ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೃಷಿ ವೆಚ್ಚ , ನಕಲಿ ಉತ್ಪನ್ನಗಳು, ಹವಮಾನ ಬದಲಾವಣೆ, ನಿರೋಧಕ ಕೀಟಗಳ ಹಿನ್ನೆಲೆಯಲ್ಲಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ಕ್ಯಾಪ್ಸ್ಬರ್ ಅಗ್ರಿ ಸೈನ್ಸ್ ಕಂಪನಿ ಅಧ್ಯಕ್ಷ ಡಾ. ಗವಾಸ್ಕರ್ ಹೇಳಿದರು.
ತಾಲೂಕಿನ ಕಾಕಿನತ್ತ ಗ್ರಾಮದ ಸಪ್ಪಲಮ್ಮ ದೇವಿ ಆವರಣದಲ್ಲಿ ಸೋಮವಾರ ರೈತರಿಗೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಗ್ರಬೆಳೆಯ ಅರಿವು ಮೂಡಿಸಿದರು. ಸಾವಯವ ಬೆಳೆಗಳನ್ನು ಬೆಳೆಯಲು ಬೇಕಾದ ಮಾಹಿತಿ ನೀಡಿದರು. ರೈತರು ಬೆಳೆಗಳನ್ನು ಬೆಳೆಯುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿಬೇಕು. ಕಾಲಕಾಲಕ್ಕೆ ತಕ್ಕಂತೆ ಔಷಧಿಯನ್ನು ಸಿಂಪಡಣೆ ಮಾಡಬೇಕು ಎಂದರು.
ಕ್ಯಾಪ್ಸ್ಬರ್ ಆಗ್ರಿಸೈನ್ಸ್ ಒಂದು ಸಮರ್ಥನೀಯ ಮಣ್ಣಿನ ಆರೋಗ್ಯ ಮತ್ತು ಸಸ್ಯ ಸಂರಕ್ಷಣಾ ಕಂಪನಿಯಯಾಗಿದ್ದು, ಕ್ಯಾಪ್ಸ್ಬರ್ ಕಂಪನಿಯು ಆರ್ಗ್ಯಾನಿಕ್ ಔಷಧಿ ಆಗಿರುತ್ತದೆ. ಬೇರೆ ಕಂಪನಿಗಳಿಗಿಂತ ಈ ಕಂಪನಿಯಿಂದ ತಯಾರಾಗುವ ಔಷದಿ ಉತ್ತಮವಾಗಿ ಪರಿಹಾರ ಸಿಗುತ್ತದೆ. ಬೆಳೆಯು ಉತ್ತಮ ಫಸಲು ನೀಡುತ್ತದೆ ಇದರಿಂದ ಆರ್ಥಿಕಾಗಿ ಸಭಲರಾಗಲು ಸಾಧ್ಯವಾಗುತ್ತದೆ.
ಕ್ಯಾಪ್ಸ್ಬರ್ ಕಂಪನಿಯು ರೈತರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಔಷದಿ ನೀಡುತ್ತಿದೆ. ಗ್ರಾಮೀಣ ಭಾಗದ ರೈತರು ಅಕ್ಕಪಕ್ಕದ ಜಮೀನಿನ ರೈತರ ಬೆಳೆಗಳಿಗೆ ಬೇರೆ ಕಂಪನಿಗಳ ಔಷದಿ ಸಿಂಪಡಣೆ ಮಾಡಿರುವುದಕ್ಕೂ ನಮ್ಮ ಕಂಪನಿಯ ಔಷದಿಯನ್ನು ಬೆಳೆಗಳಿಗೆ ಸಿಂಪಡಣೆ ಮಾಡಿರುವ ಫಲಿತಾಂಶಕ್ಕೂ ವ್ಯತ್ಯಾಸವನ್ನು ಗಮನಿಸಿ ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಎನ್.ಸುರೇಶ್ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ರೈತರು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಕ್ಯಾಪ್ಸ್ಬರ್ ಕಂಪನಿಯ ಔಷದಿಯು ಆರ್ಗ್ಯಾನಿಕ್ ಔಷದಿಯಾಗಿದ್ದು, ನಿಮ್ಮ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಗಣಮಟ್ಟದ ಫಸಲುನೊಂದಿಗೆ ಉತ್ತಮ ಫಸಲು ಬರಲು ಸಾಧ್ಯವಾಗುತ್ತದೆ ಎಂದರು.
ಕಂಪನಿಯ ಪದಾಧಿಕಾರಿಗಳಾದ ಪ್ರೀತಿ, ಮನೋಜ್, ಎನ್ಜಿಒ ಪ್ರಶಾಂತ್, ಸಂಸ್ಥೆ ಸಿಬ್ಬಂದಿಗಳಾದ ಮುನೀಂದ್ರ, ರಾಜೇಶ್ , ರೈತರಾದ ವೀರಭದ್ರರೆಡ್ಡಿ, ನಿತಿನ್ , ಸಂತೋಷ್, ಮಂಜುನಾಥ್ ಇದ್ದರು.
Month: February 2024
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ.ಕೋಲಾರ ಪತ್ರಕರ್ತರ ಸಂಘದ ಕ್ರಿಯಾಶೀಲತೆಗೆ ಹೊರಟ್ಟಿ ಶ್ಲಾಘನೆ
ಕೋಲಾರ,ಫೆ.5: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಅತ್ಯುತ್ತಮ ಜಿಲ್ಲಾ ಸಂಘದ ಪ್ರಶಸ್ತಿಗೆ ಭಾಜನವಾಗಿರುವ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ 38ನೇ ರಾಜ್ಯ ಸಮ್ಮೇಳನದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಂದ ಕೋಲಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಎಂ.ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಯನ್ನು ಕೋಲಾರ ಪತ್ರಿಕೆ ಉಪ ಸಂಪಾದಕ ಹೆಚ್.ಕೆ ರಾಘವೇಂದ್ರ ಮತ್ತು ಅತ್ಯುತ್ತಮ ಮಾನವೀಯ ವರದಿಗೆ ಪಟೇಲ್ ಭೈರಹನುಮಯ್ಯ ಪ್ರಶಸ್ತಿಯನ್ನ ಕೋಲಾರದ ದೂರದರ್ಶನ ವರದಿಗಾರ ಸಿ.ಎನ್.ಶಿವಶಂಕರ್ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ತಾವು ಒಂದು ವರ್ಷದ ಹಿಂದೆ ಕೋಲಾರದಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ವೇಳೆ ಕೋಲಾರ ಜಿಲ್ಲಾ ಸಂಘದ ಕಾರ್ಯಚಟುವಟಿಕೆ ಮತ್ತು ಪತ್ರಕರ್ತರ ಭವನವನ್ನು ಗಮನಿಸಿ ಸಂಘವು ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದ್ದೆ. ಅದೇ ಪ್ರಕಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘದ ಪ್ರಶಸ್ತಿ ಲಭಿಸಿರುವುದು ಮತ್ತು ನಾನೇ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳು ಇತರ ಎಲ್ಲಾ ಸಂಘಗಳಿಗೂ ಮಾರ್ಗದರ್ಶಿಯಾಗಿವೆ ಎಂದು ಶ್ಲಾಘಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರ ಜಿಲ್ಲೆಯ ಎಲ್ಲಾ ಪತ್ರಕರ್ತರ ಸಹಕಾರ ಮತ್ತು ಸಂಘದಲ್ಲಿ ನಡೆಯುತ್ತಿರುವ ಸಕ್ರಿಯ ಕಾರ್ಯಕ್ರಮಗಳಿಂದ ನಮ್ಮ ಸಂಘವು ರಾಜ್ಯದಲ್ಲಿ ಅತ್ಯುತ್ತಮ ಜಿಲ್ಲಾ ಸಂಘದ ಪ್ರಶಸ್ತಿ ಸ್ವೀಕರಿಸಿದೆ. ಇದಕ್ಕೆ ಜಿಲ್ಲಾ ಸಂಘದ ಎಲ್ಲಾ ಸದಸ್ಯರ ಸಹಕಾರ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮುಳಬಾಗಿಲಿನ ಎ.ಅಪ್ಪಾಜಿಗೌಡ, ಬಿ.ದೇವಾನಂದ್, ಕೆ.ಪ್ರಕಾಶ್, ಮಾಲೂರಿನ ಎಸ್.ನಾರಾಯಣಸ್ವಾಮಿ, ಟಿ.ಕೆ.ನಾಗರಾಜ್, ಲಕ್ಕೂರು ಶ್ರೀನಿವಾಸ್, ಮಾರುತೇಶ್ ಉಪಸ್ಥಿತರಿದ್ದರು.
ಉಡುಪಿ ಚರ್ಚ್- ಬಿಷಪ್ ಹೌಸ್ ಗೆ ಇಂಧನ ಸಚಿವ ಕೆ ಜೆ ಜಾರ್ಜ್ ಭೇಟಿ
ಉಡುಪಿ: ಕರ್ನಾಟಕ ರಾಜ್ಯ ಸರಕಾರದ ಇಂಧನ ಸಚಿವರಾದ ಕೆ ಜೆ ಜಾರ್ಜ್ ಅವರು ಮಂಗಳವಾರ ಉಡುಪಿ ಬಿಷಪ್ ಹೌಸ್ ಮತ್ತು ಶೋಕ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಉಡುಪಿ ಧರ್ಮಾಧ್ಯಕ್ಷರ ಅನುಪಸ್ಥಿತಿಯಲ್ಲಿ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸಚಿವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿದರು. ಈ ವೇಳೆ ಸಚಿವರು ಧರ್ಮಪ್ರಾಂತ್ಯ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರಲ್ಲದೆ ಹಾಗೂ ಕ್ರೈಸ್ತ ಸಮುದಾಯದ ಅಭಿವೃಧ್ದಿಗೆ ಸರಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು
ಈ ವೇಳೆ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಮಣಿಪಾಲ ಕ್ರೈಸ್ಟ್ ಚರ್ಚಿನ ಧರ್ಮಗುರು ವಂ|ರೋಮಿಯೊ ಲೂವಿಸ್, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕರಾದ ವಂ|ಆಲ್ಬನ್ ಡಿಸೋಜಾ, ತರಬೇತಿ ನೀರತ ಗುರು ವಂ ಸ್ಟೀಫನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಮ್ ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ ಹಾಗೂ ಇತರರು ಉಪಸ್ಥಿತರಿದ್ದರು.
ಸಾಲಿಗ್ರಾಮದಲ್ಲಿ “ಇಂದಿರಾ ಕ್ಯಾಂಟೀನ್”ನಿರ್ಮಿಸುವ ಬಗ್ಗೆ ಸರ್ಕಾರದಿಂದ ಆದೇಶವಾಗಿದೆ- ಸಾಕಾರಗೊಳಿಸಬೇಕಾಗಿ ಪಂಚಾಯತ್ ಗೆ ಮನವಿ
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ ” ಇಂದಿರಾ ಕ್ಯಾಂಟೀನ್” ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸುವ ಬಗ್ಗೆ ಸರ್ಕಾರದಿಂದ ಆದೇಶವಾಗಿರುತ್ತದೆ. ಈ ಪ್ರಯುಕ್ತ ಸಾಲಿಗ್ರಾಮ ಪಟ್ಟಣ ಪಂಚಾಯಿತ್ ಆಡಳಿತ ಅಧಿಕಾರಿಯಾಗಿರುವ ಬ್ರಹ್ಮವರ ತಹಸೀಲ್ದಾರ್ ರವರಿಗೆ ಕೋಟ ಬ್ಲಾಕ್ ಅಧ್ಯಕ್ಷರಾದ “ಶಂಕರ್ ಎ ಕುಂದರ್ ” ಅವರ ನೇತೃತ್ವದಲ್ಲಿ ಇಂದು ಬೇಟಿಯಾಗಿ ಅತಿ ಕಡಿಮೆ ಬೆಲೆಯಲ್ಲಿ ಕೂಲಿ ಕಾರ್ಮಿಕರ ಹಾಗೂ ಬಡ ಕಾರ್ಮಿಕರ ಹಸಿವು ನೀಗಿಸುವ ಈ ಯೋಜನೆಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಾರಗೊಳಿಸಬೇಕಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರು & ಪಟ್ಟಣ ಪಂಚಾಯತ್ ನ ವಿರೋಧ ಪಕ್ಷದ ನಾಯಕರಾದ ಶ್ರೀನಿವಾಸ್ ಅಮೀನ್ , ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ನ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ , ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಗಣೇಶ್ N ಬಡಾಹೋಳಿ ಹಾಗೂ ಪುನೀತ್ ಪೂಜಾರಿ ತೊಡಕಟ್ಟು ಪಾರಂಪಳ್ಳಿ , ಕೋಟ ಬ್ಲಾಕ್ ಕಾಂಗ್ರೆಸ್ ನ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ , ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ , ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಗಣೇಶ್ ಕೆ ನೆಲ್ಲಿಬೆಟ್ಟು ಉಪಸ್ಥಿತರಿದ್ದರು.
ಬೊಂದೆಲ್ ಚರ್ಚ್ ಶಾಲಾ ವಠಾರದಲ್ಲಿ ಯಶಸ್ವಿ16 ನೇ ಸ್ಟ್ಯಾನ್ ನೈಟ್
ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಮತ್ತು ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಪ್ರಸ್ತುತಪಡಿಸಿದ 16 ನೇ ಸ್ಟ್ಯಾನ್ ನೈಟ್ ಕಾರ್ಯಕ್ರಮವನ್ನು ಫೆಬ್ರವರಿ 4ರಂದು ಆದಿತ್ಯವಾರ ಬೊಂದೆಲ್ ಶಾಲಾ ವಠಾರದಲ್ಲಿ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಗಣ್ಯ ವ್ಯಕ್ತಿ: ವ| ಫಾ ಆಂಡ್ರ್ಯೂ ಲಿಯೋ ಡಿಸೋಜ, “ಶ್ರೀ ರಾಯ್ ಕಾಸ್ಟೆಲಿನೊ” ಶ್ರೀ ಲುವಿ ಪಿಂಟೊ,ಶ್ರೀ ಜೋಸೆಫ್ ಮಾಥಾಯಸ್, ಶ್ರೀ ಆಲ್ವಿನ್ ರೊಡ್ರಿಗ್ಸ್” ಶ್ರೀ ಸ್ಟ್ಯಾನಿ ಮೆಂಡೊನ್ಸಾ, ಶ್ರೀ ಆಲ್ಫ್ರೆಡ್ ಬೆನ್ನಿಸ್ ,ಶ್ರೀ ರವಿ ಪಿಂಟೊ,ಶ್ರೀ ಸಂತೋಷ್ ಸಿಕ್ವೆರಾ, ಕುಮಾರಿ ಆಂಡ್ರಿಯಾ ಸಿಕ್ವೆರಾ, ಡಾ ಪ್ರೀತಿ ಡಿಸೋಜ, ಶ್ರೀ ಜೊನ್ ಡಿ ಸಿಲ್ವಾ , ಶ್ರೀ “ಫೆಲಿಕ್ಸ್” ಮೊರಾಸ್ ಉಪಸ್ಥಿತರಿದ್ದರು. ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ರೂ ಐದು ಲಕ್ಷ ಚೆಕ್ , ಶ್ರೀ ಆಲ್ಫ್ರೆಡ್ ಬೆನ್ನಿಸ್ ಹಾಗೂ ಶ್ರೀ ಸ್ಟ್ಯಾನಿ ಮೆಂಡೊನ್ಸಾ ವ| ಫಾ ಆಂಡ್ರ್ಯೂ ಲಿಯೋ ಡಿಸೋಜರವರಿಗೆ ಹಾಸ್ತಾಂತರ ಮಾಡಿದರು.
ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಸ್ವಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ಅರ್ಬನ್ ಗ್ರೂವ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಈ ಕಾರ್ಯಕ್ರಮವನ್ನು ಕೊಂಕಣಿ ಭಾಷಿಕರ ಹೆಸರಾಂತ ಕಾರ್ಯನಿರ್ವಾಹಕ ಶ್ರೀಯುತ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮವು ಉಚಿತ ಪ್ರವೇಶವಾಗಿತ್ತು.
ಪಡುಕೋಣೆ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪ್ರತಿಭಾ ದಿನಾಚರಣೆ
ಪಡುಕೋಣೆ: 24-01-2024 ರಂದು ಮಕ್ಕಳ ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಯಿತು. ಜಂಟಿ ಕಾರ್ಯದರ್ಶಿ ಫಾ. ಫ್ರಾನ್ಸಿಸ್ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಜ್ಯೋತಿ, ಪಾಲನಾ ಮಂಡಳಿ ಅಧ್ಯಕ್ಷ ಕೆನಡಿ ಪಿರೇರಾ, ಕಾರ್ಯದರ್ಶಿ ಅಲೆಕ್ಸ್ ಆಂಟನಿ ಡಿಸೋಜ, ಇ ಸಿ ಒ ಯೋಗೀಶ್ , ಸಿ ಆರ್ ಪಿ ರಾಮನಾಥ ಮೇಸ್ತ, ಮುಖ್ಯ ಅತಿಥಿಗಳಾಗಿ ಅನೂಪ್ ಡಿಸಿಲ್ವ- ಪಾವ್ಲ್ ಟಿಕ್ ಪ್ರೊಸೆಸ್ ಬೆಂಗಳೂರು, ಡಾ. ರಾಜೇಶ್ ಬಾಯಿರಿ, ಡಾ. ಅನುಲೇಖ – ಚಿತ್ರಕೂಟ ಆಯುರ್ವೇದ ಆಸ್ಪತ್ರೆ ಆಲೂರು , ನಿತಿನ್ ಡಿಆಲ್ಮೇಡ – ಪ್ರಾಂಶುಪಾಲರು ವಿಶ್ವ ವಿನಾಯಕ ಶಿಕ್ಷಣ ಸಂಸ್ಥೆ – ತೆಕ್ಕಟ್ಟೆ ಆಗಮಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪ್ರಭಾರ ಮುಖ್ಯ ಶಿಕ್ಷಕಿ ಶಾಂತಿ ಪಾಯಸ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. “ಗುಚ್ಛ” ಎಂಬ ಮಕ್ಕಳ ಬರಹದ ಪತ್ರಿಕೆ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾದ ಶಾಲಾ ಹಿರಿಯ ವಿದ್ಯಾರ್ಥಿಯರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿ ನಿಮಿಷ, ಸಮೀಕ್ಷಾ, ಸೌರಭ್ ನಿರೂಪಣೆ ಗೈದರು . ಶಿಕ್ಷಕಿ ನಿರ್ಮಲಾ ವಂದಿಸಿದರು.
ಕುಂದಾಪುರ: ಸಂತ ಜೋಸೆಫ್ ವಾಜ್ ವಾಳೆಯವರಿಂದ ಪಾಲಕರ ಹಬ್ಬ
ಕುಂದಾಪುರ, ಫೆ.5: ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸಂಬಂಧ ಪಟ್ಟ ಸಂತ ಜುಜೆ ವಾಜ್ ಇವರಿಗೆ ಸಮರ್ಪಿತಗೊಂಡ ಸಂತ ಜುಜೆ ವಾಜ್ ವಾಳೆಯವರು, ತಮ್ಮ ಪಾಲಕರ ಹಬ್ಬವನ್ನು ಭಾನುವಾರ ಫೆ.4ರಂದು ಇಗರ್ಜಿಯಲ್ಲಿ ಬೆಳಿಗ್ಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಪವಿತ್ರ ಬಲಿದಾನವನ್ನು ಹೋಲಿ ರೋಜರಿ ಚರ್ಚಿನ ಧರ್ಮಗುರು ವಂ| ಅಶ್ವಿನ್ ಆರಾನ್ನ ಬಲಿದಾನವನ್ನು ಅರ್ಪಿಸಿದರು.
ಸಂಜೆ ಸಂತ ಜೋಸೆಫ್ ವಾಳೆಯ ಗುರಿಕಾರ ಬರ್ನಾಡ್ ಡಿಕೋಸ್ತಾ ಇವರ ನಿವಾಸದಲ್ಲಿ ನಡೆದ ಹಬ್ಬದ ಆಚರಣೆಯಲ್ಲಿ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂತ ಜುಜೆ ವಾಜಾರ ನೊವೆನಾವನ್ನು ನೆಡಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿದರು,ಹಾಗೇ ಕೊಂಕಣಿ ಮತ್ತು ಕನ್ನಡ ಸಾಹಿತ್ಯದಲ್ಲಿ 45 ವರ್ಷಗಳಿಂದ ಸಾಹಿತ್ಯ, ನಾಟಕಗಳನ್ನು ರಚಿಸುತ್ತಾ ಬಂದಿರುವ ಹಿರಿಯ ಸಾಹಿತಿ ಮತ್ತು ಇತ್ತೀಚೆಗೆ ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಸಭಾ ಕೇಂದ್ರಿಯ ಸಮಿತಿಯಿಂದ ಏರ್ಪಡಿಸಿದ ಕಥೊಲಿಕ್ ವಾರ್ತಾ ಸಂಸ್ಥಾಪಕ ಮತ್ತು ಪತ್ರಕರ್ತರಿಗೆ ಬಹಳ ದೊಡ್ಡ ಮಟ್ಟದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ|ಪೀಟರ್ ಸಲ್ಡಾನ್ಹಾ ಇವರು ಮತ್ತು ಇತರ ಗಣ್ಯರಿಂದ ಸನ್ಮಾನಕ್ಕೆ ಭಾಜನರಾದ ವಾಳೆಯ ಗುರಿಕಾರ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಇವರನ್ನು ಶಾಲು ಪೇಟ ಧರಿಸಿ, ಫಲ ಪುಸ್ಪ ನೀಡಿ ಸನ್ಮಾನಿಸಿದರು. ಕಿರು ಸಮುದಾಯದ ಸಂಯೋಜಕಿ ಝಿಟಾ ಕರ್ವಾಲ್ಲೊ ಸನ್ಮಾನ ಪತ್ರವನ್ನು ವಾಚಿಸಿದರು.
ಸನ್ಮಾನಿಸಿದ ಫಾ| ವಂ|ಸ್ಟ್ಯಾನಿ ತಾವ್ರೊ ಬರ್ನಾಡ್ ಡಿಕೋಸ್ತಾ ಇವರಿಗೆ ಸಿಕ್ಕಿದ ಬಿರುದುಗಳು ಅವರ ಸಾಧನೆಯನ್ನು ಹೇಳುತ್ತದೆ ಮತ್ತು ಸೇವೆ ನಿಜಕ್ಕೂ ಹೆಮ್ಮೆ ಪಡುವಂತದು, ನಿಮ್ಮ ವಾಳೆಯಲ್ಲಿ ಪ್ರತಿಭಾವಂತರಿದ್ದಾರೆ ಸಂತ ಜೋಸೆಫ್ ವಾಜರ ಬಗ್ಗೆ ಅವರು ಮಾಡಿದ ಕಾರ್ಯಗಳ ಬಗ್ಗೆ ವಿವರಿಸಿ, ಅವರು ತೋರಿಸಿದ ದಾರಿಯಲ್ಲಿ ನೆಡೆಯೋಣ, ಎಂದು ಶುಭ ಕೋರಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ನಿಮ್ಮ ವಾಳೆಯರು ಧಾರ್ಮಿಕ ಕ್ರಿಯೆಯಲ್ಲಿ ಉತ್ತಮವಾಗಿ ಸಕ್ರಿಯವಾಗಿ ಪಾತ್ರ ವಹಿಸುತ್ತಾರೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಸಂತ ಜೋಸೆಫರ ಅಖಂಡ ನಂಬಿಕೆಯಲ್ಲಿ ಯೇಸು ಕ್ರಿಸ್ತರನ್ನು ನಂಬಿ ನಡೆದರೋ ಹಾಗೆ ನೀವೂ ನಡೆಯಿರಿ” ಎಂದು ಹೇಳಿದರು.
ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಕಿರು ಸಮುದಾಯದ ಸಂಚಾಲಕಿ ಝಿಟಾ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ಚಿಕ್ಕ ಮಕ್ಕಳು ನ್ರತ್ಯ ಪ್ರದರ್ಶಗಳನ್ನು ನೀಡಿದರು. ಭೋಜನದ ಜೊತೆ ಕಾರ್ಯಕ್ರಮ ಮುಕ್ತಾಯವಾಹಿತು. ದೇವ ಸ್ತುತಿಯ ಸಂಚಾಲಕಿ ವಿನಯಾ ಡಿಕೋಸ್ತಾ ಪ್ರಾಥನ ವಿಧಿಯನ್ನು ನಡೆಸಿಕೊಟ್ಟರು. ಸಂತ ವಿನ್ಸೆಂಟ್ ಪಾವ್ಲ್ ಸಮಿತಿಯ ವಲಯ ಅಧ್ಯಕ್ಷ ಅಂತೋನಿ ಡಿಸೋಜಾ ವಂದಿಸಿದರು, ಝೀಟಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿದರು.
Sad Demise – MR.ALFRED WILLIAM DSOUZA (69)Kundapur
ಕುಂದಾಪುರ ಹೊಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಲಾಸ್ಯ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ 7ನೇ ಸ್ಥಾನ
ಕುಂದಾಪುರದ ಹೊಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ರಾಜಸ್ಥಾನದ ಜೈಪುರದಲ್ಲಿ ನಡೆದ 67ನೇ ರಾಷ್ಟ್ರಮಟ್ಟದ 14ರ ವಯೋಮಾನದ “ಬಾಲಕಿಯರ ಯೋಗಾಸನ” ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ 7ನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ. ಹಾಗೇ ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕವು ಪ್ರಪ್ರಥಮ ಬಾರಿಗೆ 4 ಸ್ಥಾನ ಪಡೆದಿದ್ದು ಇದು ಕರ್ನಾಟಕ್ದವರಿಗೆ ಹೆಮ್ಮೆಯ ವಿಷಯವಾಗಿದೆ
ಇವಳ ಈ ಸಾಧನೆಗೆ ಸಂಸ್ಥೆಯ ಸಂಚಾಲಕರು,ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.