಬು ಹೇಳಿಕೊಂಡು ಮುಂದೂಡುತ್ತಿತ್ತು ಇದರ ಹಿನ್ನೆಲೆಯಲ್ಲಿ ತಹಶೀಲ್ದಾರ್ ತಕ್ಷಣ ಜಂಟಿ ಸರ್ವೆ ಮಾಡಿ ಬಲಾಡ್ಯರು ಒತ್ತುವರಿ ತೆರವುಗೊಳಿಸುವ ಉದ್ದೇಶದಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದರು.
ರಾಜ್ಯಮಟ್ಟದ ಕರಾಟೆ ಚಾಂಪಿಯನಶಿಪ್ ಟ್ರೋಫಿ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಮುಡಿಗೆ
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3ರಿಂದ 7ನೇ ತರಗತಿ ವಿದ್ಯಾರ್ಥಿಗಳು ದಿನಾಂಕ 08/12/2024 ರಂದು ಈಡಿಗರ ಸಭಾಭವನ ಹೊಸನಗರ, ಶಿಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಐಕೀ ಸ್ಕೂಲ್ ಆಫ್ ಮಾರ್ಟಿಯಲ್ ಆರ್ಟ್ಸ್ ಶೊಟೋಕಾನ್ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ರಾಜ್ಯಮಟ್ಟದ ಕರಾಟೆ ಚಾಂಪಿಯನಶಿಪ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸರ್ವಾoಗೀಣ ಪ್ರಗತಿಗೆ ಸಂಸ್ಥೆಯ ಆಡಳಿತಾಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭಕೋರಿರುತ್ತಾರೆ
ವಿಜೇತರ ಯಾದಿ :
ವೈಯಕ್ತಿಕ ವಿಭಾಗ
ಪ್ರಥಮ ಸ್ಥಾನ
1.ಸಮೃದ್ I
2.ಸಿಂಧು I
3.ಹಿಮಾನಿ I
4.ಆರಾಧ್ಯ I
5.ಆಧ್ಯಾಪ್ರಭು I
6.ತನುಶ್ರೀ I
7.ಧಕ್ಷಯ್ I
ದ್ವಿತೀಯ ಸ್ಥಾನ
8.ಧನ್ವಂತ II
9.ಅನ್ವಿತಾ II
10.ರಶ್ವಿ II
11.ನಿಹಾಲ್ II
12.ಬ್ರಾಹ್ಮೀ II
13.ಸಮನ್ವಿ II
14.ಸಿದ್ರಾ II
15.ಸುಹಾಸ್ II
16.ಸೈಫ್ II
ತೃತೀಯ ಸ್ಥಾನ
17.ಸಾಯಿಶ್ III
18.ಗ್ರೀಷ್ಮ III
19.ತನ್ವಿ III
20.ಸ್ಪಂದನಾ III
21.ಅಮೂಲ್ಯ III
22.ತನ್ಮಯ್ III
23.ಅಹಾನ್ III
24.ಪ್ರಗತಿ III
25.ಪ್ರಣತಿ III
26.ದಶಮಿ III
27.ದೀಪ್ತಾ III
28.ಸಾಥ್ವಿಕ್ III
29.ಮೆಹರಾನ್ III
30.ಸಮೃದ್ಧಿ III
31.ರಾಣಿ ಮನಸ್ವಿ III
32.ನಿಧಿಕಾ III
33.ಅಫಹ್ವಾನ್ III
34.ಅಶ್ವಿನ್ III
ಗ್ರೂಪ್ ಕಟಾ
1.ಗ್ರಿಷ್ಮಾ I
2.ಅಮೂಲ್ಯ I
3.ಆರಾಧ್ಯ I
1.ಸಿಂಧು II
2.ಹಿಮಾನಿ II
3.ಅನ್ವಿತಾ II
1.ಸ್ಪಂದನಾ II
2.ರಾಣಿ ಮನಸ್ವಿ II
3.ಸಮೃದ್ಧಿ II
1.ಸಾಗವಿ I
2.ಸನ್ನಿಧಿ I
3.ಪ್ರಗತಿ I
1.ತನ್ಮಯ್ III
2.ಧ್ರುವ III
3.ಮನ್ವಿತ್ III
1.ಅಹಾನ್ II
2.ಸಾತ್ವಿಕ್ II
3.ಶ್ರೀಶ II
1.ಸ್ಪಂದನಾ III
2.ಸಿದ್ರಾ III
3.ರಶ್ಮಿ III
1.ಮಿತಾಲ್ III
2.ಧಕ್ಷಯ್ III
3.ಸೈಫ್ III
ಕುಮಿಟ್ (ಫೈಟಿಂಗ್)
1.ಪ್ರದ್ವಿತ್ I
2.ಸನ್ನಿಧಿ II
3.ಸಾತ್ವಿಕ್ II
4.ಅಶ್ವಿನ್ II
5.ಅಮೂಲ್ಯ III
6.ಮನ್ವಿತ್ III
7.ಪ್ರಖ್ಯಾತ್ III
ಈ ಎಲ್ಲಾ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕಿ ಮೇಘನಾ ತರಬೇತಿ ನೀಡಿರುತ್ತಾರೆ
ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್;ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಜೀವನ ಕೌಶಲ್ಯಗಳು” ಕುರಿತು ಕಾರ್ಯಾಗಾರ
ಶಂಕರನಾರಾಯಣ : ಶಿಕ್ಷಣ ಕ್ಷೇತ್ರದಲ್ಲಿ ಸದಾ ನವೀನತೆ ಅಳವಡಿಸಿ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಮನೋಸ್ಥೈರ್ಯವನ್ನು
ಬಲಪಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್, ಶಂಕರನಾರಾಯಣ. ದಿನಾಂಕ 07/12/2024 ರ ಶನಿವಾರ 3ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳು ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು
ಸಂಸ್ಥೆಯ ಆಡಳಿತಾಧಿಕಾರಿ ಕುಮಾರಿ ಶಮಿತಾ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊಫೆಸರ್ ಆಶಾದೇವಿ ಎಮ್ (ಶಿಕ್ಷಣತಜ್ಞೆ, ಮನಶಾಸ್ತ್ರಜ್ಞರು, ನರ್ಸರಿ ಮತ್ತು ಮೊಂಟೆಸ್ಸರಿ ತರಬೇತುದಾರರು ಹಾಗೂ ಸಲಹೆಗಾರರು, ಬೆಂಗಳೂರು ) ಇವರು ಹಲವಾರು
ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೇಗೆ ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ನೈತಿಕ ಪ್ರಜ್ಞೆ ಸಹಾಯಕ, ವರ್ತನೆ, ಭಾವನಾತ್ಮಕ ಬುದ್ಧಿವಂತಿಕೆ, ಸ್ವಯಂ ನಿಯಂತ್ರಣ, ಧನಾತ್ಮಕ ಮನೋವೈಜ್ಞಾನಿಕಮಾರ್ಗದರ್ಶನ,ಸಾಮಾಜಿಕ ಬುದ್ಧಿವಂತಿಕೆ, ನಾಯಕತ್ವದ ಕೌಶಲ್ಯ, ಹೊಸ ಹೊಸ ಆಲೋಚನೆ, ಆತ್ಮವಿಶ್ವಾಸ, ಸಾಮಾಜಿಕ ರೂಢಿಗಳು, ವಿಷಯಜ್ಞಾನ, ಚರ್ಚೆ, ಕೀಳರಿಮೆ, ಕಲಿಕೆಯ ಆಸಕ್ತಿ, ಅಭ್ಯಾಸದಲ್ಲಿ ಅಭಿಪ್ರೇರಣೆ, ಕಲಿಕಾ ಹವ್ಯಾಸಗಳು, ಸಮಯನಿರ್ವಹಣೆ, ಗುಡ್ ಟಚ್ ಮತ್ತು ಬ್ಯಾಡ ಟಚ್ ಮುಂತಾದ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಸಿ ವಿದ್ಯಾರ್ಥಿಗಳ ವಯೋಮಾನಕ್ಕನುಗುಣವಾಗಿ ಮಾರ್ಗದರ್ಶನ ನೀಡಿದರು ಭಯಮುಕ್ತರಾಗಿ ಮಕ್ಕಳು ತಮ್ಮಲ್ಲಿ ಹುದುಗಿರುವ ವಿಭಿನ್ನ ಪ್ರತಿಭೆ ಯನ್ನು ಹೇಗೆ ಇತರರಿಗೆ ಗುರುತಿಸುವಲ್ಲಿ ಜೀವನ ಕೌಶಲ್ಯ ಸಹಾಯಕ ಎಂಬಿತ್ಯಾದಿ
ವಿಷಯದ ಕುರಿತು ತಿಳಿಸಿದರು ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸತೀಶ್ ಶೆಟ್ಟಿ ( ASM ಮ್ಯಾಕ್ಮಿಲನ್ ) ಬೋಧಕ ಮತ್ತು ಬೋಧಕೇತರ ವೃಂದ ಹಾಜರಿದ್ದರು
ಶಿಕ್ಷಕಿ ಅವಿನಾ ಸ್ವಾಗತಿಸಿ ನಿರೂಪಿಸಿದರು ಶಿಕ್ಷಕಿ ಶಾಂತಿ ವಂದಿಸಿದರು.
ಕುಂದಾಪುರ ಮುಳ್ಳಿಕಟ್ಟೆ ಸಮೀಪ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು
ಕುಂದಾಪುರ; ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ- 66 ಅರಾಟೆ ಸೇತುವೆ ಬಳಿ ಗ್ಯಾಸ್ ಸಾಗಿ ಸುತ್ತಿದ್ದ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬುವರ ಪುತ್ರ ರಂಜಿತ್ ಬಲ್ಲಾಳ್(59) ಎಂದು ಗುರುತಿಸಲಾಗಿದೆ.ಇಂದು ಸಂಜೆ ಸುಮಾರು 4;00 ಗಂಟೆಗೆ ಅಪಘಾತ ನಡೆದಿದ್ದು, ಬೈಕ್ ಸವಾರ ರಂಜಿತ್ ಬಲ್ಲಾಳ್ ತನ್ನಬಿಎಂಡಬ್ಲ್ಯೂ ಬೈಕ್ ನಲ್ಲಿ ಗೋವಾ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಾಟೆ ಸೇತುವೆ ದುರಸ್ತಿಗಾಗಿ ಕಳೆದ ಎರಡು ವಾರಗಳಿಂದ ಚತುರ್ಪಥ ರಸ್ತೆಯಲ್ಲಿ ಒಂದು ಮಗ್ಗಲಿನ ದ್ವಿಪಥವನ್ನು ಮುಚ್ಚುಗಡೆ ಮಾಡಿ ಇನ್ನೊಂದು ಮಗ್ಗಲಿನಲ್ಲಿ ಏಕ ಪಥ ಸಂಚಾರವನ್ನಾಗಿ ಮಾಡಿದ್ದಾರೆ, ಆದರೆ ಸೇತುವೆ ದುರಸ್ತಿ ಕಾರ್ಯ ಆರಂಭವಾಗಿಲ್ಲ ಆದರೆ ಈ ಸ್ಥಳ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ವೇಗವಾಗಿ ಬಂದ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೂ ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರ ಸಹಕಾರದಿಂದ ಬೈಕ್ ಸವಾರನನ್ನು ಗಂಗೊಳ್ಳಿ ಆಪದ್ಬಾಂಧವ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರರ್ ತನ್ನ ಅಂಬುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ ಒಂದು ವರ್ಷದಿಂದ ಸಂಪೂರ್ಣ ಅವ್ಯವಸ್ಥೆಗೆ ಈ ದುರಂತ ಸಂಭವಿಸಿದೆ. ಪರಿಣಾಮ ಹಲವು ಅಪಘಾತಗಳು ಸಂಭವಿಸಿವೆ ಆದರೆ ಈ ಬಗ್ಗೆ ಎಚ್ಚೆತ್ತುಕೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಡೆಸಿದ ಐಆರ್ಬಿ ಸಂಸ್ಥೆಯು ತನ್ನ ನಿರ್ಲಕ್ಷ ಧೋರಣೆಯನ್ನು ತೋರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೆದ್ದಾರಿ ಆರಂಭವಾಗಿ ಎಷ್ಟೊ ದಶಕಗಳಾಗಿವೆ (ಹಿಂದೆ ಎನ್.ಎಚ್ ೧೭) ಆದರೂ ಬೀದಿ ದೀಪಗಳಿಲ್ಲ, ಹೆಸರಿಗೆ ಮಾತ್ರ ರಾಷ್ಟೀಯ ಹೆದ್ದಾರಿ, ಆದರೆ ಜನತೆಗೆ ಹೆಮ್ಮಾರಿಯಾಗಿದೆ.