ಕುಂದಾಪುರ ರೋಜರಿ ಚರ್ಚಿಗೆ ಧರ್ಮಾಧ್ಯಕ್ಷರಾದ ಡಾ|ಜೆರಾಲ್ಡ್ ಲೋಬೊರವರ ಅಧಿಕ್ರತ ಭೇಟಿ – 35 ಯುವಕ ಯುವತಿಯರಿಗೆ ದೃಢೀಕರಣ ಸಂಸ್ಕಾರ

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆ ಇವುಗಳಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ ಮಾಡಿದ್ದು ನಮಗೆ ತಿಳಿದಿದೆ” ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

  ಅವರು ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿಗೆ ತಮ್ಮ ಅಧಿಕ್ರತ ಭೇಟಿಯ ಸಂದರ್ಭ ಜೂ. 11 ಭಾನುವಾರದಂದು ದಿವ್ಯ ಬಲಿದಾನವನ್ನು ಅರ್ಪಿಸಿ “ನಮ್ಮ ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ ಆದರಿಂದ ನಾವು ಪೋಷಕರು ಮಕ್ಕಳಿಗಾಗಿ ಆದರ್ಶ ಜೀವನವನ್ನು ನಡೆಸಬೇಕು ಯುವ ಯುವತಿಯರು ಸನ್ನಡೆಯಿಂದ ನೆಡೆಯಬೇಕು” ತಿಳಿಸಿದರು ಇದೇ ಸಂದರ್ಭದಲ್ಲಿ 35 ಯುವ – ಯುವತಿಯರಿಗೆ ಅವರು ದೃಢೀಕರಣ ಸಂಸ್ಕಾರ ನೀಡಿದರು

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಸ್ರೂರು ಮೂಲದ ಧರ್ಮಗುರು ವಂ|ಕಿರಣ್ ಕೋತ್ ಬಲಿದಾನದಲ್ಲಿ ಭಾಗವಹಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಳೆದ ಸಾಲಿನ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು. ಬಿಶಪರ ಈ ಭೇಟಿ ಮೂರು ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ,  ವಿವಿಧ ಪ್ರಾರ್ಥನೆಗಳನ್ನು ನಡೆಸಿ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು ಭಾನುವಾರ ಮತ್ತು ಸೋಮವಾರ ವಿವಿಧ ಸಂಘಟನೆ, ವಿದ್ಯಾಲಯದ ಭೇಟಿ ಮತ್ತು ಸಮಾಲೋಚನ ಸಭೆಯನ್ನು ನಡೆಸುವರು.

ಕುಂದಾಪುರ  ರೋಜರಿ ಚರ್ಚಿಗೆ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಅಧಿಕ್ರತ ಭೇಟಿ – 35 ಯುವ ಯುವತಿಯರಿಗೆ ಧ್ರಡಿಕರಣ ಸಂಸ್ಕಾರ

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆಯಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ ಮಾಡಿದ್ದು ನಮಗೆ ತಿಳಿದಿದೆ” |ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

  ಅವರು ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿಗೆ ತಮ್ಮ ಅಧಿಕ್ರತ ಭೇಟಿಯ ಸಂದರ್ಭ ಜೂ. 11 ಭಾನುವಾರದಂದು ದಿವ್ಯ ಬಲಿದಾನವನ್ನು ಅರ್ಪಿಸಿ “ನಮ್ಮ ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ ಆದರಿಂದ ನಾವು ಪೋಷಕರು ಮಕ್ಕಳಿಗಾಗಿ ಆದರ್ಶ ಜೀವನವನ್ನು ನಡೆಸಬೇಕು ಯುವ ಯುವತಿಯರು ಸನ್ನಡೆಯಿಂದ ನೆಡೆಯಬೇಕು” ತಿಳಿಸಿದರು ಇದೇ ಸಂದರ್ಭದಲ್ಲಿ 35 ಯುವ – ಯುವತಿಯರಿಗೆ ಅವರು ಧ್ರಡಿಕರಣ ಸಂಸ್ಕಾರ ನೀಡಿದರು

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಸ್ರೂರು ಮೂಲದ ಧರ್ಮಗುರು ವಂ|ಕಿರಣ್ ಕೋತ್ ಬಲಿದಾನದಲ್ಲಿ ಭಾಗವಹಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಳೆದ ಸಾಲಿನ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು. ಬಿಶಪರ ಈ ಭೇಟಿ ಮೂರು ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ,  ವಿವಿಧ ಪ್ರಾರ್ಥನೆಗಳನ್ನು ನಡೆಸಿ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು ಭಾನುವಾರ ಮತ್ತು ಸೋಮವಾರ ವಿವಿಧ ಸಂಘಟನೆ, ವಿದ್ಯಾಲಯದ ಭೇಟಿ ಮತ್ತು ಸಮಾಲೋಚನ ಸಭೆಯನ್ನು ನಡೆಸುವರು.

ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚ್ಯಾ ಭೇಟೆಕ್ ಗೊವ್ಳಿಕ್ ಬಾಪಾಚೆ ಆಗಮನ್

ಕುಂದಾಪುರ್, ಜೂ. 10: ಉಡುಪಿ ದಿಯೆಸೆಜ್ ಧರ್ಮಾಧ್ಯಕ್ಷ್ ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಹಾಂಚೆಂ, ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೇಟೆ ಖಾತಿರ್, ಸನ್ವಾರಾ ಸಾಂಜೆರ್ ತಾಂಚೆಂ ಆಗಮನ್ ಜಾಲೆಂ.

   ಗೊವ್ಳಿ ಬಾಪಾಕ್ ಇಗರ್ಜೆಚ್ಯಾ ದಾರ್ವಾಟ್ಯಾರ್ ವಿಗಾರ್ ಅ|ಮಾ| ಬಾ| ಸ್ಟ್ಯಾನಿ ತಾವ್ರೊ ಝೆಲೊ ಗಾಲುನ್ ಸ್ವಾಗತ್ ಕೆಲೊ. ತಾಂಚೆಂ ಸಂಗಾತಾ ಸಹಾಯಕ್ ವಿಗಾರ್ ಮಾ|ಬಾ| ಅಶ್ವಿನ್ ಆರಾನ್ನಾ ಫಿರ್ಗಜ್ ಮಂಡಳಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ೨೦ ಅಯೋಗಾಂಚಿ ಸಂಚಾಲಕಿ ಪ್ರೇಮಾ ಡಿಕುನ್ಹಾ, ಸಾಂ. ಜೋಸೆಫ್ ಕೊವೆಂತಾಚಿಂ ವ್ಹಡಿಲ್ನ್ ಸಿಸ್ಟರ್ ಸುಪ್ರಿಯಾ ಆನಿ ಸರ್ವ್ ಫಿರ್ಗಜ್ ಲೊಕಾಂ ಸಾಂಗಾತಾ ತಾಂಕಾಂ ಮೊಗಾಚೊ ಸ್ವಾಗತ್ ದಿಲೊ.

  
    ಉಪ್ರಾಂತ್ ಗೊವ್ಳಿ ಬಾಪಾಕ್ ದೇವ್ ಪ್ರಜೆನ್ ಪುರ್ಷಾಂವಾರ್ ದೇವ್ ಮಂದಿರಾಂತ್ ಆಪವ್ನ್ ವೆಲೆಂ. ದೇವ್ ಮಂದಿರಾಂತ್ ಗೊವ್ಳಿ ಬಾಪಾಕ್ ದುಂಪವ್ನ್, ಖುರಿಸ್, ಪೆಟಲ್ಲಿ ವಾತ್ ದಿವ್ನ್ ವಿಗಾರ್ ಬಾಪ್ ಸ್ಟ್ಯಾನಿ ತಾವ್ರೊನ್ ಧಾರ್ಮಿಕ್ ರೀತಿ ರಿವಾಜಿ ಪರ್ಮಾಣೆ ಸ್ವಾಗತಾಚಿ ರೀತ್ ಚಲಯ್ಲಿ.
ಉಪ್ರಾಂತ್ ದೇವ್ ಪ್ರಜೆಕ್ ಪವಿತ್ರ್ ಉದಾಕ್ ಶೆಣಾಂವ್ನ್ ಆಶಿರ್ವಾದಿತ್ ಕೆಲೆಂ, ಗೊವ್ಳಿಕ್ ಮಂಡಳಿ ಸಾಂದ್ಯಾಕ್ ಪೆಟಲ್ಲಿ ವಾತ್ ಗೊವ್ಳಿ ಬಾಪಾನ್ ದಿಂವ್ನ್ ’ತಾಂಚೆಂ ಥಾವ್ನ್ ಉತ್ತಿಮ್ ಸೆವಾ ಮೆಳ್ಚ್ಯಾ ಪಾಸೊತ್ ಮಾಗ್ಣೆ ಕೆಲೆಂ.  ಉಪ್ರಾಂತ್ ಗೊವ್ಳಿಕ್ ಬಾಪಾನಿಂ ‘ಆಮ್ಕಾಂ ಜೆಜು ವರ್ವಿಂ ಪುನರ್ ಜಿವಂತ್ಪಣ್ ಆಸಾ, ಮರಣ್ ತತ್ಕಾಲಿಕ್, ಮರಣ್ ಆಮ್ಕಾಂ ಏಕ್ ಉತ್ರೊಣ್’ ಮ್ಹಣನ್ ತಾಣಿ ಸಂದೇಶ್ ದಿಲೊ. ಅಶೆಂ ವಿವಿಧ್ ಮಾಗ್ಣ್ಯಾ ವಿಧಿಂ ಚಲ್ಲಿ ಉಪ್ರಾಂತ್. ಸರಲ್ಯಾ ಆಮ್ಚ್ಯಾ ಮಲ್ಘಡ್ಯಾ ಪಾಸೊತ್ ಸಿಮೆಸ್ತ್ರಿಂತ್ ಮಾಗ್ಣ್ಯಾ ವಿಧಿ ಚಲವ್ನ್ ಗೊವ್ಳಿ ಬಾಪಾಂನಿ ಸಿಮಿಸ್ತ್ರ್ ಬೆಂಜಾರ್ ಕೆಲಿ. ಹ್ಯಾ ಮಾಗ್ಣ್ಯಾ ವಿಧಿಂತ್, ಗೊವ್ಳಿ ಬಾಪಾ ಸವೆಂ, ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ, ಸಹಾಯಕ್ ವಿಗಾರ್ ಸಹಾಯಕ್ ವಿಗಾರ್ ಮಾ|ಬಾ| ಅಶ್ವಿನ್ ಆರಾನ್ನಾ ವಾಂಟೊ ಘೆತ್ಲೊ. ತಶೆಂಚ್ ಸಭಾರ್ ಧರ್ಮ್ ಭಯ್ಣ್ಯೊ, ಆನಿ ಸಭಾರ್ ದೇವ್ ಪ್ರಜೆನ್ ವಾಂಟೊ ಘೆತ್ಲೊ.

ಭಾ. ರೆ. ಕ್ರಾ. ಸಂಸ್ಥೆ ಕುಂದಾಪುರ ಶಾಖೆಯಿಂದ ಕೇನ್ಸರ್ ರೋಗಿಗೆ ಹತ್ತು ಸಾವಿರ ರೂಪಾಯಿ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆ ಕೇನ್ಸರ್ ಕಾಯಿಲೆ ಯಿಂದ ಬಳಲುತ್ತಿರುವ ಜಗದೀಶ್ ಖಾರ್ವಿ ಇವರಿಗೆ ಹತ್ತು ಸಾವಿರ ರೂಪಾಯಿ ದೇಣಿಗೆ ಯನ್ನು ರೋಗಿಯ ಪುತ್ರ ನಿರಂಜನ್ ಇವರಿಗೆ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ದೇಣಿಗೆಯನ್ನು ನಮ್ಮ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ಇವರು ಕೊಡಮಾಡಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ ಆಚಾರ್ಯ ಉಪಸ್ಥಿತರಿದ್ದರು

ಕಾಲೇಜು ವಿದ್ಯಾರ್ಥಿಗಳು ತಮ್ಮ ವಯಸ್ಸಿನಲ್ಲಿಯ ಸಮಸ್ಯೆಗಳನ್ನು ಮತ್ತು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು

ಕುಂದಾಪುರ: ಕಾಲೇಜು ವಿದ್ಯಾರ್ಥಿಗಳು ಹರೆಯವು ಅಲ್ಲದ ವಯಸ್ಕರು ಅಲ್ಲದ ವಯಸ್ಸಿನವರು. ಈ ವಿಚಿತ್ರ ವಯಸ್ಸಿನಲ್ಲಿ ಬರುವಂತಹ ಸಮಸ್ಯೆಗಳನ್ನು ಮತ್ತು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು ಒಂದು ಬಾಗಿಲು ತೆರೆದಿರುತ್ತದೆ ಎಂಬುದರಲ್ಲಿ ನಂಬಿಕೆ ಇಡಬೇಕು ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಕರೆ ನೀಡಿದರು.
ಅವರು ಜೂನ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ನಕಾರಾತ್ಮಕ ನೆಲೆಯ ಮೌಲ್ಯಮಾಪನ, ಸಾಮಾಜಿಕ ಆತಂಕ ಇವೆಲ್ಲ ಸಮಸ್ಯೆಗಳು ಕಾಡುತ್ತವೆ. ಅದರಿಂದ ಹೊರಬರಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಆದರೆ ನಿಮ್ಮ ಬದುಕು ಚೆನ್ನಾಗಿ ಇರಬೇಕಾದರೆ ಈ ಸಮಸ್ಯೆ ಗಳಿಂದ ಹೊರಗೆ ಬರಲೇಬೇಕು. ಹೊರಗೆ ಬರಲು ದಾರಿಗಳು ಸಹ ನಮ್ಮೊಳಗೆ ಅಡಗಿರುತ್ತದೆ. ನಿಮ್ಮ ಸಮಸ್ಯೆಗಳ ಕುರಿತು ಸ್ನೇಹಿತರು, ಗುರುಗಳು ಅಥವಾ ಯಾರಾದರೂ ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಲ್ಲದಿದ್ದರೆ ಮನೋವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ, ಎಲ್ಲವುಗಳಿಗಿಂತ ಆತ್ಮ ಜಾಗೃತಿ, ಸಕಾರಾತ್ಮಕ ನೆಲೆಯಲ್ಲಿ ಬದುಕಿನ ಸ್ವೀಕಾರ, ಸಮಸ್ಯೆ ಬಗ್ಗೆ ಪರಿಹಾರ ಹುಡುಕಬೇಕು. ಹಾಗೆ ನಮ್ಮ ಭವಿಷ್ಯದ ನಿರ್ಣಯಕ್ಕೆ ಪೂರಕ ತಯಾರಿಗಳ ಕಡೆಗೆ ಗಮನ ಹರಿಸಬೇಕು. ಸಮತೋಲನದ ಸಾಮರ್ಥ್ಯ ಮತ್ತು ಒಳ್ಳೆಯ ಆರೋಗ್ಯವಿರಬೇಕು. ಕನಸು ಕಂಡು, ಅದರ ಮಾರ್ಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಸ್ತು, ಸಮರ್ಪಣಾ ಭಾವ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನೆಲೆಯಲ್ಲಿ ಪ್ರಯತ್ನ ಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರ ಆಚಾರಿ ವಹಿಸಿದ್ದರು.
ಮಹಿಳಾ ವೇದಿಕೆ ಸಂಯೋಜಕರಾದ ಮೀನಾಕ್ಷಿ ಎನ್ ಎಸ್. ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಯಜುಷಾ ಕಾರ್ಯಕ್ರಮ ನಿರೂಪಿಸಿ, ಫಾತಿಮಾ ಅನಾಜ್ ಅತಿಥಿಗಳನ್ನು ಪರಿಚಯಿಸಿ, ವರೇಣ್ಯ ನಾಯಕ್ ವಂದಿಸಿದರು.

ಎಂಐಟಿಕೆ ಮೂಡ್ಲಕಟ್ಟೆ : ಸಮಾಜಮುಖಿ ವಿದ್ಯಾರ್ಥಿ ಚಂದನ್ ಕುಮಾರ್

ಎಂಐಟಿ ಕುಂದಾಪುರದ ಇ ಎಂಡ್ ಸಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಚಂದನ್ ಕುಮಾರ್ ಸಿ.ಎನ್ ಓರ್ವ ಸಮಾಜಮುಖಿ ವಿದ್ಯಾರ್ಥಿಯಾಗಿದ್ದು ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ. ಕಲಿಕೆಯಲ್ಲಿ ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿರುವ ಇವರ ಸಾಮಾಜಿಕ ಕಳಕಳಿ ಪ್ರಶಂಸನೀಯ. ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಬಂದಾಗ ಚಂದನ್ ಕುಮಾರ್‍ರವರು ತುಂಬಾ ಖುಷಿಯಲ್ಲಿದ್ದರು. ವಿಚಾರಿಸಿದಾಗ ಗೊತ್ತಾಗಿದ್ದು ಏನೆಂದರೆ, ಅವರು ಬಿಡುವಿನ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಫಲಾಪೇಕ್ಷೆಯಿಲ್ಲದೆ ತರಗತಿಗಳನ್ನು ನಡೆಸಿದ್ದರು ಮತ್ತು ಆ ಮಕ್ಕಳಿಗೆ ಉತ್ತಮ ಅಂಕ ಬಂದಿರುವುದು ಇವರ ಖುಷಿಗೆ ಕಾರಣವಾಗಿತ್ತು. ಅವರ ಓದಿನಲ್ಲಿ ಯಾವ ಸಂಶಯಬಂದರೂ ಉತ್ತಮ ರೀತಿಯಲ್ಲಿ ಬಗೆಹರಿಸಿ ಉತ್ತಮ ಅಂಕ ಪಡೆಯಲು ಸಹಾಯ ಮಾಡಿರುತ್ತಾರೆ. ಅದಲ್ಲದೇ ಹಳ್ಳಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ತಿಳುವಳಿಯ ಪಾಠವನ್ನು ನಡೆಸಿರುತ್ತಾರೆ. ಹಳ್ಳಿಯ ಜನರಿಗೆ ಡಿಜಿಟಲ್ ಇಂಡಿಯಾದ ಅರಿವು ಮೂಡಿಸುವಲ್ಲಿಯೂ ಇವರು ಶ್ರಮ ವಹಿಸಿದ್ದಾರೆ. ನಮ್ಮ ಭೂಮಿ ಕುಂದಾಪುರರವರು ಹಮ್ಮಿಕೊಂಡ “ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ” ಅಭಿಯಾನದಲ್ಲಿಯೂ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ, ಅತ್ಯಂತ ಬುದ್ಧಿವಂತರಾಗಿರುವ ಇವರು ಐದಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಲ್ಲಿ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಆಯ್ಕೆ ಆಗಿರುತ್ತಾರೆ. ತಮ್ಮ ಕಾಲೇಜಾದ ಎಂಐಟಿಕೆಯ ಬಗ್ಗೆ ಹಾಗೂ ಭೋದಕ ವೃಂದದ ಬಗ್ಗೆ ಇವರಿಗೆ ಅಪಾರ ಹೆಮ್ಮೆ ಇದೆ. ಭವಿಷ್ಯದಲ್ಲಿ ಎಂಸ್ ಡಿಗ್ರಿಯನ್ನು ಪಡೆಯುವುದು ಇವರ ಹಂಬಲವಾಗಿದೆ. ಮುಂದೆಯು ಇವರು ಸಮಾಜಕ್ಕೆ ಇನ್ನಷ್ಟು ಉತ್ತಮ ಕೊಡುಗೆಯನ್ನು ನೀಡಲಿ ಎಂದು ಸಂಸ್ಥೆಯ ಪರವಾಗಿ ಹಾರೈಸುತ್ತೇವೆ.

St Agnes P U College holds orientation for I PUC students

St Agnes PU College contributes to the social and intellectual growth of every student passing through its portals. The Orientation programme for the I year students was held at St Agnes PU College on 8th June 2023 in the college auditorium. The programme commenced with a prayer song invoking God’s blessings. The programme was conducted in 2 different sessions, first for the students followed by the parents. Students and parents were introduced to the vision and mission of the college and acquainted with rules and regulations of the college through a video.The toppers of I PU Annual Examination 2023 – Ms ZynahAnjum of PCMC, Ms Athira of BEBA and Ms Alisha Thimmaiah from HEPP shared their experience in the college and exhorted the students to seize every opportunity given by the college. Principal SrNorineDSouza briefed the students about the functioning of the college and its activities.Mrs Shobha, Lecturer in Biology compered the students’ session and welcomed the students. Ms Carol, Lecturer in Mathematics proposed the vote of thanks. Further orientation was given by the class mentors to the students in their respective classrooms. The students were guided to build a strong foundation for a glorious future.

Mrs Hariet, Lecturer in Commerce compered the parents’ session. Mrs Supriya, Lecturer in Physics welcomed the gathering and introduced the Resource Person Dr Caroline D’Souza, Neuro Psychiatrist who addressed the audience on the rights of handling their wards and making a positive impact on the young minds. Mrs Veena Dsouza, Mother of Ms Riona Dsouza of PCBH, Mr MelwinCrasta , Father of AbaigailCrasta of SEBA and Mrs Bindiya Pereira, Mother of Ms Riya Pereira of HEPP shared their experience about this prestigious institution. Principal thanked the parents for being an enthusiastic and patient audience. There was a short demonstration of the college app by Mrs Shubhavani, Lecturer in Computer Science. Mrs Joanne, Lecturer in English proposed the vote of thanks.

Mrs Hariet and Ms Carol were the convenors of the programme.

ಕೇರಳಕ್ಕೆ ಮುಂಗಾರು ಪ್ರವೇಶ : ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ

ನೈರುತ್ಯ ಮುಂಗಾರು ಗುರುವಾರದಂದು ಕೇರಳದಲ್ಲಿ ಪ್ರವೇಶಿಸಿದೆ ಮುಂದಿನ 48 ಗಂಟೆಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿಸುವುದೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

    ವಾಡಿಕೆಯಂತೆ ಒಂದು ವಾರ ತಡವಾಗಿ ಮುಂಗಾರು ಪ್ರವೇಶಿಸಿದ್ದು, ಅರಬ್ಬಿ ಸಮುದ್ರದ ಮಧ್ಯಭಾಗ, ಲಕ್ಷದೀಪ, ಕೇರಳದ ಬಹುತೇಕ ಭಾಗ, ದಕ್ಷಿಣ ತಮಿಳು ನಾಡಿನ ಭಾಗಗಳು, ಮನ್ನಾರ್ ಕೊಲ್ಲಿ, ಬಂಗಾಳ ಕೊಲ್ಲಿ ಭಾಗಗಳಲ್ಲಿಯೂ ಮುಂಗಾರು ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Monsoon entry into Kerala : Monsoon rains on the coast of the state in the next 48 hours


The Southwest Monsoon entered Kerala on Thursday and the Indian Meteorological Department said that the monsoon will enter the state in the next 48 hours.
Monsoon has arrived a week late as usual, and the monsoon has intensified over central Arabian Sea, Lakshadweep, most of Kerala, parts of southern Tamil Nadu, Bay of Mannar and Bay of Bengal, the Meteorological Department said.

ಸಾಂತಾವರದ ಸರಸ್ವತಿ ಶೇರಿಗಾರ್ ನಿಧನ

ಕಂದಾವರ ಗ್ರಾಮದ ಸಾಂತಾವರದ ದಿ. ನರಸಿಂಹ ಶೇರಿಗಾರರ ಪತ್ನಿ ಸರಸ್ವತಿ (75), ಜೂನ್ 8 ರಂದು ನಿಧನರಾದರು. ಇವರು ಕೃಷಿಕರಾಗಿದ್ದು, ಇವರ ಪುತ್ರ ರತ್ನಾಕರ ಶೇರಿಗಾರ್ ಕಂದಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ದಿವಂಗತರು ಇಬ್ಬರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.