ಲೈಂಗಿಕ ಕಿರುಕುಳ ಪ್ರಕರಣಕ್ಕೆ ಆರೋಪಕ್ಕೆ ತುತ್ತಾದ ಎಚ್‌ ಡಿ ರೇವಣ್ಣ, ತಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರವರ ನಿವಾಸದಿಂದಲೇ ಬಂಧನ

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ಅವರನ್ನು
ಎಸ್‌ಐಟಿ ಅಧಿಕಾರಿಗಳು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರವರ ನಿವಾಸದಿಂದಲೇ ಬಂಧಿಸಿರುವ ಅಧಿಕಾರಿಗಳು ಎಸ್‌ಐಟಿ ಕಚೇರಿಗೆ.
ಕರೆದುಕೊಂಡು ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ.
ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿದ್ದಾರೆ. ಇಂದು ರಾತ್ರಿ ಅಥವಾ
ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್‌ ಡಿ ರೇವಣ್ಣಗೆ ಸಂಕಷ್ಟ ಎದುರಾಗಿದ್ದು ಅಪಹರಣಕ್ಕೀಡಾಗಿದ್ದ ಮನೆ.
ಕೆಲಸದಾಕೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಏಪ್ರಿಲ್‌ 29ರಂದು ರೇವಣ್ಣ ಅವರ ಸಂಬಂಧಿ ಸತೀಶ್‌ ಬಾಬು ಎಂಬುವರು.
ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದರು. ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದ ಎಸ್‌ಐಟಿ ಅಧಿಕಾರಿಗಳು
ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ರೇವಣ್ಣರ ಪಿ.ಎ ರಾಜಶೇಖರ.
ಎಂಬವರ ತೋಟದ ಮನೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿರುವ ಎಸ್‌ಐಟಿ ಅಧಿಕಾರಿಗಳು ಆಕೆಯನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.

ಕುಂದಾಪುರದಲ್ಲಿ ನೀತಿ ಶಿಕ್ಷಣ ಶಿಕ್ಷಕರಿಗೆ ತರಬೇತಿ ಕಾರ್ಯಗಾರ

ಪ್ರಜ್ವಲ್ ರೇವಣ್ಣ ಕೃತ್ಯದ ಬಗ್ಗೆ ಅರಿವಿದ್ದರೂ ಪ್ರಜ್ವಲ್ ಪರ ಮತ ಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ : ರಾಹುಲ್ ಗಾಂಧಿ

ಸಾವಿಷ್ಕಾರ್-24 ರಂಗೇರಿಸಿದ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು / Savishkar-24 Starring Chandan Shetty and Naveen Sajju

೨೮ನೇ ಸ್ಥಾನದಿಂದ ಅಗ್ರಸ್ಥಾನವರೆಗೆ ಕೋಲಾರ ಜಿಲ್ಲೆಯ ಪಯಣ, ಇದು ಡೀಸಿ ಅಕ್ರಂಪಾಶ ಅವರ ಸಾಧನೆ

ಪುಣೆಯ ಭಾರತೀಯ ಜೈನ ಸಂಘಟನೆಯಿಂದ `ಬರಮುಕ್ತ ಕರ್ನಾಟಕ ಅಭಿಯಾನ’ ಕೆರೆಗಳ ಪುನರುಜ್ಜೀವನದೊಂದಿಗೆ ಜಲಕ್ರಾಂತಿಗೆ ಮುನ್ನುಡಿ -ಪೆಮ್ಮಶೆಟ್ಟಿಹಳ್ಳಿ ಸುರೇಶ್

ಪುಣೆಯಿಂದ ಕುಂದಾಪುರಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರದ  ಪ್ರಶಾಂತ್ ಶೆಟ್ಟಿ (50) ಹೃದಯಾಘಾತದಿಂದ ನಿಧನ

ಕುಂದಾಪುರ: ಪುಣೆಯಿಂದ ಕುಂದಾಪುರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರದ  ಪ್ರಶಾಂತ್ ಶೆಟ್ಟಿ (50) ಅವರು ಹೊನ್ನಾವರ ಮಾರ್ಗ ಮಧ್ಯೆ ಮೇ 1ರ ಬೆಳಗಿನ ಜಾವದಲ್ಲಿ ಹೃದಯಾಘಾತದಿಂದ ನಿಧನರಾದರು.

ಬಸ್ಸು ಹೊನ್ನಾವರದ ಹತ್ತಿರ ಬರುತ್ತಿದ್ದಂತೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೆ ಬಸ್‌ ನಿರ್ವಾಹಕರಿಗೆ ಮಾಹಿತಿ ನೀಡಿದರು. ನಿರ್ವಾಹಕ ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.ಆದರೆ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಹಲವು ವರ್ಷಗಳ ಕಾಲ ಪುಣೆಯಲ್ಲಿ ಹೊಟೇಲ್‌ ಉದ್ಯಮ ನಡೆಸಿಕೊಂಡು ಬಂದಿದ್ದರು.ಸಮಾಜ ಸೇವೆಯಲ್ಲಿ ಸಕ್ರೀಯರಾಗಿದ್ದ ಅವರು ಕುಂದಾಪುರ  ಯುವ ಬಂಟ್ಸ್‌ ಸಂಘ ಹಾಗೂ ಸಿದ್ದಾಪುರ ಯಕ್ಷ ನುಡಿಸಿರಿ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ – ಸಹಾಯಕ ಪ್ರಿನ್ಸಿಪಾಲ್ ಸಿಸ್ಟರ್ ಐಲೀನ್ ಮಥಾಯಸ್ ಅವರಿಗೆ ಬೀಳ್ಕೊಡುಗೆ / Athena Institute of Health Sciences – Farewell to Assistant Principal Sister Eileen Mathias

ಎಮ್.ಐ.ಟಿ.ಕೆ ಯಲ್ಲಿ ಮೃದುಲಾ ಮತ್ತು ವಾರ್ಷಿಕೋತ್ಸವ / Mridula & Annual Day at MITK