ಕುಂದಾಪುರ, ಜ.5: ಕುಂದಾಪುರ ರೋಜರಿ ಚರ್ಚಿನ ಪತ್ರಿಕೆಯಿಂದ ಚರ್ಚಿನ ಜನರಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಣ್ಣ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಏರ್ಪಡಿಸಲ್ಪಟ್ಟ ಈ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳು ಇದ್ದು, ಪ್ರತಿ ವಿಭಾಗಗಳಲ್ಲಿ, ವಿವಿಧ ಆಯ್ಕೆಯನ್ನು ಕೊಡಲಾಗಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನಮ್ಮಲ್ಲಿರುವ ಪ್ರತಿಭೆಗಳನ್ನು ಉರ್ಜಿತಗೊಳಿಸಬೇಕು” ಎಂದು ಸ್ಪರ್ಧಿಗಳಿಗೆ ಶುಭ ಕೋರಿದರು. ಗೌರವ ಸಂಪಾದಕರಾದ ಧರ್ಮಗುರು ವಂ| ಅಶ್ವಿನ್ ಆರಾನ್ನಾ, ಸಂಪಾದಕರಾದ ಬರ್ನಾಡ್ ಡಿಕೋಸ್ತಾ, ಸಹಸಂಪಾದಕರಾದ ಓಸ್ವಲ್ಡ್ ಕರ್ವಾಲ್ಲೊ, ಸಂಪಾದಕ ಮಂಡಳಿಯ ಸದಸ್ಯರಾದ ರೇಶ್ಮಾ ಫೆರ್ನಾಂಡಿಸ್, ಶೈಲಾ ಡಿಆಲ್ಮೇಡಾ ಮತ್ತು ಕಿರಣ್ ಪಾಯ್ಸ್ ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆತು 45 ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Month: February 2024
‘ಅಪಘಾತ ರಹಿತ ಚಾಲಕ’ ಪ್ರಶಸ್ತಿ ಪುರಸ್ಕತ ಅಲೆಕ್ಸಾಂಡರ್ ಕುಲಾಸೊ ನಿಧನ
ಉದ್ಯಾವರ : ಪರ್ಕಳ – ಮಟ್ಟು ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಂಬರೀಶ್ ಬಸ್ ನಲ್ಲಿ 40ಕ್ಕೂ ಅಧಿಕ ವರ್ಷಗಳ ಕಾಲ ಚಾಲಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿ, ‘ಅಪಘಾತ ರಹಿತ ಚಾಲಕ ಪ್ರಶಸ್ತಿ’ ಪುರಸ್ಕತರಾಗಿದ್ದ ಉದ್ಯಾವರದ ಅಲೆಕ್ಸಾಂಡರ್ ಕುಲಾಸೊ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಫೆ. 4 ರoದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ಹಾಸ್ಯದ ಮಾತುಗಳ ಮೂಲಕವೇ ಎಲ್ಲರ ಮನ ಗೆಲ್ಲುತ್ತಿದ್ದರು. ಸಿಟಿ ಬಸ್ಸಿನ ಚಾಲಕರಾಗಿದ್ದ ಇವರು ಕೆಲವೇ ವರ್ಷಗಳ ಹಿಂದೆ ತನ್ನ ವೃತ್ತಿಗೆ ನಿವೃತ್ತಿ ಹೇಳಿದ್ದರು. ಬಳಿಕ ರಿಕ್ಷಾ ಚಾಲಕರಾಗಿಯೂ ಗುಡ್ಡೆಯಂಗಡಿ ಬಲಾಯ್ ಪಾದೆ ರಿಕ್ಷಾ ನಿಲ್ದಾಣದಲ್ಲಿ ಸೇವೆ ಸಲ್ಲಿಸಿದ್ದರು.
ಸ್ನೇಹಜೀವಿಯಾಗಿದ್ದ ಮೃತರು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯಂದಿರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಶ್ರೀನಿವಾಸಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ಮುದ್ದುಗಂಗಾದರ್ ಬೇಟಿ ನೀಡಿ ದೇವರ ದರ್ಶನವನ್ನು ಪಡೆದರು
ಶ್ರೀನಿವಾಸಪುರ : ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ಮುದ್ದುಗಂಗಾದರ್ ಶನಿವಾರ ಬೇಟಿ ನೀಡಿ ದೇವರ ದರ್ಶನವನ್ನು ಪಡೆದು ಮಾತನಾಡಿದರು.
ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಯು ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಹೈಕೆಮಾಂಡ್ ನನಗೆ ಲೋಕಸಭೆ ಚುನವಾಣೆ ಅಭ್ಯರ್ಥಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಅದರಂತೆ ಕ್ಷೇತ್ರದ ಮಾಜಿ ಶಾಸಕರಾದ ರಮೇಶ್ಕುಮಾರ್ ರವರ ಆರ್ಶೀವಾದ ಪಡೆದು ಕ್ಷೇತ್ರ ಪರ್ಯಟನೆ ಮಾಡುವುದಾಗಿ ಅವರ ಬಳಿ ಮನವಿ ಮಾಡುತ್ತೇನೆ . ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಆಕಾಂಕ್ಷಿಗಳು ಇದ್ದಾರೆ, ಅದರಲ್ಲಿ ನಾನು ಒಬ್ಬ , ನೀವೆಲ್ಲರೂ ನನಗೆ ಅವಕಾಶ ಮಾಡಿಕೊಡುವಂತೆ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ಈಗಾಗಲೇ ಕಾಂಗ್ರೆಸ್ ಪಕ್ಷವು ಈ ಹಿಂದೆ ಮುಳಬಾಗಿಲು ವಿಧಾನಸಭೆ ಚುನವಾಣೆಗೆ ಬಿಫಾರಂ ನೀಡಿದ್ದರು. ಹೈಕಮಾಂಡ್ ಆದೇಶವನ್ನ ಪಾಲಿಸಿ ಇನ್ನೊಬ್ಬರಿಗೆ ನನಗೆ ಬಂದಿರುವ ಬಿಫಾರಂವನನು ಹೈಕಮಾಂಡ್ಗೆ ಹಿಂತಿರುಗಿಸಿದೆ ಎಂದರು.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಮಾತಿನಂತೆ ನಿನಗೆ ಲೋಕಸಭೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಅದರಂತೆ. ನನಗೆ ಲೋಕಸಭೆ ಚುನಾವಣೆಯ ಅಭ್ಯರ್ಥಿ ನಿರ್ಧಾರ ಮಾಡುವುದು ಹೈಕಮಾಂಡ್ .ರಾಜ್ಯ ಹೈಕಮಾಂಡ್ ನುಡಿದಂತೆ ನಡೆಯುವಂತಹುದು ಕಾದು ನೋಡಬೇಕಾಗಿದೆ.
ಕ್ಷೇತ್ರಕ್ಕೆ ಸಂಬಂದಿಸಿದ ಭೂತ್ ಮಟ್ಟದಿಂದ ಹಿಡಿದು , ತಾಲೂಕು , ಜಿಲ್ಲಾ ಮಟ್ಟದ ವರೆಗೂ ಎಲ್ಲಾ ಚಿತ್ರಣವೂ ನನ್ನಲ್ಲಿ ಇದೆ ಅದರಂತೆ ಭೂತ್ಮಟ್ಟದಿಂದ ಹಿಡಿದು ಎಲ್ಲಾ ನಾಯಕರ ಬೆಂಬಲವನ್ನು ಕೋರುತ್ತೇನೆ ಎಂದರು.
Milagres Central School Shines atNational Level Open Karate Championship/ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್
National level open karate Championship -2024 held at DivyaKshetra Shree Math hariharapuraKoppa District on 21-01-2024 & 22-01-2024. Milagres Central School Participants exhibited outstanding performance, clinching numerous prizes across various categories. The school success at such a prestigious event not only highlights the student’s individual achievements but also underscore the institutions commitment to nurturing sporting talent and promoting holistic development among its students. Rev Fr Joseph UdayFernandes Principal Milagres Central lauded the exemplary performance and credited the success to the hard work and commitment of the students. Special acknowledgment goes to Mr Dinesh Kumar and MrsManjula, the dedicated coaches behind this success.
ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್
1-01-2024 ಮತ್ತು 22-01-2024 ರಂದು ದಿವ್ಯಕ್ಷೇತ್ರ ಶ್ರೀ ಮಠ ಹರಿಹರಪುರಕೊಪ್ಪಜಿಲ್ಲೆಯಲ್ಲಿ ನಡೆದರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2024, ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ನವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿದರು. ವಿವಿಧ ವಿಭಾಗಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದರು. ಇಂತಹ ಪ್ರತಿಷ್ಟೀತ ಸಮರಂಭದಲ್ಲಿ ಶಾಲೆಯಯಶಸ್ಸು ವಿದ್ಯಾರ್ಥಿಯ ವೈಯುಕ್ತಿಕ ಸಾಧನೆಗಳನ್ನು ಎತ್ತಿತೋರಿಸುತ್ತದೆ ಮಾತ್ರವಲ್ಲದೆಕ್ರೀಡಾ ಪ್ರತಿಭೆಯನ್ನು ಪೆÇೀಷಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಸಮಗ್ರಅಭಿವ್ರದ್ದಿಯನ್ನುಉತ್ತೇಜಿಸುತ್ತದೆ.ರೆ.ಫಾ. ಜೋಸೆಫ್ಉದಯ್ ಫೆರ್ನಾಂಡಿಸಿ ಪ್ರಾಂಶುಪಾಲರು ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ಅವರುಅನುಕರಣೀಯ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳ ಕಠಿಣ್ ಪರಿಶ್ರಮ ಮತ್ತು ಬದ್ದತೆಗೆಯಶಸ್ಸನ್ನು ನೀಡಿದರು.ಈ ಯಶಸ್ಸಿನ ಹಿಂದೆತರಬೇತುಶಿಕ್ಷಕರಾದ ಶ್ರೀ ದಿನೇಶ್ಕುಮಾರ್ ಮತ್ತು ಶ್ರೀಮತಿ ಮಂಜುಳಾ ಅವರಿಗೆಅಭಿನಂದಿಸಿದರು.
ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ಡಾ.ಸಲೀಮುಲ್ಲಾ ಖಾನ್ ಆಯ್ಕೆ/ Dr. Salimullah Khan elected as member of Pharmacy Council of India
Dr. Saleemulla Khan, Principal, P.A. College of Pharmacy and academic council member of Rajiv Gandhi University, Karnataka, Bangaluru has been nominated by the Govt. of Karnataka, as member of central council of Pharmacy Council of India under section 3(h) of Pharmacy act 1948. He has been appointed for a tenure of 5 years. Dr. Khan has put up about 22 years of teaching experience. He has served in JSS College Pharmacy, Ooty and Manipal College of Pharmaceutical Sciences, Manipal. Currently he is working as Principal, PA College of pharmacy since 2018.
ಫಾರ್ಮಸಿ ಕೌನ್ಸಿಲ್ಆಫ್ಇಂಡಿಯಾದ ಸದಸ್ಯರಾಗಿ ಡಾ.ಸಲೀಮುಲ್ಲಾಖಾನ್ಆಯ್ಕೆ
ಮಂಗಳೂರು -ಪಿ.ಎ.ಕಾಲೇಜ್ಆಫ್ಫಾರ್ಮಸಿಇದರಪ್ರಾಂಶುಪಾಲರಾದಡಾ.ಸಲೀಮುಲ್ಲಾಖಾನ್ಇವರನ್ನುಕರ್ನಾಟಕಸರಕಾರವುಫಾರ್ಮಸಿಕಾಯ್ದೆ 1948 ರಸೆಕ್ಷನ್ 3(ಎಚ್) ಅಡಿಯಲ್ಲಿಫಾರ್ಮಸಿಕೌನ್ಸಿಲ್ಆಫ್ಇಂಡಿಯಾದಸೆಂಟ್ರಲ್ಕೌನ್ಸಿಲ್ಸದಸ್ಯರಾಗಿನಾಮನಿರ್ದೇಶನಮಾಡಿದ್ದು, ಫಾರ್ಮಸಿಕೌನ್ಸಿಲ್ಆಫ್ಇಂಡಿಯಾಡಾ.ಸಲೀಮುಲ್ಲಾಖಾನ್ಇವರನ್ನು 5 ವರ್ಷಗಳಅವಧಿಗೆಸೆಂಟ್ರಲ್ಕೌನ್ಸಿಲ್ಸದಸ್ಯರಾಗಿನೇಮಿಸಿದೆ. ಇವರುಬೆಂಗಳೂರಿನರಾಜೀವ್ಗಾಂಧಿವಿಶ್ವವಿದ್ಯಾನಿಲಯದಅಕಾಡೆಮಿಕ್ಕೌನ್ಸಿಲ್ಸದಸ್ಯರಾಗಿದ್ದು,ಸುಮಾರು 22 ವರ್ಷಗಳಬೋಧನಾಅನುಭವವನ್ನುಹೊಂದಿದ್ದಾರೆ. ಊಟಿಯಜೆಎಸ್ಎಸ್ಕಾಲೇಜುಫಾರ್ಮಸಿಮತ್ತುಮಣಿಪಾಲದಮಣಿಪಾಲಕಾಲೇಜ್ಆಫ್ಫಾರ್ಮಾಸ್ಯುಟಿಕಲ್ಸೈನ್ಸಸ್ನಲ್ಲಿಸೇವೆಸಲ್ಲಿಸಿದ್ದಾರೆ.ಪ್ರಸ್ತುತ 2018 ರಿಂದಪಿಎಕಾಲೇಜ್ಆಫ್ಫಾರ್ಮಸಿಪ್ರಾಂಶುಪಾಲರಾಗಿಸೇವೆಸಲ್ಲಿಸುತ್ತಿದ್ದಾರೆ.
BELOVED 2024 – Young Couples Conference in Mangalore / ಪ್ರೀತಿಯ 2024 – ಮಂಗಳೂರಿನಲ್ಲಿ ಯುವ ಜೋಡಿಗಳ ಸಮ್ಮೇಳನ
In association with the Diocesan Family Life Service Centre, Bajjodi, MFC Mangalore is organizing a one-day conference for young couples named ‘Beloved 2024’ on Sunday, February 4, 2024, at Sambrahma AC Hall, St Anthony Ashram, Jeppu, Mangalore from 8.30 AM to 4.30 PM. Young couples below 15 years of marriage across all parishes under the Mangalore Diocese will participate in this programme.
The essence of this event is empowering and nurturing relationships, with faith-building sessions and activities designed for this purpose. MFC’s young couples will share insights into their own lives, highlighting how God has worked in their relationships, inspiring and strengthening other couples. This is the second of its kind in Mangalore, with the first program in 2019 being a resounding success.
A parallel programme will also be held for kids aged 4 to 12 years. Couples can register for this program online using this link: https://shorturl.at/nIQU2 . For further details, kindly contact, contact Anand D’silva at +91 98804 66614.
Missionary Families of Christ (MFC) is a Catholic movement that works for the renewal of families in India organizes a variety of programs every year that attract between 50 to 3000 participants. These programs are offered for the welfare of families, couples, youth and children and are instrumental in imparting various skills to the participants besides motivating them to be instruments of change in society.
Missionary Families of Christ – Mangalore, formerly known as Couples for Christ, is a lay Catholic evangelistic community dedicated to proclaiming Christ and defending faith, family, and life. The movement, initiated in 2003 in the Diocese of Mangalore under the guidance of Bishop Emeritus Aloysius Paul D’Souza, has now expanded to other dioceses such as Udupi, Bangalore & Shivamogga. In India, it operates under the Conference of the Catholic Bishops of India Family Commission, and under the family commissions in the respective dioceses. Fr Anil D’souza, Director – Family Commission is the Spiritual Director of MFC Mangalore.
To know more about MFC log in to https://missionaryfamiliesofchrist.org/
Facebook : https://www.facebook.com/MFCMangalore
Instagram : https://www.instagram.com/mfc_mangalore/
ಪ್ರೀತಿಯ 2024 – ಮಂಗಳೂರಿನಲ್ಲಿ ಯುವ ಜೋಡಿಗಳ ಸಮ್ಮೇಳನ
ಡಯೋಸಿಸನ್ ಫ್ಯಾಮಿಲಿ ಲೈಫ್ ಸೇವಾ ಕೇಂದ್ರ, ಬಜ್ಜೋಡಿ, MFC ಮಂಗಳೂರು ಇದರ ಸಹಯೋಗದಲ್ಲಿ ‘ಪ್ರೀತಿಯ 2024’ ಹೆಸರಿನ ಯುವ ಜೋಡಿಗಳಿಗಾಗಿ ಒಂದು ದಿನದ ಸಮ್ಮೇಳನವನ್ನು ಫೆಬ್ರವರಿ 4, 2024 ರಂದು ಭಾನುವಾರದಂದು ಸಂಭ್ರಮ ಎಸಿ ಹಾಲ್, ಸಂತ ಅಂತೋನಿ ಆಶ್ರಮ, ಜೆಪ್ಪು, ಮಂಗಳೂರಿನಲ್ಲಿ ಆಯೋಜಿಸಲಾಗಿದೆ. 8.30 AM ನಿಂದ 4.30 PM. ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯ ಎಲ್ಲಾ ಪ್ಯಾರಿಷ್ಗಳಲ್ಲಿ ಮದುವೆಯಾದ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಘಟನೆಯ ಸಾರವು ಸಂಬಂಧಗಳನ್ನು ಬಲಪಡಿಸುವುದು ಮತ್ತು ಪೋಷಿಸುವುದು, ಈ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ನಂಬಿಕೆ-ನಿರ್ಮಾಣ ಅವಧಿಗಳು ಮತ್ತು ಚಟುವಟಿಕೆಗಳೊಂದಿಗೆ. MFC ಯ ಯುವ ಜೋಡಿಗಳು ತಮ್ಮ ಸ್ವಂತ ಜೀವನದ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ, ಅವರ ಸಂಬಂಧಗಳಲ್ಲಿ ದೇವರು ಹೇಗೆ ಕೆಲಸ ಮಾಡಿದ್ದಾನೆ ಎಂಬುದನ್ನು ಎತ್ತಿ ತೋರಿಸುತ್ತದೆ, ಇತರ ದಂಪತಿಗಳನ್ನು ಪ್ರೇರೇಪಿಸುತ್ತದೆ ಮತ್ತು ಬಲಪಡಿಸುತ್ತದೆ. ಮಂಗಳೂರಿನಲ್ಲಿ ಇದು ಎರಡನೆಯದು, 2019 ರಲ್ಲಿ ಮೊದಲ ಕಾರ್ಯಕ್ರಮವು ಅದ್ಭುತ ಯಶಸ್ಸನ್ನು ಹೊಂದಿದೆ.
4 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗಾಗಿ ಸಮಾನಾಂತರ ಕಾರ್ಯಕ್ರಮವನ್ನು ಸಹ ನಡೆಸಲಾಗುತ್ತದೆ. ಈ ಲಿಂಕ್ ಅನ್ನು ಬಳಸಿಕೊಂಡು ದಂಪತಿಗಳು ಆನ್ಲೈನ್ನಲ್ಲಿ ಈ ಕಾರ್ಯಕ್ರಮಕ್ಕಾಗಿ ನೋಂದಾಯಿಸಿಕೊಳ್ಳಬಹುದು: https://shorturl.at/nIQU2 . ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ, +91 98804 66614 ರಲ್ಲಿ ಆನಂದ್ ಡಿಸಿಲ್ವಾ ಅವರನ್ನು ಸಂಪರ್ಕಿಸಿ.
ಮಿಷನರಿ ಫ್ಯಾಮಿಲೀಸ್ ಆಫ್ ಕ್ರೈಸ್ಟ್ (MFC) ಎಂಬುದು ಕ್ಯಾಥೋಲಿಕ್ ಆಂದೋಲನವಾಗಿದ್ದು, ಭಾರತದಲ್ಲಿ ಕುಟುಂಬಗಳ ನವೀಕರಣಕ್ಕಾಗಿ ಕೆಲಸ ಮಾಡುತ್ತದೆ, ಇದು ಪ್ರತಿ ವರ್ಷ 50 ರಿಂದ 3000 ಭಾಗವಹಿಸುವವರನ್ನು ಆಕರ್ಷಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮಗಳನ್ನು ಕುಟುಂಬಗಳು, ದಂಪತಿಗಳು, ಯುವಕರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ನೀಡಲಾಗುತ್ತದೆ ಮತ್ತು ಭಾಗವಹಿಸುವವರಿಗೆ ವಿವಿಧ ಕೌಶಲ್ಯಗಳನ್ನು ನೀಡುವಲ್ಲಿ ಸಹಕಾರಿಯಾಗಿದೆ ಮತ್ತು ಸಮಾಜದಲ್ಲಿ ಬದಲಾವಣೆಯ ಸಾಧನಗಳಾಗಿ ಅವರನ್ನು ಪ್ರೇರೇಪಿಸುತ್ತದೆ.
ಮಿಷನರಿ ಫ್ಯಾಮಿಲಿಸ್ ಆಫ್ ಕ್ರೈಸ್ಟ್ – ಮಂಗಳೂರು, ಹಿಂದೆ ಕ್ರಿಸ್ತನಿಗಾಗಿ ದಂಪತಿಗಳು ಎಂದು ಕರೆಯಲಾಗುತ್ತಿತ್ತು, ಇದು ಕ್ರಿಸ್ತನನ್ನು ಘೋಷಿಸಲು ಮತ್ತು ನಂಬಿಕೆ, ಕುಟುಂಬ ಮತ್ತು ಜೀವನವನ್ನು ರಕ್ಷಿಸಲು ಮೀಸಲಾಗಿರುವ ಸಾಮಾನ್ಯ ಕ್ಯಾಥೊಲಿಕ್ ಸುವಾರ್ತಾಬೋಧಕ ಸಮುದಾಯವಾಗಿದೆ. ಬಿಷಪ್ ಎಮಿರಿಟಸ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರ ಮಾರ್ಗದರ್ಶನದಲ್ಲಿ 2003 ರಲ್ಲಿ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪ್ರಾರಂಭವಾದ ಈ ಚಳುವಳಿಯು ಈಗ ಉಡುಪಿ, ಬೆಂಗಳೂರು ಮತ್ತು ಶಿವಮೊಗ್ಗದಂತಹ ಇತರ ಧರ್ಮಪ್ರಾಂತ್ಯಗಳಿಗೆ ವಿಸ್ತರಿಸಿದೆ. ಭಾರತದಲ್ಲಿ, ಇದು ಕ್ಯಾಥೋಲಿಕ್ ಬಿಷಪ್ಸ್ ಆಫ್ ಇಂಡಿಯಾ ಫ್ಯಾಮಿಲಿ ಕಮಿಷನ್ನ ಸಮ್ಮೇಳನದ ಅಡಿಯಲ್ಲಿ ಮತ್ತು ಆಯಾ ಡಯಾಸಿಸ್ಗಳಲ್ಲಿನ ಕುಟುಂಬ ಆಯೋಗಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. Fr ಅನಿಲ್ ಡಿಸೋಜ, ನಿರ್ದೇಶಕರು – ಕುಟುಂಬ ಆಯೋಗ, MFC ಮಂಗಳೂರಿನ ಆಧ್ಯಾತ್ಮಿಕ ನಿರ್ದೇಶಕರು.
ಶ್ರೀನಿವಾಸಪುರ : ರೈತನು ಸರ್ಕಾರದ ಅರ್ಥಿಕ ನೀತಿಗಳ ವಿರುದ್ಧ ನಾವುಗಳು ಒಂದಾಗಬೇಕು:ಆರ್.ಮಾಧವರೆಡ್ಡಿ
ಶ್ರೀನಿವಾಸಪುರ : ರೈತನು ದೇಶದ ಬೆನ್ನೆಲುಬು ಎಂದು ಬೆನ್ನೆನ್ನೇ ಮುರಿಯಲು ಹೊರಟ ಸರ್ಕಾರದ ಅರ್ಥಿಕ ನೀತಿಗಳ ವಿರುದ್ಧ ನಾವುಗಳು ಒಂದಾಗದೆ ಇದಲ್ಲಿ ಕೆಲವೇ ವರ್ಷಗಳಲ್ಲಿ ಜಮೀನನ್ನೆ ನಂಬಿಕೊಂಡು ಜೀವನ ಮಾಡುತ್ತಿರುವ ರೈತರು ತಮ್ಮ ಜಮೀನುಗಳನ್ನು ಕಾರ್ಪೊರೇಟ್ಗಳಿಗೆ ಒಪ್ಪಿಸಿ ಅವರ ಬಳಿ ದಿನಗೂಲಿಯಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾದ ರೈತರ ಸಂಕಲ್ಪ ಯಾತ್ರೆಯಲ್ಲಿ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ರವರ ಮೂಲಕ ಸರ್ಕಾರಕ್ಕೆ ರವಾನಿಸುವಂತೆ ಉಪತಹಶೀಲ್ದಾರ್ ಕೆ.ಎಲ್.ಜಯರಾಮ್ರವರಿಗೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿತ್ತು ಅಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಆ ಸಭೆಗೆ ಗೈರು ಹಾಜರಾಗಿದ್ದರು. ನಂತರ 2 ನೇ ಸಭೆ ಕರೆಯದೆ, ಈ ಮಧ್ಯೆ ಅವೈಜ್ಞಾನಿಕ ಸಾಲ ವಸೂಲಾತಿ ನೀತಿಯನ್ನು ಅನುಸರಿಸುತ್ತಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಸಾಲ ವಸೂಲಾತಿ ನ್ಯಾಯ ಮಂಡಲಿಯಲ್ಲಿ (ಡಿಆರ್ಟಿ) ವಿವಿಧ ನ್ಯಾಯಾಲಯಗಳಲ್ಲಿ ಸಾಲಗಾರ ರೈತರ ಮೇಲೆ ದಾವೆಗಳನ್ನು ಹೂಡಿದ್ದರಿಂದ ರೈತರ ಬಾಗಿಲಿಗೆ ನೋಟಿಸ್ಗಳು ಬರುತ್ತಿದ್ದು, ಅದರಲ್ಲಿ ಸಾಲಕ್ಕಿಂತ 4 ಪಟ್ಟು ಹೆಚ್ಚು ಜಮಾ ಮಾಡುವಂತೆ ತಿಳಿಸಲಾಗುತ್ತಿದೆ . ಇದರಿಂದ ರೈತರು ಕಂಗಾಲು ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ರೈತರ ವಿರುದ್ಧ ವಸೂಲಾತಿಗೆ ಕೋರ್ಟ್ಗೆ ಹಾಕುವುದು ಮಾನದಂಡೆನೆ ವಿಧಿಸಲಾಗುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿರುವ ವಿತ್ತ ಮಂತ್ರಿಗಳು ರೈತರಿಗೆ ನೋಟಿಸ್ ಕೂಡಿ, ಸಾಲ ವಸೂಲತಿ ಮಾಡಿ ಎಂದು ಬ್ಯಾಂಕ್ಗೆ ಹೇಳುತ್ತಿರುವುದು ಸರಿಯಲ್ಲ. ರೈತರನ್ನು ಹಗುರವಾಗಿ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಅತಿವೃಷ್ಟಿ , ಅನಾವೃಷ್ಟಿಯಿಂದ ರಾಜ್ಯದಲ್ಲಿನ ರೈತರು ತುಂಬಾ ಸಾಲಗಾರರಾಗಿದ್ದಾರೆ. ಹಣಕಾಸು ಮಂತ್ರಿ ನಿರ್ಮಲಸೀತಾರಾಮನ್ರವರು ಬಳ್ಳಾರಿಯಲ್ಲಿ ಖಾಸಗಿ ಕಂಪನಿಯ 58.121 ಕೋಟಿ ಸಾಲ ಮನ್ನಾ ಮಾಡಿದ್ದಾರೆ . ಆದರೆ, ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಕೇವಲ 26 ಸಾವಿರ ಕೋಟಿ ಇದ್ದು ಸಾಲ ಮನ್ನ ಮಾಡಿಲ್ಲ ಎಂದು ಟೀಕಿಸಿದರು.
ಮಾರ್ಚ್ 28 ರ ಒಳಗೆ ರೈತರ ಸಾಲದ ಬಗ್ಗೆ ಇತ್ಯರ್ಥವಾಗದಿದ್ದರೆ 28 ನೇ ತಾರೀಖು ರಂದು ಬಳ್ಳಾರಿಯಲ್ಲಿ ಗ್ರಾಮೀಣ ಬ್ಯಾಂಕಿನ ಕೇಂದ್ರ ಕಛೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿ, ಅದರೊಳಗಡೆ ರೈತರು ಏನಾದರೂ ಅನಾಹುತ ಮಾಡಿಕೊಂಡರೆ ಕೇಂದ್ರ , ರಾಜ್ಯ, ಗ್ರಾಮೀಣ ಬ್ಯಾಂಕ್ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಆರ್ಐ ಜನಾರ್ಧನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ತಿಮ್ಮಾರೆಡ್ಡಿ, ರಾಜಶೇಖರರೆಡ್ಡಿ, ಬಸವರಾಜಸ್ವಾಮಿ, ಉಮಾಪತಿಗೌಡ, ಬಸವರಾಜು, ನಾಗರಾಜಗೌಡ, ಸಲೀಂ, ಓಂಕಾರಗೌಡ, ಭುವನಗೌಡ, ಭಾಸ್ಕರರಾವ್, ಶ್ರೀನಿವಾಸ್, ಇದ್ದರು.
20ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ಗೆ ರುಮಾನಾ ಕೌಸರ್ ಬೇಗ್
ಕೋಲಾರ,ಫೆ.2: ಮೇ ತಿಂಗಳಿನಲ್ಲಿ ಮಲೇಷ್ಯಾದ ಓಕಿನೋವಾ ಗೊಜೋ ರಿಯೋ ಇಫೋ ಕ್ರೀಡಾಂಗಣದಲ್ಲಿ ನಡೆಯುವ 20ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಕೋಲಾರದ ನಿವಾಸಿ ರುಮಾನಾ ಕೌಸರ್ ಬೇಗ್ ಆಯ್ಕೆಯಾಗಿದ್ದಾರೆ.
ರುಮಾನಾ ಕೌಸರ್ ಬೇಗ್ ಕರಾಟೆ ಕ್ರೀಡೆಯಲ್ಲಿ ವಸತಿ ಶಾಲೆಗಳಲ್ಲಿ 3000 ಬಾಲಕಿಯರಿಗೆ ಆತ್ಮ ರಕ್ಷಣೆ ಕಲೆಯನ್ನು ಕರಾಟೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ತೆಲಂಗಾಣ ರಾಜ್ಯದಲ್ಲಿ ನಡೆದ ಚಾಂಪಿಯನ್ಶಿಫ್ 2024ನ್ನು ಹಾಗೂ ಮೆರಿಟ್ ಸರ್ಟಿಫಿಕೇಟ್ ಸೇರಿದಂತೆ ರಾಜ್ಯ ಮಟ್ಟದಲ್ಲಿ 30 ಪದಕಗಳು ಮತ್ತು 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಟ್ರೋಫಿಗಳನ್ನು ಗಳಿಸಿದ ಸಾಧನೆಗಳ ದಾಖಲೆಯನ್ನು ಮಾಡಿದ್ದಾರೆ.
ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವ ರುಮಾನಾ ಕೌಸರ್ ಬೇಗ್ ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ. ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಕರಾಟೆ 2023, ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ತಂದೆ ರಶೀದ್ ಅಹಮದ್, ತಾಯಿ ಶಭಾನಾ, ಪತಿ ಕೌಸರ್ ಬೇಗ್ ಎಲ್ಲಾ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಹಲವು ಬಹುಮಾನ
ಕುಂದಾಪುರ (ಫೆ.02 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ವತಿಯಿಂದ ಕುಂದಾಪುರದಲ್ಲಿ ನಡೆದ ರಾಜ್ಯಮಟ್ಟದ ಇಂಟರ್ ಡೋ ಜೋ ಕರಾಟೆ ಚಾಂಪಿಯನ್ಶಿಪ್ ಕೆಡಿಎಫ್ ಕಪ್ 2024 ನಲ್ಲಿ ಭಾಗವಹಿಸಿ ಕುಮಿಟೆಯಲ್ಲಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಆರ್ಯನ್ ಕೆ, ಅರ್ನೋನ್, ಭುವನ್, ಸದ್ವಿತ್, ಮಹಮ್ಮದ್ ಶಾಝೀನ್, ಮಹಮ್ಮದ್ ನಭಾನ್, ಅಥರ್ವ, ಪ್ರತೀಕ್, ನುಝತ್ ಅಂಜುಮ್, ಧನ್ವಿತ್ ಹಾಗೂ ಅಕ್ಷಯ್ ಪ್ರಥಮ ಸ್ಥಾನವನ್ನು, ದಿಶಾ, ಶಿರಿಶ್, ತನ್ಮಯ್ ಮಹಮ್ಮದ್ ಝೈದ್, ರಶ್ವಿತ್, ಆಶಿಶ್, ಅಮೋಘ, ಅರ್ಜುನ್ ಶ್ರೇಯಸ್ ಹಾಗೂ ಪ್ರೀತಮ್ ದ್ವಿತೀಯ ಸ್ಥಾನವನ್ನು. ರಿಮಿತಾ, ಸಾನಿಧ್ಯ, ಅಭಿನ್, ಹರ್ಷಿತ್, ಪ್ರಮೀತ್, ಆರಾಧ್ಯ, ಅದ್ವಿತ್, ಸೃಜನ್, ಶ್ರೇಯನ್, ನಿವೇನ್, ಶ್ರೇಯಾ, ಮುಸೇಸ್, ಕೃತಿಕ್, ಸೃಜನ್, ಪ್ರೀತಮ್, ಆರವ್ ಹಾಗೂ ಪ್ರಥಮ್ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು. ಸಂಸ್ಥೆಯ ಕರಾಟೆ ಶಿಕ್ಷಕ ಸಂದೀಪ ತರಬೇತಿ ನೀಡಿದ್ದರು.