ಕೇರಳಕ್ಕೆ ಮುಂಗಾರು ಪ್ರವೇಶ : ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ

ನೈರುತ್ಯ ಮುಂಗಾರು ಗುರುವಾರದಂದು ಕೇರಳದಲ್ಲಿ ಪ್ರವೇಶಿಸಿದೆ ಮುಂದಿನ 48 ಗಂಟೆಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿಸುವುದೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

    ವಾಡಿಕೆಯಂತೆ ಒಂದು ವಾರ ತಡವಾಗಿ ಮುಂಗಾರು ಪ್ರವೇಶಿಸಿದ್ದು, ಅರಬ್ಬಿ ಸಮುದ್ರದ ಮಧ್ಯಭಾಗ, ಲಕ್ಷದೀಪ, ಕೇರಳದ ಬಹುತೇಕ ಭಾಗ, ದಕ್ಷಿಣ ತಮಿಳು ನಾಡಿನ ಭಾಗಗಳು, ಮನ್ನಾರ್ ಕೊಲ್ಲಿ, ಬಂಗಾಳ ಕೊಲ್ಲಿ ಭಾಗಗಳಲ್ಲಿಯೂ ಮುಂಗಾರು ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Monsoon entry into Kerala : Monsoon rains on the coast of the state in the next 48 hours


The Southwest Monsoon entered Kerala on Thursday and the Indian Meteorological Department said that the monsoon will enter the state in the next 48 hours.
Monsoon has arrived a week late as usual, and the monsoon has intensified over central Arabian Sea, Lakshadweep, most of Kerala, parts of southern Tamil Nadu, Bay of Mannar and Bay of Bengal, the Meteorological Department said.

ಸಾಂತಾವರದ ಸರಸ್ವತಿ ಶೇರಿಗಾರ್ ನಿಧನ

ಕಂದಾವರ ಗ್ರಾಮದ ಸಾಂತಾವರದ ದಿ. ನರಸಿಂಹ ಶೇರಿಗಾರರ ಪತ್ನಿ ಸರಸ್ವತಿ (75), ಜೂನ್ 8 ರಂದು ನಿಧನರಾದರು. ಇವರು ಕೃಷಿಕರಾಗಿದ್ದು, ಇವರ ಪುತ್ರ ರತ್ನಾಕರ ಶೇರಿಗಾರ್ ಕಂದಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ದಿವಂಗತರು ಇಬ್ಬರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಎಲ್‍ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು;ಎಂ.ಕೃಷ್ಣವೇಣಿ

ಶ್ರೀನಿವಾಸಪುರ: ಭವಿಷ್ಯದ ದೃಷ್ಟಿಯಿಂದ ಎಲ್‍ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಪಾಲಸಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವರ ವಿಶ್ವಾಸ ಗಳಿಸಬೇಕು ಎಂದು ಭಾರತೀಯ ಜೀವ ವಿಮಾ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕಿ ಎಂ.ಕೃಷ್ಣವೇಣಿ ಹೇಳಿದರು.
ಪಟ್ಟಣದ ಎಲ್‍ಐಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಎಲ್‍ಐಸಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್‍ಐಸಿ ದೇಶದ ದೊಡ್ಡ ಆರ್ಥಿಕ ಸಂಸ್ಥೆಯಾಗಿದ್ದು, ಸಮಾಜ ಸೇವೆ ಹಾಗೂ ಆರ್ಥಿಕ ಪ್ರಗತಿಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಎಲ್‍ಐಸಿ ಪ್ರಚಾರ ಮಾಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಅರಿವು ಮೂಡಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಮಹಿಳಾ ಪಾಲಿಸಿದಾರರ ಸಂಖ್ಯೆ ಹೆಚ್ಚಿಸಬೇಕು. ದುರ್ಘಟನೆಗಳು ಹೇಳಿ ಕೇಳಿ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ಎಲ್‍ಐಸಿ ಪಾಲಿಸಿದಾರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಎಲ್‍ಐಸಿ ಘಟಕದ ವ್ಯವಸ್ಥಾಪಕ ಸಿದ್ದೇಶ್ ಮಾತನಾಡಿ, ಪ್ರತಿನಿಧಿಗಳು ನಿರ್ವಹಿಸುವ ಕಾರ್ಯದ ಮೇಲೆ ಸಂಸ್ಥೆ ಭವಿಷ್ಯ ಹಾಗೂ ಜನರ ಭವಿಷ್ಯ ನಿಂತಿದೆ. ಹಾಗಾಗಿ ಇದೊಂದು ಸಮಾಜ ಸೇವಾ ಕಾರ್ಯವೆಂದು ಪರಿಗಣಿಸಿ ಹೆಚ್ಚು ಪಾಲಸಿ ಮಾಡಿಸಬೇಕು. ಜನರಲ್ಲಿ ಎಲ್‍ಐಸಿ ಕುರಿತು ತಿಳುವಳಿಕೆ ಉಂಟುಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್, ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಶ್ರೀನಿವಾಸ್, ಯೋಜನಾ ವ್ಯವಸ್ಥಾಪಕ ಆರ್.ಗುರುಕೃಷ್ಣ ಇದ್ದರು.

ಅಧಿಕಾರಿಗಳು ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು;ಜಿಲ್ಲಾ ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್

ಶ್ರೀನಿವಾಸಪುರ: ಅಧಿಕಾರಿಗಳು ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾನಾಡಿದ ಅವರು, ಸರ್ಕಾರಿ ಕಚೇರಿ ಸಿಬ್ಬಂದಿ ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡದೆ, ಅವರ ಕೆಲಸ ಮಾಡಿಕೊಡಬೇಕು ಎಂದು ಹೇಳಿದರು.
ಸಾರ್ವಜನಿಕರು ನಿರ್ಭಯವಾಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 22 ಅರ್ಜಿ ಬಂದಿವೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು 15 ದಿಗಳಲ್ಲಿ ಅರ್ಜಿಗಳ ವಿಲೆವಾರಿ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಕಾರಣ ತಿಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 11, ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 5, ಪುರಸಭೆಗೆ ಸಂಬಂಧಿಸಿದಂತೆ 1, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 1, ಭೂಮಾಪನ ಇಲಾಖೆಗೆ ಸಂಬಂಧಿಸಿದಂತೆ 1 ಹಾಗೂ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದಂತೆ 3 ಅರ್ಜಿ ಸ್ವೀಕರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಲೋಕಾಯುಕ್ತ ಇನ್ಸ್‍ಪೆಕ್ಟರ್‍ಗಳಾದ ಎಂ.ಪಿ.ಯಶವಂತ್ ಕುಮಾರ್, ಎ.ವಿ.ರೇಣುಕಾ ಇದ್ದರು.