ಕುಂದಾಪುರ ಹೋಲಿ ರೊಜರಿ ಮಾತೆಯ 453 ನೇ ವಾರ್ಷಿಕ ಹಬ್ಬ “ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಫಾ|ಪಿಯುಸ್


ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 453 ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಿತು.
ತಾರೀಕಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಹೊಸನಗರ ಚರ್ಚಿನ ಧರ್ಮಗುರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವಜನ ನಿರ್ದೇಶಕರಾದ ವಂ|ಪಿಯುಸ್ ಡಿಸೋಜಾ ಅರ್ಪಿಸಿ ”ಅಮ್ಮ ಅಂದರೆ ನಮೆಗೆಲ್ಲರಿಗೂ ಅತ್ಯಂತ ಪ್ರೀತಿಯ ಕಾಳಜಿಯುಳ್ಳವರು, ನೋವಿನಲ್ಲಿ, ದುಖದಲ್ಲಿ, ಸಂತೋಷದಲ್ಲಿಯೂ ನಮಗೆ ಅಮ್ಮ ಬೇಕು, ಅಮ್ಮನ ಬಗ್ಗೆ ಹಲವಾರು ಪುಸ್ತಕಗಳು, ಕವಿತೆಗಳು, ಪದ್ಯಗಳು ಸಾಕಷ್ಟು ಬರೆದಿದ್ದಾರೆ, ಬರೆಯುತ್ತಾ ಇದ್ದಾರೆ, ಇದು ನಮ್ಮ ನಮ್ಮ ಸಂಸಾರಿಕ ಅಮ್ಮ, ಆದರೆ ನಮ್ಗೆಲ್ಲರಿಗೂ ಒರ್ವ ಅಮ್ಮ ಇದ್ದಾರೆ, ಅವರು ಮೇರಿಮಾತೆ, ಆ ಮಾತೆ ನಮಗೆ ಎಲ್ಲಾ ಕಾಲದಲ್ಲಿ ಪ್ರೀತಿ ದಯೆ ತೋರಿಸುತ್ತಾರೆ, ಆ ಅಮ್ಮ ಸದಾಕಾಲ ನಮಗೋಸ್ಕರ ತನ್ನ ಪುತ್ರ ಯೇಸುವಿನಲ್ಲಿ ಬೇಡುತಿರುತ್ತಾಳೆ, ಯೇಸುವನ್ನು ಶಿಲುಭೆಗೇರಿಸಿದ ಮೇಲೆ ಅವರ ಶಿಶ್ಯಂದರಿಗೆ ಧೈರ್ಯ ತುಂಬಿದವಳು ಮೇರಿ ಮಾತೆ, ಅವರ ಮತ್ತೊಂದು ಹೆಸರು ರೋಜರಿ ಮಾತೆ, ಈ ರೋಜರಿ ಮಾತೆಯ ನಮಗೆ ಜಪಮಾಲೆಯ ಮೂಲಕ ಜಪವನ್ನು ಹೇಳಿಕೊಟ್ಟಿದ್ದು, ನಿತ್ಯವೂ ಅವರ ಜಪವನ್ನು ಜಪಿಸಿ, ಮೇರಿ ಮಾತೆ ಇಹಲೋಕದಲ್ಲಿರುವಾಗ ನೆರೆಹೊರೆಯವರ ಸಹಾಯಕ್ಕಾಗಿ, ಯೇಸುವಿನ ಹತ್ತಿರ ಪವಾಡವನ್ನು ಮಾಡಿದ್ದಳು, ಯೇಉ ಮೇರಿಮಾತೆಯ ಯಾವಕೋರಿಕೆಯನ್ನು ನಿರಾಕರಿಸುವುದಿಲ್ಲ, ಅದಕ್ಕಾಗಿ ಮೇರಿ ಮಾತೆಯಲ್ಲಿ ಪ್ರಾರ್ಥಿಸಿ ಅವಳು ಯೇಸುವಿನ ಮೂಲಕ ನಿಮ್ಮ ಪ್ರಾರ್ಥನೆಯನ್ನು ನೇರವೇರಿಸುತ್ತಾಳೆ’ ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಎಂದು ಸಂದೇಶ ನೀಡಿದರು.
ಹಬ್ಬದ ತಯಾರಿಗಾಗಿ ಮೂರು ದಿವಸಗಳ ಧ್ಯಾನಕೂಟವನ್ನು ಎರ್ಪಡಿಸಿದ್ದು, ಆ ದ್ಯಾನಕೂಟವನ್ನು ಫಾ|ಪಿಯುಸ್ ಡಿಸೋಜಾ ಭಕ್ತಿಪೂರ್ವಕ ಅರ್ಥಭರಿತ ದ್ಯಾನಕೂಟವನ್ನು ನಡೆಸಿಕೊಟ್ಟರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಹಬ್ಬದ ಬಲಿದಾನದಲ್ಲಿ ಭಾಗಿಯಾಗಿ ಸ್ವಾಗತಿಸಿ ಹಬ್ಬದ ಶುಭಾಷಯಗಳನ್ನು ನೀಡಿ ‘ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿದ್ದಿರಿ, ನಮ್ಮ ಪಾಲಕಿ ರೋಜರಿ ಮಾತೆ ನಮ್ಮನ್ನು 453 ವರ್ಷಗಳಿಂದ ಆಶಿರ್ವದಿಸುತ್ತಲೆ ಬಂದಿದ್ದಾಳೆ, ರೋಜರಿ ಮಾತೆ ಎಲ್ಲರನ್ನು ಹರಸಲಿ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಕುಂದಾಪುರ್ – ರೊಜಾರ್ ಸಾಯ್ಬಿಣಿಚ್ಯಾ ಫೆಸ್ತಾಕ್ ಫಾ|ಪಿಯೂಸ್ ಥಾವ್ನ್ ಭೋವ್ ಅರ್ಥಾಭರಿತ್ ರೆತಿರ್


ಕುಂದಾಪುರ್, ಅ.6: 453 ವರ್ಸಾಂ ಚರಿತ್ರಾ ಆಸ್ಚ್ಯಾ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಕುಂದಾಪುರ್ ಫಿರ್ಗಜ್ ತಾರೀಕೆ ಫೆಸ್ತಾ ಖಾತಿರ್ ಆಸಾ ಕೆಲ್ಲಿ ರೆತಿರ್ ಅ.4 ವೇರ್ ಆರಂಭ್ ಜಾಲ್ಲಿ ರೆತಿರ್ ಭೋವ್ ಅರ್ಥಭರಿತ್ ಆಸೊನ್ 6 ವೇರ್ ಸಂಪ್ಪನ್ ಜಾಲಿ.
ಹೊಸನಗರ ಫಿರ್ಗಜೆಚೊ ವಿಗಾರ್, ಶಿವಮೊಗ್ಗ ದಿಯೆಸಿಜಿಚೊ ಯುವಜಣಾಂಚೊ ನಿರ್ದೇಶಕ್ ಮಾ|ಬಾ|ಪಿಯುಸ್ ಡಿಸೋಜಾ ಹಾಣಿ ಚಲವ್ನ್ ವೆಲಿ. ರೆತಿರ್ ಭೋವ್ ಅರ್ಥಾಭರಿತ್ ಜಾವ್ನಾಸೊನ್ ಎಕ್ ವಿನೂತನ್ ಶಿಕವ್ಣ್ ಜಾವ್ನಾಸ್ಲಿ.
‘ಆಮ್ಚೊ ಅತ್ಮೊ ದುದಾಚ್ಯಾ ಆಯ್ದಾಣಾ ಬರಿ ನಿತಳ್ ಕರಿಜೆ, ನಾ ತರ್ ದೂದ್ ಪುಟಲ್ಯಾ ಬರಿ, ಜಾವ್ನ್ ದೆವಾಚೆ ಉತರ್ ಆಮ್ಚೆ ಭಿತರ್ ರಿಗನಾ, ಭೊಗ್ಸಾಣೆಚೆ ಮಹತ್ವ್ ಕಳವ್ನ್ ರೆತಿರೆಕ್ ಆಯ್ಲ್ಯಾ ಥಾವ್ನ್ ಹರ್ಯೇಕ್ಲ್ಯಾಕ್ ಏಕಾಮೆಕಾ ಭೊಗ್ಸಾಣೆ ಮಾಗಾಸೆಂ ಕೆಲ್ಲೆಂ ಭೋವ್ ಅಪ್ರೂಪ್. ತಿಸ್ರ್ಯಾ ದಿಸಾ ಕುಟ್ಮಾಚ್ಯಾ ಮಹತ್ವಾ ವಿಶಿಂ ಅರ್ಥಾಭರಿತ್ ಶಿಕವ್ಣ್ ದಿಲಿ. ಲ್ಹಾನಾಂ ಭುಗ್ರ್ಯಾ ಪಾಸೊತ್, ಯವ ಜಣಾ ಪಾಸೊತ್, ಪೀಡೆಸ್ತ್ ಆನಿ ಮಲ್ಗಾಡ್ಯಾ ಪಾಸೊತ್ ಪ್ರಾರ್ಥನಾಂ ಅಶೆಂ ರೆತಿರ್ ಅನೇಕ್ ವಿಶ್ಯಾಂತ್ ಅತ್ಮಿಕ್ ಗರ್ಜೆ ಖಾತಿರ್ ಅರ್ಥಾಭರಿತ್ ಜಾವ್ನಾಸ್ಲಿ. ಹ್ಯಾ ರೆತಿರೆ ವೆಳಾರ್ ವಿಲ್ಸಟನ್ ಗೊನ್ಸಾಲ್ವಿಸ್ (ಮೈಸೂರ್) ಆನಿ ಫಿರ್ಗಜ್ ಗಾಯನ್ ಮಂಡಳೆನ್ ಗಾಯಾನಾಕ್ ಸಹಕಾರ್ ದಿಲೊ.
ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ರೆತಿರೆ ವೆಳಾರ್ ಸದಾಂಯಿ ಬಲಿದಾನಾಂತ್ ಭಾಗ್ ಘೆತ್ಲೊ ಮಾತ್ರ್ ನ್ಹಯ್ ಸಂಪುರ್ಣ್ ರೆತಿರೆಂತ್ ಭಾಗ್ ಘೆಂವ್ನ್ ಸರ್ವಾಂಚ್ಯಾ ಸಹಕಾರಾಕ್ ಧನ್ಯವಾದ್ ಪಾಟಯ್ಲೆ.

ಕಥೋಲಿಕ್ ಸಭಾ ಬಸ್ರೂರು ಘಟಕದಿಂದ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ

ಬಸ್ರೂರು ಪಂಚಾಯತ್ ಪರಿಸರದಲ್ಲಿ ಕಥೋಲಿಕ್ ಸಭಾ ಬಸ್ರೂರು ಘಟಕದಿಂದ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ನೆಡಸಾಲಾಯಿತು. ಗ್ರಾಮ‌ ಪಂಚಾಯತ್ ಅಧ್ಯಕ್ಷರು ಬೇಳೂರು ದಿನಕರ ಶೆಟ್ಟಿ ಊರನ್ನು ಸ್ವಚ್ಚವನ್ನಾಗಿ ಇಡುವುದು ನಮ್ಮೆಲ್ಲರ ಹಕ್ಕು , ಇದಕ್ಕೆ ಜಾತಿ ಧರ್ಮ ಇಲ್ಲ. ದೇಶದ ಪ್ರಧಾನಿ ಸಹ ದೇಶದ ಜನತೆಯೊಂದಿಗೆ ಕೈ ಜೋಡಿಸಿ ಸ್ವಚತೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು

ಕಥೋಲಿಕ್ ಸಭಾ ಬಸ್ರೂರು ಘಟಕದ ಅಧ್ಯಕ್ಷ ವಿಕ್ರಮ್ ಡಿ’ ಸೋಜ ಭಾಗಿಯಾದವರಿಗೆ ಹ್ಯಾಂಡ್ ಗ್ಲೌಸ್ ಕೊಟ್ಟು ಚಾಲನೆ ನೀಡಿದರು. ಕಥೊಲಿಕ್ ಬಸ್ರೂರು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಸೇರಿ ಸ್ವಚತ ಕಾರ್ಯದಲ್ಲಿ ಭಾಗಿಯಾದರು. ಕಾರ್ಯಕ್ರಮವನ್ನು ಮೇಬಲ್ ಡಿ’ ಸೋಜ ನಿರೂಪಿಸಿದರು.

ಅಖಿಲ ಭಾರತ ಕೊಂಕಣಿ ರಜತ ಸಮ್ಮೇಳನದ ಲಾಂಛನ ಬಿಡುಗಡೆ

ಮಂಗಳೂರು “ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಸಂಭ್ರಮಿಸುವ ಹಬ್ಬಗಳಾಗಿದ್ದು, 1939 ರಲ್ಲಿ ಕುಮಟಾದ ವಕೀಲ ಮಾಧವ ಮಂಜುನಾಥ ಶಾನುಭಾಗರ ದೂರದೃಷ್ಟಿಯ ಫಲಶೃತಿ ಅಖಿಲ ಭಾರತ ಕೊಂಕಣಿ ಪರಿಷತ್ ಈ ವರೆಗೆ ದೇಶದ ನಾನಾ ಭಾಗಗಳಲ್ಲಿ 24 ರಾಷ್ಟ್ರ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದು, 2023 ನವೆಂಬರ್ 4 – 5 ಎರಡು ದಿನ, ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿನಾಯತಿ ನೀಡಲಾಗಿದೆ. ಪ್ರತಿನಿಧಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದ್ದು ಒನ್‌ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ. ” ಎಂದು 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಂಕಣಿ ಕವಿ, ಚಿಂತಕ, ರಾಹುಲ್ ಎಡ್ವಟೈಸರ್ಸ್ ಮಾಲಕ ಟೈಟಸ್ ನೊರೊನ್ಹಾ ಮಾಹಿತಿ ನೀಡಿದರು. 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಸಂಚಾಲಕ ಖ್ಯಾತ ಕಲಾವಿದ ಪಿಂಟೊ ವಾಮಂಜೂರ್ ಸಮ್ಮೇಳನದ ಲಾಂಛನವನ್ನು ತಯಾರಿಸಿದ್ದಾರೆ.

ಹಿರಿಯ ಪತ್ರಕರ್ತ, 1974 ರಲ್ಲಿ ಕರ್ನಾಟಕದಲ್ಲಿ ಕೊಂಕಣಿ ಭಾಷಾ ಮಂಡಳದ ಸ್ಥಾಪನೆಗಾಗಿ ಶ್ರಮಿಸಿದ, ಶ್ರೀಮತಿ ವಿಮಲಾ ವಿ. ಪೈ ಜೀವನ ಸಿದ್ದಿ ಪ್ರಶಸ್ತಿ ಪುರಸ್ಕೃತ, ರಾಕ್ಣೊ ಪತ್ರಿಕೆಯ ವಿಶ್ರಾಂತ ಸಂಪಾದಕ ಫಾ| ಮಾರ್ಕ್ ವಾಲ್ಡರ್ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಗೋಕುಲದಾಸ ಪ್ರಭು ನೋಂದಣಿ ಪುಸ್ತಕ ಬಿಡುಗಡೆ ಮಾಡಿದರು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ನೊ) ಅಧ್ಯಕ್ಷ ಆಲ್ವಿನ್ ಡಿ’ಸೊಜಾ, ಪಾನೀರ್ ಕ್ಯೂ ಆರ್ ಕೋಡ್ ಮೂಲಕ ಒನ್‌ಲೈನ್ ನೋಂದಣಿಗೆ ವಿಧ್ಯುಕ್ತ ಚಾಲನೆ ನೀಡಿದರು. ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷ ಅರುಣ್ ಉಭಯ್‌ಕರ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪತ್ರಕರ್ತ ಎಚ್. ಎಂ. ಪೆರ್ನಾಲ್ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೊಂಕಣಿ ಭಾಷಾ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳ್‌ಕರ್ ವಂದಿಸಿದರು.

ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಕ್ರೀಡಾಕೂಟ 2023

ಮಂಗಳೂರು ಉತ್ತರ ವಲಯ, ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ಅಕ್ಟೋಬರ್3, ಮತ್ತು 4, 2023 ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.  ದ. ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ಉತ್ತರ ವಲಯ ಹಾಗೂ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ, ಬೊಂದೇಲ್ ಇವರ ಸಹಯೋಗದಲ್ಲಿ ಕ್ರೀಡಾಕೂಟವನ್ನು ಸಂಭ್ರಮದಿಂದ ಉದ್ಘಾಟಿಸಲಾಯಿತು. 

ಉದ್ಘಾಟನಾ  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾ. ಆಂಟನಿ ಸೇರಾ, ಅಧ್ಯಕ್ಷರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ವಲಯ ಶ್ರೀ ಜೇಮ್ಸ್ ಕುಟಿನ್ಹಾ, ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ವಂದನೀಯ ಫಾ ಆಂಡ್ರ್ಯೂ ಲಿಯೋ ಡಿಸೋಜಾ ರವರು ಧ್ವಜಾರೋಹಣ ನೆರವೇರಿಸಿದರು. 

ಕ್ರೀಡಾಕೂಟವನ್ನು ಸಂಘಟಿಸಿದ ಸೈಂಟ್ ಲಾರೆನ್ಸ್ ಶಾಲೆಯ  ವಿದ್ಯಾರ್ಥಿಗಳಿಂದ ಸುಂದರವಾದ ನೃತ್ಯ, ಲೇಡಿ ಹಿಲ್ ಶಾಲೆಯ ಮಕ್ಕಳಿಂದ ಬ್ಯಾಂಡ್ ನಾದ. ಕ್ರೀಡಾಪಟುಗಳಿಂದ ಪಥ ಸಂಚಲನ ಪ್ರದರ್ಶಿಸಲಾಯಿತು. 

ವೇದಿಕೆಯಲ್ಲಿ  ಶ್ರೀ ಜಿ ಉಸ್ಮಾನ್  ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ವಲಯ.

ಶ್ರೀ ಭರತ್ ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, ವಂದನೀಯ ಫಾ ಪೀಟರ್ ಗೊನ್ಸಾಲ್ವಿಸ್  ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು ಇದರ ಮುಖ್ಯ ಶಿಕ್ಷಕರು, ಶ್ರೀ ಜಾನ್ ಡಿಸಿಲ್ವಾ  ಸೇಂಟ್ ಲಾರೆನ್ಸ್  ಚರ್ಚಿನ ಉಪಾಧ್ಯಕ್ಷರು, ಶ್ರೀ ವಿನೋದ್ ಕುಮಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಸೇಂಟ್ ಲಾರೆನ್ಸ್ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಮ್ಯಾ ಶೆಟ್ಟಿ , ಶ್ರೀಮತಿ ಆಶಾ ನಾಯಕ್ ಜಿಲ್ಲಾ ಉಪಾಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಹರೀಶ್ ರೈಬಿ ಜಿಲ್ಲಾ ಕಾರ್ಯದರ್ಶಿ ದಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ರಾಘವೇಂದ್ರ ಅಧ್ಯಕ್ಷರು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಉತ್ತರ ವಲಯ, ಶ್ರೀಮತಿ ಚೆಲುವಮ್ಮ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಜೈರಾಮ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶ್ರೀ ಉಮೇಶ್ ಅಧ್ಯಕ್ಷರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘ, ಶ್ರೀ ಹರಿಪ್ರಸಾದ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ,  ಶ್ರೀಮತಿ ಪ್ರೇಮಲತಾ ಸಿ ಆರ್ ಪಿ ಕಾವೂರು ಕ್ಲಸ್ಟರ್,  ಹಾಗೂ ಇತರ ಸಿ ಆರ್ ಪಿ ಹಾಗೂ ಬಿ ಆರ್ ಪಿ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತದನಂತರ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಜೊತೆಗೂಡಿ ವಿವಿಧ ಅಥ್ಲೆಟಿಕ್ಸ್ ಕ್ರೀಡೆಗಳನ್ನು ತಾಲೂಕಿನ ಪ್ರತಿಭಾನ್ವಿತ ಕ್ರೀಡಾಳುಗಳಿಗೆ ನಡೆಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

ಅಕ್ಟೋಬರ್ 4 ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಶ್ರೀ ಜಿ ಉಸ್ಮಾನ್  ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ವಲಯ ಇವರು ಭಾಗವಹಿಸಿದ ಹಾಗು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಹಾಗೂ ಕ್ರೀಡೆಯನ್ನು ಸಂಘಟಿಸಿದ ಸ್ವಂತ ಲಾರೆನ್ಸ್  ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. 

ಶ್ರೀ ಭರತ್ ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ಇಲಾಖೆಯ ಈ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಿ ಕೊಟ್ಟಂತಹ ಎಲ್ಲರಿಗೆ ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಸಂಚಾಲಕರು ವಂದನೀಯ ಫಾ ಆಂಡ್ರ್ಯೂ ಲಿಯೋ ಡಿಸೋಜಾ ವೈಯುಕ್ತಿಕ ಚಾಂಪಿಯನ್ ಹಾಗೂ ಗ್ರೂಪ್ ಚಾಂಪಿಯನ್ಶಿಪ್ ಟ್ರೋಪಿಗಳನ್ನು ನೀಡಿ ಗೌರವಿಸಿದರು. 

ಯಲ್ದೂರು ಗ್ರಾಮದ ಬೇಟಮ್ಮ (80) ಬುಧವಾರ ತಮ್ಮ ನಿವಾಸದಲ್ಲಿ ನಿಧನ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಬೇಟಮ್ಮ (80) ಬುಧವಾರ ತಮ್ಮ ನಿವಾಸದಲ್ಲಿ ನಿಧನರಾದರು. ಎಸ್‍ಬಿಎಂ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.
ಮೃತರಿಗೆ ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.
ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲಾಯಿತು.

ಬಗರ್ ಹುಕುಂ ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾದ ಅರಣ್ಯ ಕಲಾಖೆ ಸಚಿವರ ಟಿಪ್ಪಣಿ ರದ್ದುಪಡಿಸುವಂತೆ ಸರ್ಕಾರಕ್ಕೆ ಒತ್ತಾಯ

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಬುಧವಾರ, ಬಡವರ, ದಲಿತರ, ಅಧಿವಾಸಿಗಳ, ಹಿಂದುಳಿದ ವರ್ಗಗಳ ಬಗರ್ ಹುಕುಂ ಸಾಗುವಳಿದಾರ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾಗಿರುವ ಅರಣ್ಯ ಕಲಾಖೆ ಸಚಿವರ ಟಿಪ್ಪಣಿ ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ರಾಜ್ಯದಲ್ಲಿ ಎಲ್ಲ ರೀತಿಯ ಒತ್ತುವರಿ ತೆರವುಗೊಳಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಟಿಪ್ಪಣಿ ಕಳಿಸಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅರಣ್ಯ ಇಲಾಖೆ ಭೂ ಕಬಳಿಕೆ ಕಾಯ್ದೆಯಡಿ ರೈತರ ಮೇಲೆ ಪ್ರಕರಣ ದಾಖಲಿಸಿದೆ. ಸರ್ಕಾರ ಇಂಥ ಪ್ರಕರಣಗಳನ್ನು ರದ್ದುಪಡಿಸಬೇಕು. ಕಾನೂನು ಬಾಹಿರವಾಗಿ ರೈತರ ಮೇಲೆ ಕೇಸು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‍ಗೆ ನೀಡಲಾಯಿತು.
ಕೆಪಿಆರ್‍ಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಬಿ.ಎ.ಸೈಯದ್ ಫಾರೂಕ್, ಉಪಾಧ್ಯಕ್ಷರಾದ ಆರ್.ವೆಂಕಟೇಶ್, ಎಂ.ಎಸ್.ನಾಗರಾಜ್, ಸಹ ಕಾರ್ಯದರ್ಶಿಗಳಾದ ಶಿವಾರೆಡ್ಡಿ, ವೆಂಕಟಲಕ್ಷ್ಮಮ್ಮ, ಶಿವರಾಜ್ ಕುಮಾರ್, ಮಂಜುಳ, ಶ್ರೀನಾಥ್, ವಿ.ಚಲಪತಿ, ಅಲ್ಲಾಬಕಷ್ ಇದ್ದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ-ದಿಂಬಾಲ ಅಶೋಕ್

ಶ್ರೀನಿವಾಸಪುರ: ಕೋಲಾರದಲ್ಲಿ ಅ.3 ರಂದು ಏರ್ಪಡಿಸಿದ್ದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ರವಿಕುಮಾರ್ ಮಾತಿನ ಭರದಲ್ಲಿ ರಮೇಶ್ ಕುಮಾರ್ ಅವರ ಜಮೀನು ಕುರಿತು ಪ್ರಸ್ತಾಪಿಸಿ ‘ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾ ಅರಣ್ಯಾಧಿಕಾರಿ ಚಕಾರ ಎತ್ತುತ್ತಿಲ್ಲ. ರಮೇಶ್ ಕುಮಾಮಾರ್ ಅವರೇನು ಸತ್ಯ ಹರಿಶ್ಚಂದ್ರನೇ ಎಂದು ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ವಿಷಯದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಟಸ್ಥ ನಿಲುವು ತಳೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡವರು ಕುಣಿಯಬೇಕು. ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಕಾಲಿಗೆ ಗೆಜ್ಜೆ ಕಟ್ಟಿದ್ದಾರೆ. ಹಾಗಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರೈತರ ಪರವಾಗಿ ಧ್ವನಿಯೆತ್ತಬೇಕು. ಆದರೆ ಅವರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಮತದಾರರು ಕುಣಿಯಲು ಭಾರದ ವ್ಯಕ್ತಿಯ ಕಾಲಿಗೆ ಗೆಜ್ಜೆ ಕಟ್ಟಿದಂತಾಗಿದೆ ಎಂದು ಹೇಳಿದರು.
ಈಗ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷಗಳು ರೈತರ ಪರವಾಗಿ ಹೋರಾಟ ಮಾಡಬೇಕು. ಆದರೆ ಇಲ್ಲಿ ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತಾಗಿದೆ. ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರು, ಪಕ್ಷದ ಮುಖಂಡರೊಂದಿಗೆ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಒತ್ತುವರಿ ತೆರವುಗೊಳಿಸಲಾಗಿದ್ದ ಜಮೀನು ಉಳುಮೆ ಮಾಡಿದ ಆಪಾದನೆ ಮೇಲೆ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದ ರೈತ ನಾಗರಾಜ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದು ಸರಿಯಲ್ಲ. ಏನೇ ಆದರೂ ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಸಮಸ್ಯೆ ನಿವಾರಣೆಗೆ ಸಾಂಘಿಕ ಪ್ರಯತ್ನ ಮಾಡಬೇಕು. ಪಕ್ಷಾತೀತವಾಗಿ ಹೋರಾಡಬೇಕು ಎಂದು ಹೇಳಿದರು.
ಮುಖಂಡರಾದ ಮುನಿವೆಂಕಟಪ್ಪ, ವೆಂಕಟರೆಡ್ಡಿ, ಗುರಪ್ಪ, ಎನ್.ತಿಮ್ಮಯ್ಯ, ಅಯ್ಯಪ್ಪ, ರಾಮಾಂಜಮ್ಮ ಇದ್ದರು.

ಭಂಡಾರ್ಕಾರ್ಸ್ ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಕಾರ್ಯಕ್ರಮ

ಕುಂದಾಪುರ: ಅಕ್ಟೋಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕುಂದಾಪುರದ ಆಯುಷ್ ಧಾಮ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೋನಿ ಡಿಕೋಸ್ತಾ ಅವರು ವ್ಯಕ್ತಿಯನ್ನು ಬದುಕಿಸುವುದು ಸಮಾಜದ ಋಣವನ್ನು ತೀರಿಸುವುದಕ್ಕೆ ಒಂದು ಅವಕಾಶ ಸಿಕ್ಕಂತಾಗುತ್ತದೆ. ಅಂತಹ ಅವಕಾಶಗಳಲ್ಲಿ ಪ್ರಥಮ ಚಿಕಿತ್ಸೆಯೂ ಒಂದು. ಅವಘಡಗಳು ಅಪಘಾತವಾದಲ್ಲಿ ನಿಮ್ಮ ಪ್ರಥಮ ಚಿಕಿತ್ಸೆ ಜ್ಞಾನವನ್ನು ಬಳಸಿ ನಿಮ್ಮ ಜವಾಬ್ದಾರಿ ನಿಭಾಯಿಸಬೇಕು. ಜೀವವನ್ನು ಉಳಿಸುವ ಕೆಲಸ ಪುಣ್ಯದ ಕೆಲಸ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಸದಸ್ಯರಾದ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಕಾರ್ಯಕ್ರಮ ಅಧಿಕಾರಿಣಿ ವಿದ್ಯಾರಾಣಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಜ್ಞಾ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿ, ಸಿಂಚನ ಆಚಾರ್ಯ ಸ್ವಾಗತಿಸಿ, ಅರ್ಪಿತಾ ವಂದಿಸಿದರು