ಕನ್ನಡಕುದ್ರುವಿನಲ್ಲಿ ಸಂತ ಜೋಸೆಫ್ ವಾಜ್ ರವರ ವಾರ್ಷಿಕ ಹಬ್ಬ

ಗಂಗೊಳ್ಳಿ: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಅಧೀನದಲ್ಲಿರುವ ಕನ್ನಡಕುದ್ರುವಿನ ಸಂತ ಜೋಸೆಫ್ ವಾಜ್ ಪ್ರಾರ್ಥನಾಲಯದಲ್ಲಿ ಪಾಲಕ ಸಂತ ಜೋಸೆಫ್ ವಾಜ್ ರವರ ವಾರ್ಷಿಕ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯುಟ್ ಬಾರ್ಬೊಜಾ ದೇವರ ವಾಕ್ಯವನ್ನು ಪಠಿಸಿ “ಯೇಸುವಿಗೆ ಆರಂಭದಿಂದಲೇ, ಅಡ್ಡಿ ಆತಂಕಗಳು ಎದುರಾದವು, ಆದರೆ ಅವುಗಳೆಲ್ಲದರ ಮೇಲೆ ಅವರು ಜಯ ಸಾಧಿಸಿದರು. ಹಾಗೇ ನಾವು ನಮಗೆ ಬರುವಂತಹ ತೊಂಅದ್ರೆ ಅಡ್ಡಿ ಆತಂಕಗಳ ಮೇಲೆ ಜಯ ಸಾಧಿಸಬೇಕು, ನಮಗೆ ಬರುವ ತೊಂದರೆಗಳನ್ನು, ನಾವು ಆಶಿರ್ವಾವದವನ್ನಾಗಿ ಬದಲಿಸಿಕೊಳ್ಳಬೇಕು, ನಾವು ಯೇಸು ಹೇಳಿದಂತೆ ನಡೇದುಕೊಂಡರೆ ಮಾತ್ರ ಸಾಲದು, ಯೇಸುವಿನಂತೆ ಆಗಬೇಕು” ಎಂದು ಹೇಳುತ್ತಾ “ನಾವು ಉಪವಾಸ, ಪ್ರಾರ್ಥನೆ, ಭಕ್ತಿ ಆಚರಿಸಿದರೆ ಸಾಲದು, ಯೇಸುವಿನಂತೆ ತನ್ನ ವೈರಿಯನ್ನು ಕ್ಷಮಿಸಬೇಕು, ನಿನಗೆ ಕೆಟ್ಟದನ್ನು ಬಯಸಿದವರಿಗೆ, ನೀನು ಒಳ್ಳೆಯದನ್ನು ಬಯಸಬೇಕು, ಯೇಸು ತನ್ನನ್ನು ವಧಿಸಿದವರಿಗೆ ಕ್ಷಮೆ ನೀಡಿದರು, ಮೊತ್ತ ಮೊದಲು ನಿಮಗೆ ಬರುವ ಅಡ್ಡಿ ಆತಂಕಗಳನ್ನು ಆಶಿರ್ವಾದವೆಂದು ಭಾವಿಸಲು ಆರಂಭಿಸಿ, ಹೀಗೆ ಎಲ್ಲಾ ಅಡಿ ಆತಂಕಗಳ ಮೇಲೆ ಜಯ ಸಾಧಿಸಿಕೊಂಡು, ನಾವು ಯೇಸುವಿನ ನೀಜ ಸಾಕ್ಸಿಗಳಾಗೋಣ” ಎಂದು ಅವರು ಸಂದೇಶ ನೀಡಿದರು.
ಈ ಹಿಂದೆ ಗಂಗೊಳ್ಳಿ ಚರ್ಚಿನಲ್ಲಿ ಸೇವೆ ನೀಡಿದ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ ಪವಿತ್ರ ಬಲಿದಾನದ ನೇತ್ರತ್ವವನ್ನು ವಹಿಸಿದ್ದರು. ಕುಂದಾಪುರ ವಲಯದ ಹಲವಾರು ಧರ್ಮಗುರುಗಳು ಸಾಮುಹಿಕ ಬಲಿದಾನದವನ್ನು ಅರ್ಪಿಸಿದರು. ಹಬ್ಬದ ನೇತ್ರತ್ವ ವಹಿಸಿದ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ರೋಶನ್ ತೊಮಸ್ ಡಿಸೋಜಾ ವಂದಿಸಿದರು. ಕುಂದಾಪುರ ವಲಯ ಪ್ರಧಾನ ರೋಜರಿ ಚರ್ಚಿನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಶುಭಾಶಯಗಳನ್ನು ಕೋರಿದರು. ಕನ್ನಡ ಕುದ್ರು ನಿವಾಸಿ ದಿವಗಂತ ರೊಬರ್ಟ್ ಪಿ.ಕ್ರಾಸ್ತಾ ಮತ್ತು ಆಲಿಸ್ ಕ್ರಾಸ್ತಾ ದಂಪತಿಯ ಮಕ್ಕಳು ಪೆÇೀಷಕರಾಗಿದ್ದ ಈ ವಾರ್ಷಿಕ ಹಬ್ಬದಲ್ಲಿ ಹಲವಾರು ಧರ್ಮಭಗಿನಿಯರು, ಅನೇಕ ಭಕ್ತಾಧಿಗಳು ಪಾಲ್ಗೊಂಡರು.