ತಲ್ಲೂರು ಮಾಜಿ ಗ್ರಾ.ಪಂ. ಸದಸ್ಯ ವಾಸುದೇವ ಖಾರ್ವಿ ನಿಧನ

ಕುಂದಾಪುರ: ತಲ್ಲೂರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಾಸುದೇವ ಖಾರ್ವಿ(61 )ಅವರು ತಲ್ಲೂರು ಕೋಟೆಬಾಗಿಲಿನಲ್ಲಿರುವ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಜುಲೈ 13ರ ರಾತ್ರಿ ನಿಧನರಾದರು. ಮೀನುಗಾರಿಕಾ ವೃತ್ತಿಯಲ್ಲಿದ್ದ ಅವರು ಸಮಾಜ ಸೇವೆಯಲ್ಲೂ ಗುರ್ತಿಸಿ ಕೊಂಡಿದ್ದರು. ಮೃತರು ಪತ್ನಿ ಒಂದು ಹೆಣ್ಣು ಹಾಗೂ ಮಾಜಿ ಗ್ರಾ.ಪಂ.ಸದಸ್ಯ ಸುನೀಲ್ ಖಾರ್ವಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾರು ಚಲಾಯಿಸುತ್ತೀರುವಾಗ ಗಂಡ ಹೆಂಡತಿ ಜಗಳ ಕಾದು – ಕಾರು ಪಲ್ಟಿ

(ಚಿತ್ರ ಸಾಂದರ್ಭಿಕ)

ಬೆಂಗಳೂರು: ಕಾರು ಚಲಾಯಿಸುತ್ತೀರುವಾಗಲೂ ಗಂಡ-ಹೆಂಡತಿ ಜಗಳಕ್ಕೆ ಕಾದು, ಕಾರು ಪಲ್ಟಿಯಾದ ಘಟನೆ ಬೆಂಗಳೂರು ನಗರದ ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಬಳಿ ತಡರಾತ್ರಿ ಘಟನೆ  ನಡೆದಿದೆ. ಗಂಡ ಹೆಂಡತಿ ಮಾರುಕಟ್ಟೆ ಕಡೆಯಿಂದ ಐ 20 ಕಾರಿನಲ್ಲಿ ಬರುತ್ತಿರುವಾಗ ಗಂಡ ಹೆಂಡತಿ ನಡುವೆ ಜಗಳವಾಗಿದೆ.. ಕಾರಿನಲ್ಲಿ ಪತಿ- ನಡೆದಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪತ್ನಿ ದಿಢೀರನೇ ಕಾರಿನ ಸ್ಟೇರಿಂಗ್‌ ಎಳೆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.

ಈ ಅವಘಡದಿಂದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾರೆ. ಕುಡಿದ ಅಮಲಿನಲ್ಲಿ ಕಾರು.ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದ್ದು, ಘಟನೆ ವಿಷಯ ತಿಳಿದು, ಸ್ಥಳಕ್ಕೆ ಹಲಸೂರು ಗೇಟ್‌ ಪೊಲೀಸರು ಭೇಟಿ ನೀಡಿ ಪಲ್ಪಿಯಾಗಿದ್ದ ಕಾರನ್ನು ಮೇಲೆತ್ತಿ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ.

ವಿಕಲಚೇತನರಿಗಿಂತ ಹೆಚ್ಚಾಗಿ ಸಭ್ಯ ಸಮಾಜಕ್ಕೆ ಸುಲಭಲಭ್ಯತೆಯ ಕುರಿತು ಬೋಧಿಸಬೇಕಾದ ಅಗತ್ಯತೆ ಇದೆ: ಸಿ.ಎಸ್ ದ್ವಾರಕಾನಾಥ್ – ಸೇ ಎಸ್ ಟು ಆಕ್ಸೆಸ್’ ಅಭಿಯಾನದ ಪೋಸ್ಟರ್ ಬಿಡುಗಡೆ

ವಿಕಲಚೇತನರಿಗಿಂತ ಹೆಚ್ಚಾಗಿ ಸಭ್ಯ ಸಮಾಜಕ್ಕೆ ಸುಲಭಲಭ್ಯತೆಯ ಕುರಿತು ಬೋಧಿಸಬೇಕಾದ ಅಗತ್ಯತೆ ಇದೆ: ಸಿ.ಎಸ್ ದ್ವಾರಕಾನಾಥ್

‘ಸೇ ಎಸ್ ಟು ಆಕ್ಸೆಸ್’ ಅಭಿಯಾನದ ಪೋಸ್ಟರ್ ಬಿಡುಗಡೆ

‘ಎಪಿಡಿ’ಯಿಂದ ಮೂರು ದಿನಗಳ ರಾಜ್ಯಮಟ್ಟದ ಆಕ್ಸೆಸಿಬಿಲಿಟಿ ಕಾರ್ಯಾಗಾರಕ್ಕೆ ಚಾಲನೆ

ಬೆಂಗಳೂರು: ವಿಕಲಚೇತನರ ಊನತೆಗಳನ್ನೇ ಕುಂಟ, ಕುರುಡ ಎಂದು ಬೈಗುಳಗಳನ್ನಾಗಿ ಪರಿವರ್ತಿಸಿಕೊಂಡಿರುವ ಸಭ್ಯ ಸಮಾಜಕ್ಕೆ ಇವತ್ತು ಸುಲಭ ಲಭ್ಯತೆಯ ಕುರಿತು ತಿಳಿ ಹೇಳಬೇಕಾದ ಅಗತ್ಯತೆ ಇದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ‌‌. ಸಿ.ಎಸ್. ದ್ವಾರಕಾನಾಥ್‌ರವರು ಹೇಳಿದರು.

ಅವರು ಬೆಂಗಳೂರಿನ ಪಾಲನಾ ಭವನದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ವತಿಯಿಂದ ಆಯೋಜಿಸಲಾಗಿದ್ದ ಸುಲಭಲಭ್ಯತೆ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

ಕಾಯಕ ಯೋಗಿ ಬಸವಣ್ಣನವರ ತತ್ವಗಳನ್ನು ನೆನೆದ ಅವರು, ವಿಕಲಚೇತನರಿಗೆ ಪ್ರೀತಿ, ಕಾಳಜಿ ಬೇಕಿದೆಯೇ ವಿನಃ ಕರುಣೆ, ದಯೆ ಬೇಕಾಗಿಲ್ಲ ಎಂದು ಸಮಾಜಕ್ಕೆ ಕರೆ ನೀಡಿದರು.

ಕಾರ್ಯಾಗಾರದಲ್ಲಿ ಸುಲಭ ಲಭ್ಯತೆಯ ಕುರಿತು ಮಾಹಿತಿ ನೀಡಲು ಆರಂಭಿಸಲಾದ ‘ಸೇ ಎಸ್ ಟು ಆಕ್ಸೆಸ್’ ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವಿಕಲಚೇತನರ ಆಯೋಗದ ರಾಜ್ಯ ಆಯುಕ್ತರಾದ ಶ್ರೀಮತಿ ಲತಾ ಕುಮಾರಿ ಮಾತನಾಡಿ, “ಎಪಿಡಿ ಸಂಸ್ಥೆ ನೀಡುತ್ತಿರುವ ತರಬೇತಿ ಕಾರ್ಯಾಗಾರಗಳು ರಾಜ್ಯಾದ್ಯಂತ ಪಸರಿಸಬೇಕಿದೆ. ಪ್ರತಿಯೊಬ್ಬ ಮನುಷ್ಯನಿಗೂ ನ್ಯೂನತೆಗಳಿವೆ. ಅವುಗಳನ್ನು ಮೀರಿ ಸಮಾಜದಲ್ಲಿ ಬೆಳೆಯಬೇಕಿದ್ದು, ಘನತೆಯ ಬದುಕನ್ನು ಕಟ್ಟಿಕೊಳ್ಳಲು ಪ್ರತಿಯೊಬ್ಬರು ಆರ್ಥಿಕವಾಗಿ ಬಲಿಷ್ಠವಾಗಬೇಕಿದೆ. ಉದ್ಯೋಗ ಇವತ್ತು ಪುರುಷ ಲಕ್ಷಣ ಎನ್ನುವುದಕ್ಕಿಂತ ಸ್ತ್ರೀ ಪುರುಷರಿಬ್ಬರ ಲಕ್ಷಣವೆಂದು ಬದಲಾಯಿಸಿಕೊಳ್ಳಬೇಕಿದೆ‌ ಎಂದರು‌.

ಇದೇ ವೇಳೆ ಮಾತನಾಡಿದ ಎಪಿಡಿಯ ಗೌರವಾನ್ವಿತ ಕಾರ್ಯದರ್ಶಿ ಜೇಕಬ್ ಕುರಿಯನ್‌, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಸುಮಾರು 64 ವರ್ಷಗಳಿಂದ ವಿಕಲಚೇತನರ,ದುರ್ಬಲರ ಸಬಲೀಕರಣಕ್ಕಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಸಮಾಜದಲ್ಲಿ ಅಂಗವೈಕಲ್ಯತೆಯ ಕುರಿತು ತಪ್ಪು ಅಭಿಪ್ರಾಯ ಇರುವುದನ್ನು ಗುರುತಿಸಿದೆ. ಇಂದು ಸುಲಭಲಭ್ಯತೆಯ ಅಗತ್ಯತೆ ಕೇವಲ ವಿಕಲಚೇತರಿಗೆ ಮಾತ್ರ ಇದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಈಗಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ ಎಂದರು.

ಇಂದು ಮಕ್ಕಳು, ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಕಾಯಿಲೆ ಪೀಡಿತರಿಗೂ ಆಕ್ಸೆಸಿಬಿಲಿಟಿ ಅಗತ್ಯತೆ ಇದೆ ಎಂಬುದನ್ನು ಮನಗಾಣಬೇಕಿದೆ‌. ಸುಲಭಲಭ್ಯತೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿರುವುದರಿಂದಲೇ ವಿದೇಶಗಳಲ್ಲಿ ವಿಕಲಚೇತನರು, ಹಿರಿಯ ನಾಗರಿಕರು ಮಾಲ್, ಸಿನೆಮಾ ಥಿಯೇಟರ್, ಕಂಪೆನಿಗಳು ಸೇರಿದಂತೆ ಔದ್ಯೋಗಿಕ ರಂಗದಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಭಾರತದಲ್ಲಿ ಸಾರಿಗೆ, ಉದ್ಯೋಗ,ಉದ್ಯಮ ಹಾಗೂ ವಿಹಾರ ಕೇಂದ್ರಗಳಲ್ಲಿಯೂ ವಿಕಲಚೇತನರು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಹೆಚ್ಚಿನವರು ಮನೆಗಳಲ್ಲಿಯೇ ಉಳಿದುಕೊಳ್ಳಲು ಬಯಸುತ್ತಾರೆ. ಈ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡು ಬರಬೇಕಿದ್ದಲ್ಲಿ ಪೂರಕವಾದ ಸುಲಭ ಲಭ್ಯತೆ ಸೌಕರ್ಯಗಳನ್ನು ಒದಗಿಸಲು ಸಮಾಜದಲ್ಲಿ ಕೈಜೋಡಿಸಬೇಕಿದ್ದು ಆಗ ಮಾತ್ರ ಕರ್ನಾಟಕವನ್ನು ಅಸ್ಸೆಸೆಬಿಲಿಟಿಯಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಲು ಸಾಧ್ಯ ಎಂದರು.

ಕಾರ್ಯಾಗಾರದಲ್ಲಿ 15ಕ್ಕೂ ಹೆಚ್ಚು ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗವಹಿಸಿದ್ದು, ಮೂರುದಿನಗಳ ಕಾಲ ಆಕ್ಸೆಸಿಬಿಲಿಟಿ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

‘ಸುಲಭ ಲಭ್ಯತೆ’ ಎಂದರೇನು?

ಸುಲಭಲಭ್ಯತೆ ಅಥವಾ ಆಕ್ಸೆಸಿಬಿಲಿಟಿ ಎಂದರೆ ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು ಸೇರಿದಂತೆ ಇತರ ಜನರಿಗೆ ಸಾರಿಗೆ, ಉದ್ಯೋಗ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಪೂರಕವಾದ ವಾತಾವರಣವನ್ನು ಕಲ್ಪಿಸುವುದಾಗಿದೆ. ಇನ್ನೊಂದು ಅರ್ಥದಲ್ಲಿ ವಿಕಲಚೇತನರಿಗೆ ಸುಲಭವಾಗಿ ಬಳಸಲು ಸಾಧ್ಯವಾಗುವ ಹಾಗೆ ಉತ್ಪನ್ನಗಳು, ಸಾಧನಗಳು, ಸೇವೆಗಳು, ವಾಹನಗಳು ಅಥವಾ ಪರಿಸರವನ್ನು ವಿನ್ಯಾಸಗೊಳಿಸುವುದಾಗಿದೆ. ವ್ಹೀಲ್ ಚೇರ್, ವಾಕರ್, ಭೂತಗನ್ನಡಿ, ರ‌್ಯಾಂಪ್ ರೈಲಿಂಗ್, ಲಿಫ್ಟ್, ವಿಕಲಚೇತನರು ಬಳಸಬಹುದಾದ ಶೌಚಾಲಯಗಳು, ರಸ್ತೆಯಲ್ಲಿ ಇಳಿಜಾರು ವ್ಯವಸ್ಥೆಗಳು, ಸಾರಿಗೆಗಳಲ್ಲಿ ಹತ್ತಲು ಬೇಕಾಗುವ ರ‌್ಯಾಂಪ್‌ಗಳ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವುದಾಗಿದೆ.

ವಿಕಲಚೇತನರಿಗಾಗಿ ವಿಶಿಷ್ಟ ಆ್ಯಪ್

ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಸುಲಭಲಭ್ಯತೆಗಳಾದ ರ‌್ಯಾಂಪ್ ರೈಲಿಂಗ್, ವ್ಹೀಲ್ ಚೇರ್, ಲಿಫ್ಟ್ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ವಿಕಲಚೇತನರಿಗೆ ಬಳಸಲು ಸುಲಭವಾಗುವಂತಹ ಅಪ್ಲೀಕೇಶನ್ ನಿರ್ಮಿಸುತ್ತಿರುವ ಕುರಿತು ಜೇಕಬ್ ಕುರಿಯನ್ ಮಾಹಿತಿ ನೀಡಿದರು.

ಕಾರ್ಯಾಗಾರದ ಆರಂಭದಲ್ಲಿ ಎಪಿಡಿ ಸಿಬ್ಬಂದಿ ಮುನಿ ಚೌಡಪ್ಪರವರು ಸ್ವಾಭಿಮಾನ ಗೀತೆಯನ್ನು ಹಾಡಿದರು. ಎಪಿಡಿ ನಿರ್ದೇಶಕರಾದ ಶಿವ. ಸಿ. ಹಿರೇಮಠ್‌ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು‌. ಉಪ ನಿರ್ದೇಶಕರಾದ ಎಸ್. ಬಾಬು‌ರವರು ಕಾರ್ಯಾಗಾರದ ಉದ್ದೇಶ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಶಿವಪ್ಪ. ಬಿ. ಎನ್ ಧನ್ಯವಾದವಿತ್ತರು.

ಡಾ.ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ:ಹಾಲಿ ಖಾಲಿ ಇರುವ 5120 ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು-ಸಚಿವ ಮಧು ಬಂಗಾರಪ್ಪ

ಕೋಲಾರ:- ರಾಜ್ಯದಲ್ಲಿನ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಾಲಿ ಖಾಲಿ ಇರುವ 5120 ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮವಹಿಸುವುದಾಗಿ ಸದನದಲ್ಲಿ ಭರವಸೆ ನೀಡಿದರು.
ಖಾಲಿ ಇರುವ 5120 ಹುದ್ದೆಗಳಲ್ಲಿ 3794 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ಬೇಕಾಗಿದ್ದು, ಶೀಘ್ರ ಅನುಮೋದನೆ ಪಡೆದು ಪ್ರಕ್ರಿಯೆ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಸದನದಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ಅನುದಾನಿತ ಶಾಲೆಗಳಲಿಗೆ 1326 ಬೋಧಕ ಹುದ್ದೆಗಳ ಭರ್ತಿಗೆ ಕಳೆದ 2015 ರ ಹಿಂದೆಯೇ ಅನುಮತಿ ನೀಡಲಾಗಿದೆ ಆದರೆ ಖಾಸಗಿ ಶಾಲೆಗಳ ಕೆಲವೊಂದು ನಿಮಯಗಳಿಂದಾಗಿ ಹುದ್ದೆಗಳು ಭರ್ತಿಯಾಗಿಲ್ಲ ಅದರ ಜತೆಗೆ ಇದೀಗ ಖಾಲಿ ಇರುವ 3794 ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಧ್ಯೆಪ್ರವೇಶಿಸಿ ಮಾತನಾಡಿದ ಡಾ.ವೈ.ಎ.ಎನ್, 2021ರ ಅಂತ್ಯದವರೆಗೆ ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚಿನ ಬೋಧಕ ಹುದ್ದೆಗಳು ಖಾಲಿ ಇದೆ, ಆದರೂ 2020ರ ಹಿಂದೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕ್ರಮ ಕೈಗೊಳ್ಳಿ ಎಂದರು.

ಜಿಪಂ ನೂತನ ಸಿಇಒ ಅವರಿಗೆ ನೌಕರರ ಸಂಘ ಅಭಿನಂದನೆ- ಮಾದರಿ ಜಿಲ್ಲೆಯಾಗಿಸಲು ಸಹಕರಿಸಿ- ಪದ್ಮ ಬಸವಂತಪ್ಪ

ಕೋಲಾರ:- ಕೋಲಾರ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪದ್ಮ ಬಸವಂತಪ್ಪ ಅವರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಅವರು, ಜಿಲ್ಲೆಯ ಗ್ರಾಮೀಣಾಭಿವೃದ್ದಿಗೆ ಸರ್ಕಾರಿ ನೌಕರರು ಸ್ಪಂದನೆ ನೀಡಿ, ಜಿಲ್ಲೆಯನ್ನು ಮಾದರಿಯಾಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋನ ಎಂದರು.
ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ನೌಕರರ ಪಾತ್ರ ಅತಿ ಮುಖ್ಯವಾಗಿದ್ದು, ಜಿಲ್ಲೆಯ ಸರ್ಕಾರಿ ನೌಕರರು ಈ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯಗಳ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮಾತನಾಡಿ, ಜಿಲ್ಲೆಯ ಸರ್ಕಾರಿ ನೌಕರರು ಕರ್ತವ್ಯ,ಬದ್ದತೆಯಲ್ಲಿ ರಾಜ್ಯದಲ್ಲೇ ಹೆಸರಾಗಿದ್ದು, ನಿಮ್ಮ ಅಭಿವೃದ್ದಿಪರ ಚಿಂತನೆಗೆ ಸದಾ ನಿಮ್ಮ ಸೂಚನೆಗಳನ್ನು ಪಾಲಿಸಿ ಸಹಕರಿಸುವ ಭರವಸೆ ನೀಡಿ, ನೌಕರರ ಸಮಸ್ಯೆಗಳ ಪರಿಹಾರಕ್ಕೂ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ನ್ಯಾಯಾಂಗ ಇಲಾಖೆಯ ನಾಗರಾಜ್ ಮತ್ತಿತರರಿದ್ದರು.

ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಕಿತ್ಸೆ ಪಡೆಯಬೇಕು:ಡಾ| ಜಿ.ಎಸ್.ವಂದನಾ

ಶ್ರೀನಿವಾಸಪುರ: ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಕಿತ್ಸೆ ಪಡೆಯಬೇಕು ಎಂದು ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಜಿ.ಎಸ್.ವಂದನಾ ಹೇಳಿದರು.
ಹೋಳೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಸಾಂಕ್ರಾಮಿಕ ರೋಗ ತಡೆಯಲು ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಹೇಳಿದರು.
ಕ್ಷಯ ರೋಗಿಗಳೊಂದಿಗೆ ಸಮುದಾಯದ ಸಹ ಭಾಗಿತ್ವ ಅಗತ್ಯ. ಕ್ಷಯ ವಾಸಿಯಾಗಬಲ್ಲ ರೋಗವಾಗಿದ್ದು, ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ರೋಗಿಗಳನ್ನು ಜನರಿಂದ ದೂರವಿಡದೆ ಮಾನವೀಯತೆಯಿಂದ ಕಾಣಬೇಕು. ರೋಗ ನಿವಾರಣೆಗೆ ಸಹಕರಿಸಬೇಕು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಚಿಕಿತ್ಸೆ ಉಚಿವ ಎಂಬ ವಿಷಯ ಮನದಟ್ಟು ಮಾಡಬೇಕು. ರೋಗ ವಾಸಿಯಾಗುವವರೆಗೆ ತಿಂಗಳಿಗೆ ರೂ.500 ನೀಡುವ ಬಗ್ಗೆಯೂ ತಿಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟರಾಮಪ್ಪ, ಪಿಡಿಒ ನಾಗರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಪೃಥ್ವಿರಾಜ್, ಅಯ್ಯಣ್ಣ, ವಿ.ರೂಪ ಇದ್ದರು.

ಸಂತ ಮೇರಿಸ್ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಸಮಾರಂಭ

ಕುಂದಾಪುರ,ಜು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಪ್ರಗತಿಪರ ಚಿಂತನೆಗಳು ಬೆಳೆದು ಬರಬೇಕು. ಪ್ರತಿಯೊಬ್ಬರೂ ದೇಶವನ್ನು ಕಟ್ಟುವ ಮತ್ತು ಉನ್ನತ ಹುದ್ದೆಗೇರಬೇಕು ಎಂದು ಪ್ರಸಿದ್ಧ ವಕೀಲರು,ಉತ್ತಮ ವಾಗ್ಮಿ,ರಾಜಕೀಯ ಧುರೀಣರು ಸಂಘಟಕರು ಆಗಿರುವ ಶ್ರೀ ಕೋಳ್ಕೆರೆ ವಿಕಾಸ್ ಹೆಗ್ಡೆಯವರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.

ಸಂತ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ವಕೀಲರಾದ ಕೋಳ್ಕೆರೆ ವಿಕಾಸ್ ಹೆಗ್ಡೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೇ ಶಿಕ್ಷಣ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು,ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ದೇಶದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಕಂಡ ಸಂಸ್ಥೆಯಾಗಿದೆ’ ಎಂದು ಕ್ರೈಸ್ತ ಮಿಷನರಿ ಸಂಸ್ಥೆಗಳನ್ನು ಹೊಗಳಿ ಹೇಳಿದರು.”ವಿದ್ಯಾರ್ಥಿಗಳು ಸ್ವ ಪ್ರಯತ್ನದಿಂದ ಉನ್ನತ ಹುದ್ದೆಗೆ ಏರಬೇಕು ಎನ್ನುತ್ತಾ ಅನೇಕ ಕ್ರಿಯಾಶೀಲ ಹಾಗೂ ಮನ ಮುಟ್ಟುವ ಮಾತುಗಳನ್ನಾಡಿ’ ಸಂಸತ್ತಿನ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂತ ಮೇರಿಸ್ ವಿದ್ಯಾಸಂಸ್ಥೆಗಳ ಸಂಚಾಲಕರು, ಧರ್ಮಗುರುಗಳಾಗಿರುವ ಅತಿ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೋ ವಹಿಸಿದ್ದು ಸಂಸತ್ತಿನ ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ, ಹರಸಿ ಅಭಿನಂದಿಸಿದರು.
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಮಿ.ಜೋಯ್ಸನ್ ಡಿಸೋಜಾ ರವರು ತನ್ನನ್ನು ಮತನೀಡಿ ಆರಿಸಿದ್ದಕ್ಕೆ ವಂದನೆ ಸಲ್ಲಿಸಿ, ಕಾಲೇಜಿನ ಅಭಿವೃದ್ಫಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಶ್ಮಾ ಫೆರ್ನಾಂಡೀಸ್ ,ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್ ರವರು, ಕಾರ್ಯಕ್ರಮದ ಸಂಯೋಜಕಿ ಪಲ್ಲವಿ ಎಮ್ ಎಚ್., ಕಾರ್ಯದರ್ಶಿ ಪ್ರಗತಿ ಹಾಗೂ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು. ಭೌತಶಾಸ್ತ್ರದ ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಪಲ್ಲವಿ ಸ್ವಾಗತಿಸಿ,ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಕು. ಪ್ರಗತಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಲಯಬದ್ಧ ಸಂಗೀತದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು,ಪ್ರಥಮ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.