ದೇಶಕ್ಕೆ ಇಂದಿರಾ ಗಾಂಧಿ, ಪಟೇಲ್ ಕೊಡುಗೆ ಅಪಾರ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ: ಅ.31: ಇಂದು ಪ್ರಪಂಚದಲ್ಲಿ ಭಾರತ ಮಂಚೂಣಿ ಸ್ಥಾನ ಪಡೆಯಲು ಮತ್ತು ಇಡೀ ಪ್ರಪಂಚದ ನೋಟ ಭಾರತದತ್ತ ಬೀರಲು ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ನೆಹರು ಸಂಪುಟದಲ್ಲಿದ್ದ ದೇಶದ ಪ್ರಥಮ ಸಮರ್ಥ ಗ್ರಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ದೃಢ ನಿಲವು ದೂರ ದೃಷ್ಟಿ ಮತ್ತು ಸಮರ್ಥ ಆಡಳಿತ ಕಾರಣ. ದೇಶಕ್ಕೆ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದ ಅಪೂರ್ವ ಕೊಡುಗೆಯಾಗಿದೆ ಎಂದು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.

ಇಂದು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆ ಕಾನೂನು, 20 ಅಂಶಗಳ ಕಾರ್ಯಕ್ರಮ, ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನದಿಂದ ಇಂದಿರಾಗಾಂಧಿ ದೇಶದ ಬೆಳವಣಿಗೆ ದಿಕ್ಕನ್ನು ಅಭಿವೃದ್ಧಿಯತ್ತ ಕೊಂಡೊಯ್ದರು ಮತ್ತು ಸರ್ದಾರ್ ಪಟೇಲರು ದೇಶದ ಪ್ರಥಮ ಗೃಹ ಸಚಿವರಾಗಿ ತೆಗೆದುಕೊಂಡ ಹಲವು ನಿರ್ದಾಕ್ಷಿಣ ನಿರ್ಧಾರಗಳು ಇಂದಿನ ಭಾರತೀಯ ಪ್ರಜೆಗಳ ನೆಮ್ಮದಿಯ ಬದುಕಿಗೆ ಅಡಿಪಾಯವಾಗಿದೆ ಎಂದರು.

ಇಂದಿರಾ ಪಟೇಲ್ ಕೊಡುಗೆಯ ಬಗ್ಗೆ ಹಿರಿಯರಾದ ಗಂಗಾಧರ ಶೆಟ್ಟಿ ಮತ್ತು ಅಬ್ದುಲ್ಲಾ ಕೂಡಿ ಅವರು ಮಾತನಾಡಿದರು.

ಸಭೆಯಲ್ಲಿ ಬ್ಲಾಕ್ ಮಹಿಳಾ ಅಧ್ಯಕ್ಷ ದೇವಕಿ ಸಣ್ಣಯ್ಯ ,ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ , ಪ್ರಭಾವತಿ ಶೆಟ್ಟಿ, ಕೋಣಿ ಪಂಚಾಯತ್ ಅಧ್ಯಕ್ಷ ಅಶೋಕ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಸುಜನ್ ಶೆಟ್ಟಿ, ಅಶ್ವತ್ ಕುಮಾರ್, ಕೆ ಶಿವಕುಮಾರ್, ಐಟಿ ಸೆಲ್ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ ,ಪಂಚಾಯತ್ ಸದಸ್ಯ ಗಣಪತಿ ಶೇಟ್ ,ಕೋಣಿ ನಾರಾಯಣ ಆಚಾರಿ, ಅಶೋಕ್ ಸುವರ್ಣ, ಕೇಶವ ಭಟ್, ಅಭಿಜಿತ್ ಪೂಜಾರಿ, ಶಶಿ ರಾಜ್ ಪೂಜಾರಿ, ಜ್ಯೋತಿ ನಾಯ್ಕ್, ವೇಲಾ ಬ್ರಗಾಂಜ ,ಸದಾನಂದ ಕಾರ್ವಿ, ವಿವೇಕಾನಂದ ,ಜೋಸೆಫ್ ರೆಬೆಲ್ಲೊ ,ದಿನೇಶ್ ಬೆಟ್ಟ ,ಕೆ ಸುರೇಶ್, ಮೇಬಲ್ ಡಿಸೋಜಾ, ಸ್ವಸ್ತಿಕ್ ಶೆಟ್ಟಿ, ಡೊಲ್ಫಿ ಕ್ರಾಸ್ತಾ, ಫ್ರಾನ್ಸಿಸ್ ಮಚಾದೊ, ಪ್ರವೀಣ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.

ಯುವ ಮುಖಂಡ ಕೊಡಿ ಸುನಿಲ್ ಪೂಜಾರಿ ಸ್ವಾಗತಿಸಿ ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ವಂದಿಸಿದರು.

ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ ಶೇಖರ್‌ ಅಜೆಕಾರ್‌ ಹೃದಯಘಾತದಿಂದ ನಿಧನ

ಕಾರ್ಕಳ:ಅ 31. ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ ಶೇಖರ್‌ ಅಜೆಕಾರ್‌ ಹೃದಯಘಾತದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು. ಶೇಖರ್‌ ಅಜಿಕಾರ್‌ ಅವರು 22 ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು.

ಶೇಖರ್‌ ಅಜೆಕಾರ್‌ ಅವರಿಗೆ ಕುಂದಾಪುರದ ಹತ್ತಿರದ ನಂಟು ಇತ್ತು. ಅವರು ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ವರದಿಗಾರರಗಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಮುಂಬೈನ್ “ಕರ್ನಾಟಕ ಮಲ್ಲ, ಜನವಾಹಿನಿ, ಕನ್ನಡಪ್ರಭ ಮತ್ತು ಉಷಾ ಕಿರಣಗಳಲ್ಲೂ ಸೇವೆ ಸಲ್ಲಿಸ್ಲಿದ್ದಾರೆ. 10 ವರ್ಷಗಳ ಕಾಲ ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಶಾಖೆಯ ಉಪಾಧ್ಯಕ್ಷರೂ ಆಗಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್‌ 2018, ಅಮಂತ್ರನ ಪ್ರಶಸ್ತಿ 2019, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ನೀಡಿದ. ಕೊಡುಗೆಗಾಗಿ 1995 ರಲ್ಲಿ ಪ್ರಶಸ್ತಿ ಲಭಿಸಿದೆ.

ಅವರು ಆಯೋಜಿಸುತ್ತಿದ್ದ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿತ್ತು. ಎಲೆಮರೆಯಲ್ಲಿದ್ದ ಆಪಾರ ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶೇಖರ್‌ ಅವರ ಶ್ರಮ ಅನನ್ಯವಾದದ್ದು. ಅವರ ನಿಧನ ಸಾಹಿತ್ಯ ಮತ್ತು ಮಾದ್ಯಮ ಲೋಕಕ್ಕೆ ಅಪಾರ ನಶ್ಟವಾಗಿದೆ.

ಕುಂದಾಪುರದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆ ಮನೆ ಮೇಲೆ ಲೋಕಾಯುಕ್ತ ದಾಳಿ

ಕುಂದಾಪುರ :ನಿನ್ನೆ ರಾಜ್ಯಾದಾಂತ್ಯ ಲೋಕಾಯುಕ್ತ ದಾಳಿ ನೆಡೆಸಿದ್ದು, ಅದೇ ಹೊತ್ತೀಗೆ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನೆಡೆಸಿತ್ತು. ಈ ದಾಳಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆಯವರ ಕುಂದಾಪುರದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

ರಾಜೇಶ್ ಬೇಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಯುತ್ತಿದ್ದು, ಕುಂದಾಪುರ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವಾಸಿಯಾಗಿದ್ದ ರಾಜೇಶ್ ಬೇಳ್ಕೆರೆ ಹಲವು ವರ್ಷಗಳಿಂದ ಕುಂದಾಪುರದಲ್ಲಿ ನೆಲೆಸಿದ್ದಾರೆ. ಅವರು ಉಡುಪಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತಿದ್ದಾರೆ. ಅಧಾಯಕಿಂತ್ತ ಹೆಚ್ಚು ಸಂಪತ್ತು ಹೊಂದಿದ ಗುಮಾನಿ ಮೇಲೆ ಈ ದಾಳಿ ನೆಡೆದಿದೆ. ಏಕಾ ಕಾಲದಲ್ಲಿ ನಡೆದ ದಾಳಿಯಲ್ಲಿ ಅವರ ಅಂಕೋಲದಲ್ಲಿರುವ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಲಾಗಿದೆ.

ರಾಷ್ಟ್ರೀಯ ಏಕತಾ ದಿನಾಚರಣೆ : ರಕ್ತದಾನ ಶಿಬಿರ, ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರೆಡ್ ಕ್ರಾಸ್ ಘಟಕ 

ಮೂಡ್ಲಕಟ್ಟೆ ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರೆಡ್ ಕ್ರಾಸ್ ಘಟಕ  ಮತ್ತು ಭಾರತೀಯ ರೆಡ್ ಕ್ರಾಸ್ ಘಟಕ  ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ, ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೇಯವರಾದ ಡಾII ಪ್ರತಿಭಾ ಎಂ ಪಟೇಲ್ ಅವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ರಾಷ್ಟೀಯ ಏಕತಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ದೇಶದ ಏಕತೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಸದ್ರಡ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿದರು ಈ ನಿಟ್ಟಿನಲ್ಲಿ ರಾಷ್ಟೀಯ ಏಕತಾ ದಿನಾಚರಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟೀಯ ಏಕತಾ ದಿನಾಚರಣೆಯ ಪ್ರತಿಜ್ಞೆಯನ್ನು  ಬೋಧಿಸಲಾಯಿತು. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಉಪಾಪ್ರಾಂಶುಪಾಲರಾದ ಪ್ರೊ ಜಯಶೀಲ ಕುಮಾರ್, ರೆಡ್ ಕ್ರಾಸ್ ಘಟಕದ ಸಂಯೋಜಕಿ ಹಾಗು ವಾಣಿಜ್ಯ ಉಪನ್ಯಾಸಕಿ ಅಸಿಸ್ಟೆಂಟ್ ಪ್ರೊಫೆಸರ್ ಶಬೀನ ಎಚ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಅಸಿಸ್ಟೆಂಟ್ ಪ್ರೊಫೆಸರ್ ಸುಮನಾ ನಿರೂಪಿಸಿದರು.

ಬಜ್ಜೋಡಿ ಫುಟ್ಬಾಲ್ ತಂಡ ಮತ್ತು ಪತ್ರಕರ್ತ ಸ್ಟಾನ್ಲಿ ಡಿ’ಕುನ್ಹಾ ಅವರಿಗೆ ಬಜ್ಜೋಡಿ ಚರ್ಚಿನಿಂದ ಅಭಿನಂದನೆಗಳು

ಕ್ಯಾಥೋಲಿಕ್ ಸಭಾ, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಸಮುದಾಯ ಸಬಲೀಕರಣ ಟ್ರಸ್ಟ್ ಜಂಟಿಯಾಗಿ ಕಳೆದ ಭಾನುವಾರ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಫಾ.ಮ್ಯಾಥ್ಯೂ ವಾಸ್ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್ ಕಪ್ ಪಡೆದ ನಮ್ಮ ಬಜ್ಜೋಡಿ ತಂಡವನ್ನು ಇಂದು ಬೆಳಗ್ಗೆ 9.15 ಕ್ಕೆ ಸಾಮೂಹಿಕವಾಗಿ ನಮ್ಮ ಪ್ಯಾರಿಷ್‌ನಲ್ಲಿ ಸನ್ಮಾನಿಸಲಾಯಿತು. ಜೈಸನ್ ಪೆರೇರಾ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಪಡೆದರು.

ಹಾಗೆಯೇ ಇನ್‌ಫೆಂಟ್ ಜೀಸಸ್ ವಾರ್ಡ್‌ನ ಶ್ರೀ ಸ್ಟಾನ್ಲಿ ಡಿಕುನ್ಹಾ ಅವರನ್ನು ಕಳೆದ 32 ವರ್ಷಗಳಿಂದ ಮಾಧ್ಯಮ ಸೇವೆಗಾಗಿ ಬಿಷಪ್ ಪೀಟರ್ ಪಾಲ್ ಸಲ್ದಾನ ಅವರು ಕ್ರಿಶ್ಚಿಯನ್ ಪತ್ರಕರ್ತ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

Felicitations to the Bajjodi football team and journalist Stanley D’Cunha from the Bajjodi Church

Our Bajjodi team was felicitated today at 9.15 a.m. in mass at our parish for winning the Runner’s Cup in the Fr.Matthew Wass Memorial footballTournament organized jointly by the Catholic Church, Christian Sports Association and Community Empowerment Trust at St. Aloysius College last Sunday. Jayson Pereira won the best defender award.

Also Mr. Stanley DiCunha of Infant Jesus Ward was honored with the Christian Journalist Honorary Award by Bishop Peter Paul Saldana for his service to the media for the past 32 years.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಕೈಗೊಂಡಿರುವ ದಾಳಿಯಿಂದ ಕನಿಷ್ಠ 7650 ಮಂದಿ ಫೆಲಸ್ತೀನಿಯನ್ನರು ಸಾವನ್ನಪ್ಪಿದ್ದಾರೆ

ಗಾಝಾಪಟ್ಟಿ ಪ್ರದೇಶದಲ್ಲಿ ಇಸ್ರೇಲ್ ಕೈಗೊಂಡಿರುವ ದಾಳಿಯಿಂದ ಕನಿಷ್ಠ 7650 ಮಂದಿ ಫೆಲಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇಸ್ರೇಲ್ ನ ಸ್ವಯಂ ರಕ್ಷಣೆ ಹಕ್ಕನ್ನು ಬೆಂಬಲಿಸುವುದಾಗಿ ವಿದೇಶಿ ಪಡೆಗಳು ಇಸ್ರೇಲ್ ಕ್ರಮವನ್ನು ಬೆಂಬಲಿಸಿರುವ ನಡುವೆಯೇ, ಬಾಂಬ್ ದಾಳಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚುತ್ತಿದೆ. ಕದನ ವಿರಾಮ ಘೋಷಿಸುವ ಮೂಲಕ ಗಾಝಾ ನಾಗರಿಕರಿಗೆ ಮಾನವೀಯ ನೆರವು ತಲುಪಿಸಲು ಅನುವು ಮಾಡಿಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಶನಿವಾರ ಹೇಳಿಕೆಯೊಂದನ್ನು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಝಾ ವಿರುದ್ಧದ ಯುದ್ಧದಲ್ಲಿ ಇಸ್ರೇಲಿ ಪಡೆಗಳು ಎರಡನೇ ಹಂತ ತಲುಪಿವೆ ಎಂದು ಘೋಷಿಸಿದ್ದಾರೆ. ಹಮಾಸ್ ಸಂಘಟನೆಯ ಆಡಳಿತವಿರುವ ಫೆಲಸ್ತೀನ್ ಪ್ರದೇಶದಲ್ಲಿ ನೆಲಮಟ್ಟದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲಿ ಯುದ್ಧವಿಮಾನಗಳು ಬಾಂಬ್ ದಾಳಿ ನಡೆಸುತ್ತಿರುವ ನಡುವೆಯೇ ಗಾಝಾದ ನಾಗರಿಕರು ಹೊರ ಜಗತ್ತಿನ ಜತೆ ಸಂಪರ್ಕ ಕಡಿದುಕೊಂಡಿದ್ದಾರೆ. ಹಮಾಸ್ ಹೋರಾಟಗಾರರ ವಿರುದ್ಧದ ತಳಹಂತದ ಕಾರ್ಯಾಚರಣೆಗೆ ಇಸ್ರೇಲ್ ಪಡೆಗಳು ಸಜ್ಜಾಗುತ್ತಿವೆ ಎಂದು ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.

ಜಾಕಿರ್ ಹುಸೇನ್ ಮೊಹಲ್ಲಾದ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸಮಾಜ ಸೇವಕ ನದೀಮ್ ಅಕ್ತರ್ , ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಭೇಟಿ

ಶ್ರೀನಿವಾಸಪುರ : ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾದಲ್ಲಿರುವ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಇಂದು ಅಕ್ತಾರ್ ಟ್ರೇಡರ್ಸ್ ಮಾಲೀಕರು ಮತ್ತು ಸಮಾಜ ಸೇವಕ ನದೀಮ್ ಅಕ್ತರ್ , ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಅವರೊಂದಿಗೆ ಶಾಲೆಗೆ ಭೇಟಿ ನೀಡಿದರು.
ಶಾಲೆಯ ಮಕ್ಕಳಿಗೆ ಚಾಕಲೇಟ್ ಗಳು ನೀಡಿ ಖುಷಿಪಟ್ಟರು ಮತ್ತು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಜ್ಞಾನವನ್ನು ಬೆಳೆಸಿಕೊಳ್ಳಲು ನಾಲ್ಕು ಕಂಪ್ಯೂಟರ್ ಗಳನ್ನು ನೀಡುವ ಭರವಸೆ ನೀಡಿದರು. ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಆದ್ದರಿಂದ ಶಿಕ್ಷಕರು ತಮ್ಮ ಜ್ಞಾನ ಮತ್ತು ಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಎಂದು ತಿಳಿಸಿದರು.

ಸಮಾಜದ ದಾನಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಅವರು ಮಾತನಾಡುತ್ತಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉರ್ದು, ಕನ್ನಡ, ಇಂಗ್ಲೀಷ್ ಮತ್ತು ಇತರರ ವಿಷಯದ ಬಗ್ಗೆ ಬೋಧನೆ ಜೊತೆ ದೀನಿಯಾತ್ ಸಹ ಅರ್ಧ ಗಂಟೆ ಪಾಠ ನೀಡಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮತ್ತು ವಿದ್ಯಾಭ್ಯಾಸದ ಕಡೆ ಗಮನ ಹರಿಸ ನಿಮ್ಮ ಭವಿಷ್ಯವನ್ನು ಉಜ್ಜಲುಗೊಳಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಸಾಧಿಕ್ ಎಸ್‌ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾಖಾನ್ , ಇಂತಿಯಾಸ್ , ಮೌಲ , ಶೋಹೇಬ್ , ಸಲ್ಮಾನ್ ಮತ್ತು ಶಿಕ್ಷಕರು ಇದ್ದರು.

ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಹೊಣೆಗಾರಿಕೆ ಇದೆ ; ಸಿ.ಆರ್.ಅಶೋಕ್

ಕೋಲಾರ / ಅಕ್ಟೋಬರ್ 30 : ಶಾಲೆಗಳು ಸಹ ಸಮುದಾಯದ ಒಂದು ಭಾಗ ಆಗಿರುವುದರಿಂದ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಮಹತ್ವದ ಹೊಣೆಗಾರಿಕೆ ಇದೆ. ಮಕ್ಕಳಂತೆ ಸಸಿ ಗಿಡಗಳನ್ನು ಪ್ರೀತಿಸಿ, ಬೆಳೆಸಿ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ. ಆರ್.ಅಶೋಕ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯೆಂದರೆ ಕೇವಲ ಶಿಕ್ಷಕರು ಮತ್ತು ಮಕ್ಕಳಿಗμÉ್ಟೀ ಸೀಮಿತವಲ್ಲ. ಎಲ್ಲರ ಶೈಕ್ಷಣಿಕ ಬದುಕು ಆರಂಭವಾಗುವುದೇ ಶಾಲೆಯಿಂದ ಶಾಲೆಗಳೂ ಸಹ ಸಮುದಾಯದ ಒಂದು ಭಾಗವೇ ಆಗಿರುವುದರಿಂದ ಶಾಲೆಯ ಪ್ರಗತಿಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಮಕ್ಕಳ ಕಲಿಕೆಯ ಬಗ್ಗೆ ನಿಗಾ ವಹಿಸಬೇಕು. ಎಲ್ಲಾ ಮಕ್ಕಳೂ ತಪ್ಪದೇ ಶಾಲೆಗೆ ಬರುವಂತಾಗಬೇಕು. ಶಾಲೆಗಳಲ್ಲಿನ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಾಗೃತಿ ಉಂಟುಮಾಡುವತ್ತ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿಯ ಚಿಂತನ ಮಂಥನಗಳು ನಡೆಯುತ್ತಿರುವುದು ಸುತ್ಯಾರ್ಹ, ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಸುಂದರವಾಗಿ ಕಾಣಬೇಕು ಎಂದರು.
ಶಾಲೆಗಳಲ್ಲಿನ ಹಾಜರಾತಿ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಈ ರೀತಿಯ ಶಾಲೆಯಲ್ಲಿರುವ ಯೋಜನೆಗಳ ಬಗ್ಗೆ ಮಕ್ಕಳ ಪಾಲಕರು ಅರಿವು ಪಡೆದುಕೊಳ್ಳಲು ಸಮುದಾಯದತ್ತ ಶಾಲಾ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಮುದಾಯದತ್ತ ಶಾಲಾ ಮೇಲ್ವಿಚಾರಕ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೆಂಕಟರಮಣಪ್ಪ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಪಾಲಕರು ಶಾಲೆಗೆ ಆಗಾಗ್ಗೆ ಬೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಜಿ.ಶ್ರೀನಿವಾಸ್, ಸಹ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಸ್ವಾತಿ ಮತ್ತಿತರರು ಹಾಜರಿದ್ದರು.

ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆ ಶಿವಮೊಗ್ಗದ ಶರಾವತಿ ನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ನಡೆಯಿತು / The 7th Intercessory Prayer of Shimoga Diocese was held at Infant Jesus Church, Sharavati Nagar, Shimoga.

ಶಿವಮೊಗ್ಗ, ಅಕ್ಟೋಬರ್ 30, 2023: ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆಯು ಶಿವಮೊಗ್ಗದ ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ಅಕ್ಟೋಬರ್ 29 ರಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಯಿತು.

ಶಿವಮೊಗ್ಗ, ಅಕ್ಟೋಬರ್ 30, 2023: ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆಯು ಶಿವಮೊಗ್ಗದ ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ಅಕ್ಟೋಬರ್ 29 ರಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಯಿತು.

ಶಿವಮೊಗ್ಗ ಡಯಾಸಿಸ್‌ನ ವರ್ಚಸ್ವಿ ನವೀಕರಣ ಸೇವೆಗಳು ಅಂದರೆ, ಡಯೋಸಿಸನ್ ಸರ್ವಿಸ್ ಆಫ್ ಕಮ್ಯುನಿಯನ್ (DSC) ಜೊತೆಗೆ ಲೀಜನ್ ಆಫ್ ಮೇರಿ ಮತ್ತು ಸೇಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿ (SVP) ಶಿವಮೊಗ್ಗ ಡಯಾಸಿಸ್‌ನ ಉದ್ದೇಶಗಳಿಗಾಗಿ ಮಧ್ಯಸ್ಥಿಕೆ ಪ್ರಾರ್ಥನೆಯನ್ನು ನಡೆಸಿತು.

ಮಧ್ಯಾಹ್ನ 2 ಗಂಟೆಗೆ ಆಧ್ಯಾತ್ಮಿಕ ನಿರ್ದೇಶಕ ಫ್ರಾಂಕ್ಲಿನ್ ಡಿಸೋಜ ಅವರು ಪೂಜ್ಯ ಸಮ್ಮಾನವನ್ನು ತೆರೆದಿಟ್ಟರು ಮತ್ತು ಮಧ್ಯಾಹ್ನ 3 ಗಂಟೆಯವರೆಗೆ ಆರಾಧನೆಯನ್ನು ನಡೆಸಿದರು. ಮಧ್ಯಾಹ್ನ 3 ರಿಂದ 4:30 ರವರೆಗೆ ಡಿಎಸ್‌ಸಿ ಸದಸ್ಯರು ಮಧ್ಯಸ್ಥಿಕೆ ರೋಸರಿ ಮತ್ತು ಡಿವೈನ್ ಕರುಣೆಯನ್ನು ನಡೆಸಿದರು. ಪ್ರತಿ ದಶಕವು ನಾಲ್ಕು ಡೀನರಿಗಳು, ಅದರ ಪ್ಯಾರಿಷ್‌ಗಳು, ನಿಷ್ಠಾವಂತರು ಮತ್ತು ಅವರ ಉದ್ದೇಶಗಳಿಗೆ ಸಮರ್ಪಿಸಲಾಗಿದೆ. ಒಂದು ದಶಕವನ್ನು ಡಯಾಸಿಸ್ ಮತ್ತು ಅದರ ಎಲ್ಲಾ ಆಯೋಗಗಳು ಮತ್ತು ಗ್ರಾಮೀಣ ಚಟುವಟಿಕೆಗಳಿಗೆ ಸಮರ್ಪಿಸಲಾಗಿದೆ.

ನಂತರ ಫ್ರಾಂಕ್ಲಿನ್ ಡಿಸೋಜ ಅವರು ಜಿಲ್ಲೆಗಳು, ರಾಜ್ಯಗಳು ಮತ್ತು ರಾಷ್ಟ್ರಕ್ಕಾಗಿ ಪ್ರಾರ್ಥನೆ ನಡೆಸಿದರು. ಅವರು ವಿಶ್ವದ ಶಾಂತಿಗಾಗಿ ಪ್ರಾರ್ಥನೆಯನ್ನು ಸಹ ನಡೆಸಿದರು. ಸಂಜೆ 4:45 ಕ್ಕೆ ಅವರು ಭಾಗವಹಿಸುವವರಿಗೆ ಗುಣಪಡಿಸುವ ಪ್ರಾರ್ಥನೆಯನ್ನು ನಡೆಸಿದರು. ಸಂಜೆ 5:15 ಕ್ಕೆ ಅವರು ಪವಿತ್ರ ಯೂಕರಿಸ್ಟ್ ಅನ್ನು ಮುನ್ನಡೆಸಿದರು ಮತ್ತು ಮಧ್ಯಸ್ಥಿಕೆಯ ಪ್ರಾರ್ಥನೆಗಾಗಿ ದೇವರಿಗೆ ಧನ್ಯವಾದ ಅರ್ಪಿಸಿದರು.

ಫಾ. ಶಿವಮೊಗ್ಗ ಶರಾವತಿನಗರದ ಇನ್‌ಫೆಂಟ್ ಜೀಸಸ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ಬಿಜು, ಈ ಮಧ್ಯಸ್ಥಿಕೆಯ ಪ್ರಾರ್ಥನೆಯನ್ನು ಆಯೋಜಿಸಿದ್ದಕ್ಕಾಗಿ ಫ್ರಾಂಕ್ಲಿನ್ ಡಿಸೋಜ ಮತ್ತು ಡಿಎಸ್‌ಸಿ, ಎಸ್‌ವಿಪಿ ಮತ್ತು ಲೀಜನ್ ಆಫ್ ಮೇರಿ ಅವರಿಗೆ ಧನ್ಯವಾದಗಳು.

DSC ಪರವಾಗಿ ಅದರ ಸಂಯೋಜಕ ಬ್ರೋ. ಡೇವಿಡ್ ರಾಜ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಜೆ 6 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು.

The 7th Intercessory Prayer of Shimoga Diocese was held at Infant Jesus Church, Sharavati Nagar, Shimoga.

Shivamogga, October 30, 2023: 7th Intercessory Prayer for the Diocese of Shimoga held at Infant Jesus Church, Sharavathinagar, Shivamogga on October 29th from 2pm to 6pm.

Diocese of Shimoga’s Charismatic Renewal Services namely, Diocesan Service of Communion (DSC) together with Legion of Mary and St. Vincent De Paul Society (SVP) held Intercessory Prayer for the intentions of the Diocese of Shimoga.

At 2pm Spiritual Director Fr Franklin D’Souza exposed the Blessed Sacrament and led the worship till 3pm. From 3pm to 4:30pm DSC members led the Intercessory Rosary and Divine Mercy. Each decade dedicated to the four deaneries, its parishes, faithful and their intentions. One decade dedicated to the Diocese and all its Commissions and Pastoral activities.

Then Fr Franklin D’Souza led Prayer for the Districts, States and for the Nation. He also led the prayer for the peace in the world. At 4:45pm he led the healing prayers for the participants. At 5:15pm he led the Holy Eucharist and thanked God for the Intercessory Prayer.

Fr. Biju, Parish Priest of Infant Jesus Church, Sharavathinagar, Shivamogga thanked Fr Franklin D’Souza and the DSC, SVP and Legion of Mary for organizing this Intercessory prayer.

On behalf of DSC its coordinator Bro. David Raj thanked everyone. Program concluded at 6pm.