

ಉಡುಪಿ; ಫೆ.21; ಉಡುಪಿ ಸೈಂಟ್ ಸಿಸಿಲಿಯದಲ್ಲಿ ವಾಸವಾಗಿದ್ದ ಧರ್ಮಭಗಿನಿ ನಿವ್ರತ ಅಧ್ಯಾಪಕಿ, ಮುಖ್ಯೋಪಾದ್ಯಾಯಿನಿ ಭ. ಮಾರೀಸ್ (ಆ.ಕಾ) ಇಂದು ಫೆಬ್ರವರಿ 21, 2025 ರಂದು ನಿಧನರಾದರು. ಇವರು ದಿವಂಗತ ಚಾರ್ಲ್ಸ್ ಡಿ ಸೋಜಾ ಮತ್ತು ಅನ್ನಾ ಡಿ ಸೋಜಾ ಅವರ ಪುತ್ರಿ. ಇವರು ದಿವಂಗತ ಆರ್ಥರ್ ಡಿ ಸೋಜಾ, ದಿವಂಗತ ಸಿಲಿಯಾ ಡಿ ಸೋಜಾ, ದಿವಂಗತ ಫಾದರ್ ವಿಕ್ಟರ್ ಡಿ ಸೋಜಾ ಎಸ್.ಜೆ ಮತ್ತು ದಿವಂಗತ ಡೊರೊಥಿ ಡಿ ಸೋಜಾ ಅವರ ಸಹೋದರಿಯಾಗಿದ್ದರು.
ಭ. ಮಾರೀಸ್ ಕರ್ನಾಟಕ ಪ್ರಾಂತ್ಯದ ಅಪೋಸ್ಟೋಲಿಕ್ ಕಾರ್ಮೆಲ್ ಸಭೆಗೆ ಸೇರಿದವರು. ಅವರು ರೂರ್ಕೆಲಾದ ಕಾರ್ಮೆಲ್ ಕಾನ್ವೆಂಟ್, ಬೆಂಗಳೂರಿನ ಲೂರ್ಡೆಸ್ ಕಾನ್ವೆಂಟ್, ಕುಂದಾಪುರದ ಸೇಂಟ್ ಜೋಸೆಫ್ ಕಾನ್ವೆಂಟ್, ಗಂಗೊಳ್ಳಿಯ ಕಾರ್ಮೆಲ್ ಕಾನ್ವೆಂಟ್, ಕೆಮ್ಮಣ್ಣಿನ ಮರಿಯಾ ಗೊರೆಟ್ಟಿ ಕಾನ್ವೆಂಟ್, ಮೂಡಬಿದ್ರಿಯ ಮೇರಿ ಇಮ್ಯಾಕ್ಯುಲೇಟ್ ಕಾನ್ವೆಂಟ್, ಬೆಂಗಳೂರಿನ ಕಾರ್ಮೆಲ್ ನಿವಾಸ, ಲಿಂಗ್ಸುಗೂರಿನ ಕಾರ್ಮೆಲ್ ಕಾನ್ವೆಂಟ್, ಹಳಿಯಾಳದ ಕಾರ್ಮೆಲ್ ಕಾನ್ವೆಂಟ್ ಮತ್ತು ಉಡುಪಿಯ ಸೇಂಟ್ ಸೆಸಿಲಿ ಕಾನ್ವೆಂಟ್ನಲ್ಲಿ ತಮ್ಮ ಸಮರ್ಪಿತ ಸೇವೆಗಳನ್ನು ಸಲ್ಲಿಸಿದ್ದಾರೆ.
ಇವರ ಮ್ರತ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಉಡುಪಿಯ ಸೇಂಟ್ ಸೆಸಿಲಿ ಕಾನ್ವೆಂಟ್ ಚಾಪೆಲ್ನಲ್ಲಿ ಇಡಲಾಗಿದೆ. ಫೆಬ್ರವರಿ 22, ಶನಿವಾರ ಬೆಳಿಗ್ಗೆ 10.30 ಕ್ಕೆ ಅಂತ್ಯಕ್ರಿಯೆ ನಡೆಯಲಿದ್ದು, ನಂತರ ಉಡುಪಿಯ ಸೇಂಟ್ ಸೆಸಿಲಿಯ ಕಾನ್ವೆಂಟಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ
Rev. Sister Marys AC (91) passes away
Udupi; Feb. 21; Teacher, Headmistress Rev. Sister Marys (A.C.), who was living a retired life at the convent of St. Cecilia, Udupi, passed away today on February 21, 2025. She was the daughter of late Charles D’Souza and late Anna D’Souza. She was the sister of late Arthur D’Souza, late Celia D’Souza, late Father Victor D’Souza S.J. and late Dorothy D’Souza.
She belongs to the Congregation of the Apostolic Carmel, Karnataka Province. She has rendered her dedicated services at Carmel Convent, Rourkela, Lourdes Convent, Bengaluru, St Joseph’s Convent, Kundapura, Carmel Convent, Gangolli, Maria Goretti Convent, Kemmannu, Careml Convent, Moodbidri, Mary Immaculate Convent, Bengaluru, Carmel Nivas, Lingsugur, Carmel Convent, Haliyal and St Cecily’s Convent, Udupi.
Mortal remains are laid out in St Cecily’s Convent Chapel, Udupi for public viewing. Funeral Mass will be on Saturday 22, February at 10.30 a.m. followed by burial service at St Cecily’s cemetery, Udupi.