ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಬೆಳ್ಮಣ್ಣು ಜೇಸಿಐನ 44ನೇ ವರ್ಷದ ಜೇಸಿ ಸಪ್ತಾಹ “ಅಮೃತೋತ್ಸವ” ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕೃಷಿ, ಸ್ವಚ್ಛತೆ ಮುಂತಾದ ಹಲವಾರು ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ಜನಪಯೋಗಿ ಕಾರ್ಯಕ್ರಮ ನಡೆಸುತ್ತ ಬರುತ್ತಿರುವ ಸಂಸ್ಥೆಯ ಸಾಧನೆಯನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಗೆ ಪ್ರತಿಷ್ಠಿತ “ಸಮಾಜ ಸೇವಾ ಸಂಘ ರತ್ನ ಪ್ರಶಸ್ತಿ” ಸಂಸ್ಥೆಯ ಪರವಾಗಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರನ್ನು ಗೌರವಿಸಿದರು. ಸಮಾರಂಭದಲ್ಲಿ ಜೇಸಿಐ ವಲಯಾಧ್ಯಕ್ಷರಾದ ಗಿರೀಶ್ ಎಸ್.ಪಿ., ಭಾರತೀಯ ಜೇಸಿಐನ ಫೌಂಡೇಶನ್ ನಿರ್ದೇಶಕರಾದ ಆಲನ್ ರೋಹನ್ ವಾಜ್, ಜೇಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷರಾದ ಹರಿಶ್ಚಂದ್ರ ಅಮೀನ್, ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಕೆ. ಸತ್ಯಶಂಕರ್ ಶೆಟ್ಟಿ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷರಾದ ಜಗದೀಶ್ ಜೋಗಿ, ಜೇಸಿಐ ವಲಯ ಆಡಳಿತ ಮಂಡಳಿಯ ನಿರ್ದೇಶಕರಾದ ಅಭಿಲಾಷ್, ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷರಾದ ಅನಿಲ್ ಕುಮಾರ್ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಪೂರ್ವಾಧ್ಯಕ್ಷರಾದ ವೀಣೇಶ್ ಅಮೀನ್, ನಿಕಟ ಪೂರ್ವಾಧ್ಯಕ್ಷರಾದ ಸತೀಶ್ ಪೂಜಾರಿ, ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಮಹಿಳಾ ಸಂಯೋಜಕಿ ಶ್ವೇತಾ ಆಚಾರ್ಯ, ಯುವ ಜೇಸಿ ಅಧ್ಯಕ್ಷರಾದ ಪೂರ್ವಿ ರಾವ್ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರುಗಳಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು, ಪ್ರಶಾಂತ್ ಪೂಜಾರಿ, ಸತೀಶ್ ಅಬ್ಬನಡ್ಕ, ಸದಸ್ಯರಾದ ಸಂಧ್ಯಾ ಶೆಟ್ಟಿ, ಅಶ್ವಿನಿ ಪ್ರಭಾಕರ್, ಪದ್ಮಶ್ರೀ ಪೂಜಾರಿ, ವೀಣಾ ಆಚಾರ್ಯ, ಅನ್ನಪೂರ್ಣ ಕಾಮತ್, ಕೀರ್ತನ್ ಪೂಜಾರಿ, ಪ್ರದೀಪ್ ಸುವರ್ಣ, ಪುಷ್ಪ ಕುಲಾಲ್, ಹರಿಣಿ ಪೂಜಾರಿ, ಯೋಗೀಶ್ ಆಚಾರ್ಯ, ಮಂಜುನಾಥ ಆಚಾರ್ಯ, ಶಾಂತರಾಮ್ ಕುಲಾಲ್, ಹರೀಶ್ ಪೂಜಾರಿ, ಕಿರಣ್ ಶೆಟ್ಟಿ, ವೀಣಾ ಪೂಜಾರಿ, ಸುಲೋಚನಾ ಕೋಟ್ಯಾನ್, ಲೀಲಾ ಪೂಜಾರಿ, ಲಲಿತಾ ಆಚಾರ್ಯ ಮೊದಲಾದವರಿದ್ದರು.
Year: 2024
“ಊರಿಗೆ ಒಂದು ವನ ಬೇಕು, ಮನೆಯಲ್ಲಿ ಮಕ್ಕಳ ಖುಷಿಗೆ ಅಜ್ಜ – ಅಜ್ಜಿ ಬೇಕು ” – ಲಿಕಿತಾ ಕೊಠಾರಿ
ಉಡುಪಿ; ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ - ಬಾರಕೂರನಲ್ಲಿ ಎಲ್. ಕೆ. ಜಿ ಮತ್ತು ಯು. ಕೆ. ಜಿ ವಿದ್ಯಾರ್ಥಿಗಳ ಅಜ್ಜ - ಅಜ್ಜಿಯಂದಿರ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮ ವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಕಿತಾ ಕೊಠಾರಿ ರವರು ದೀಪ ಬೆಳಗಿಸಿ "ಊರಿಗೆ ಒಂದು ವನ ಬೇಕು , ಮನೆಯಲ್ಲಿ ಮಕ್ಕಳ ಖುಷಿಗೆ ಅಜ್ಜ - ಅಜ್ಜಿ ಬೇಕು " ಎಂದು ಅಜ್ಜ - ಅಜ್ಜಿಯ ಪ್ರೀತಿ , ಬ್ಯಾಂಕ್ ನಲ್ಲಿ ಇಟ್ಟ ಹಣಕ್ಕೆ ಎರಡು ಪಟ್ಟು ಬಡ್ಡಿ ಸಿಗತ್ತೋ ಹಾಗೆ ಅಜ್ಜ ಅಜ್ಜಿಯರು ಮಕ್ಕಳಿಗೆ ಪ್ರೀತಿ ಕೊಡುತ್ತಾರೆಂದು ಅಜ್ಜ ಅಜ್ಜಿಯ ಪ್ರೀತಿಯ ಮಹತ್ವ ವನ್ನು ಹಂಚಿ ಕೊಂಡರು.
ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತಾ ಎಲ್. ರೈ ರವರು ಈ ಕಾರ್ಯಕ್ರಮದ ಕುರಿತು ಅಜ್ಜ - ಅಜ್ಜಿ ಅಂದ್ರೆ ಪ್ರೀತಿ ಯ ಸಂಭ್ರಮ " ಎಂದು ಅಜ್ಜ ಅಜ್ಜಿಯ ಜೊತೆಗೆ ಮಕ್ಕಳು ಸಮಯ ಕಳೆಯುವುದನ್ನು ತಮ್ಮ ಮಾತುಗಳಲ್ಲಿ ನುಡಿದರು.
ಈ ಸಂದರ್ಭದಲ್ಲಿ ಎಲ್. ಕೆ. ಜಿ ಮತ್ತು ಯು. ಕೆ. ಜಿ ವಿದ್ಯಾರ್ಥಿ ಗಳು ಸಾಮೂಹಿಕ ವಾಗಿ ಅಜ್ಜ ಅಜ್ಜಿಯ ರ ಮಹತ್ವ ದ ಕುರಿತಾದ ಗೀತೆ ಯನ್ನು ಹಾಡಿದರು.
ಆಗಮಿಸಿರುವ ವಿದ್ಯಾರ್ಥಿ ಗಳ ಅಜ್ಜ ಅಜ್ಜಿಯರಿಗೆ ಖುಷಿ ಕೊಡುವ ಆಟ ವನ್ನು ಮಕ್ಕಳೊಂದಿಗೆ ಆಡಿಸಲಾಯಿತು.
ಮಕ್ಕಳು ತಮ್ಮ ಅಜ್ಜ ಅಜ್ಜಿಯ ಜೊತೆಗೆ ತುಂಬಾ ಸಂತೋಷ ದಿಂದ ದಿನ ಕಳೆದರು.
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಶುಭ ರಾವ್ ಶ್ರೀಮತಿ ಕುಸುಮ, ಶ್ರೀಮತಿ ಚಂದ್ರ ಕಲಾ ಸಂಯೋಜನೆ ಮಾಡಿದರು. ಶಾಲೆಯ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.
ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ
ಉದ್ಯಾವರ : ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಾಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು.
40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಇವರು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ಕೆಎಫ್’ಡಿಸಿ ಸದಸ್ಯರಾಗಿಯೂ, 1995 -98 ಅವರಿಗೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿಯೂ ಜನಮನ್ನಣೆ ಗಳಿಸಿದ್ದರು.
ಅತ್ಯಂತ ಸರಳ ಸ್ವಭಾವದ ಇವರು ಉದ್ಯಾವರದಲ್ಲಿ ಸರಳಕ್ಕ ಎಂದೇ ಪ್ರಸಿದ್ಧರಾಗಿದ್ದರು. ವಿಪರ್ಯಾಸ ಎಂದರೆ ಇಂದು ಅವರ 75ನೇ ವರ್ಷದ ಹುಟ್ಟಿದ ದಿನ. ಅಮೃತೋತ್ಸವದ ಜನ್ಮದಿನದಂದೆ ನಿಧನರಾದ ಸರಳಾ ಕೋಟ್ಯಾನ್ ಇಬ್ಬರು ಪುತ್ರರು, ಮೊಮ್ಮಕ್ಕಳು, ಸಹೋದರರು – ಸಹೋದರಿ, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಬ್ರಹ್ಮಾವರ ವಲಯ, ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2024-25
ಉಡುಪಿ, ಅಕ್ಟೋಬರ್ 24 ಮತ್ತು 25: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬ್ರಹ್ಮಾವರ ವಲಯದ, ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2024-25ನ್ನು ಮಿಲಾಗ್ರಿಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಶ್ರೇಷ್ಠಗುರು ಫರ್ಡಿನೆಂಡ್ ಗೊನ್ಸಾಲ್ವಿಸ್ರವರು ಪಥಸಂಚಲನದ ತಂಡಗಳಿಂದ ಗೌರವವನ್ನು ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಆಭಿನ್ ದೇವಾಡಿಗರವರು ಕ್ರೀಡಾಜ್ಯೋತಿ ಬೆಳಗಿ, ಧ್ವಜಾರೋಹಣವನ್ನು ನೆರವೇರಿಸಿ, ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಅತಿಥಿ ಗಣ್ಯರಾದ ಶ್ರೀಮತಿ ಶಬನಾ ಅಂಜುಮ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ, ಶ್ರೀ ಜಗದೀಶ್ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿಗಳು ಬ್ರಹ್ಮಾವರ, ಶ್ರೀ ವಿಜಯ್ ಕುಮಾರ್ ಶೆಟ್ಟಿ ಅಧ್ಯಕ್ಷರು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬ್ರಹ್ಮಾವರ ವಲಯ ಹಾಗೂ ಸಿ. ಶಾಂತಿ ಪ್ರಮೀಳಾ ಡಿಸೋಜಾ ಮುಖ್ಯ ಶಿಕ್ಷಕಿ, ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆ, ಕಲ್ಯಾಣಪುರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಥಸಂಚಲನದ ನಿರ್ಣಾಯಕರಾಗಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಯುತ ರೋಹಿತ್, ಸಹಾಯಕ ಉಪನಿರೀಕ್ಷಕರಾದ ಶ್ರೀ ವಿಜಯ್ ಕುಮಾರ್ ಹಾಗೂ ಶ್ರೀ ವಿಶ್ವನಾಥ್ರವರು ಆಗಮಿಸಿದ್ದರು. ಆಗಮಿಸಿದ ಅತಿಥಿ ಗಣ್ಯರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ವಿನಯ್ ಶೇಟ್ ವಂದನಾರ್ಪಣೆಗೈದರು.
ಮಹಿಳೆಯರಿಗೆ ಸಮಾಜದಲ್ಲಿ ಸಮಾನವಾದ ಅವಕಾಶಗಳು ಬಗ್ಗೆ ಸಂವಿದಾನದಲ್ಲಿ ಉಲ್ಲೇಖಿಸಲಾಗಿದೆ-ಧಾನ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಸಚಿನ್
ಶ್ರೀನಿವಾಸಪುರ : ಮಹಿಳೆಯರಿಗೆ ಸಮಾಜದಲ್ಲಿ ಸಮಾನವಾದ ಅವಕಾಶಗಳು ಬಗ್ಗೆ ಸಂವಿದಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಇರುತ್ತಿದ್ದರು. ಆದರೆ ಇಂದು ಮಹಿಳೆಯರು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗುಳ್ಳುವದರ ಮೂಲಕ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿರ್ತುವುದು ಮಹಿಳೆಯರು ಸಮಾನವಾದ ಹಕ್ಕು ಪಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಸಚಿನ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಗಳ ಸಮಿತಿ, ತಾಲೂಕು ಆಡಳಿತ , ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲ್ಲೂಕು ಪಂಚಾಯಿತಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ “ವಿಧಾನ್ ಸೇ ಸಮಾಧಾನ್” ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಯಾವುದೇ ರೀತಿಯಾದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಆಗ ತಮಗೆ ಆಗಿರುವ ಅನ್ಯಾಯವನ್ನು ಎತ್ತಿತೋರಿಸಲು ಸಾಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ನ್ಯಾಯ ಸಿಗಲು ಸಾಕ್ಷಿಗಳನ್ನ ಭದ್ರತೆ ಕಾಪಾಡಿಕೊಳ್ಳಬೇಕು. ಇತ್ತೀಚಿಗೆ ಕೆಲವು ಘಟನೆಗಳು ಕಾನೂನುನ್ನು ಸದ್ಭಳಕೆಗಿಂತ ದುರ್ಭಳಕೆ ಮಾಡಿಕೊಳ್ಳುತ್ತಿದ್ದು, ಅವುಗಳ ತಡೆಗಟ್ಟುವ ಸಲುವಾಗಿ ಎಲ್ಲರೂ ಕೈಜೋಡಿಸಿ ನ್ಯಾಯಬದ್ದವಾದ ಕಾನೂನುನ್ನ ಆಚರಣೆಗೆ ಬರುವಂತೆ ವ್ಯವಹರಿಸಬೇಕು ಎಂದು ಸೂಚಿಸಿದರು.
ಸಂವಿದಾನದಲ್ಲಿ ಕಾನೂನು ಬದಲಾವಣೆಯಾಗಿತ್ತಿದ್ದು, ಈ ಕಾರ್ಯಾಗಾರದಲ್ಲಿ ಪಾಲ್ಗುಂಡಿರುವ ಮಹಿಳೆಯರು ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಮಹಿಳೆಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು, ಲೈಗಿಂಕ ದೌರ್ಜನ್ಯ, ಬಾಲ್ಯ ವಿವಾಹ ಕಾನೂನು ಅಪರಾದ, ವರದಕ್ಷಣೆ ಕಿರುಕಳ ಬಗ್ಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಪುರಸಭೆ ಮುಖ್ಯಾಧಿಕಾರಿ ವೈ.ಆರ್. ಸತ್ಯನಾರಾಯಣ, ವಕೀಲರ ಸಂಘದ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಟಿಎಚ್ಒ ಮೊಹಮ್ಮದ್ ಶರೀಫ್, ಸಿಡಿಪಿಒ ನವೀನ್ಕುಮಾರ್, ವಕೀಲರಾದ ಜೆ.ಎನ್.ಶಂಕರಪ್ಪ, ಎನ್.ಶ್ರೀನಿವಾಸಗೌಡ, ಸಿ.ಸೌಭಾಗ್ಯ, ಶಿಕ್ಷಕ ರಾಮಾಂಜನೇಯ, ಆರೋಗ್ಯ ಇಲಾಖೆ ಸಿಬ್ಬಂದಿ ಆಂಜಾಲಮ್ಮ, ಸಿಡಿಪಿಒ ಇಲಾಖೆ ಸಿಬ್ಬಂದಿ ಶರಣಮ್ಮ, ಇಸಿಒ ಸುಬ್ರಮಣಿ ಇದ್ದರು.
ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ – ಎಂಡೋಸಲ್ಫಾನ್ ಪೀಡಿತ ರೋಗಿಗೆ ಸಹಾಯ
ಕುಂದಾಪುರ; ಹದಿನೇಳು ವರ್ಷದಿಂದ ಎಂಡೋಸಲ್ಫಾನ್ ಕಾರಣದಿಂದ ಹಾಸಿಗೆ ಹಿಡಿದ ಸೇನಾಪುರದ ಸಂತ್ರಸ್ತೆಗೆ ಕುಂದಾಪುರದ ಇಂಡಿಯನ್ ರೆಡ್ ಕ್ರಾಸನ ವತಿಯಿಂದ ದಿನನಿತ್ಯ ಅಗತ್ಯವಿರುವ ಅಂಡರ್ ಪ್ಯಾಡ್ ಗಳನ್ನು ಹಸ್ತಾಂತರಿಸಲಾಯಿತು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ ಗಡದ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ರೆಡ್ ಕ್ರಾಸನ ಸಭಾಪತಿ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ ಹಾಗೂ ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ ಉಪಸ್ಥಿತರಿದ್ದರು.
ಮಂಗಳೂರು ; ಸೇಂಟ್ ಆಗ್ನೆಸ್ ಪಿಯು ಕಾಲೇಜು ತನ್ನ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ ವಿದ್ಯಾರ್ಥಿಗಳ ದಿನ / Mangaluru St. Agnes PU College marks a significant milestone in the lives of its students on Students’ Day
ಮಂಗಳೂರು ; ಅಕ್ಟೋಬರ್ 23, 2024 ರಂದು, ಸೇಂಟ್ ಆಗ್ನೆಸ್ ಪಿಯು ಕಾಲೇಜು ತನ್ನ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ ವಿದ್ಯಾರ್ಥಿಗಳ ದಿನವನ್ನು ಆಚರಿಸಿತು. ಸಭಾಂಗಣದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮವು ಸಿಬ್ಬಂದಿಗಳ ಮನಃಪೂರ್ವಕ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹದ ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳ ಸಾಧನೆ ಮತ್ತು ಸಾಮರ್ಥ್ಯವನ್ನು ಕೊಂಡಾಡಲು ಗೆಳೆಯರು ಮತ್ತು ಶಿಕ್ಷಕರು ಒಗ್ಗೂಡಿದ್ದರಿಂದ ವಾತಾವರಣವು ಉತ್ಸಾಹ ಮತ್ತು ಹೆಮ್ಮೆಯಿಂದ ತುಂಬಿತ್ತು.
MCsRuth ಮತ್ತು ಅನನ್ಯಾ ಈವೆಂಟ್ ಅನ್ನು ಕೌಶಲ್ಯದಿಂದ ಮುನ್ನಡೆಸಿದರು, ಪ್ರೇಕ್ಷಕರನ್ನು ತಮ್ಮ ಉತ್ಸಾಹ ಮತ್ತು ವರ್ಚಸ್ಸಿನಿಂದ ತೊಡಗಿಸಿಕೊಂಡರು. ಅವರ ಸುಸಜ್ಜಿತ ಸಂಭಾಷಣೆ ಮತ್ತು ತಡೆರಹಿತ ಸ್ಥಿತ್ಯಂತರಗಳು ಕಾರ್ಯಕ್ರಮವನ್ನು ಸರಾಗವಾಗಿ ಹರಿಯುವಂತೆ ಮಾಡಿತು.
ದ್ವಾನಿ ಅವರು ಎಲ್ಲಾ ಹಾಜರಿದ್ದವರಿಗೆ ಆತ್ಮೀಯ ಸ್ವಾಗತದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಆಕೆಯ ಹೃತ್ಪೂರ್ವಕ ಮಾತುಗಳು ದಿನಕ್ಕೆ ಸಕಾರಾತ್ಮಕ ಸ್ವರವನ್ನು ಹೊಂದಿಸುತ್ತದೆ, ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಯನ್ನು ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾನೆ ಎಂದು ಎಲ್ಲರಿಗೂ ನೆನಪಿಸುತ್ತದೆ.
ಐ ಪಿಯುಸಿ ವಿದ್ಯಾರ್ಥಿಗಳು ವೈಚಾರಿಕ ನೃತ್ಯ ನಾಟಕವನ್ನು ಪ್ರಸ್ತುತ ಪಡಿಸಿದರು. ಈ ತುಣುಕು ಸಂಬಂಧಿತ ಜೀವನದ ವಿಷಯಗಳನ್ನು ನಿಭಾಯಿಸುತ್ತದೆ, ಅವರ ಅಪಾರ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುತ್ತದೆ. ಪ್ರದರ್ಶನವು ದೃಷ್ಟಿಗೋಚರವಾಗಿ ಬೆರಗುಗೊಳಿಸುತ್ತದೆ ಆದರೆ ಪ್ರೇಕ್ಷಕರೊಂದಿಗೆ ಆಳವಾಗಿ ಅನುರಣಿಸುವ ಪ್ರಬಲ ಸಂದೇಶಗಳನ್ನು ಸಹ ನೀಡಿತು. ಪ್ರದರ್ಶನಗಳು ಉತ್ತಮವಾಗಿ ನೃತ್ಯ ಸಂಯೋಜನೆಯನ್ನು ಹೊಂದಿದ್ದವು ಮತ್ತು ಸಂದೇಶಗಳು ಪ್ರೇಕ್ಷಕರೊಂದಿಗೆ ಆಳವಾಗಿ ಪ್ರತಿಧ್ವನಿಸಿದವು.
II PUC ವಿದ್ಯಾರ್ಥಿಗಳು ತಮ್ಮ ಬಹು ನಿರೀಕ್ಷಿತ ಫಿಲ್ಮಿ ಫೆಸ್ಟ್ನೊಂದಿಗೆ ಕೇಂದ್ರ ಹಂತವನ್ನು ಪಡೆದುಕೊಂಡಿದ್ದರಿಂದ ವಿದ್ಯಾರ್ಥಿಗಳ ದಿನಾಚರಣೆಯು ರೋಮಾಂಚನಕಾರಿ ಉತ್ತುಂಗವನ್ನು ತಲುಪಿತು. ರೋಮಾಂಚಕ ವಾತಾವರಣ ಮತ್ತು ಪ್ರಭಾವಶಾಲಿ ಪ್ರದರ್ಶನಗಳು ಫಿಲ್ಮಿಫೆಸ್ಟ್ ಅನ್ನು ದಿನದ ಮುಖ್ಯಾಂಶಗಳಲ್ಲಿ ಒಂದನ್ನಾಗಿ ಮಾಡಿತು, ಪ್ರತಿಯೊಬ್ಬರೂ ಹೆಚ್ಚಿನ ಉತ್ಸಾಹದಲ್ಲಿ ಮತ್ತು ಹೆಚ್ಚಿನದಕ್ಕಾಗಿ ಉತ್ಸುಕರಾಗಿದ್ದರು. .
ಅಸಾಧಾರಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಕುಣಿಯಲು ಅವಕಾಶ ನೀಡಿರುವುದು ದಿನದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳ ದಿನಾಚರಣೆಯು ಭೋಜನದೊಂದಿಗೆ ಮುಂದುವರೆಯಿತು
ಮಧ್ಯಾಹ್ನ, ಕಾರ್ಯಕ್ರಮವು ಬಹಳ ಉತ್ಸಾಹದಿಂದ ಪ್ರಾರಂಭವಾಯಿತು. ಎಂಸಿ, ರೋಚೆಲ್ ತನ್ನ ಶಕ್ತಿಯುತ ಹೋಸ್ಟಿಂಗ್ನೊಂದಿಗೆ ವೇದಿಕೆಯನ್ನು ಪಡೆದರು, ಪಿಟಿಎ ಉಪಾಧ್ಯಕ್ಷರಾದ ಡಾ ದಿವ್ಯಾದಾಮೋದರ್ ಅವರ ಸ್ಪೂರ್ತಿದಾಯಕ ಬಹುಮಾನ ವಿತರಣಾ ಸಮಾರಂಭದೊಂದಿಗೆ ಆಚರಣೆಗಳು ಮುಂದುವರೆಯಿತು. ಸಮಾರಂಭವು ಹೆಮ್ಮೆಯ ಕ್ಷಣವಾಗಿತ್ತು ಮತ್ತು ವಿದ್ಯಾರ್ಥಿಗಳ ಪ್ರಯತ್ನಗಳ ಪುರಸ್ಕಾರವು ತಮ್ಮ ಗೆಳೆಯರನ್ನು ಇದೇ ರೀತಿಯ ಯಶಸ್ಸಿಗೆ ಶ್ರಮಿಸಲು ಪ್ರೇರೇಪಿಸಿತು.
ಹೃದಯವನ್ನು ಬೆಚ್ಚಗಾಗುವ ಮತ್ತು ಸ್ಮರಣೀಯ ವಿಭಾಗದಲ್ಲಿ, ಶಿಕ್ಷಕರು ವಿಶೇಷ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು, ವಿದ್ಯಾರ್ಥಿಗಳಿಗೆ ಅವರ ಪ್ರೀತಿ ಮತ್ತು ಮೆಚ್ಚುಗೆಯನ್ನು ಪ್ರದರ್ಶಿಸಿದರು. ಮ್ಯಾಥ್ಯೂ ಮತ್ತು ಅಶ್ವಿನ್ ಅವರು ಕಾರ್ಯಕ್ರಮವನ್ನು ನಿಪುಣವಾಗಿ ಸಂಯೋಜಿಸಿದರು, ಪ್ರೇಕ್ಷಕರನ್ನು ತೊಡಗಿಸಿಕೊಂಡರು ಮತ್ತು ಮನರಂಜನೆ ನೀಡಿದರು.
ಪ್ರಾಪ್ತಿ ಅವರು ಪ್ರಾಮಾಣಿಕ ಮತ್ತು ಚಿಂತನಶೀಲವಾಗಿ ಧನ್ಯವಾದಗಳನ್ನು ಅರ್ಪಿಸಿದ್ದರಿಂದ ಆಚರಣೆಗಳು ಹೃತ್ಪೂರ್ವಕವಾಗಿ ಮುಕ್ತಾಯಗೊಂಡವು. ಅವರು ತಮ್ಮ ಭಾಷಣದಲ್ಲಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ, ಸಂಘಟಕರು ಮತ್ತು ಭಾಗವಹಿಸುವವರಿಂದ ಹಿಡಿದು ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ಪಿಟಿಎ ಸದಸ್ಯರವರೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಆಕೆಯ ಮಾತುಗಳು ಪ್ರೇಕ್ಷಕರೊಂದಿಗೆ ಅನುರಣಿಸಿದವು, ದಿನವು ಮುಕ್ತಾಯಗೊಳ್ಳುತ್ತಿದ್ದಂತೆ ಮೆಚ್ಚುಗೆ ಮತ್ತು ಏಕತೆಯ ಭಾವವನ್ನು ಬಿಟ್ಟು, ಯಶಸ್ವಿ ಮತ್ತು ಸಂತೋಷದಾಯಕ ವಿದ್ಯಾರ್ಥಿಗಳ ದಿನಾಚರಣೆಯ ಅಂತ್ಯವನ್ನು ಗುರುತಿಸಿತು.
Mangaluru ; St. Agnes PU College marks a significant milestone in the lives of its students on Students’ Day
Mangaluru; St. Agnes PU College marks a significant milestone in the lives of its students on Students’ Day On October 23, 2024, St. Agnes PU College celebrated Students’ Day, marking a significant milestone in the lives of its students. The cultural program held in the auditorium commenced with a heartfelt prayer song by the staff, invoking divine blessings.
The event featured showcasing the diverse talents of the student body. The atmosphere was filled with enthusiasm and pride, as peers and teachers came together to celebrate the achievements and potential of the students.
MCsRuth and Ananya skilfully led the event, engaging the audience with their enthusiasm and charisma. Their well-prepared dialogue and seamless transitions kept the program flowing smoothly.
Dwani opened the event with a warm welcome to all attendees. Her heartfelt words set a positive tone for the day, reminding everyone that each student plays a vital role in making the school vibrant and inspiring.
The I PUC students presented a thought-provoking dance drama. This piece tackled relevant life topics, showcasing their immense talent and creativity. The performance was not only visually stunning but also delivered powerful messages that resonated deeply with the audience. The performances were well-choreographed, and the messages resonated deeply with the audience.
The Students’ Day celebrations reached an exciting peak as the II PUC students took centre stage with their highly anticipated Filmi Fest.The vibrant atmosphere and impressive performances made the FilmiFest one of the highlights of the day, leaving everyone in high spirits and eager for more.
One of the key features of the day was the opportunity given for the exceptionally talented students to rock on stage. The Students’ Day celebrations continued with a delightful lunch
In the afternoon, the event began with much enthusiasm. The MC, Rochelle took the stage with her energetic hosting, the celebrations continued with an inspiring prize distribution ceremony by Dr DivyaDamodar, the PTA Vice-President. The ceremony was a moment of pride and the acknowledgment of students efforts motivated their peers to strive for similar success.
In a heart-warming and memorable segment, the teacherspresented a special variety program, demonstrating their affection and appreciation for the students.Mr. Mathew and Ashwin expertly compered the program, keeping the audience engaged and entertained.
The celebrations concluded on a heartfelt note as Prapthi delivered a sincere and thoughtful vote of thanks. In her speech, she expressed deep gratitude to everyone who contributed to the success of the event, from the organizers and participants to the staff, support staff and PTA members. Her words resonated with the audience, leaving a sense of appreciation and unity as the day came to a close, marking the end of a successful and joyful Students’ Day celebration.
ಬೆಂಗಳೂರು ಕಟ್ಟಡ ಕುಸಿತದ ದುರಂತ ಸ್ಥಳಕ್ಕೆ ಸಿಎಂ ಭೇಟಿ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಬೆಂಗಳೂರಿನ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತ ಸ್ಥಳಕ್ಕೆ ಸಿಎಂ ಭೇಟಿ ಮಾಡಿದ್ದಾರೆ, ಅಧಿಕಾರಿಗಳ ಜೊತೆ ಮಾತುಕತೆ ನೆಡೆಸಿ, ದುರಂತದಲ್ಲಿ ಮಡಿದವದ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಗಾಯಗೊಂಡವರಿಗೆ ವೈದ್ಯಕೀಯ ವೆಚ್ಚ ಭರಿಸಲಾಗುವುದು ತಿಳಿಸಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ನಿನ್ನೆ ವೈಯಾನಡ್ಗೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಗಿದೆ. ಕಟ್ಟಡ ಕುಸಿತ ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಳಾಗಿವೆ ಅವರ ಆಸ್ಪತ್ರೆ ಖರ್ಚು ಸರ್ಕಾರ ಭರಿಸುತ್ತದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಿ 5 ಲಕ್ಷ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಎರಡು ಲಕ್ಷ ನೀಡಲಾಗುತ್ತದೆ. ಬಿಬಿಎಂಪಿಯಿಂದ ಮೂರು ಲಕ್ಷ ಪರಿಹಾರ ಘೋಷಿಸಿದೆ ಎಂದು ತಿಳಿಸಿದರು.
ಮೃತದೇಹ ಕಳುಹಿಸುವ ಕೆಲಸ ಆಗುತ್ತದೆ. ಅನಧಿಕೃತವಾಗಿ ಕಟ್ಟಿದ ಕಟ್ಟಡಗಳಿಗೆ ನೊಟೀಸ್ ಕೊಟ್ಟಿದ್ದಾರೆ. ಆದರೂ ಕಟ್ಟಿದ್ದಾರೆ. ವಲಯದ ಐಎಎಸ್ ಅಫೀಸ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ನೋಟೀಸ್ ಕೊಡಲು ಹೇಳಲಾಗಿದೆ. ಕಾನೂನು ಪ್ರಕಾರ ಮನೆ ಕಟ್ಟಬೇಕು ಎಂದು ಜನರಿಗೆ ಮನವಿ ಮಾಡುತ್ತೇನೆ. ಕಳಪೆ ಕಾಮಗಾರಿಯಿಂದ ಈ ಕಟ್ಟಡ ಬಿದ್ದಿದೆ. ಅನಧಿಕೃತವಾಗಿ ಮನೆ ಕಟ್ಟಲು ಬಿಡಬಾರದು. ಇದಕ್ಕೆಲ್ಲಾ ಅಧಿಕಾರಿಗಳು ಹೊಣೆ ಹಾಗಾಗಿ ಕಮಿಷನರ್ಗೆ ಸೂಚನೆ ಕೊಟ್ಟಿದ್ದೇನೆ’ ಎಂದು ತಿಳಿಸಿದರು.
ಬೆಂಗಳೂರು ಬಾಬುಸಾಬ್ ಪಾಳ್ಯದ ಕಟ್ಟಡ ಕುಸಿತ – ಮೃತರ ಸಂಖೆ 8 ಕ್ಕೆ ಎರಿಕೆ
ಬೆಂಗಳೂರು: ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ ಮ್ರತರ ಸಂಖೆ 8 ಕ್ಕೆ ಎರಿದೆ. ಕಟ್ಟಡ ಅನಧಿಕ್ರತ ಹಾಗೂ ಕಳಪೆ ಮಟ್ಟದ ಕಾಮಗಾರಿಯೆಂದು ಪರಿಗಣಿಸಿ, ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಇಇ ಕೆ.ವಿನಯ್ ಅವರನ್ನು ಅಮಾನತು ಮಾಡಲಾಗಿದೆ.ಹೊರಮಾವು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ವಿನಯ್ ಅವರನ್ನು ಅಮಾನತು ಮಾಡಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಕಟ್ಟಡದ ಅವಷೇಶಗಳಡಿ ಇನ್ನೂ ಇಬ್ಬರು ಇದ್ದಾರೆಂದು ತಿಳಿದು ಬಂದು ಶೋಧ ಕಾರ್ಯ ಮುಂದುವರಿದಿದೆ.
ನಿಗದಿ ಅವಧಿಯಲ್ಲಿ ನೋಟಿಸ್ ನೀಡಿದ್ದರೂ, ಅಕ್ರಮ ಕಟ್ಟಡ ಎಂದು ತಿಳಿದರೂ ತೆರವು ಮಾಡುವಲ್ಲಿ ಎಇಇ ಯಾವುದೇ ಕ್ರಮ
ಕೈಗೊಂಡಿಲ್ಲ. ಹೀಗಾಗಿ, ಬಿಬಿಎಂಪಿ ಮಹದೇವಪುರ ವಲಯ ಆಯುಕ್ತರ ವರದಿ ಮೇರೆಗೆ ಅಮಾನತು ಮಾಡಿ ಆದೇಶಿಸಲಾಗಿದೆ.