ಕುಂದಾಪುರ, ಮೇ.26: ಸಂತ ಮೇರಿಸ್ ಕನ್ನಡ ಮಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಮತ್ತು ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯ ಶಿಕ್ಷಕ ಭಾಸ್ಕರ ಗಾಣಿಗ ನಿವೃತ್ತಿಯ ಅಂಚಿನಲ್ಲಿರುವ ಇವರಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಸಂತ ಮೇರಿಸ್ ಪಿಯು ಕಾಲೇಜಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಳ್ಕೊಡುಗೆಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಜಂಟಿ ಕಾರ್ಯದರ್ಶಿ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಅತಿಥಿಗಳ ಜೊತೆ ಇಬ್ಬರನ್ನು ಫಲ ಪುಷ್ಪ ನೀಡಿ, ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು. ಇವರು ನೀಡಿದ ಸೇವೆಯನ್ನು ಅವರು ಶ್ಲಾಘಿಸಿದರು. ಶಿಕ್ಷಕ ಭಾಸ್ಕರ ಗಾಣಿಗರವರು ವಿವಿಧೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕುಂದಾಪುರ ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯಲ್ಲಿ ಬಹಳ ವರ್ಷ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಜೊತೆ ಶಾಲೆಯಲ್ಲಿ ಎನ್.ಸಿ.ಸಿ. ತರಬೇತಿದಾರಾಗಿಯೂ, ಸೇವೆ ಸಲ್ಲಿಸುತಿದ್ದರು. ಅವರು ಒಟ್ಟು 38 ವರ್ಷ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಕಿ ಡೋರಾ ಸುವಾರಿಸ್ ಇವರು ಅನೇಕ ಕಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಬಹಳ ವರ್ಷಗಳಿಂದ ಕುಂದಾಪುರ ಸಂತ ಮೇರಿಸ್ ಕನ್ನಡ ಮಾಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತಿದ್ದಾರೆ, ಇವರು ವಿದ್ಯಾರ್ಥಿಗಳ ಆಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದು, ಇವರು ಅತ್ಯತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ ಇವರೂ ಕೂಡ 38 ವರ್ಷಗಳ ಸುಧೀರ್ಘ ಸೇವೆ ನೀಡಿದವರಾಗಿದ್ದಾರೆ.
ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯ ನಿವøತ್ತ ಮುಖ್ಯೋಪಾಧ್ಯಾಯರಾದ ಎಲ್.ಜೆ.ಫೆರ್ನಾಂಡಿಸ್ ಶುಭ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಶಾಲೆಯ ಮುಖ್ಯಾಪಾಧ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, , ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ, ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ 5 ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು, ಶಿಕ್ಷೇತರ ಸಿಂಬಂದಿ ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಯ ಸಲಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Month: May 2024
ಸಂತ ಮೇರಿಸ್ ಪ್ರೌಢಶಾಲೆಗೆ ನೂತನ ವಿಜ್ಞಾನ ಪ್ರಯೋಗಲಾಯ ಕೊಠಡಿ : ಕನ್ನಡ ಮಾಧ್ಯಮ ಶಾಲೆಗೆ ಇದೊಂದು ಮಹತ್ತರ ಕೊಡುಗೆ – ಫಾ|ಸ್ಟ್ಯಾನಿ ತಾವ್ರೊ
ಕುಂದಾಪುರ, ಮೇ.25: ಒಂದು ಕಾಲದಲ್ಲಿ ಬಹಳ ಹೆಸರುವಾಸಿಯಾದ ಸಂತ ಮೇರಿಸ್ ಕನ್ನಡ ಮಾಧ್ಯಮ ಅನುದಾನಿತ ಶಾಲೆಗೆ, ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳ ಉಪಯೋಗಕ್ಕೆ, ಅವರಿಗೂ ಇತರ ಉನ್ನತ ಶಾಲೆಗಳಲ್ಲಿ ದೊರೆಯುವ ಸೌಕರ್ಯ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ದೊರೆಯಬೇಕನ್ನುವ ಉದ್ದೇಶದಿಂದ ನೂತನ ಸುಸಜ್ಜಿತ ವಿಜ್ಞಾನ ಪ್ರಯೋಗ ಕೊಠಡಿಯನ್ನು ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|, ಶಾಲಾ ಜಂಟಿ ಕಾರ್ಯದರ್ಶಿಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿದರು.
ಅವರು “ಕನ್ನಡ ಮಾಧ್ಯಮ ಶಾಲೆಯ ಮಕ್ಕಳೂ ಇದರ ಉಪಯೋಗ ಸಿಗಬೇಕು ಎಂಬ ದ್ರಷ್ಟಿಯಿಂದ ವಿಜ್ಞಾನ ಪ್ರಯೋಗ ಕೊಠಡಿಯನ್ನು ನಿರ್ಮಿಸಿದ್ದೇವೆ, ಇದರ ಉಪಯೋಗವನ್ನು ಈ ಶಾಲೆಯ ಮಕ್ಕಳು ಪಡೆಯಬೇಕು, ಈ ಶಾಲೆ ಕಲಿಸುವುದರಲ್ಲಿ ಮುಂದೆ ಇದ್ದು ಈ ಸಾಲಿನ ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ ನೂರು ಫಲಿತಾಂಶ ದೊರಕಿದೆ, ಇಲ್ಲಿ ಬುದ್ದಿವಂತ ಮಕ್ಕಳನ್ನು ಮಾತ್ರ ಭರ್ತಿ ಮಾಡಿಕೊಂಡು ಉತ್ತಮ ಫಲಿತಾಂಶಕ್ಕೆ ಆಸೀಸುವುದಿಲ್ಲಾ, ಸಾಮಾನ್ಯ ಮಕ್ಕಳನ್ನು ಭರ್ತಿ ಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡಿ ಬುದ್ದಿವಂತರನ್ನಾಗಿಸುವ ಕೆಲಸ ನೆಡೆಯುತ್ತದೆ, ಅದಕ್ಕಾಗಿ ಈ ಸುಸಜ್ಜಿತ ವಿಜ್ಞಾನ ಪ್ರಯೋಗ ಕೊಠಡಿಯನ್ನು ನಿರ್ಮಿಸಲಾಗಿದೆ, ಇದಕ್ಕೆ ಸಹಕಾರ ನೀಡಿದವರು ದಾನಿಗಳಾದ ಸಮೀರ್ ಪಿಂಟೊ ಇವರ ಉದಾರ ಮನಸ್ಸಿನಿಂದ ನಮ್ಮ ಯೋಜನೆ ಕಾರ್ಯಗತವಾಗಿದೆ, ಎಂದು ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಅವರು ಪ್ರಯೋಗ ಕೊಠಡಿಗಾಗಿ ಸುಮಾರು 4.5 ಲಕ್ಷ ದಾನ ನೀಡಿದ್ದಾರೆ’ ಎಂದು ಫಾ|ಸ್ಟ್ಯಾನಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಶಾಲೆಯ ಮುಖ್ಯಾಪಾಧ್ಯಾಯಿನಿ ಅಸುಂಪ್ತಾ ಲೋಬೊ, ವಿಜ್ಞಾನ ಶಿಕ್ಷಕಿ ಸ್ಮಿತಾ, ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, ಸಂತಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾಯಿನಿ ಡೋರಾ ಲುವಿಸ್, ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ,ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ 5 ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಯ ಸಲಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಭಾಸ್ಕರ ಗಾಣಿಗ ಧನ್ಯವಾದ ಸಮರ್ಪಿಸಿದರು.
ಜೆಸಿಐ ಕುಂದಾಪುರ ಸಿಟಿ ಇದರ ಆಶ್ರಯದಲ್ಲಿ ಕುಂದಾಪುರ ದ ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ
ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ಕುಂದಾಪುರ ದ ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ವನ್ನು ವಲಯ 15 ರ ರಾಷ್ಟ್ರೀಯ ತರಬೇತುದಾರರಾದ ಅಕ್ಷತಾ ಶೆಟ್ಟಿ ಮಂಗಳೂರ್ ಇವರು ಉದ್ಘಾಟನೆ ನೆರೆವೇರಿಸಿದರು.
ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನ ಪ್ರಾಂಶುಪಾಲರಾದ ನವೀನ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿ ಕಾಲೇಜ್ ಗೆ ಸಂಬಂಧ ಪಟ್ಟ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ, ಇಂದಿನ ದಿನಗಳಲ್ಲಿ ಅವರಿಗೆ ಪಠ್ಯ ಪುಸ್ತಕದ ಜೊತೆಗೆ ಬೇರೆ ಬೇರೆ ವಿಷಯ ಗಳ ಬಗ್ಗೆ ತಿಳಿದುಕೊಳ್ಳಬೇಕಿದೆ, ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಂತ ಸಂಸ್ಥೆ ಗಳು ವಿದ್ಯಾರ್ಥಿ ಜೀವನದ ಜೊತೆಗೆ ಸಾಮಾಜಿಕ, ನಾಯಕತ್ವ, ಸೇವಾ ಕಾರ್ಯಕ್ರಮ ನಡವಳಿಕೆ, ಜೀವನ ಶೈಲಿ ಇನ್ನಿತರ ವಿಷಯ ಗಳ ಬಗ್ಗೆ ತರಬೇತಿ ನೀಡುತ್ತಿರುವು ದರಿಂದ ವಿದ್ಯಾರ್ಥಿಗಳ ಜೀವನ ಶೈಲಿ ಬದಲಾವಣೆ ಮಾಡಲು ಸಾಧ್ಯ ಎಂದು ನುಡಿದರು.
ಜೇಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ವಾಗತಿಸಿದರು,
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟ ಪೂರ್ವ ಅಧ್ಯಕ್ಷ ಡಾ ಸೋನಿ, ಪೂರ್ವ ಅಧ್ಯಕ್ಷ ರಾದ
ವಿಜಯ ಭಂಡಾರಿ, ಗಿರೀಶ್ ಹೆಬ್ಬಾರ್, ಲೇಡಿ ಜೇಸಿ ಸಂಯೋಜಕಿ ರೇಷ್ಮಾ ಕೋಟ್ಯಾನ್,ಸದ್ಯಸ್ಯರಾದ ಅನಿತಾ ಡಿ ಸೋಜಾ, ಜಗದೀಶ್ ಶೆಟ್ಟಿ ಹೆಮ್ಮಾಡಿ, ದಿನೇಶ್ ಕುದ್ರು ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರಾದ ಜಯಶೀಲ ಪೈ ಕಾರ್ಯಕ್ರಮ ನಿರೂಪಿಸಿ, ವಲಯ 15 ರ ಆಡಳಿಧಿಕಾರಿ ಅಭಿಲಾಶ್ ಬಿ ಏ ವಂದಿಸಿದರು.
ಕುಂದಾಪುರದ UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ 3 ದಿನಗಳ ಕಾರ್ಯಾಗಾರವನ್ನು ನಡೆಸಲಾಯಿತು / UBMC & CSI Krupa English Medium School , Kundapura conducted a 3- day workshop for teachers
ಕುಂದಾಪುರ, ಮೇ.25: UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಸಹಯೋಗದೊಂದಿಗೆ ಮೇ 22 ರಿಂದ ಮೇ 24 ರರ ವರೆಗೆ 3 ದಿನಗಳ ಶಾಲಾ ಕೌಶಲ್ಯ ಅಭಿವ್ರದ್ಧಿಗಾಗಿ ವಿವಿಧವಿಷಯಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಲಾಯಿತು
22.05.2024 ರಂದು, ದಿನ – 1 ರಂದು, ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು. ಶಾಲೆಯ ಸಂಚಾಲಕಿ ಶ್ರೀಮತಿ ಐರಿನ್ ಸಾಲಿನ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಂದಿನ ವಿಷಯವಾಗಿದ್ದ ಚಟುವಟಿಕೆ ಮತ್ತು ಕರಕುಶಲದ ಬಗ್ಗೆ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾದ ಕುಮಾರಿ ದಿವ್ಯಾ ಮತ್ತು ಶ್ರೀಮತಿ ವಿಲ್ಮಾ ಮಾಹಿತಿ ನೀಡಿದರು. ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ರಾಜೇಶ್ವರಿ ಪ್ರಾರ್ಥನೆಗೈದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
23.05.2024 ರಂದು, ಕಾರ್ಯಾಗಾರದ 2 ನೇ ದಿನ, ಶಿಕ್ಷಕಿ ವೀಣಾ ಇವರ ನಿರೂಪಣೆಯೊಂದಿಗೆ ಶಿಕ್ಷಕಿ ಉಜ್ವಲಾ ಪ್ರಾರ್ಥನೆ ನೆಡೆಸಿಕೊಟ್ಟರು. ಸಂಗೀತ ಮತ್ತು ನ್ರತ್ಯದ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಶ್ರೀಮತಿ ರಾಜೇಶ್ವರಿ ಮತ್ತು ಶ್ರೀಮತಿ ಸವಿತಾ ನಡೆಸಿಕೊಟ್ಟರು.
24.05.2024 ರಂದು, ಕಾರ್ಯಾಗಾರದ 3 ನೇ ದಿನದ ಕಾರ್ಯಗಾರದಲ್ಲಿ ಶ್ರೀಮತಿ ರೇಖಾ ಇವರ ನಿರೂಪಣೆಯೊಂದಿಗೆ ಶಿಕ್ಷಕಿ ಪ್ರಿಯಾಂಕ ಪ್ರಾರ್ಥನೆಗೈದರು. ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪವಿತ್ರಾ ಅವರು ಶಾಲಾ ಪುನರಾರಂಭದ ಚಟುವಟಿಕೆಗಳ ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಸಮಾರಂಭದ ಅಧ್ಯಕ್ಷತೆಯೊಂದಿಗೆ ನೇರವೆರಿತು.
UBMC & CSI Krupa English Medium School , Kundapura conducted a 3- day workshop for teachers.
Kundapur, May 25: UBMC and CSI Krupa English Medium School Kundapur organized a 3-day workshop on various topics for school skill development from May 22 to May 24.
On 22.05.2024, Day – 1, the inauguration ceremony was held. Mrs. Irene Sallins, Principal of the school, inaugurated the workshop. Resource persons Kumari Divya and Mrs. Vilma informed the teachers about the activities and crafts that were the topic of the day. The teacher presented the sacred program. Teacher Rajeshwari prayed. School Principal Mrs. Anita Alice thanked everyone for their cooperation in the program.
On 23.05.2024, on the 2nd day of the workshop, Teacher Ujwala gave a prayer with a presentation by Teacher Veena. Ms. Anita Alice D’Souza, Ms. Rajeshwari and Ms. Savitha were the resource persons for music and dance.
On 24.05.2024, Ms. Rekha’s lecture was given by teacher Priyanka in the 3rd day workshop of the workshop. Resource Person Smt. Pavithra informed about pre-preparation of school resumption activities. The closing program of the program was live with the Principal of the school Mrs. Anita Alice presiding over the function.
ಭಂಡಾರ್ಕಾರ್ಸ್ ಕಾಲೇಜಿಗೆ ಖ್ಯಾತ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್ ಅವರ ಆಗಮನ “ ಒತ್ತಡರಹಿತ ಜೀವನ” ವಿಷಯದ ಕುರಿತು ಮಾತನಾಡಲಿದ್ದಾರೆ
ಕುಂದಾಪುರ: ಮೇ 27ರಂದು ಬೆಳಿಗ್ಗೆ 10ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿಗೆ ಖ್ಯಾತ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್ ಅವರು ಆಗಮಿಸಲಿದ್ದಾರೆ. ಅವರು “ ಒತ್ತಡರಹಿತ ಜೀವನ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ವಿಶ್ವಸ್ಥಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಲಿದ್ದಾರೆ. ಇನ್ನೋರ್ವ ಅತಿಥಿಗಳಾಗಿ ಲೆಕ್ಕಪರಿಶೋಧಕ ಮತ್ತು ಕಾನೂನು ಸಲಹೆಗಾರರಾದ ಡಾ.ನಾಗರಾಜ ಆಚಾರ್ ಬೆಂಗಳೂರು ಇವರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಐಕ್ಯೂ.ಎಸಿ ಸಂಯೋಜಕರಾದ ಡಾ. ವಿಜಯಕುಮಾರ್ ಕೆ.ಎಮ್. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿವರು. ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿಸಿ ಬಡಾವಣೆ ರೇಣುಕಾಯಲ್ಲಮ್ಮ ಕರಗಮಹೋತ್ಸವ ಹಿನ್ನಲೆ ಪೂಜೆ ಸಲ್ಲಿಕೆ – ಜಿಲ್ಲೆಯಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ-ಸಚಿವ ಕೆ.ಎಚ್.ಮುನಿಯಪ್ಪ ಪ್ರಾರ್ಥನೆ
ಕೋಲಾರ:- ಸತತ ಏಳು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿ ನನ್ನ ಬೆನ್ನಿಗೆ ನಿಂತ ಕೋಲಾರ ಜಿಲ್ಲೆಯ ಜನರ ಇಷ್ಟಾರ್ಥಗಳನ್ನು ರೇಣುಕಾ ಯಲ್ಲಮ್ಮ ತಾಯಿ ನೆರವೇರಿಸಲು ನನಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆಯಲ್ಲಿ ಉತ್ತಮ ಮಳೆ,ಬೆಳೆಯಾಗಿ ಸಮೃದ್ದಿ ನೆಲಸಲಿ ಎಂದು ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರಾರ್ಥಿಸಿದರು.
ನಗರದ ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ ಹೂವಿನ ಕರಗಮಹೋತ್ಸವದ ಹಿನ್ನಲೆಯಲ್ಲಿ ಗುರುವಾರ ಸಂಜೆ ಪ್ರತಿವರ್ಷದಂತೆ ಈ ಬಾರಿಯೂ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.
ಕೋಲಾರದಲ್ಲಿ ರೇಣುಕಾ ಯಲ್ಲಮ್ಮ ದೇವಿ ಕರಗ ಹೆಚ್ಚಿನ ಮನ್ನಣೆ ಗಳಿಸಿದೆ, ಈ ತಾಯಿಗೆ ಶಕ್ತಿ ಇದ್ದು, ಈ ಮಾತೆ ಜಿಲ್ಲೆಯನ್ನು ಚೆನ್ನಾಗಿ ಮುನ್ನಡೆಸುತ್ತಾಳೆ, ಆ ತಾಯಿಯ ಕೃಪೆ ಜಿಲ್ಲೆಗೆ ಇರಬೇಕು ಎಂದರು.
ಕೋಲಾರ ಜಿಲ್ಲೆಯ ಜನತೆ ನನ್ನನ್ನ ಏಳು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದು, ಮತದಾರ ಬಂಧುಗಳನ್ನು ಪ್ರಾಣ ಇರುವ ತನಕ ನಾನು ಮರೆಯುವುದಿಲ್ಲ ನಾನು ಎಲ್ಲೇ ಇರಲಿ ಕೋಲಾರ ಜಿಲ್ಲೆಯ ಕಾರ್ಯಕರ್ತರನ್ನು ಮರೆಯುವುದಿಲ್ಲ ಯಾವುದೇ ರೀತಿಯ ಕಷ್ಟಗಳು ಇದ್ದರೂ ಕೂಡ ನನಗೆ ಕರೆ ಮಾಡಿ ನಾನು ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇವೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕತೆಯಲ್ಲಿ ಮುಂದೆ ಬರಬೇಕು ಜಿಲ್ಲೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಕ್ಷದಲ್ಲಿ ಮುಂದೆ ನಿಮಗೂ ಸಹ ಅಧಿಕಾರ ಸಿಗುತ್ತದೆ ಎಂದರು.
ಜನತೆ ಇಂತಹ ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸೌಹಾರ್ದತೆಯ ವಾತಾವರಣ ನೆಲಸಲು ಸಾಧ್ಯವಾಗುತ್ತದೆ ಎಂದ ಅವರು, ಕೋಲಾರ ಜಿಲ್ಲೆಯ ಜನತೆಯ ಋಣ ತೀರಿಸಲು ಸದಾ ಸಿದ್ದವಾಗಿರುವೆ ಎಂದರು.
ರೇಣುಕಾ ಯಲ್ಲಮ್ಮ ದೇವಿಯ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಬೆಳೆ ಹಾಗೂ ರೈತರಿಗೆ ಉತ್ತಮ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ನಗರದ ಅಂಬೇಡ್ಕರ್ ನಗರದಲ್ಲಿ ನಡೆಯುತ್ತಿರುವ ಹೂವಿನ ಕರಗಮಹೋತ್ಸವದಲ್ಲೂ ಪಾಲ್ಗೊಂಡಿದ್ದ ಅವರು, ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಎಸ್ಸಿಘಟಕದ ಜಿಲ್ಲಾಧ್ಯಕ್ಷ ಜಯದೇವ್ ನಿವಾಸಕ್ಕೂ ಹೋಗಿ ಬಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಅಧ್ಯಕ್ಷ ಪ್ರಸಾದ್ಬಾಬು,ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಮುಖಂಡರಾದ ಸೋಮಶೇಖರ್, ಯಲ್ಲಪ್ಪ, ಜಗನ್ನಾಥ್,ಮಾರ್ಜೇನಹಳ್ಳಿ ಬಾಬು, ನಾರಾಯಣಸ್ವಾಮಿ,ಮುನಿರಾಜು, ಹಾರೋಹಳ್ಳಿ ಶ್ರೀನಿವಾಸ್, ಕಾರ್ಗಿಲ್ ವೆಂಕಟೇಶ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್, ಉಪಾಧ್ಯಕ್ಷ ಸಂಪತ್ಕುಮಾರ್, ಖಜಾಂಚಿ ಮಂಜುನಾಥ್, ನಿರ್ದೇಶಕರಾದ ರಮೇಶ್, ಕೆ.ಆರ್ಮುಗಂ, ಕಿಲಾರಿಪೇಟೆ ಮುನಿಕೃಷ್ಣ, ಶಬರಿ, ಅರ್ಚಕರಾದ ಸುರೇಶಾಚಾರ್ಯ ಮತ್ತಿತರರಿದ್ದರು.
ಯುವ ಸಮುದಾಯವು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳತ್ತಾ , ಭಾರತೀಯ ಸಂಸ್ಕøತಿ, ಪರಂಪರೆಯನ್ನು ಅಧ್ಯಾಯನ ಮಾಡಲು ಆಸಕ್ತಿ ವಹಿಸಬೇಕು – ಶ್ರೀ ಮಂಗಳಾನಂದನಾಥಸ್ವಾಮಿ
ಶ್ರೀನಿವಾಸಪುರ : ಯುವ ಸಮುದಾಯವು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳತ್ತಾ , ಭಾರತೀಯ ಸಂಸ್ಕøತಿ, ಪರಂಪರೆಯನ್ನು ಅಧ್ಯಾಯನ ಮಾಡಲು ಆಸಕ್ತಿ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಮಂಗಳಾನಂದನಾಥಸ್ವಾಮಿ ಹೇಳಿದರು.
ತಾಲೂಕಿನ ಬೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಗುರುವಾರ 10ಕೋಟಿ ವೆಚ್ಚದಲ್ಲಿ ಕಾಲೇಜುನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇಂದು ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಎಲೆ ಮರಿಕಾಯಿಯಂತೆ ತಮ್ಮಲ್ಲಿನ ವಿದ್ಯೆಯನ್ನು , ಕೌಶಲ್ಯ ತೋರಿಸುತ್ತಾ, ತಮ್ಮಲ್ಲಿನ ವಿದ್ಯೆಯನ್ನು ಕೌಶಲ್ಯ ಪ್ರೋತ್ಸಾಹಿಸುವವರು ಇಲ್ಲದೆ ಅರ್ಧಕ್ಕೆ ನಿಲ್ಲಿಸುವಂತಾಗಿದೆ ಈ ನಿಟ್ಟಿನಲ್ಲಿ ಬಿಜಿಎಸ್ ಶೈಕ್ಷಣಿಕ ಆಡಳಿತ ಮಂಡಲಿಯು ಗ್ರಾಮೀಣ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹತ್ತುಹಲವಾರು ಕಾರ್ಯಕ್ರಮಗಳ ಸಹ ಹಮ್ಮಿಕೊಂಡಿದೆ ಎಂದರು.
ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ 10 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ಬಿಜಿಎಸ್ ವತಿಯಿಂದ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ.ಎಂದು ಮಾಹಿತಿ ನೀಡಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಕಾಲೇಜುಗಳು ಇಲ್ಲ. ಬಿಜಿಎಸ್ ಶೈಕ್ಷಣಿಕ ಆಡಳಿತ ಮಂಡಲಿಯು ಕೋಟಿಗಟ್ಟಲೇ ಖರ್ಚು ಮಾಡುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಸದಾವಕಾಶ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಬಿಜಿಎಸ್ ಶೈಕ್ಷಣಿಕ ಆಡಳಿತ ಮಂಡಲಿಯು ಶೈಕ್ಷಣಿಕ ಅಭಿವೃದ್ಧಿಗಾಗಿ ಬೇಕಾದ ಸಲಹೆ , ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಶಾಖೆಯ ಬೈರವೇಶ್ವರ ವಿದ್ಯಾನಿಕೇತದ ಶೈಕ್ಷಣಿಕ ಆಡಳಿತ ಮಂಡಲಿಯ ಆಡಳಿತಾಧಿಕಾರಿ ಎನ್. ಶಿವರಾಘವರೆಡ್ಡಿ , ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬೈರವೇಶ್ವರ ವಿದ್ಯಾನಿಕೇತನ ನಿರ್ದೇಶಕ ಎ.ವೆಂಕಟರೆಡ್ಡಿ, ಪ್ರಾಂಶುಪಾಲರಾದ ಗಂಗಾಧರ್, ವೆಂಕಟರಮಣಾರೆಡ್ಡಿ, ಕೃಷ್ಣಮೂರ್ತಿ, , ಡಿಸಿಸಿ ಬ್ಯಾಂಕ್ ನಿದೇರ್ಶಕ ವೆಂಕಟರೆಡ್ಡಿ, ಮುಖಂಡರಾದ ಲಕ್ಷ್ಮಣೆಡ್ಡಿ , ಶಿವಪುರ ಗಣೇಶ್ , ಸುಬ್ಬಿರೆಡ್ಡಿ, ಇತರರು ಇದ್ದರು.
ಖಾಸಗಿ ಶಾಲೆಗಳ ದುಬಾರಿ ಶುಲ್ಕ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ಜಿಲ್ಲಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ-ರೈತಸಂಘ
ಕೋಲಾರ,ಮೇ.23: ಖಾಸಗಿ ಶಾಲೆಗಳ ದುಬಾರಿ ಶುಲ್ಕ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ಜಿಲ್ಲಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಮಾಡಿ ಖಾಲಿ ಇರುವ ಶಿಕ್ಷಕರ ನೇಮಕ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ರೈತಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ನಗರಸಭೆ ಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ರವರು ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಯುವಕರು ರಾಜಕಾರಣಿಗಳ ವಿರುದ್ಧ ಕಂಡಕಂಡಲ್ಲಿ ಕಲ್ಲಿನಿಂದ ಹೊಡೆಯುವ ಕಾಲ ದೂರವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿ ಜವಾನನಿಂದ ದಿವಾನನವರೆಗೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಖಾಸಗಿ ಶಾಲೆಗಳಲ್ಲಿ ಅನಧೀಕೃತ ಸಿ.ಬಿ.ಎಸ್.ಸಿ ಐ.ಸಿ ಎಸ್.ಸಿ ಹೆಸರಿನಲ್ಲಿ ಹಾಜರಾತಿ ಮಾಡಿಕೊಂಡು ವಂಚನೆ ಮಾಡುವ ಜೊತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಯಲ್ಲಿ ಪಠ್ಯಪುಸ್ತಕ ಸಮವಸ್ತ್ರ, ಶೂ,ಖರೀದಿ ಮಾಡಬೇಕೆಂಬ ನಿಯಮ ಜಾರಿ ಮಾಡಿ ಅಧಿಕಾರಿಗಳ ಕಣ್ಣುಮುಂದೆಯೇ ದಂದೆ ನಡೆಯುತ್ತಿದ್ದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆಯವರು ಇದ್ದು ಇಲ್ಲದಂತಾಗಿದ್ದಾರೆಂದು ಕಿಡಿಕಾರಿದರು.
ಸಾವಿರಾರು ಬಡ ರೈತ ಕೂಲಿ ಕಾರ್ಮಿಕರ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನೇ ಅವಲಂಭಿಸಿದ್ದಾರೆ. ನಮ್ಮನ್ನಾಳುವ ಸರ್ಕಾರಗಳು ದೇಶದ ಭವಿಷ್ಯ ರೂಪಿಸುವ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡುವ ಬದಲು ಕೆಲಸಕ್ಕೆ ಬಾರದ ವಿಚಾರಗಳನ್ನು ಚರ್ಚೆ ಮಾಡಿ ಶೈಕ್ಷಣಿಕ ಶಾಲೆಗಳ ಡೋನೇಷನ್ ಹಾವಳಿ ಮರೆತು ಶಿಕ್ಷಣದಲ್ಲೂ ರಾಜಕೀಯ ಮಾಡುವ ಮುಖಾಂತರ ಖಾಸಗಿ ಶಾಲೆಗಳ ಕಾವಲುಗಾರರಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರತಿ ಬಾರಿಯೂ ಶೈಕ್ಷಣಿಕ ವರ್ಷ ಪ್ರಾರಂಭವಾದಾಗ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಹಾಳು ಬಿದ್ದಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಕೊಡಬೇಕಾದ ಸರ್ಕಾರ ಅನುದಾನದ ಕೊರತೆ ನೆಪದಲ್ಲಿ ಖಾಸಗಿ ಶಾಲೆಗಳಿಗೆ ಹಿಂಬಾಗಿಲಿನಿಂದ ಕುಮ್ಮಕ್ಕು ನೀಡುವ ಮುಖಾಂತರ ಬಡವರ ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಅನವಶ್ಯಕವಾಗಿ ಕೆಲಸಕ್ಕೆ ಬಾರದ ಕಾಮಗಾರಿಗಳಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡುವ ಸರ್ಕಾರ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಹಿಂದೇಟು ಹಾಕುತ್ತಿರುವುದು ಏಕೆ ? ಭೀಕರವಾದ ಮಳೆ ಸುರಿಯುವಾಗ ಸರ್ಕಾರಿ ಶಾಲೆಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದೆ.
ಒಂದು ದಿನ ಗೋಡೆ ಬಿದ್ದರೆ ಮತ್ತೊಂದು ದಿನ ಕಾಂಪೌಂಡ್ ಆನಂತರ ಛಾವಣಿ ಕುಸಿಯುತ್ತಿರುವುದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಕಾಲಕ್ಕೆ ಪೂರೈಕೆಯಾಗದ ಸಮವಸ್ತ್ರ, ಪಠ್ಯ ಪುಸ್ತಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನೂರೊಂದು ಭಾಗ್ಯಗಳನ್ನು ನೀಡುವ ಮುಖಾಂತರ ಬಡವರ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗುತ್ತಿದೆ. ಪ್ರತಿವರ್ಷ ಶಾಲೆ ಆರಂಭಕ್ಕೆ ಮುನ್ನ ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ ಮಾಡಬೇಕಾದ ಸರ್ಕಾರ ಜಾಣ ನಿದ್ರೆಯಲ್ಲಿದ್ದು, ಶಾಲೆ ಪ್ರಾರಂಭವಾದ ನಂತರ ಸರ್ಕಾರದಿಂದ ಅನುಮತಿಯಿಲ್ಲ. ಟೆಂಡರ್ ಕರೆದಿಲ್ಲ ಎಂದು ಬೇಜವಾಬ್ದಾರಿಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನೂರಾರು ಶಾಲೆಗಳು ಮಕ್ಕಳ ಹಾಜರಾತಿ ಇಲ್ಲದೆ ಮುಚ್ಚಿದ್ದರೂ ಅಲ್ಲಿನ ಶಿಕ್ಷಕರು ಹೆಚ್ಚಿನ ಹಾಜರಾತಿ ಇರುವ ಶಾಲೆಗಳಿಗೆ ನಿಯೋಜನೆ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಇನ್ನು ಖಾಲಿ ಇರುವ ಶಿಕ್ಷಕರು ನಿಯೋಜನೆಗೊಂಡಿರುವ ಶಾಲೆಗಳಿಗೆ ಹೋಗದೆ ರಾಜಕೀಯ ಒತ್ತಡ ತಂದು ಬಡ್ಡಿ, ರಿಯಲ್ ಎಸ್ಟೇಟ್, ರಾಜಕೀಯದಲ್ಲಿ ತೊಡಗಿಕೊಳ್ಳುವ ಮುಖಾಂತರ ಗುರುಕುಲಕ್ಕೆ ಅಪಮಾನ ಮಾಡುತ್ತಿದ್ದಾರೆ.
ಅಲ್ಲದೆ ಲಕ್ಷ ಲಕ್ಷ ಸಂಬಳ ಪಡೆದು ಶಾಲೆಗೆ ಹೋಗದೆ ನೂರೊಂದು ನೆಪ ಹೇಳುತ್ತಿರುವ ಶಿಕ್ಷಕರು ಶಾಲೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸುವ ಮೂಲಕ ಶಿಕ್ಷಕರ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಪತ್ರಿಕಾ ಹೇಳಿಕೆ ನೀಡುವ ಸಂದರ್ಭದಲಿ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು.
Passed Away : Mrs.Cecilia D’Souza ( 89) Kundapur. The funeral will be held on 25 th May Morning
Mrs.Cecilia D’Souza ( 89) Kundapur.
W/o Late Camil D’Souza
M/o Gracy/Joe, Jossy/ Janet, Treeza/ Late Charles, Wincy / Gilbert, Monica/ Solomon, Leena/ Cramer, Oswald/ Celine, Grandmother of Diana, Sabrina, Noel, Janice, Jovita, Charlotte, Glenita, Gloria, Glanice, Susanna, Joanna, Delicia, Daniya, Sohan, Great grand M/0 Ryan, Leroy, Asher.
Passed away on 23 th May 2024.
Funeral Cortege leaves Residence “ASHIRWAD ” Behind Church on Saturday 25 th May 2024. 9.30 a.m followed by Mass at 10 a.m & Burial at Holy Rosary Church , Kundapur .
Sorrowing Family.
Contact : 9448574022