ಮೂಡ್ಲಕಟ್ಟೆ ಎಂಐಟಿಕೆ: ಪದವಿ ಪ್ರಧಾನ ಸಮಾರಂಭ

ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ 15ನೇ ಪದವಿ ಪ್ರಧಾನ ಸಮಾರಂಭವು ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಣಿಪಾಲದಲ್ಲಿರುವ ಭಾರತದ ಪ್ರಸಿದ್ಧ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಶ್ರೀ ರತ್ನಾಕರ್ ಭಟ್‍ರವರು ಆಗಮಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಯಾವುದೇ ಕಾರ್ಯದಲ್ಲಿ ನಾವು ಯಶಸ್ಸು ಸಾಧಿಸಬೇಕಾದರೆ ಪರಿಶ್ರಮ, ತಾಳ್ಮೆ ಹಾಗೂ ಪ್ರಕ್ರಿಯೆಯು ಬಹಳ ಮುಖ್ಯವಾಗಿರುತ್ತದೆ ಎಂದರು. ಚೈನಾ ಬಿದಿರು ಹೇಗೆ ಸಮಯ ತೆಗೆದುಕೊಂಡು ಬೇರು ಸದೃಡಮಾಡಿ ನಂತರ ಒಮ್ಮೆಲೇ ಬೆಳೆಯುವಂತೆ, ನಮ್ಮ ತಯಾರಿ ಇದ್ದರೆ ಯಾರು ನಮ್ಮ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಲೇಜಿನ ಪ್ರಾಶುಂಪಾಲರಾದ ಡಾ. ಅಬ್ದುಲ್ ಕರೀಂರವರು ಮಾತನಾಡುತ್ತಾ, ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಗ್ಗೆ ಉದ್ಯೋಗದಾತರು ಕೊಟ್ಟಿರುವ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು ಅದನ್ನು ಎಲ್ಲಾ ಪದವಿಧರರು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿ ಪ್ರೋತ್ಸಾಹಿಸಿದರು. ಬಂದಿದ್ದ ಎಲ್ಲಾ ಪದವಿಧರ ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಗಣ್ಯರಿಂದ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜರವರು ಪದವಿಧರರಿಗೆ ಪ್ರತಿಜ್ನಾವಿಧಿ ಭೋಧಿಸಿದರು. ಎಲ್ಲಾ ಪದವಿಧರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಪದವಿ ಪ್ರಮಾಣ ಸಮಾರಂಭದಲ್ಲಿ ಐಎಂಜೆ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆಯವರು, ಎಲ್ಲಾ ವಿಭಾಗ ಮುಖ್ಯಸ್ಥರು, ಶಿಕ್ಷಕವೃಂದದವರು ಮತ್ತು ಪದವಿ ಪಡೆದ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರದಲ್ಲಿ ಪ್ರೊ. ತಿಲಕಲಕ್ಷ್ಮೀಯವರು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಧನ್ಯವಾದ ಸಮರ್ಪಣೆಗೈದರು. ಡೀನ್ ಟಿಪಿಐಆರ್ ಪ್ರೊ.ಅಮೃತಮಾಲಾರವರು ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ನವದೆಹಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕುಂದಾಪುರ ತಾಲೂಕು ರೆಡ್ ಕ್ರಾಸ್ ಶಾಖೆಗೆ ರಕ್ತ ಸಂಗ್ರಹದ ಬಸ್ಸ್ ಕೊಡುಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ನವ ದೆಹಲಿ ( Indian Red Cross society, national head quarter, New Delhi) ಇವರು ಕುಂದಾಪುರ ತಾಲೂಕು ಶಾಖೆಗೆ ಕೊಡಮಾಡಿದ ರಕ್ತ ಸಂಗ್ರಹದ ಬಸ್ ನ್ನು, ಕುಂದಾಪುರ ಉಪ ವಿಭಾಗಾಧಿಕಾರಿ (Asst. Commissioner) ರಶ್ಮಿ. ಎಸ್ ಆರ್ ಇವರು ಉದ್ಘಾಟಿಸಿದರು. ನಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತ್ಯನಾರಾಯಣ ಪುರಾಣಿಕ ಸೇರಿ ಮೂರು ಜನ ರಕ್ತದಾನ ಮಾಡಿದರು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು, ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಡಾ. ಸೋನಿ, ಶಾಂತಾರಾಂ ಪ್ರಭು, ಎ. ಮುತ್ತಯ್ಯ ಶೆಟ್ಟಿ, ಸದಾನಂದ ಶೆಟ್ಟಿ ಎನ್, ಎಚ್. ಸುಧಾಕರ ಶೆಟ್ಟಿ, ಡಾ. ಶಾರದಾ ವಿವೇಕ್ , ಬಿ. ಎಮ್ ಚಂದ್ರಶೇಖರ, ವೀರೇಂದ್ರ ಕುಮಾರ್ ಗಟ್ಟಲ್ ಮತ್ತು ರಕ್ತ ನಿಧಿ ಕೇಂದ್ರದ ಸಿಭಂದಿಗಳು ಉಪಸ್ಥಿತರಿದ್ದರು.
ಎ.ಸಿ. ಮೇಡಮ್ ಆಮೇಲೆ ರಕ್ತ ನಿಧಿ ಕೇಂದ್ರ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ವನ್ನು ಸಂದರ್ಶಿಸಿ, ಇಲ್ಲಿಯ ಕಾರ್ಯ ವೈಖರಿಯನ್ನು ಕೊಂಡಾಡಿದರು.

ಕುಂದಾಪುರ ವಾಲಿಬಾಲ್ ಅಕಾಡೆಮಿಯ ಉದ್ಘಾಟನೆ, ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ತರಬೇತಿಯ ಸಮಾರೋಪ

ಕುಂದಾಪುರ ವಾಲಿಬಾಲ್ ಅಕಾಡೆಮಿಯ ಉದ್ಘಾಟನೆ ಹಾಗೂ, ವಾಲಿಬಾಲ್ ಅಕಾಡೆಮಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದೆ ವಾಲಿಬಾಲ್ ತರಬೇತಿಯ ಸಮಾರೋಪ ಸಮಾರಂಭ . ಮೇ 27 . ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೂತನ ” ಕುಂದಾಪುರ ವಾಲಿಬಾಲ್ ಅಕಾಡೆಮಿ ಯ ಉದ್ಘಾಟನೆಯನ್ನು ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಯ ಮೊಕ್ತೇಸರ, ಮಾಜಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಶ್ರೀ ಜಯಾನಂದ ಖಾರ್ವಿ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಅಥ್ಲೆಟ್ ಶ್ರೀ ಪರಮೇಶ್ವರ ಖಾರ್ವಿ ಉಪ್ಪುಂದ , ಮತ್ತು ಹುಣ್ಸೆಮಕ್ಕಿಯ ವಾಲಿಬಾಲ್ ಪ್ರೋತ್ಸಾಹಕ ಶ್ರೀ ಸಂದೇಶ್ ಜೋಗಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ರೀಡಾಧಿಕಾರಿ ಶ್ರೀ ಕುಸುಮಾಕರ್ ಶೆಟ್ಟಿ, ದೈಹಿಕ ಶಿಕ್ಷಕ , ತರಬೇತುದಾರ ಜೀವನ್ ಕುಮಾರ್ ಶೆಟ್ಟಿ, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಶ್ರೀ ರಮಾನಂದ .ಕೆ . ದೈಹಿಕ ಶಿಕ್ಷಕ , ಕೋಚ್ ಶ್ರೀ ಗಣೇಶ್ ಶೆಟ್ಟಿ ಕಟ್ಕೆರೆ, ಗೋಲ್ಡನ್ ಮಿಲ್ಲರ್ ಸ್ಪೋರ್ಟ್ಸ್ ಕ್ಲಬ್ ವಡೇರಹೋಬಳಿ ಅಧ್ಯಕ್ಷ ಶ್ರೀ ಕೃಷ್ಣ ಪೂಜಾರಿ, ದೈಹಿಕ ಶಿಕ್ಷಕ ಶ್ರೀ ಸತ್ಯಾನಂದ್ ಸಾಲಿನ್ಸ್, ವಾಲಿಬಾಲ್ ಅಕಾಡೆಮಿಯ ಮಹಮ್ಮದ್ ಸಮೀರ್, ಇಲಿಯಾಸ್.ಬಿ. ಮೆಲ್ವಿನ್ ರೆಬೆಲ್ಲೊ, ಶ್ರೀಧರ್ ಆಚಾರ್, ವಿಖ್ಯಾತ್ ಕಂಡ್ಲೂರ್, ಜೋಯ್ ಜೆ ಕರ್ವಾಲೋ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಶಿಬಿರಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಪಂದ್ಯಾಟಗಳನ್ನು ಏರ್ಪಡಿಸಿ ಪಾರಿತೋಷಕಗಳನ್ನು ವಿತರಿಸಲಾಯಿತು.

ಕುಂದಾಪುರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಈರಯ್ಯ. ಬಿ. ಬಹುಮಾನ ವಿತರಿಸಿದರು. 14 ರಿಂದ 19 ವಯಸ್ಸಿನ ಸುಮಾರು 45 ಹುಡುಗರು ತರಬೇತಿಯಲ್ಲಿ ಭಾಗವಹಿಸಿದ್ದರು.ಶ್ರೀ ಹನೀಫ್ ವೀಕ್ಷಕ ವಿವರಣೆ ಗೈದು, ಇಲಿಯಾಸ್ ಬಿ. ಕಾರ್ಯಕ್ರಮ ನಿರ್ವಹಿಸಿದರು.