ಕುಂದಾಪುರ ವೈಶಂತಿಕ ಸಭೆ : ಸಂತ ವಿನ್ಸೆಂಟ್ ಪಾವ್ಲರ ದಿನಾಚರಣೆ

ಕುಂದಾಪುರ, 24.: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಸೆ.24 ರಂದು) ದಿನಾಚರಣೆಯನ್ನು ಆಚರಿಸಿತು.
ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಕ್ರತ್ಞತಾ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ವೈಶಂತಿಕ ಸಭೆಯ ಸದಸ್ಯರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾ|ಸ್ಟಾನಿ ತಾವ್ರೊ   ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರು ಸಮಾಜಕ್ಕೆ ಅಮೂಲ್ಯ ಸೇವೆಯನ್ನು ನೀಡುತಿದ್ದಾರೆ, ಯೇಸು ಕ್ರಿಸ್ತರ ಭೋದನೆಯಂತೆ ಹಿಂದುಳಿದವರಿಗೆ, ಬಡವರಿಗೆ ಸೇವೆ ಮಾಡುವುದು,  ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತೀರುವುದು  ನಿಮ್ಮ ಈ ಸೇವೆ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಅನ್ವರ್ಥವಾಗುತ್ತೆ, ನಿಮ್ಮ ಸಭೆಯ ಕೆಲಸ ಮೆಚ್ಚುಗೆಗೆ ಪಾತ್ರವಾದುದು, ಅದಕ್ಕಾಗಿ ನಾವೆಲ್ಲ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಪ್ರೋತ್ಸಾಹಿಸಬೇಕು ’ ಎಂದು ಶುಭ ಕೋರಿದರು.

ಸಂತ ವಿನ್ಸೆಂಟ್ ಪಾವ್ಲ್ ಕುಂದಾಪುರ ವಲಯ ಸಭೆಯ ಅಧ್ಯಕ್ಷ ಅಂತೋನಿ ಡಿಸೋಜಾ ಮತ್ತು ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ಖಚಾಂಚಿ ಇಗ್ನೆಶಿಯಸ್ ಡಿಕುನ್ಹಾ ಖರ್ಚು ವೆಚ್ಚಗಳನ್ನು ಮುಂದಿಟ್ಟರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲ್ಲಿದ್ದರು. ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಸ್ವಾಗತಿಸಿದರು. ಉಪಾಧ್ಯಕ್ಷರಾದ ವಿಕ್ಟರ್ ಡಿಸೋಜಾ ನಿರೂಪಿಸಿದರು ಉಪಾಧ್ಯಕ್ಷರಾದ ವಾಲೇರಿಯನ್ ಡಿಸೋಜಾ ವಂದಿಸಿದರು.

ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಸೌಲಭ್ಯ; ಹೋರಾಟದ ಮೂಲಕ ಫಲಾನುಭವಿಗಳ ಪಾಲಿಗೆ ಸಾರ್ಥಕತೆ ತಂದುಕೊಟ್ಟ ಸಬೀಹಾ ಬೇಗಂ

*ಲೇಖನ: ಶಬೀನಾ ವೈ.ಕೆ*

ವಿಶೇಷಚೇತನರಿಗಾಗಿ ಮೀಸಲಿರಿಸಿದ 5% ಅನುದಾನದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಮೂರು ಚಕ್ರಗಳ ಸ್ಕೂಟರ್‌ನ್ನು ವಿತರಿಸಿದ ಕೀರ್ತಿ ಕರ್ನಾಟಕದ ವಿಜಯಪುರ ಜಿಲ್ಲೆಗೆ ಸಲ್ಲುತ್ತದೆ. 

ಇದಕ್ಕಾಗಿ 2008-09ರ ಅವಧಿಯಲ್ಲಿ ಹೋರಾಟ ನಿರತ ನಲವತ್ತಕ್ಕೂ ಹೆಚ್ಚು ವಿಶೇಷಚೇತನರು ಒಂದು ದಿನ ದರ್ಗಾ ಜೈಲಿನ ಅತಿಥಿಗಳಾಗಬೇಕಾಯ್ತು. 

ಹದಿಮೂರು-ಹದಿನಾಲ್ಕು ವರ್ಷಗಳ ಹಿಂದಿನ ಸಾರಿಗೆ, ಸಂವಹನ, ಸಂಪರ್ಕ ಸೇರಿದಂತೆ ವಿಶೇಷಚೇತನರಿಗೆ ಬೇಕಾದ ಸೌಕರ್ಯ ಸೌಲಭ್ಯಗಳು ಅಷ್ಟಾಗಿ ಅರಿವಿಗೆ ಬಾರದ ದಿನಗಳವು. ಅದರಲ್ಲಿಯೂ ಹೆಚ್ಚಿನ ವಿಶೇಷಚೇತನರು ಮನೆಗಳಲ್ಲಿ ಮೂಲೆಗುಂಪಾದ ಉದಾಹರಣೆಗಳೇ ಅಧಿಕ.  

ಈ ವೇಳೆ, ವಿಶೇಷ ಚೇತನರ ಅಗತ್ಯತೆಗಳಿಗೆ ಬೇಕಾಗುವ ತ್ರೀ ಚಕ್ರ ಸ್ಕೂಟರ್ ಲಭಿಸಿದಲ್ಲಿ  ಮನೆಯಿಂದ ಹೊರಗಿಳಿಯಲು ಒಂದಿಷ್ಟು ಮಂದಿಯಾದರೂ ಉತ್ಸಾಹ ತೋರುತ್ತಾರೆಂಬ ಆಶಯವೊಂದೆಡೆಯಾದರೆ, ಬೇರೊಬ್ಬರನ್ನು ಅವಲಂಭಿಸದೇ ಅವರ ದೈನಂದಿನ ಜೀವನವನ್ನು ಸಾಗಿಸಲು, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವುದೆಂಬ ಮಹತ್ತರ ಗುರಿಯೊಂದು ಇದರ ಹಿಂದಿತ್ತು.  

ಸಬೀಹಾ ಬೇಗಂ ಕೂಡ ದರ್ಗಾ ಜೈಲು ಸೇರಿ ಬಂದ ಆ ನಲವತ್ತು ಜನ ಅಂಗವಿಕಲರಲ್ಲೊಬ್ಬರು. ಆಗಿನ‌ ಅನುಭವಗಳನ್ನು ಬಿಚ್ಚಿಟ್ಟ ಅವರು, 40 ದಿನಗಳ ಕಾಲ ನಿರಂತರ ಧರಣಿ ನಡೆಸಿದ್ದನ್ನು ನೆನೆಯುತ್ತಾರೆ. 

ಈ ಧರಣಿಗೂ ಮೊದಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಮಂತ್ರಿಗಳು, ವಿಕಲಚೇತನರ ಕಲ್ಯಾಣ ಇಲಾಖೆ ಸೇರಿದಂತೆ ಸ್ಥಳೀಯ ಶಾಸಕರಿಗೂ ಸ್ಕೂಟರ್‌ಗಾಗಿ ಮನವಿ ಸಲ್ಲಿಸುವ ಕಾಯಕವನ್ನು ಆರಂಭಿಸುತ್ತಾರೆ. ವಿಕಲಚೇತನರಿಗೆ ಮೀಸಲಿರಿಸಿದ ಶೇ.5 ಅನುದಾನದಲ್ಲಿ .

ಈ ಸ್ಕೂಟರ್‌ಗಳನ್ನು ನೀಡಲು ಆಗುವುದಿಲ್ಲ ಎಂಬ ಉತ್ತರದಿಂದ ಬೇಸತ್ತು 40ಕ್ಕೂ ಹೆಚ್ಚು ವಿಕಲಚೇತನರು ಧರಣಿ ನಿರತರಾದರು. ನಿರಂತರ 40 ದಿನಗಳ ಈ ಧರಣಿಯ ವೇಳೆ ಭೇಟಿ ನೀಡಿದ ಅಧಿಕಾರಿಗಳು, ಮಂತ್ರಿಗಳು ಸ್ಥಳೀಯ ಶಾಸಕರು ಸೇರದಂತೆ ಎಲ್ಲರಿಗೂ ಮತ್ತೆ ಮತ್ತೆ ಮನವಿ ಪತ್ರಗಳನ್ನು ನೀಡುವ ಕಾಯಕ ಮುಂದುವರಿದಿತ್ತು.

ದರ್ಗಾ ಜೈಲಿನ ಘಟನೆಯ ಬಳಿಕವೂ ಸ್ಕೂಟರ್‌ಗಾಗಿ ಹೋರಾಟ ನಿಲ್ಲಲಿಲ್ಲ‌. ಆ ವರ್ಷಾವಧಿಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು, ಉರುಳು ಸೇವೆ ಮಾಡಿ ಹಾಗೂ ರಸ್ತೆ ತಡೆಯೊಡ್ಡಿ ಹೀಗೆ ಹಲವು ಪ್ರತಿಭಟನೆಗಳನ್ನು ಮಾಡಿದ್ದನ್ನು ಸಬೀಹಾ ನೆನೆಯುತ್ತಾರೆ.

ಹೋರಾಟದ ಫಲವಾಗಿ 2010ನೇ ಸಾಲಿನಲ್ಲಿ ವಿಜಯಪುರದಲ್ಲಿ ಆರಂಭಿಕವಾಗಿ 40 ವಿಶೇಷ ಚೇತನರಿಗೆ 5% ಅನುದಾನ, ಶಾಸಕರ ನಿಧಿ ಸೇರಿದಂತೆ ವಿವಿಧ ಸರ್ಕಾರಿ ಮೂಲಗಳಿಂದ 40 ತ್ರಿಚಕ್ರಗಳ ಸ್ಕೂಟರ್ ವಿತರಿಸಲಾಗುತ್ತದೆ‌. 

ಹೀಗೆ ಕರ್ನಾಟಕದಲ್ಲಿ ಇಂದು ತ್ರಿಚಕ್ರ ಸ್ಕೂಟರ್‌ಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪಾಲಿಗೆ ಇವರ ಹೋರಾಟ ಒಂದು ಸಾರ್ಥಕತೆಯನ್ನು ಕಟ್ಟಿಕೊಟ್ಟಿದೆ.

ಸಬೀಹಾ‌, ಬಳಗನೂರಿನ ಬಾಗಪ್ಪ ರಾಮವ್ವ ದಂಪತಿಗಳ ಐವರು ಮಕ್ಕಳಲ್ಲಿ ಮೂರನೆಯವರು‌. ಕಿತ್ತು ತಿನ್ನುವ ಬಡತನದಿಂದ ಮುಕ್ತಿ ಪಡೆಯಲು ಮುಂಬೈನಲ್ಲಿ  ಕೆಲಸಕ್ಕೆಂದು ಕುಟುಂಬ ಸಮೇತ ತೆರಳಿದರು. ಸಬೀಹಾ 7 ವರ್ಷ ವಯಸ್ಸಿನವರಿದ್ದಾಗ ಬಸ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡರು.

ಎಲ್ಲರಂತೆ ಚೆನ್ನಾಗಿದ್ದ ಮಗಳ ಕಾಲನ್ನು ದೇವರು ಕಿತ್ತುಕೊಂಡು ಬಿಟ್ಟನಲ್ಲ ಎಂಬ ಆಕ್ರಂದನ ಮನೆಯಲ್ಲಿ ಮಡುಗಟ್ಟಿತ್ತು. ಈ ನಡುವೆ ಮುಂಬೈನಲ್ಲಿ ಅಲೆದು ಕೊನೆಗೂ ಸಬೀಹಾರಿಗೆ ಕೃತಕ ಕಾಲು ಹಾಕಿಕೊಂಡು ತಿರುಗಾಡಲು ವ್ಯವಸ್ಥೆಯಾಯಿತು.

ಬಳಗನೂರಿನ ಶಾಲೆಯಲ್ಲಿಯೇ 1 ರಿಂದ 9ನೇ ತರಗತಿಯ ವರೆಗೆ ಸಬೀಹಾ ವಿದ್ಯಾಭ್ಯಾಸ ಪಡೆದರು‌. ಪ್ರತಿದಿನ ತಂದೆ ಅವರನ್ನು ಹೊತ್ತುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದುದ್ದನ್ನು ಅವರು ನೆನೆಯುತ್ತಾರೆ.

ಹತ್ತನೆ ತರಗತಿ ವಿದ್ಯಾಭ್ಯಾಸ ಹುಬ್ಬಳ್ಳಿಯಲ್ಲಿ ಮಾಡಿದ ಅವರು ಬಿಎ ಪದವಿಧರೆ ಆಗಿದ್ದಾರೆ.  ಮೂಢನಂಬಿಕಯ ಪ್ರತಿಫಲವಾಗಿ, ಅಂಗವಿಕಲಳೆಂಬ ಕಾರಣಕ್ಕೆ ಗಣಪತಿಗೆ ಆರತಿ ಮಾಡುತ್ತಿದ್ದಾಗ ಆರತಿ ತಟ್ಟೆಯನ್ನು ಕಸಿದುಕೊಂಡ ಕಹಿ ನೆನಪು ಅವರಿಗಿದೆ. 

ವಿವಾಹದ ವಿಷಯದಲ್ಲಿಯೂ “ಕಾಲಿಲ್ಲದ  ಇವಳಿಗೆ ಮದುವೆಗಿದುವೆ ಬೇಕಾ..?” ಎಂದು ಹೀಯಾಳಿಸಿದವರೇ ಅಧಿಕ. ಆದರೆ 21ನೇ ವಯಸ್ಸಿನಲ್ಲಿ ಅಂತರ್ಜಾತಿ ವಿವಾಹವಾದ ಸಬೀಹಾರಿಗೆ ಬಿಎಸ್‌ಸಿ ಹಾಗೂ ಇಂಜಿನಿಯರಿಂಗ್ ಕಲಿಯುತ್ತಿರುವ ಇಬ್ಬರು ಪುತ್ರಿಯರಿದ್ದು, ವೈವಾಹಿಕ ಜೀವನವು ಸುಖಕರವಾಗಿದೆ. 

ತನ್ನಂತೆ ಹಲವು ವಿಶೇಷಚೇತನ ಮಹಿಳೆಯರು ಇದ್ದಾರೆ ಎಂಬುದನ್ನು ಬೆಂಗಳೂರಿನ ಎಪಿಡಿ ಸಂಸ್ಥೆಯಲ್ಲಿ ಕಂಡ ಬಳಿಕ ಅರಿತ ಸಬೀಹಾ, ಬಿಜಾಪುರ ಅಂದರೆ ಈಗಿನ ವಿಜಯಪುರದಲ್ಲಿ ಕರ್ನಾಟಕ ಅಂಗವಿಕಲತ ಐಕ್ಯತಾ ವೇದಿಕೆಯನ್ನು ಹುಟ್ಟು ಹಾಕಿದರು‌. 

ವಿಶೇಷ ಚೇತನ ಪುರುಷರಿಗಿಂತ ಮಹಿಳೆಯರು ಅಧಿಕ ಮೂಲೆಗುಂಪಾಗಿರುವುದನ್ನು ಕಂಡ ಅವರು, ಮಹಿಳೆಯರ ಏಳಿಗೆಗಾಗಿ ಏನಾದರೂ ಮಾಡಬೇಕಂಬ ಉದ್ದೇಶದಿಂದ ಹಳ್ಳಿಗಳಿಗೆ ತೆರಳಿ ಅವರೊಂದಿಗೆ ಬದುಕಿ ಬಾಳಲು ಆರಂಭಿಸಿದರು. 

ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾ, ಲಭಿಸುವ ಸೇವೆಗಳನ್ನು ಪಡೆಯಲು ಉತ್ತೇಜ‌ನ ನೀಡಿದರು.

ಸಬೀಹಾ 385ಕ್ಕೂ ಅಧಿಕ ಜನರಿಗೆ ಯುಡಿಐಡಿ(ಯೂನಿಕ್ ಡಿಸೆಬಿಲಿಟಿ ಐಡೆಂಟಿಟಿ ಕಾರ್ಡ್) ಕಾರ್ಡ್ ಮಾಡಿಸಲು, 300 ಪೋಷಣಾ ಭತ್ಯೆ, 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ, 25 ಜನರಿಗೆ ತರಬೇತಿ ಹಾಗೂ ಕೊರೋನ ಅವಧಿಯಲ್ಲಿ 589 ರೇಷನ್ ಕಿಟ್‌ಗಳನ್ನು ಒದಗಿಸಲು ನೆರವಾಗಿದ್ದಾರೆ. 

ಪ್ರಸ್ತುತ ಸಬೀಹಾರವರು ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಗೌರವಾಧ್ಯಕ್ಷರಾಗಿದ್ದು, ವಿಶೇಷಚೇತನರಿಗೆ ಬೇಕಾಗುವ ಸುಲಭಲಭ್ಯತೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದ್ದಾರೆ‌.

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಛೇರಿ ಉದ್ಘಾಟನೆ

25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಛೇರಿ, 4 – 5 ನವೆಂಬರ್ 2023 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದೆ, ನಗರದಲ್ಲಿ ಬೆಂದೂರ್‌ವೆಲ್, ಕುನಿಲ್ ಸಂಕೀರ್ಣದಲ್ಲಿ ಉದ್ಘಾಟನೆಯಾಗಿದೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅವರು ಮಾತೃ ಸಂಸ್ಥೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಗೋವಾದ ಚೇತನಾಚಾರ್ಯ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಕುಲದಾಸ್ ಪ್ರಭು, ಖ್ಯಾತ ಹೃದ್ರೋಗ ತಜ್ಞ ಮತ್ತು ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿ ಶಿಕ್ಷಣದ ಪ್ರವರ್ತಕ ಡಾ.ಕೆ.ಮೋಹನ್ ಪೈ ಅವರೊಂದಿಗೆ ದೀಪ ಬೆಳಗಿಸಿ ಕಛೇರಿಯನ್ನು ಉದ್ಘಾಟಿಸಿದರು. ಕೌನ್ಸಿಲ್ ಸದಸ್ಯ ಮತ್ತು ಕೊಂಕಣಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರು, ನವದೆಹಲಿಯ ಸಾಹಿತ್ಯ ಅಕಾಡೆಮಿ ಮತ್ತು ಕವಿ, ರಾಹುಲ್ ಜಾಹೀರಾತುದಾರರ ಚಿಂತಕ ಟೈಟಸ್ ನೊರೊನ್ಹಾ.

ಸ್ವಾಗತ ಸಮಿತಿ ಮತ್ತು ಇತರ ಉಪಸಮಿತಿಗಳ ರಚನೆಯ ಚರ್ಚೆಯನ್ನು ಪ್ರಾರಂಭಿಸಿದ ಮಾತೃಸಂಸ್ಥೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಚೇತನಾಚಾರ್ಯ ಅವರು ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ಇತಿಹಾಸ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ದೃಷ್ಟಿಕೋನ ಮತ್ತು ವ್ಯಾಪ್ತಿ ಮತ್ತು ಹಿರಿಯ ಕೊಂಕಣಿ ಲೇಖಕರ ಹೋರಾಟದ ಬಗ್ಗೆ ವಿವರಿಸಿದರು. ಮತ್ತು ಕೊಂಕಣಿ ಭಾಷೆಯ ಬೆಳವಣಿಗೆಯಲ್ಲಿ ಕಾರ್ಯಕರ್ತರು ಮತ್ತು ಮುಂದಿರುವ ಸವಾಲುಗಳು.
ಈ ಬಾರಿಯ ಸಮ್ಮೇಳನದ ರಜತ ಮಹೋತ್ಸವದ ಅಂಗವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲು ಎಲ್ಲಾ ಕೊಂಕಣಿ ಸಂಘಗಳು ಮತ್ತು ವ್ಯಕ್ತಿಗಳು ಪರಿಷತ್ತು ಮತ್ತು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಕೈಜೋಡಿಸಬೇಕು ಎಂದು ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿ ಸದಸ್ಯ ಕವಿ ಮೆಲ್ವಿನ್ ರಾಡ್ರಿಗಸ್ ಒತ್ತಾಯಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಸಿಇಒ ಗುರುದತ್ ಬಂಟ್ವಾಳ್ಕರ್, ಕೊಂಕಣಿಯ ಎಚ್‌ಒಡಿ ಪ್ರೊ. ಫ್ಲೋರಾ ಕ್ಯಾಸ್ಟೆಲಿನೊ, ಸೇಂಟ್ ಅಲೋಶಿಯಸ್ ಕಾಲೇಜ್, ಆ್ಯಂಕರ್ ಸುಚಿತ್ರ ಎಸ್ ಶೆಣೈ, ವಿಶ್ವವಿದ್ಯಾನಿಲಯ ಕಾಲೇಜು ಪ್ರಾಧ್ಯಾಪಕ ವೆಂಕಟೇಶನಾಯಕ್, ರಾಕ್ಣೊ ಕೊಂಕಣಿ ವಾರಪತ್ರಿಕೆಯಿಂದ ಫಾ.ರೂಪೇಶ್ ಮಾಡ್ತಾ, ಕೊಂಕಣಿ ಉಜ್ವಾಡ್ ವಾರಪತ್ರಿಕೆಯ ಫಾ.ಆಲ್ವಿನ್ ಕಾರ್ಮೆಲ್,ಪ್ಲಾಯ್ಡ್ ಕಾಸ್ಸಿಯಾ, ಜೆರಾಲ್ಡ್ ಕೊನೆಸ್ಸೊ ಕೊಂಕಣಿ ನಾಟಕಸಭಾ, ಅಕಾರ್ ಇನ್ನೋವೇಶನ್ಸ್‌ನ ದಯಾ ವಿಕ್ಟರ್ ಲೋಬೋ, ಸಾಹಿತಿ ವಿನ್ಸೆಂಟ್ ಪಿಂಟೋ ಅಂಜೆಲೋರ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ವಿಚಾರಗಳನ್ನು ಹಂಚಿಕೊಂಡರು.
ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಮಂಡಳಿ ಸದಸ್ಯ ಹೆಚ್ ಎಂ ಪೆರ್ನಾಳ್ ಸ್ವಾಗತಿಸಿ, ವಿಚಾರ ವಿನಿಮಯವನ್ನು ನಡೆಸಿಕೊಟ್ಟರು.

ATHENA INSTITUTE OF HEALTH SCIENCES 11TH BATCH MUSKI, 12TH BATCH PUBSC, FAREWELL CEREMONY

Athena Institute of Health Sciences organized a programme to express gratitude and bid farewell to the outgoing 11th Batch M.Sc., 12th Batch of PB.B.Sc., 16th Batch of B.Sc. and 18th Batch of GNM.  Programme was held at St. Alphonsa Church Auditorium at 11.20 am followed by thanks giving mass.

As a part of inaugural, flex named “CIAO BASH 2K23” was released.  The outgoing batches and guests were welcomed with the entrance dance.  The formal programme began with a prayer song.  Ms. Shenova of 1st year PB.B.Sc. welcomed the gathering.  As a significance of the day lamp lighting was done by dignitaries on the dias. 
Mr. R.S. Shettian Chairman, Principal Sr. Deepa Peter, Vice Principal Sr. Aileen Mathias, Mrs. Sunitha, Mrs. Hemalatha, Mrs. Viola and Ms. Jasmin.

Felicitation with mementoes given to the outgoing batches by the dignitaries.  One representative from each batch expressed their memorable moments in Athena.  Inspiring and valuable messages delivered by Mr. R.S. Shettian, Chairman,
Sr. Deepa Peter and Mrs. Hemalatha.  The audience were entertained by various cultural programs filled with zeal and enthusiasm.  Vote of thanks delightfully delivered by Ms. Sruthi Christeena, 3rd year B.Sc. Nursing.   To wrap up the programme, refreshment was provided to all.  The programme was compared by
Ms. Laxmi Vinod, Ms. Aleen Deep and Ms. Angela Tomy, students of 3rd year B.Sc. Nursing. 

ಮುಂಬಯಿಯ ಚಕಾಲಾದ ಹೋಲಿ ಫೆಮಿಲಿ ಚರ್ಚಿನಲ್ಲಿ ಕೊಂಕಣಿ ಲಿತುರ್ಜಿ ಕಮಿಟಿಯಿಂದ ಮೊಂತಿ ಹಬ್ಬ / Monti Festival by Konkani Liturgy Committee at Holy Family Church, Chakala, Mumbai

ಮುಂಬಯ್, ಸೆ.22: ಮಹಾನಗರ ಮುಂಬಯಿನ ಚಕಾಲಾದ ಹೋಲಿ ಫೆಮಿಲಿ ಚರ್ಚಿನಲ್ಲಿ ಕೊಂಕಣಿ ಲಿತುರ್ಜಿ ಕಮಿಟಿಯಿಂದ ಸೆ.17 ರಂದು ಭಾನುವಾರ ತೇನೆ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಅತಿಥಿ ಧರ್ಮಗುರು ವಂ|ಜೆರಾಲ್ಡ್ ಡೆಸಾ ಹಬ್ಬದ ಬಲಿದಾನವನ್ನು ಅರ್ಪಿಸಿ ಜನ್ಮದಿನ ಹಬ್ಬಗಳಲ್ಲಿ ಮೇರಿ ಮಾತೆಯ ಜನ್ಮ ದಿನ ಕೂಡ ಮಹತ್ವದ ಹಬ್ಬವಾಗಿದೆ. ಇಂದು ನಾವು ಕುಟುಂಬದ ಹಬ್ಬವನ್ನು, ನವ ಬೆಳೆಗಳು ದಯಪಾಲಿಸಿದಕ್ಕೆ ಕ್ರತ್ಜನಾತೆಯನ್ನು ಮೇರಿ ಮಾತೆಯ ಮೂಲಕ ದೇವರಿಗೆ ಅರ್ಪಿಸುತ್ತಿದ್ದೆವೆ. ಎಂದು ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

   ತೇನೆಗಳನ್ನು ಆಶಿರ್ವದಿಸಿ ಪ್ರತಿ ಕುಟುಂಬಕ್ಕೆ ಹಂಚಲಾಯಿತು. ಬಲಿದಾನದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಮನೋರಂಜನ ಮತ್ತು ಭಕ್ತಿಮಯ ಕಾರ್ಯಕ್ರಮಗಳು ನೆಡದವು.

   ಬಾಲ ಮೇರಿ ಮಾತೆಯನ್ನು ತೊಟ್ಟಿಲಲ್ಲಿ ತೆಗೆದುಕೊಂಡು ಬರುವುದು ವಿಶೇಷವಾಗಿ ಕಂಡು ಬಂತು.

ಕರಾವಳಿಗರೆಲ್ಲಾ ಊರಲ್ಲೆ ಹಬ್ಬ ಮಾಡಿದ ಆಚರಿಸಿದ ಅನುಭವ ಮುಂಬಯಗರಿಗಾಗಿದ್ದುದು ಹುಸಿಯಲ್ಲ.

Monti Festival by Konkani Liturgy Committee at Holy Family Church, Chakala, Mumbai


Mumbai, Sep 22: Monti festival was celebrated with grandeur on Sunday, Sep 17 by the Konkani Liturgy Committee at the Holy Family Church in Chakala, Metro Mumbai. Guest Priest Rev. Fr. Gerald Desa offered the feast of the feast. Among the birthday celebrations, Mother Mary’s birthday is also an important festival. Today we are offering family festival, offer to God through Mother Mary for bestowing new crops. He messaged. Holy family Church Priest Rev. Fr. Gerald Rodrigues, was present.

The teas were blessed and distributed to each family. After the sacrifice, the assembly program was held. Entertainment and devotional programs are not planted.

It was especially seen that the Child Mary was carried in the cradle.

It is not a lie that the Mumbaikars have a celebrated experience of celebrating in all the towns along the coast.

ಕಥೋಲಿಕ್ ಎಜುಕೇಷನ್ ಸೊಸೈಟಿ ಆಫ್ ಉಡುಪಿ ಡಯಸಿಸ್ – ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ “ಜಾಗತಿಕ ದಿನಾಚರಣೆ”

ಉಡುಪಿ : ಜಾಗತಿಕ ಶಾಂತಿ ದಿನಾಚರಣೆ. ಕಥೋಲಿಕ್ ಎಜುಕೇಷನ್ ಸೊಸೈಟಿ ಆಫ್ ಉಡುಪಿ ಡಯಸಿಸ್ ನ ಆಡಳಿತ ಮಂಡಳಿಗೆ ಒಳಪಟ್ಟ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಗತಿಕ ಶಾಂತಿ ದಿನವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಜಾಗತಿಕ ಶಾಂತಿಯ ಮಹತ್ವ ಮತ್ತು ಸಹಬಾಳ್ವೆ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಯಾವುದೇ ಫಲಾಪೇಕ್ಷೆಗಳಿಲ್ಲದೆ ಜನರು ಜನರಿಗಾಗಿ ಸಹಾಯ ಮಾಡುವುದು ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶವಾಗಿದೆ-ಎಸ್.ಜಯಕರ ಶೆಟ್ಟಿ

ಕುಂದಾಪುರ: ಯಾವುದೇ ಫಲಾಪೇಕ್ಷೆಗಳಿಲ್ಲದೆ ಜನರು ಜನರಿಗಾಗಿ ಸಹಾಯ ಮಾಡುವುದು ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿಗಳಾದ ಎಸ್.ಜಯಕರ ಶೆಟ್ಟಿ ಹೇಳಿದರು.
ಅವರು ಸೆಪ್ಟೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಯೂಥ್ ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ, ಮಾದಕ ವಸ್ತುಗಳ ವಿರುದ್ಧ ಜಾಗೃತಿ, ವಿದ್ಯಾರ್ಥಿವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯು ಯಾವುದೇ ವಿಪತ್ತಿನ ಸಂದರ್ಭದಲ್ಲಿ ಕಷ್ಟಕ್ಕೆ ಸ್ಪಂದಿಸುವ,ಸಹಾಯ ಮತ್ತು ಪರಿಹಾರ ಕಾರ್ಯಾಚರಣೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಂಸ್ಥೆಯಾಗಿದೆ. ಸಂಸ್ಥೆಯ ಸ್ವಯಂ ಸೇವಕರು ಮಾನವೀಯತೆ ನೆಲೆಯೊಂದಿಗೆ ಬೇಧಭಾವಗಳಿಲ್ಲದೆ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಚಿನ್ಮಯಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಉಮೇಶ್ ಪುತ್ರನ್ ಅವರು ಮಾತನಾಡಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ವಿಷಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಆಫೀಸರ್ ತರಬೇತಿ ಅಕಾಡೆಮಿಗೆ ಆಯ್ಕೆಯಾದ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಭರತ್ ಬಾಬು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸೇನಾ ನಿವೃತ್ತರಾದ ಸಂತೋಷ್ ಶೆಟ್ಟಿ ಸೇನೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಶಿವರಾಂ ಶೆಟ್ಟಿ, ಸೀತಾರಾಮ ಶೆಟ್ಟಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯ ಕುಮಾರ್ ಉಪಸ್ಥಿತರಿದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕಿನ ಯುವ ಘಟಕದ ಸಂಯೋಜಕರಾದ ಸತ್ಯನಾರಾಯಣ ಪುರಾಣಿಕ್ ಅವರು ರೆಡ್ ಕ್ರಾಸ್ ಸಂಸ್ಥೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಣಿ ವಿದ್ಯಾರಾಣಿ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರೂಪಿಸಿದರು.

ಗೀತಾ ಭಂಡಾರ್‌ಕಾರ್‌ (52)ನಿಧನ

ಹಟ್ಟಿಯಂಗಡಿ ಅಶೋಕ ಭಂಡಾರ್‌ಕಾರ್‌ ತೆಕ್ಕಟ್ಟೆ ಅವರ ಧರ್ಮಪತ್ನಿ ಗೀತಾ ಭಂಡಾರ್‌ಕಾರ್‌ (52) ಹೃದಯಾಘಾತದಿಂದ
ಸೆ.29 ರಂದು ನಿಧನರಾದರು. ಕೋಟೇಶ್ವರದ ಎಲ್‌.ಜಿ. ಇಂಡಸ್ಟ್ರೀಸ್‌ನ ಉದ್ಯೋಗಿ ಅಶೋಕ ಭಂಡಾರ್‌ಕಾರ್‌
ಹಾಗೂ ಗೀತಾ ದಂಪತಿ ಉತ್ತಮ ಸಮಾಜ ಸೇವಕರಾಗಿದ್ದು, ಮೃತ ಶ್ರೀಮತಿ ಗೀತಾ ಅವರು ತಮ್ಮ ಸೇವಾ
ಮನೋಜಾವದಿಂದ, ಸಜ್ಜನಿಕೆಯಿ೦ಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರು ಪತಿ, ಓರ್ವ ಪುತ್ರನನ್ನು
ಅಗಲಿದ್ದಾರೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು, ಸೆ.24ರಂದುಹಳೆ ವಿದ್ಯಾರ್ಥಿಗಳ ಸಮ್ಮಿಲನ


ಬೀಜಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ರೂವಾರಿ-2023 ಭಾವ-ನೆನಪುಗಳ ಸಂಗಮ ಕಾರ್ಯಕ್ರಮ ಸೆ.24ರಂದು ಬೀಜಾಡಿ ಮೂಡು ಶಾಲಾ ವಠಾರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯ ತನಕ ನಡೆಯಲಿದೆ. ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ,ವಿವಿಧ ಮನೋರಂಜನಾ ಆಟಗಳು ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ