ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟು ಜೋರು 15 ಕೆಜಿ ಟೊಮೆಟೊ ಬಾಕ್ಸಿಗೆ ರೂ.1800 ರಿಂದ ರೂ.2000

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಟೊಮೆಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೆಟೊ ಬಾಕ್ಸೊಂದು ರೂ.1800 ರಿಂದ ರೂ.2000 ದವರೆಗೆ ಮಾರಾಟವಾಯಿತು.
ಮಾರುಕಟ್ಟೆಗೆ ಟೊಮೆಟೊ ತಂದಿದ್ದ ರೈತರು ಬೆಲೆಯಿಂದ ಹರ್ಷಚಿತ್ತರಾಗಿದ್ದರು. ಆದರೆ ಮುದುಡು ರೋಗದಿಂದ ಇಳುವರಿ ಕುಸಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
‘1 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಪ್ರಾರಂಭದಲ್ಲಿ 60 ಬಾಕ್ಸ್ ಸಿಕ್ಕಿದೆ. ಒಳ್ಳೆ ಬೆಲೆ ಬಂದಿದೆ. ತೋಟ ರೋಗಪೀಡತವಾಗದೆ ಇದ್ದಲ್ಲಿ, ಈ ಹಿಂದೆ ಬೆಲೆ ಕುಸಿತದಿಂದ ಕಳೆದುಕೊಂಡಿದ್ದ ಬಂಡವಾಳ ವಾಪಸ್ ಬರುತ್ತಿತ್ತು. ಸಧ್ಯ ಇಷ್ಟಾದರೂ ಸಿಗುತ್ತಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು’ ಎಂದು ಕೂಳಗುರ್ಕಿ ಗ್ರಾಮದ ಟೊಮೆಟೊ ಬೆಳೆಗಾರ ರಾಮಾಂಜಿಲಪ್ಪ ಹೇಳಿದರು.
‘ಗಿಡಕ್ಕೆ ಮುದುಡು ರೋಗ ಬಂದ ಪರಿಣಾಮವಾಗಿ ಮಾರುಕಟ್ಟೆಗೆ ಸಾಕಷ್ಟು ಟೊಮೆಟೊ ಬರುತ್ತಿಲ್ಲ. ತಾಲ್ಲೂಕಿನ ಉತ್ತರ ಭಾಗದ ರೈತರು ತಾವು ಬೆಳೆದ ಟೊಮೆಟೊ ಆಂಧ್ರಪ್ರದೇಶದ ಮದನಪಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಹಾಗಾಗಿ ಕಡಿಮೆ ಸಂಖ್ಯೆಯ ಬಾಕ್ಸ್‍ಗಳು ಬರುತ್ತಿವೆ. ಆದರೂ ಬೆಲೆ ಬಂದಿರುವುದರಿಂದ ರೈತರು ಬಚಾವಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚುವ ಸಂಭವಿ ಇದೆ’ ಮಂಡಿ ಮಾಲೀಕ ಕೆ.ಸಿ.ವರದರಾಜು ಪ್ರಜಾವಾಣಿಗೆ ತಿಳಿಸಿದರು.

ಶ್ರೀನಿವಾಸಪುರ:ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಿ – ವೈ.ಎನ್.ಸತ್ಯನಾರಾಯಣ

ಶ್ರೀನಿವಾಸಪುರ: ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಜಾನುವಾರುಗಳ ಪಾಲಿಗೆ ಯಮಪಾಷವಾಗಿದೆ. ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಕವರ್‍ಗೆ ಬದಲಾಗಿ ಬಟ್ಟೆ ಚೀಲ ಬಳಸಬೇಕು. ಮಾಂಸ, ಮೀನು ಖರೀದಿಸಿ ಕೊಂಡೊಯ್ಯಲು ಸ್ಟೀಲ್ ಕ್ಯಾರಿಯರ್ ಬಳಸುವುದು ಕ್ಷೇಮಕರ. ಪ್ಲಾಸ್ಟಿಕ್ ವಸ್ತು ಸುಡುವುದರಿಂದ ಪರಿಸರ ಕೆಡುತ್ತದೆ. ವಾಯು ಮಾಲಿನ್ಯ ಹೆಚ್ಚಿ ಉಸಿರಾಟದ ತೊಂದರೆ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಜನರು ಪ್ಲಾಸ್ಟಿಕ್ ಬಳಕೆ ವಿಷಯದಲ್ಲಿ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಸೂರ್ಯನಾರಾಯಣಶೆಟ್ಟಿ ಮಾತನಾಡಿ, ಪುರಸಭೆ ಏನೆಲ್ಲ ಕ್ರಮ ಕೈಗೊಂಡರೂ, ಪ್ಲಾಸ್ಟಿಕ್ ವಸ್ತು ಮಾರಾಟ ಹಾಗೂ ಬಳಕೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಷೇಧಿತ ಪ್ಲಾಸ್ಟಿಕ್ ವಸ್ತುಳ ತಯಾರಿಕೆ ನಿಲ್ಲಿಸಲು ಸರ್ಕಾರ ಕೈಗೊಳ್ಳಬೇಕು. ಮೂಲದಲ್ಲಿಯೇ ತಡೆಯುವುದರಿಂದ ಬಳಕೆ ಸಂಪೂರ್ಣ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ಸುರೇಶ್, ಸಂತೋಷ್ ಇದ್ದರು.

ಕುಂದಾಪುರ ಭಾ.ರೆಡ್ ಕ್ರಾಸ್ ಸಂಸ್ಥೆಯಿಂದ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಟ್ಟಿ ಉದ್ಘಾಟನೆ

ಕುಂದಾಪುರ: ಜು.೧೯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಮತ್ತು ಸರಕಾರಿ ಜೂನಿಯರ್‌ ಕಾಲೇಜು ಕುಂದಾಪುರ ಇವರ ಸಹಯೋಗದೊಂದಿಗೆ ಜೂನಿಯರ್ ರೆಡ್ ಕ್ರಾಸ್ ಘಟಕ ವನ್ನು ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಜೂನಿಯರ್ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಅರ್ ಶೆಟ್ಟಿ ಇವರು ಪ್ರತಿಜ್ಞೆಯನ್ನು ಭೋದಿಸಿದರು. ಪ್ರಭಾರ ಪ್ರಾಂಶುಪಾಲರಾದ ಭುಜಂಗ ಶೆಟ್ಟಿ ಅದ್ಯಕ್ಷೀಯ ಭಾಷಣ ಮಾಡಿದರು. ಸಭಾಪತಿ ಜಯಕರ ಶೆಟ್ಟಿ ಇವರು ಪ್ರಾಂಶುಪಾಲರಿಗೆ ಫಸ್ಟ್‌ ಎಐ್ಡ ಕಿಟ್ ಹಸ್ತಾಂತರಿಸಿದರು ಮತ್ತು ಜೂನಿಯರ್ ರೆಡ್ ಕ್ರಾಸ್ ಅದ್ಯಕ್ಷ ಮತ್ತು ಕಾರ್ಯದರ್ಶಿ ಗೆ ಪಿನ್ ತೊಡಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಅಧ್ಯಾಪಕರಾದ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಸಂಚಾಲಕರಾದ ಶಂಕರ್ ನಾಯ್ಕ್ ವಂದಿಸಿದರು.

‘Yuva Saha Milan’ A Day with the Youth in Kulur.

Indian Catholic Youth Movement of Kulur Parish organized a Youth get-together on 16th July 2023 at Kulur Church mini hall. The programme was inaugurated by Rev. Fr Victor Vijay Lobo, Parish Priest of Kulur Church. Fr Ashwin Lohith Cardoza, Director of ICYM Mangalore Diocese Central Council, Wilma Viyola Lobo, General Secretary Of Mangalore Diocese Central Council, Arun Roshan Dsouza, vice president of Parish Council, Sunitha Victoria D Souza, secretary of Parish Council, Dr. Vinay Rajath Dsouza, Convener, Parish Pastoral commissions, Claver Dsouza, ICYM Kulur unit Animator, Praneeth Monteiro, ICYM Kulur unit President, Suzannha Ferrao, ICYM Kulur unit Secretary were present on the dais.

In her message, Ms Wilma Viyola Lobo, General Secretary of ICYM Central Council motivated the youth to participate actively in the events. She also shared how ICYM has helped her in her personal development.

In his Presidential address, the Parish Priest of St Antony Church Kulur, Fr Victor Vijay Lobo appreciated all those who came to participate in the programme. Today’s Youth is full of energy ad innovative ideas. Church wants to listen to the youth of today and invited the youth to share their opinions on social and church matters. He motivated and invited the youth to take an active part in all the upcoming events.

President Praneeth Monteiro welcomed, and Vice President Sneha D’Mello proposed a vote of thanks. Secretary, Suzannha Ferrao compered the Inaugural programme.

After the Inaugural programme, the resource person of the day, Rev. Fr Ashwin Lohith Cardoza took over the workshop. He made the participants feel at home through the action songs and Ice Breaking sessions. 

The participants were divided into Six groups. Each group had to pick a name/slogan, and the first activity that was given to them was to prepare an action song based on the name/slogan taken.

As part of the session, a youth Cafe was conducted. Each group was given a case related to the youth of the society and each group had to come forward and put forth their opinions.

Later on, a few activities were given to the groups to show them how strong the youth is if we come together. The message that all the youth received from these activities was that with teamwork, right planning and execution, and unity we can achieve the goals that we intend to.

Mr Wayne Lansten D’Silva CEO of Wayne’s business services young entrepreneur shared his experience on how his deep faith in God changed his life which led him to achieve his goals.

He also inspired the youth to think and to decide where they would like to see themselves in 5 years and motivated them to take on entrepreneurship.

The participants were invited to shared their experience about the program. Nishel Dsouza said that she enjoyed the program and she could actively participate in all the activities. ‘I was hesitant to come for the programme but once I came, I enjoyed a lot. If had I not come, I would have missed a lot’ she said. The other participant, Clevita Dsouza said that she could take leadership in all the activities and made sure that her group performed well.

Reeshal Dsouza appreciate the modality used for the programme. She said, because of group activities, I could participate well. If it was individual activities, I would have hesitated to take part in the activities. Viya Sequeira said that she came to know a lot of new people due to this program.

In the end, the Parish Priest thanked Fr Ashwin Cardoza for such an amazing session.

ಮರವಂತೆ ಬೀಚ್ : ಸಮುದ್ರ ಪಾಲಾದ ಯುವಕನ ಶವ ಪತ್ತೆ


ಕುಂದಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‌ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಸಮುದ್ರ ಪಾಲಾದ ಯುವಕನ ಶವ ಬುಧವಾರ ಬೆಳಿಗ್ಗೆ ಕಂಡು ಬಂದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವಂಡಿ ಗ್ರಾಮದ 23 ವರ್ಷ ಪ್ರಾಯದ ಪೀರ್ ನದಾಫ್ ಮೃತ ಯುವಕ. ಮೃತ ದೇಹವು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆ ಬಳಿ ಪತ್ತೆಯಾಗಿದೆ.
ನದಾಫ್ ಕಳೆದ ನಾಲ್ಕು ವರ್ಷಗಳಿಂದ ಊರಿನ ತನ್ನ ಸ್ನೇಹಿತರ ಜತೆ ಪಡುಬಿದ್ರಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ನದಾಫ್ ಸಹಿತ ಮೂವರು ಸ್ನೇಹಿತರು ಟ್ಯಾ0ಕರ್ ಒಂದರಲ್ಲಿ ಊರಿಗೆ ಹೊರಟಿದ್ದರು.ಮರವಂತೆ ಬೀಚ್‌ಗೆ ಬಳಿ ಬಂದಾಗ ಸೆಲ್ಫಿ ತೆಗೆಯುವ ಹುಚ್ಚಿನಿಂದ ಸಮುದ್ರಕ್ಕಿಳಿದಿದ್ದ ವೇಳೆ ನದಾಫ್ ಸಮುದ್ರ ಪಾಲಾಗಿದ್ದ ಸ್ಥಳೀಯರು ಈಜುಗಾರ ಜತೆ ಸೇರಿ ಅವನ ಪತ್ತೆಗೆ ಸಾಕಷ್ಟು ಶ್ರಮಿಸಿದರೂ ಪ್ರತಿ ಕೂಲ ಹವಾಮಾನದಿಂದಾಗಿ ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಅಂಬಿಕಾ ಖಾರ್ವಿ ಮಹಿಳೆ ಮನೆಯ ಬಳಿ ಸಮುದ್ರದ ಹತ್ತಿರ ಹೋಗುತ್ತಿರುವಾಗ ಸಮುದ್ರದಲ್ಲಿ ತೇಲಾಡುತ್ತಿರುವ ಮೃತ ದೇಹ ನೋಡಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಜೀವ ರಕ್ಷಕ ಈಜು ತಜ್ಞ ದಿನೇಶ್ ಖಾರ್ವಿ ತಂಡ, ಆಂಬ್ಯುಲೆನ್ಸ್ ಡ್ರೈವರ್ ಮೃತ ದೇಹವನ್ನು ನೀರಿನಿಂದ
ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆಗೆ ರವನಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ ನಿಧನ (78)


ಕುಂದಾಪುರ, ಜು.19: ಕುಂದಾಪುರದ ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ (78) ಅಲ್ಪ ಕಾಲದ ಅಸ್ವಸ್ಥೆಯಿಂದ ಇಂದು ಜು.19 ರಂದು ಸ್ವಗ್ರಹದಲ್ಲಿ ನಿಧನದಾರು. ಇವರು ಕುಂದಾಪುರ ತಾಲೂಕಿನ ಛಾಯಚಿತ್ರಕಾರ ಸಂಘದ ಗೌರವ ಅಧ್ಯಕ್ಷರಾಗಿದ್ದರು. ಇವರು ಪತ್ನಿ ಡೆಲ್ಫಿನ್, ಮೂವರು ಪುತ್ರರರಾದ ವೆಸ್ಲಿ, ವೆನಿಲ್ (ಧರ್ಮಗುರುಗಳು) ವೆಲ್ಚನ್ ಸೊಸೆಯಂದಿರಾದ ಡೋರಿನ್, ರೊಸಿ, ಮೊಮ್ಮಕ್ಕಳಾದ ಡೆರ್ವಿನ್,ಇಲಾಯ್ನೆ ಮತ್ತು ಅವೌರರಾ ಇವರನ್ನು ಮತ್ತು ಬಂಧುಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ೪ ಗಂಟೆಗೆ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ನಡೆಯಲಿದೆ

Passed Away Mr. Robert D’souza (Bharath Studio) (78) The funeral will be held on 20-7-23 evening

Passed Away ; Mr. Robert D’souza (Bharath Studio) (78)

Birth: 23-04-1945

Marriage: 13-05-1975

Death: 19-07-23

H/o Delphine D’souza

F/o Wesli/ Dorin, Fr. Venil, Velchan/ Rosie

Grandchildren: Derwin, Elaine, Aurora

Funeral cortège leaves the residence on 20-7-23 at 3.30 pm to Holy Rosary Church, Kundapur for mass at 4 pm.

Contact : 9008519384

ಯಕ್ಷಗಾನಕ್ಕೂ ಕುಂದಾಪ್ರ ಕನ್ನಡಕ್ಕೂ ಅವಿನಾಭಾವ ಸಂಬಂಧ


ಬೀಜಾಡಿ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಎ.ಎಸ್ .ಎನ್ ಹೆಬ್ಬಾರ್
ಬೀಜಾಡಿ: ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ, ಪ್ರೀತಿ ಇರಬೇಕು.ಯಕ್ಷಗಾನಕ್ಕೂ ಕುಂದಾಪ್ರ ಕನ್ನಡಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದ ಹಾಸ್ಯ ಕಲಾವಿದರು ಹಿಂದಿನಿಂದಲೂ ಕುಂದಾಪ್ರ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್,
ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇವರ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 4ನೇ ವರ್ಷ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಮಾರಂಭದಲ್ಲಿ ಆಶಯದ ಮಾತುಗಳನ್ನಾಡಿದರು.
ಕುಂದಾಪ್ರ ಕನ್ನಡ ಭಾಷೆಯ ಅಧ್ಯಯವಾಗಬೇಕು. ಈ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೇ ನಾವು ಅನುದಿನವು ಕುಂದಾಪ್ರ ಕನ್ನಡವನ್ನು ಮಾತನಾಡಬೇಕು ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ ಬೀಜಾಡಿ ನಾರಾಯಣ ಆಚಾರ್ ಅವರನ್ನು ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ಧಿಂಸಾಲ್,ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ನಾಗರಾಜ ಬಿ.ಜಿ ಭತ್ತ ಕುಟ್ಟುವ ಹಾಡನ್ನು ಹಾಡಿದರು. ರೋಟರಿ ಕುಂದಾಪುರ ರಿವರ್‍ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ ಮೊಗವೀರ, ಕಾರ್ಯದರ್ಶಿ ಗಿರೀಶ್ ಕೆ.ಎಸ್., ರೋಟರಿ ಕುಂದಾಪುರ ರಿವರ್‍ಸೈಡ್ ಕಾರ್ಯದರ್ಶಿ ಡಾ.ವಿಲಾಶ್‍ಕೃತಿಕ್ ಉಪಸ್ಥಿತರಿದ್ದರು. 4ನೇ ವರ್ಷದ ಕುಂದಾಪುರ ಕನ್ನಡ ದಿನಾಚರಣೆಯ ಅದೃಷ್ಟವಂತರಾಗಿ ಹರೀಶ್ ಮೊಗವೇರ, ಕುಂದಾಪ್ರ ಕನ್ನಡದ ಅತೀ ಹೆಚ್ಚು ದೈವ ದೇವರ ಹೆಸರನ್ನು ಹೇಳಿದ ಕೃಷ್ಣ ಗೋಳಿಬೆಟ್ಟು, ಕುಂದಾಪ್ರ ಭಾಗದಲ್ಲಿ ಆಚರಿಸುವ ಅತೀ ಹೆಚ್ಚು ಹಬ್ಬಗಳ ಹೆಸರನ್ನು ಹೇಳಿದ ಶಾರದಾ ಗಾಣಿಗ ಬಹುಮಾನ ಪಡೆದರು. ಅನುಪ್‍ಕುಮಾರ್ ಬಿ.ಆರ್ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ವಂದಿಸಿದರು.

ನ್ಯಾಕ್ ಪೀರ್ ತಂಡವು ಜುಲೈ 14 ಮತ್ತು 15 ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಭೇಟಿ ನೀಡಿತು

ನ್ಯಾಕ್ ಪೀರ್ ತಂಡವು ಜುಲೈ 14 ಮತ್ತು 15 ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಭೇಟಿ ನೀಡಿತು. ತಂಡದ ಅಧ್ಯಕ್ಷರಾಗಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಅಶೋಕ್ ಬೊಯ್ಟಿ, ತಂಡದ ಸದಸ್ಯ ಸಂಯೋಜಕರಾಗಿ ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಶಹೀದ್ ರಸೂಲ್ ಮತ್ತು ಅಸ್ಸಾಂನ ಟನ್ಷುಕಿಯಾದ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಾದಲ್ ಕುಮಾರ್ ಸೇನ್ ಇದ್ದರು. ಸದಸ್ಯರನ್ನು ಸಂಸ್ಥೆಗೆ ಸ್ವಾಗತಿಸಲಾಯಿತು, ಅಲ್ಲಿ ಅವರಿಗೆ ಸಾಂಸ್ಥಿಕ ಮುಖ್ಯಾಂಶಗಳು ಮತ್ತು ವಿವಿಧ ಇಲಾಖೆಗಳಿಂದ ನ್ಯಾಕ್ ನ ಮೌಲ್ಯಮಾಪನ ಮಾನದಂಡಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪ್ರಸ್ತುತಪಡಿಸಲಾಯಿತು.
ತಂಡವು ಕಾಲೇಜಿನ ಎಲ್ಲಾ ವಿಭಾಗಗಳ ಸೌಲಭ್ಯಗಳು, ಕ್ಯಾಂಪಸ್ ಮೂಲಸೌಕರ್ಯಗಳು, ಸಂಘಗಳಿಗೆ ಭೇಟಿ ನೀಡಿದರು. 14 ರಂದು ಸಂಜೆ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

15ರಂದು ಕಾಲೇಜಿನಲ್ಲಿ ನ್ಯಾಕ್ ಪೀರ್ ತಂಡದವರು ನಿರ್ಗಮನ ಸಭೆ ನಡೆಸಿದರು.
ತಂಡದ ಸದಸ್ಯರು ತಮ್ಮ ಅವಲೋಕನಗಳ ಆಧಾರದ ಮೇಲೆ ಸಂಸ್ಥೆಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿವರಿಸಿದರು. ಸುಧಾರಣೆಗೆ ಸಲಹೆಗಳನ್ನು ನೀಡಲಾಯಿತು.
ನಿರ್ಗಮನ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಕಾಲೇಜಿನ ನ್ಯಾಕ್ ಸಂಯೋಜಕರಾದ ಶಶಿಕಾಂತ್ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯಕುಮಾರ್ ಕೆ.ಎಂ. ಅವರು ಉಪಸ್ಥಿತರಿದ್ದರು