Sad  Demise Peter Philp Dias (79) Kundapur/Barkur

Peter Philp Dias (79) Kundapur/Barkur

H/O Annie Dias

Born: 03.04.1944

Passed away: 31.10.2023

Age: 79 yrs 

Funeral Service: Wednesday (01-11-23) 3:30 p.m. at his residence and thereafter mass at 4:00 p.m. at Holy Rosary Church, Kundapur.

Residence: ‘Philanns’ B.T.R Road, Kundapur

Breaved family members:

Daughters: 

Gail/Sunil Fernandes 

Riem/Alwyn Vaz

Sons:Glenn & Royston 

Grandchildren: Ethan, Aaron & Erin

ರಮೇಶ್ ಮತ್ತು ಸುರೇಶ್ ನಮಗೆ ಮಾದರಿ : ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್

ಕೋಲಾರ,ಅ.31: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲೆಮರೆಯ ಕಾಯಂತೆ ಕನ್ನಡ ತಾಯಿಯ ಸೇವೆಯಲ್ಲಿ ತೊಡಗಿರುವ ರಮೇಶ್ ಮತ್ತು ಸುರೇಶ್ ನಮಗೆ ಮಾದರಿ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯೋತ್ಸವ ಸಲುವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡದ ಸೇವೆಯಲ್ಲಿ ತೊಡಗಿರುವ ಕನ್ನಡ ತಾಯಿಯ ಪರಿಚಾರಕರನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗ ಪರಿಚಾರಕರು ಎಂಬ ಮನಸ್ಥಿತಿ ಹೋಗಿದೆ. ಮೌಲ್ಯ ಕಳೆದುಕೊಂಡಿದೆ. ಕನ್ನಡದ ಸೇವೆಯೇ ಪರಿಚಾರಕತ್ವ. ಆ ಮನೋಭಾವ ಎಲ್ಲರಲ್ಲೂ ಬರಬೇಕು. ಸುರೇಶ್ ಹಾಗೂ ರಮೇಶ್ ನಿಜವಾದ ಕನ್ನಡ ಪರಿಚಾರಕರು. ಪ್ರತಿಯೊಬ್ಬರಿಗೂ ಅವರು ಮಾದರಿ. ನಿಜವಾದ ಕನ್ನಡ ಸೇವೆ ಅವರಿಂದ ಆಗುತ್ತದೆ. ಇಂಥವರು ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಎಲೆಮರೆಯ ಕಾಯಂತೆ ಕೆಲಸ ಮಾಡುತ್ತಿರುವವರನ್ನು ಗುರುತಿಸುವುದು ಪತ್ರಕರ್ತರ ಜವಾಬ್ದಾರಿ ಎಂದು ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳ ಅಧಃಪತನವಾಗಿವೆ. ಇಂತಹ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೋವು ಮರೆತು ಸುರೇಶ್ ಹಾಗೂ ರಮೇಶ್ ಕೆಲಸಮಾಡುತ್ತಿದ್ದಾರೆ. ಇದೊಂದು ಸಾರ್ಥಕ ಕೆಲಸ ಎಂದು ತಿಳಿಸಿದರು.

ಗೋಕಾಕ್ ಚಳವಳಿ ಬಳಿಕ ಕೆಜಿಎಫ್ ಪರಿಸ್ಥಿತಿ ಬದಲಾಯಿತು. ಕೊಚ್ಚೆ ನೀರು ಕುಡಿದರೂ ಕಾವೇರಿ ಹೋರಾಟಕ್ಕೆ ಸ್ಪಂದಿಸುತ್ತೇವೆ. ಕನ್ನಡ ಎಂಬ ವಿಶಾಲಪ್ರಜ್ಞೆ ಈಗ ಮರೆಯಾಗುತ್ತಿದೆ. ಒಂದು ದಿನ ಕನ್ನಡ ಸೇವೆಯಲ್ಲಿ ತೊಡಗಿದರೆ ಪ್ರಯೋಜನ ಇಲ್ಲ. ಸುರೇಶ್, ರಮೇಶ್ ಅವರಂತೆ ಸದಾ ತುಡಿಯಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಯಾವುದೇ ಕಾರ್ಯಕ್ರಮ ಇದ್ದರೂ ಸುರೇಶ್ ಹಾಗೂ ರಮೇಶ್ ಪಾಲ್ಗೊಳ್ಳುತ್ತಾರೆ. ಕನ್ನಡ ಕಾಯಕದಲ್ಲಿ ತೊಡಗಿದ್ದಾರೆ. ಕನ್ನಡ ಬಾವುಟ ಹಿಡಿದು ಕನ್ನಡಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಮಾಮಿ ಪ್ರಕಾಶ್ ಮಾತನಾಡಿ, ಮೊದಲ ಬಾರಿ ಎತ್ತಿನ ಗಾಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಾವಿರಾರು ಜನ ಕೆಲಸ ಮಾಡಿದ್ದಾರೆ. ಬಳಿಕ ಭುವನೇಶ್ವರಿ ಕನ್ನಡ ಸಂಘದಿಂದ ಆಚರಣೆ ಮಾಡಿದವು. 80ರ ದಶಕದಲ್ಲಿ 80ಕ್ಕೂ ಅಧಿಕ ಪಲ್ಲಕ್ಕಿಗಳು ಪಾಲ್ಗೊಳ್ಳುತ್ತಿದ್ದವು. ಎರಡನೇ ದಸರಾ ಎಂಬಷ್ಟು ಖ್ಯಾತಿ ಪಡೆಯಿತು. ಬಳಿಕ ಜಾತಿವಾರು ಸಂಘಟನೆಗಳಾಯಿತು. ಇದು ವಿಷಾದನೀಯ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ ಮಾತನಾಡಿ, ಕನ್ನಡ ಹೋರಾಟದಲ್ಲಿ ಹಲವಾರು ಅಜ್ಞಾತ ಹೋರಾಟಗಾರರು ಪಾಲ್ಗೊಂಡಿದ್ದಾರೆ. ಸುರೇಶ್ ಹಾಗೂ ರಮೇಶ್ ಪ್ರಚಾರ ಬಯಸದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯೋತ್ಸವ ನಾಡಹಬ್ಬ. ಅತೀವ ಹೆಮ್ಮೆ ಪಡುವ ಸಂದರ್ಭ. ಅನೇಕ ಚೇತನಗಳು ಕನ್ನಡಕ್ಕೆ ಜೀವ ಸವೆಸಿವೆ. ಏಕೀಕರದಲ್ಲಿ ಕುವೆಂಪು ಕೂಡ ಪಾಲ್ಗೊಂಡಿದ್ದರು. ಆಗ ಅವರು ಸರ್ಕಾರದ ಸೇವೆಯಲ್ಲಿದ್ದ ಕಾರಣ ಏಕೆ ಬಂಧಿಸಬಾರದು ಎಂದು ಕೇಳಿತ್ತು. ಕನ್ನಡ ಸಂಸ್ಕೃತಿ ಶಾಶ್ವತ, ಸರ್ಕಾರಗಳು ಬಂದು ಹೋಗುತ್ತವೆ ಎಂದು ಕವನದ ಮೂಲಕವೇ ತಿರುಗೇಟು ನೀಡಿದ್ದರು’ ಎಂದರು.

ಹಿಂದೆ ಕಾವೇರಿ ಹೋರಾಟದಲ್ಲಿ ಉತ್ತರ ಕರ್ನಾಟಕದವರು ಪಾಲ್ಗೊಳ್ಳುತ್ತಿರಲಿಲ್ಲ. ಈಚೆಗೆ ಕಾವೇರಿ ನದಿ ನೀರಿನ ಸಮಸ್ಯೆ ಉದ್ಭವಿಸಿದಾಗ ಎಲ್ಲರೂ ಸ್ಪಂದಿಸಿದರು ಎಂದು ಹೇಳಿದರು.
ನಾವೆಲ್ಲಾ ಸದಾ ಜಾಗೃತರಾಗಿರಬೇಕು. ಕೋಲಾರ ಗಡಿ ಭಾಗದಲ್ಲಿ ತೆಲುಗು, ತಮಿಳು ಪ್ರಭಾವವಿದೆ. ಇಲ್ಲೂ ಕನ್ನಡ ಹೋರಾಟಗಾರರು ಇದ್ದಾರೆ. ಈ ಹೋರಾಟ ಮುಂದುವರಿಯಲಿ’ ಎಂದರು.

ಕನ್ನಡ ಹೋರಾಟಗಾರ ಕೋ.ನಾ ಪ್ರಭಾಕರ್ ಮಾತನಾಡಿ, ಕೋಲಾರ ಚಳವಳಿಗಳ ತವರು. ಮೊದಲ ಹೋರಾಟ ಆರಂಭವಾಗಿದ್ದೇ ಕೋಲಾರದಲ್ಲಿ. ಅನೇಕ ಹೋರಾಟಗಳು ನಡೆದಿವೆ ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ, ಸಾಮಾನ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ ಸುರೇಶ್, ರಮೇಶ್ ಇಬ್ಬರೂ ಅಮಾಯಕರು. ಕನ್ನಡ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಿರುತ್ತಾರೆ. ಹಿಂದೆ ರಾಜ್ಯೋತ್ಸವ ಎಂದರೆ ಹಬ್ಬದ ವಾತಾವರಣ ಇರುತಿತ್ತು. ಈಗ ಆ ರೀತಿ ಇಲ್ಲ. ಕಾಟಾಚಾರಕ್ಕೆ ನಡೆಯುತ್ತಿದೆ ಎಂದರು.

ಚಿತ್ರಮಂದಿರಗಳಲ್ಲಿ ನವೆಂಬರ್ ಗಳಲ್ಲಿ ಕನ್ನಡಚಿತ್ರ ಪ್ರದರ್ಶಿಸುತ್ತಿದ್ದರು. ಈಗ ಆ ರೀತಿ ಇಲ್ಲ. ಈ ತಿಂಗಳಲ್ಲಾದರೂ ಕನ್ನಡ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಪರಿಚಾರಕರಾದ ಸುರೇಶ್(ಸೂರಿ) ಹಾಗೂ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ರಾಮಮೂರ್ತಿ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಾ.ಶ್ರೀ.ಅನಂತರಾಮ್, ಬಿ.ಸುರೇಶ್, ಎಸ್.ಸಚ್ಚಿದಾನಂದ, ಕೆ.ಬಿ.ಜಗದೀಶ್, ಎನ್.ಮುನಿವೆಂಕಟೇಗೌಡ, ಓಂಕಾರಮೂರ್ತಿ, ನಾ,ಮಂಜುನಾಥ್, ಅಬ್ಬಣಿಶಂಕರ್, ಸರ್ವಜ್ಞಮೂರ್ತಿ, ಸ್ಕಂದಕುಮಾರ್, ಆಸಿಫ್, ನವೀದ್‌ಪಾಷ, ಕಿರಣ್, ಎಸ್.ಸೋಮಶೇಖರ್, ಗೋಪಿ, ವಿ.ಪದ್ಮನಾಭ, ಜೆ.ರಂಗನಾಥ್, ಕೇದಾರ ಆರಾಧ್ಯ, ಪುರುಷೋತ್ತಮ, ಬಾಬಾ, ವಿಜ್ಞಾನ ಲೇಖಕ ಪುರುಷೋತ್ತಮರಾವ್, ಮುಖಂಡರಾದ ಆ.ಕೃ.ಸೋಮಶೇಖರ್, ಧನರಾಜ್, ನಳಿನಿಗೌಡ, ಚಂಬೆರಾಜೇಶ್, ಪಿ.ನಾರಾಯಣಪ್ಪ, ಗಂಗಾಧರ್, ಶ್ರೀಹರಿ, ಅಮರ್, ವಿಜಿಕುಮಾರ್, ಪವನ್, ಶ್ರೀಕಾಂತ್, ನಾಗೇಶ್, ಮಂಜು ಇನ್ನಿತರರು ಉಪಸ್ಥಿತರಿದ್ದರು.

2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-68 ಜನರಿಗೆ ಪ್ರಶಸ್ತಿ- ಕಥೊಲಿಕ್ ಸಭಾ ಸಂಘಕ್ಕೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು (ಅ.31) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 68 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು 10 ಸಂಘ ಸಂಸ್ಥೆಗಳಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್ (ರಿ) ಸಂಘಕ್ಕೆ ದ.ಕ. ಜಿಲ್ಲಾ ಪ್ರಶಸ್ತಿ ದೊರಕಿದೆಯೆಂದು ಮಂಗಳೂರು ಕೇಂದ್ರಿಯ ಕಥೊಲಿಕ್ ಸಭಾ ಅಧ್ಯಕ್ಷರಾದ ಅಲ್ವಿನ್ ಡಿಸೋಜಾ ಹೇಳಿಕೊಂಡಿದ್ದಾರೆ. ಈ ಪ್ರಶಸ್ತಿಗಳನ್ನು ನವೆಂಬರ್‌ 1 ರಂದು ನಾನಾ ಕ್ಷೇತ್ರಗಳ ಒಟ್ಟು 68 ಸಾಧಕರಿಗೆ ರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನ್ನು 2023-24ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 68 ಜನರ ಪಟ್ಟಿ ಈ ರೀತಿ ಇದೆ..

ಸಂಗೀತ/ನೃತ್ಯ
ಡಾ.ನಯನ ಎಸ್​​​.ಮೋರೆ, ನೀಲಾ ಎಂ ಕೊಡ್ಲಿ, ಶಬ್ಬೀರ್ ಅಹಮದ್, ಡಾ.ಎಸ್​​​. ಬಾಳೇಶ ಭಜಂತ್ರಿ

ಚಲನಚಿತ್ರ
ಡಿಂಗ್ರಿ ನಾಗರಾಜ, ಬಿ ಜನಾರ್ಧನ (ಬ್ಯಾಂಕ್ ಜನಾರ್ಧನ)

ರಂಗಭೂಮಿ
ಎ.ಜಿ. ಚಿದಂಬರ ರಾವ್ ಜಂಬೆ, ಪಿ. ಗಂಗಾಧರ ಸ್ವಾಮಿ, ಎಚ್.ಬಿ. ಸರೋಜಮ್ಮ, ತಯ್ಯಬಾಖಾನ್ ಎಂ. ಇನಾಮದಾರ, ಡಾ.ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ

ಜಾನಪದ ಕ್ಷೇತ್ರ
ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್​.ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪ 

ಶಿಲ್ಪಕಲೆ/ಚಿತ್ರಕಲೆ/ಕರಕುಶಲ
ಟಿ.ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್, ಪಿ. ಗೌರಯ್ಯ

ಯಕ್ಷಗಾನ/ಬಯಲಾಟ
ಅರ್ಗೋಡು ಮೋಹನದಾಸ, ಕೆ. ಲೀವಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ,

ಸಮಾಜಸೇವೆ ಕ್ಷೇತ್ರ
ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪ್ಲಾ ನಾಯಕ್,   ಶ್ರೀ ನಿಜಗುಣಾನಂದ ಸ್ವಾಮೀಜಿ (ಬೆಳಗಾವಿ), ಜಿ.ನಾಗರಾಜು

ಆಡಳಿತ ಕ್ಷೇತ್ರ
ಜಿ.ವಿ.ಬಲರಾಮ್​

ವೈದ್ಯಕೀಯ ಕ್ಷೇತ್ರ
ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ

ಸಾಹಿತ್ಯ ಕ್ಷೇತ್ರ
ಪ್ರೊ. ಸಿ. ನಾಗಣ್ಣ, ಹೆಚ್​.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾ

ಶಿಕ್ಷಣ ಕ್ಷೇತ್ರ
ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದು

ಕ್ರೀಡಾ ಕ್ಷೇತ್ರ
ಟಿ.ಎಸ್​. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ

ನ್ಯಾಯಾಂಗ
ವಿ ಗೋಪಾಲ ಗೌಡ

ಕೃಷಿ-ಪರಿಸರ
ಸೋಮನಾಥ ರೆಡ್ಡಿ ಪೂರ್ಮಾ, ದ್ಯಾವನ ಗೌಡ ಟಿ ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ

ಸಂಕೀರ್ಣ
ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ.ಕಬ್ಬಿನಾಲೆ ವಸಂತ ಭಾರದ್ವಜ್, ಕೊಡನ ಪೂವಯ್ಯ ಕಾರ್ಯಪ್ಪ

ಮಾಧ್ಯಮ
ದಿನೇಶ ಅಮೀನ್​​​​ಮಟ್ಟು, ಜವರಪ್ಪ, ಮಾಯ ಶರ್ಮಾ, ರಫೀ ಭಂಡಾರಿ

ವಿಜ್ಞಾನ-ತಂತ್ರಜ್ಞಾನ
ಎಸ್ ಸೋಮನಾಥನ್ ಶ್ರೀಧರ್ ಪನಿಕರ್, ಪ್ರೊ ಗೋಪಾಲನ್ ಜಗದೀಶ್

ಹೊರನಾಡು/ಹೊರದೇಶ
ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿ ಕಿರಣ್ ಶೆಟ್ಟಿ

ಸ್ವಾಂತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿ ಗೌಡ 

ದೇಶಕ್ಕೆ ಇಂದಿರಾ ಗಾಂಧಿ, ಪಟೇಲ್ ಕೊಡುಗೆ ಅಪಾರ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ: ಅ.31: ಇಂದು ಪ್ರಪಂಚದಲ್ಲಿ ಭಾರತ ಮಂಚೂಣಿ ಸ್ಥಾನ ಪಡೆಯಲು ಮತ್ತು ಇಡೀ ಪ್ರಪಂಚದ ನೋಟ ಭಾರತದತ್ತ ಬೀರಲು ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ನೆಹರು ಸಂಪುಟದಲ್ಲಿದ್ದ ದೇಶದ ಪ್ರಥಮ ಸಮರ್ಥ ಗ್ರಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ದೃಢ ನಿಲವು ದೂರ ದೃಷ್ಟಿ ಮತ್ತು ಸಮರ್ಥ ಆಡಳಿತ ಕಾರಣ. ದೇಶಕ್ಕೆ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದ ಅಪೂರ್ವ ಕೊಡುಗೆಯಾಗಿದೆ ಎಂದು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.

ಇಂದು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆ ಕಾನೂನು, 20 ಅಂಶಗಳ ಕಾರ್ಯಕ್ರಮ, ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನದಿಂದ ಇಂದಿರಾಗಾಂಧಿ ದೇಶದ ಬೆಳವಣಿಗೆ ದಿಕ್ಕನ್ನು ಅಭಿವೃದ್ಧಿಯತ್ತ ಕೊಂಡೊಯ್ದರು ಮತ್ತು ಸರ್ದಾರ್ ಪಟೇಲರು ದೇಶದ ಪ್ರಥಮ ಗೃಹ ಸಚಿವರಾಗಿ ತೆಗೆದುಕೊಂಡ ಹಲವು ನಿರ್ದಾಕ್ಷಿಣ ನಿರ್ಧಾರಗಳು ಇಂದಿನ ಭಾರತೀಯ ಪ್ರಜೆಗಳ ನೆಮ್ಮದಿಯ ಬದುಕಿಗೆ ಅಡಿಪಾಯವಾಗಿದೆ ಎಂದರು.

ಇಂದಿರಾ ಪಟೇಲ್ ಕೊಡುಗೆಯ ಬಗ್ಗೆ ಹಿರಿಯರಾದ ಗಂಗಾಧರ ಶೆಟ್ಟಿ ಮತ್ತು ಅಬ್ದುಲ್ಲಾ ಕೂಡಿ ಅವರು ಮಾತನಾಡಿದರು.

ಸಭೆಯಲ್ಲಿ ಬ್ಲಾಕ್ ಮಹಿಳಾ ಅಧ್ಯಕ್ಷ ದೇವಕಿ ಸಣ್ಣಯ್ಯ ,ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ , ಪ್ರಭಾವತಿ ಶೆಟ್ಟಿ, ಕೋಣಿ ಪಂಚಾಯತ್ ಅಧ್ಯಕ್ಷ ಅಶೋಕ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಸುಜನ್ ಶೆಟ್ಟಿ, ಅಶ್ವತ್ ಕುಮಾರ್, ಕೆ ಶಿವಕುಮಾರ್, ಐಟಿ ಸೆಲ್ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ ,ಪಂಚಾಯತ್ ಸದಸ್ಯ ಗಣಪತಿ ಶೇಟ್ ,ಕೋಣಿ ನಾರಾಯಣ ಆಚಾರಿ, ಅಶೋಕ್ ಸುವರ್ಣ, ಕೇಶವ ಭಟ್, ಅಭಿಜಿತ್ ಪೂಜಾರಿ, ಶಶಿ ರಾಜ್ ಪೂಜಾರಿ, ಜ್ಯೋತಿ ನಾಯ್ಕ್, ವೇಲಾ ಬ್ರಗಾಂಜ ,ಸದಾನಂದ ಕಾರ್ವಿ, ವಿವೇಕಾನಂದ ,ಜೋಸೆಫ್ ರೆಬೆಲ್ಲೊ ,ದಿನೇಶ್ ಬೆಟ್ಟ ,ಕೆ ಸುರೇಶ್, ಮೇಬಲ್ ಡಿಸೋಜಾ, ಸ್ವಸ್ತಿಕ್ ಶೆಟ್ಟಿ, ಡೊಲ್ಫಿ ಕ್ರಾಸ್ತಾ, ಫ್ರಾನ್ಸಿಸ್ ಮಚಾದೊ, ಪ್ರವೀಣ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.

ಯುವ ಮುಖಂಡ ಕೊಡಿ ಸುನಿಲ್ ಪೂಜಾರಿ ಸ್ವಾಗತಿಸಿ ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ವಂದಿಸಿದರು.

ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ ಶೇಖರ್‌ ಅಜೆಕಾರ್‌ ಹೃದಯಘಾತದಿಂದ ನಿಧನ

ಕಾರ್ಕಳ:ಅ 31. ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ ಶೇಖರ್‌ ಅಜೆಕಾರ್‌ ಹೃದಯಘಾತದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು. ಶೇಖರ್‌ ಅಜಿಕಾರ್‌ ಅವರು 22 ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು.

ಶೇಖರ್‌ ಅಜೆಕಾರ್‌ ಅವರಿಗೆ ಕುಂದಾಪುರದ ಹತ್ತಿರದ ನಂಟು ಇತ್ತು. ಅವರು ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ವರದಿಗಾರರಗಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಮುಂಬೈನ್ “ಕರ್ನಾಟಕ ಮಲ್ಲ, ಜನವಾಹಿನಿ, ಕನ್ನಡಪ್ರಭ ಮತ್ತು ಉಷಾ ಕಿರಣಗಳಲ್ಲೂ ಸೇವೆ ಸಲ್ಲಿಸ್ಲಿದ್ದಾರೆ. 10 ವರ್ಷಗಳ ಕಾಲ ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಶಾಖೆಯ ಉಪಾಧ್ಯಕ್ಷರೂ ಆಗಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್‌ 2018, ಅಮಂತ್ರನ ಪ್ರಶಸ್ತಿ 2019, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ನೀಡಿದ. ಕೊಡುಗೆಗಾಗಿ 1995 ರಲ್ಲಿ ಪ್ರಶಸ್ತಿ ಲಭಿಸಿದೆ.

ಅವರು ಆಯೋಜಿಸುತ್ತಿದ್ದ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿತ್ತು. ಎಲೆಮರೆಯಲ್ಲಿದ್ದ ಆಪಾರ ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶೇಖರ್‌ ಅವರ ಶ್ರಮ ಅನನ್ಯವಾದದ್ದು. ಅವರ ನಿಧನ ಸಾಹಿತ್ಯ ಮತ್ತು ಮಾದ್ಯಮ ಲೋಕಕ್ಕೆ ಅಪಾರ ನಶ್ಟವಾಗಿದೆ.

ಕುಂದಾಪುರದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆ ಮನೆ ಮೇಲೆ ಲೋಕಾಯುಕ್ತ ದಾಳಿ

ಕುಂದಾಪುರ :ನಿನ್ನೆ ರಾಜ್ಯಾದಾಂತ್ಯ ಲೋಕಾಯುಕ್ತ ದಾಳಿ ನೆಡೆಸಿದ್ದು, ಅದೇ ಹೊತ್ತೀಗೆ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನೆಡೆಸಿತ್ತು. ಈ ದಾಳಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆಯವರ ಕುಂದಾಪುರದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

ರಾಜೇಶ್ ಬೇಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಯುತ್ತಿದ್ದು, ಕುಂದಾಪುರ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವಾಸಿಯಾಗಿದ್ದ ರಾಜೇಶ್ ಬೇಳ್ಕೆರೆ ಹಲವು ವರ್ಷಗಳಿಂದ ಕುಂದಾಪುರದಲ್ಲಿ ನೆಲೆಸಿದ್ದಾರೆ. ಅವರು ಉಡುಪಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತಿದ್ದಾರೆ. ಅಧಾಯಕಿಂತ್ತ ಹೆಚ್ಚು ಸಂಪತ್ತು ಹೊಂದಿದ ಗುಮಾನಿ ಮೇಲೆ ಈ ದಾಳಿ ನೆಡೆದಿದೆ. ಏಕಾ ಕಾಲದಲ್ಲಿ ನಡೆದ ದಾಳಿಯಲ್ಲಿ ಅವರ ಅಂಕೋಲದಲ್ಲಿರುವ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಲಾಗಿದೆ.

ರಾಷ್ಟ್ರೀಯ ಏಕತಾ ದಿನಾಚರಣೆ : ರಕ್ತದಾನ ಶಿಬಿರ, ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರೆಡ್ ಕ್ರಾಸ್ ಘಟಕ 

ಮೂಡ್ಲಕಟ್ಟೆ ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರೆಡ್ ಕ್ರಾಸ್ ಘಟಕ  ಮತ್ತು ಭಾರತೀಯ ರೆಡ್ ಕ್ರಾಸ್ ಘಟಕ  ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ, ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೇಯವರಾದ ಡಾII ಪ್ರತಿಭಾ ಎಂ ಪಟೇಲ್ ಅವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ರಾಷ್ಟೀಯ ಏಕತಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ದೇಶದ ಏಕತೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಸದ್ರಡ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿದರು ಈ ನಿಟ್ಟಿನಲ್ಲಿ ರಾಷ್ಟೀಯ ಏಕತಾ ದಿನಾಚರಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟೀಯ ಏಕತಾ ದಿನಾಚರಣೆಯ ಪ್ರತಿಜ್ಞೆಯನ್ನು  ಬೋಧಿಸಲಾಯಿತು. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಉಪಾಪ್ರಾಂಶುಪಾಲರಾದ ಪ್ರೊ ಜಯಶೀಲ ಕುಮಾರ್, ರೆಡ್ ಕ್ರಾಸ್ ಘಟಕದ ಸಂಯೋಜಕಿ ಹಾಗು ವಾಣಿಜ್ಯ ಉಪನ್ಯಾಸಕಿ ಅಸಿಸ್ಟೆಂಟ್ ಪ್ರೊಫೆಸರ್ ಶಬೀನ ಎಚ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಅಸಿಸ್ಟೆಂಟ್ ಪ್ರೊಫೆಸರ್ ಸುಮನಾ ನಿರೂಪಿಸಿದರು.

ಬಜ್ಜೋಡಿ ಫುಟ್ಬಾಲ್ ತಂಡ ಮತ್ತು ಪತ್ರಕರ್ತ ಸ್ಟಾನ್ಲಿ ಡಿ’ಕುನ್ಹಾ ಅವರಿಗೆ ಬಜ್ಜೋಡಿ ಚರ್ಚಿನಿಂದ ಅಭಿನಂದನೆಗಳು

ಕ್ಯಾಥೋಲಿಕ್ ಸಭಾ, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಸಮುದಾಯ ಸಬಲೀಕರಣ ಟ್ರಸ್ಟ್ ಜಂಟಿಯಾಗಿ ಕಳೆದ ಭಾನುವಾರ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಫಾ.ಮ್ಯಾಥ್ಯೂ ವಾಸ್ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್ ಕಪ್ ಪಡೆದ ನಮ್ಮ ಬಜ್ಜೋಡಿ ತಂಡವನ್ನು ಇಂದು ಬೆಳಗ್ಗೆ 9.15 ಕ್ಕೆ ಸಾಮೂಹಿಕವಾಗಿ ನಮ್ಮ ಪ್ಯಾರಿಷ್‌ನಲ್ಲಿ ಸನ್ಮಾನಿಸಲಾಯಿತು. ಜೈಸನ್ ಪೆರೇರಾ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಪಡೆದರು.

ಹಾಗೆಯೇ ಇನ್‌ಫೆಂಟ್ ಜೀಸಸ್ ವಾರ್ಡ್‌ನ ಶ್ರೀ ಸ್ಟಾನ್ಲಿ ಡಿಕುನ್ಹಾ ಅವರನ್ನು ಕಳೆದ 32 ವರ್ಷಗಳಿಂದ ಮಾಧ್ಯಮ ಸೇವೆಗಾಗಿ ಬಿಷಪ್ ಪೀಟರ್ ಪಾಲ್ ಸಲ್ದಾನ ಅವರು ಕ್ರಿಶ್ಚಿಯನ್ ಪತ್ರಕರ್ತ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

Felicitations to the Bajjodi football team and journalist Stanley D’Cunha from the Bajjodi Church

Our Bajjodi team was felicitated today at 9.15 a.m. in mass at our parish for winning the Runner’s Cup in the Fr.Matthew Wass Memorial footballTournament organized jointly by the Catholic Church, Christian Sports Association and Community Empowerment Trust at St. Aloysius College last Sunday. Jayson Pereira won the best defender award.

Also Mr. Stanley DiCunha of Infant Jesus Ward was honored with the Christian Journalist Honorary Award by Bishop Peter Paul Saldana for his service to the media for the past 32 years.