

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕಿ ಎಸ್ ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್ ಜಾನಕಿ ಇಂದು (ಜುಲೈ 11) ವಿಧಿವಶರಾಗಿದ್ದಾರೆ. ಎಸ್ ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು.
ಕಳೆದ ಜನವರಿ ತಿಂಗಳಲ್ಲಿ ಮಗ ಮುರಳಿಕೃಷ್ಣ ಸಾವನ್ನಪ್ಪಿದ್ದರು. ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯಲ್ಲಿರುವ ತಮ್ಮ ಆಪ್ತರ ಮನೆಯಲ್ಲಿ ಎಸ್ ಜಾನಕಿ ವಾಸವಿದ್ದರು. ಯಾರ ಸಂಪರ್ಕಕ್ಕೂ ಎಸ್ ಜಾನಕಿ ಸಿಗುತ್ತಿರಲಿಲ್ಲ. ಇಂದು ಎಸ್ ಜಾನಕಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅವರನ್ನ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಹೃದಯಾಘಾತದಿಂದ ಎಸ್ ಜಾನಕಿ ಚಿರನಿದ್ರೆಗೆ ಜಾರಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.ಅವರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ, 1957ರಿಂದಲೂ ಚಿತ್ರಗಳಿಗೆ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ್ದಾರೆ.
ಅವರ ಪತಿ ಮೈಸೂರಿನವರಾಗಿದ್ದು, ಮೈಸೂರು ಅವರಿಗೆ ಆಪ್ತವಾಗಿತ್ತು ಆದರಿಂದ ಹಲವು ವರ್ಷಗಳಿಂದ ಅವರು ಮೈಸೂರಿನಲ್ಲಿಯೇ ನೆಲೆಸಿದ್ದರು. ಅವರ ಸಂಗೀತ ಕಾರ್ಯಕ್ರಮ ಮೈಸೂರಿನಿಂದ, ಇನ್ನೊರ್ವ ಖ್ಯಾತ ಗಾಯಕ ಪಿ.ಬಿ.ಶ್ರೀನಿವಾಸ್ ಜೊತೆ ಆರಂಭಿಸಿದ್ದು, ಅವರು ಮಸೂರಿನಲ್ಲೆ ಕೊನೆಯ ಸಂಗೀತ ಕಾರ್ಯಕ್ರಮ ನಡೆಸಿ ಗಾಯನಕ್ಕೆ ವಿಧಾಯ ಹೇಳಿದ್ದರು. ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಎಸ್ ಜಾನಕಿ ಹಾಡಿದ್ದಾರೆ. ಅವರು ತಾರೆಯರ ಸ್ವರಕ್ಕೆ ತಕ್ಕಂತೆ ಹಡುವುದು ಅವರ ವೈಶಿಷ್ಟವಾಗಿತ್ತು
ಎಸ್. ಜಾನಕಿ 1938ರ ಏಪ್ರಿಲ್ 23ರಂದು ಜನಿಸಿದರು. ಅವರನ್ನು ಜಾನಕಿ ಅಮ್ಮ ಮತ್ತು “ದಕ್ಷಿಣ ಭಾರತದ ನೈಟಿಂಗೇಲ್” ಅಥವಾ “ಭಾರತದ ನೈಟಿಂಗೇಲ್” ಎಂದು ಕರೆಯಲಾಗುತ್ತದೆ. ಅವರು ಭಾರತೀಯ ಸಂಗೀತ ಇತಿಹಾಸದಲ್ಲಿ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರು.
ಜಾನಕಿ ಅವರು ಚಲನಚಿತ್ರಗಳು, ಆಲ್ಬಮ್ಗಳು, ದೂರದರ್ಶನ ಮತ್ತು ರೇಡಿಯೋಗಳಲ್ಲಿ 48,000 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ, ಇದರಲ್ಲಿ ತೆಲುಗು , ತಮಿಳು, ಕನ್ನಡ , ಮಲಯಾಳಂ , ಹಿಂದಿ , ಸಂಸ್ಕೃತ , ಒಡಿಯಾ , ತುಳು , ಉರ್ದು , ಪಂಜಾಬಿ , ಬಡಗ , ಬಂಗಾಳಿ ,ಮತ್ತು ಇಂಗ್ಲಿಷ್ , ಜಪಾನೀಸ್ , ಜರ್ಮನ್ ಮತ್ತು ಸಿಂಹಳದಂತಹ ವಿದೇಶಿ ಭಾಷೆಗಳಲ್ಲಿ ಏಕವ್ಯಕ್ತಿ, ಯುಗಳ ಗೀತೆಗಳು, ಕೋರಸ್ ಮತ್ತು ಶೀರ್ಷಿಕೆ ಗೀತೆಗಳು ಸೇರಿವೆ. ಅಲ್ಲದೆ ಅವರು ಕೊಂಕಣಿ ಭಾಷೆಯಲ್ಲಿಯೂ ಹಾಡಿದ್ದಾರೆ.

