ಪಿಯುಸ್ ನಗರ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾರವರ  ಗುರುದೀಕ್ಷೆಯ 26 ನೇ ವರ್ಷದ ಸಂಭ್ರಮ


ಕುಂದಾಪುರ, ಎ.18: ಪಿಯುಸ್ ನಗರ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾರ ಗುರುದೀಕ್ಷೆಯ 26 ನೇ ವರ್ಷದ ಸಂಭ್ರಮವನ್ನು ಎ.17 ರಂದು ಪಿಯುಸ್ ನಗರ ಧರ್ಮಕೇಂದ್ರದವರು ಆಚರಿಸಿದರು.
ವಂ|ಆಲ್ಬರ್ಟ್ ಕ್ರಾಸ್ತಾ ಅವರು, ವಂ|ವಾಲ್ಟರ್ ಡಿಮೆಲ್ಲೊ ಇವರ ಸಹಭಾಗಿತ್ವದೊಂದಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಧರ್ಮಕೇಂದ್ರದ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಧರ್ಮಗುರುಗಳ ಒಳಿತಿಗಾಗಿ ಪ್ರಾರ್ಥಿಸಿ ಶುಭ ಹಾರೈಸಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಧರ್ಮಗುರುಗಳು ಕೇಕ್ ಕತ್ತರಿಸಿ, ತಮ್ಮ ಸಂಭ್ರಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆಮ್ಸ್ ಡಿಮೆಲ್ಲೊ ಎಲ್ಲರ ಪರವಾಗಿ ಶುಭ ಕೋರಿದರು ಹೂ ಗುಚ್ಚ ನೀಡಿ ಗೌರವಿಸಿದರು. ಚರ್ಚಿನ ಗಾಯನ ಮಂಡಳಿ ಸದಸ್ಯರು ಶುಭಾಶಯ ಗೀತೆಯನ್ನು ಹಾಡಿದರು.
ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ಮಾತನಾಡಿ ತಮ್ಮ ಸಂತೋಷವನ್ನು ಮನದಾಳದ ಮಾತುಗಳಿಂದ ವ್ಯಕ್ತಪಡಿಸುತ್ತಾ, ‘ನನಗೊಂದು ಉತ್ತಮ ಧರ್ಮಕೇಂದ್ರ ಲಭಿಸಿದೆ, ಇಲ್ಲಿಯ ಜನರು ಪ್ರೀತಿ ವಿಶ್ವಾಸದಿಂದ ಕೂಡಿ, ನನಗೆ ಅತ್ಯಂತ ಆತ್ಮೀತೆಯಿಂದ ಸಹಕರಿಸುತ್ತಾರೆ. ಇಂದು ನನ್ನ ಗುರುದೀಕ್ಷೆಯ 26 ನೇ ವಾರ್ಷಿಕ ಶುಭ ದಿನವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಕ್ಕಾಗಿ, ನನ್ನ ಹ್ರದಯ ಸಂತೋಷದಿಂದ ತುಂಬಿ ಬಂದಿದೆ. ನಿಮಗೆಲ್ಲರಿಗೂ ನನ್ನ ಹ್ರದಯಂತರಾಳದ ಕ್ರತ್ಞತೆಗಳು. ನನ್ನ ಮುಂದಿನ ಈ ಸೇವಾವಧಿಯಲ್ಲಿ ವಿಶ್ವಾಸದಿಂದ ಸೇವೆಯನ್ನು ಅರ್ಪಿಸಲು, ದೇವರು ನನಗೆ ಅನುಗ್ರಹಿಸುವಂತೆ, ನನಗಾಗಿ ಪ್ರಾರ್ಥಿಸಿರಿ’ ಎಂದು ಭಿನ್ನವಿಸಿಕೊಂಡರು.
ಈ ಸಂಭ್ರಮದಲ್ಲಿ ಸೈಂಟ್ ಆ್ಯನ್ಸ್ ಕಾನ್ವೆಂಟಿನ ಧರ್ಮಭಗಿನಿಯರು ಪಾಲ್ಗೊಂಡಿದ್ದು, ಭಕ್ತಾಧಿಗಳು ಹೂ ಗುಚ್ಚ ನೀಡಿ ಧರ್ಮಗುರುಗಳಿಗೆ ಶುಭಾಶಯಗಳನ್ನು ಅರ್ಪಿಸಿದರು. ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. 20 ಆಯೋಗಗಳ ಸಂಚಾಲಕಿ ಶ್ರೀಮತಿ ಲೀನಾ ತಾವ್ರೊ ಧನ್ಯವಾದಗಳನ್ನು ಅರ್ಪಿಸಿದರು.

ಗೆಳೆಯರ ಬಳಗ ಹಂಗ್ಳೂರು ಅಧ್ಯಕ್ಷ ವಿ. ಬಾಬು ಶೆಟ್ಟಿ ನಿಧನ


ತಮ್ಮ ಸಮಾಜ ಸೇವೆ, ಸಾಮಾಜಿಕ ಚಟುವಟಿಕೆಗಳಿಂದ ಖ್ಯಾತರಾದ “ಬಾಬಣ್ಣ” ಎಂದೇ ಕರೆಯಲ್ಪಡುತ್ತಿದ್ದ ಗೆಳೆಯರ ಬಳಗ ಹಂಗ್ಳೂರು ಸಂಸ್ಥೆಯ ಅಧ್ಯಕ್ಷ ವಿ. ಬಾಬು ಶೆಟ್ಟಿ (81) ಇವರು ಕೋಟೇಶ್ವರ ಅಂಕದಕಟ್ಟೆಯ ಸ್ವಗೃಹದಲ್ಲಿ ಸೋಮವಾರ ಎ. 17ರಂದು ನಿಧನರಾದರು.
ಗಳೆಯರ ಬಳಗ ಹಂಗ್ಳೂರು ಸಂಘ ಸ್ಥಾಪನೆಯಾದ 1965 ರಿಂದ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಇವರು 58 ವರ್ಷಗಳಿಂದ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಂಗ್ಳೂರು ವಿನಾಯಕ ಟಾಕೀಸ್ ಬಳಿ, ಸಂಘದ ಸ್ವಂತ ಕಟ್ಟಡದ ನಿರ್ಮಾಣಗೊಂಡ ನಂತರ ಶಿಕ್ಷಣ, ಸಂಗೀತ, ನಾಟಕ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ಚಟುವಟಿಕೆ ನಡೆಸುವ ಕೇಂದ್ರವನ್ನಾಗಿ ಗೆಳೆಯರ ಬಳಗವನ್ನು ರೂಪಿಸಿದವರು ಬಾಬು ಶೆಟ್ಟಿಯವರು.
ಸಂಗೀತ ಭಾರತಿ ಸಂಸ್ಥೆಗೆ 20 ವರ್ಷಗಳ ಕಾಲ ಸಂಗೀತ ಶಾಲೆ ನಡೆಸಲು ಅವಕಾಶ ನೀಡಿದ್ದರು. ಮಕ್ಕಳಿಗಾಗಿ ಬಾಲವಾಡಿ ನಡೆಸುತ್ತಿದ್ದರು. ಶಿಶು ಮಂದಿರ ಆರಂಭಿಸಿದರು. ಸಾಹಿತ್ಯಾಸಕ್ತರಿಗಾಗಿ ಗ್ರಂಥಾಲಯ ಮಾಡಿದ್ದರು. ಇವರ ನೇತೃತ್ವದಲ್ಲಿ ರಂಗ ಭೂಮಿ ಚಟುವಟಿಕೆಗೆ ಬಹಳ ಪ್ರೋತ್ಸಾಹ ದೊರೆತು, ಪ್ರತಿಭಾವಂತರು ಅಭಿನಯಿಸಿದ ನಾಟಕ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿತ್ತು.
ಗೆಳೆಯರ ಬಳಗದಲ್ಲಿ ಕೋಟ ಶಿವರಾಮ ಕಾರಂತರೂ ಸೇರಿ ಹಿರಿಯ ಸಾಹಿತಿಗಳು, ಸಂಗೀತಗಾರರು, ಕಲಾವಿದರು, ಸಾಧಕರನ್ನು ಕರೆದು ಗೌರವಿಸಿದರು. ಬಾಬು ಶೆಟ್ಟಿಯವರ ಸೇವೆಗೆ ಹಲವಾರು ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ. ರಾಜ್ಯೋತ್ಸವದ ದಿನ ಜಿಲ್ಲಾ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗಿದೆ.
ಬಾಬು ಶೆಟ್ಟಿಯವರು ಅವಿವಾಹಿತರಾಗಿದ್ದರೂ ಹಂಗ್ಳೂರು, ಕುಂದಾಪುರ, ಕೋಟೇಶ್ವರ ಪರಿಸರದ ನೂರಾರು ಮನೆಯವರಿಗೆ ಆತ್ಮೀಯರಾಗಿದ್ದು, ಎಲ್ಲಾ ಸಮಾರಂಭಗಳಲ್ಲೂ ಆಹ್ವಾನಿಸಲ್ಪಡುತ್ತಿದ್ದರು. ಇವರ ಅಗಲಿಕೆ ಸಾಮಾಜಿಕ, ಸಾಂಸ್ಕøತಿಕ ಲೋಕದ ಸಾಧಕರನ್ನು ಕಳೆದುಕೊಂಡಂತಾಗಿದೆ.
ಇವರು ಬರೆದು ಪ್ರಕಟಿಸಿದ ತಮ್ಮ ಆತ್ಮ ವೃತ್ತಾಂತ “ನಾನಾರೆಂಬುದು ನಾನಲ್ಲ” ಬಹಳ ಜನಪ್ರಿಯವಾಯಿತು. ಇವರ ನಿಧನಕ್ಕೆ ಹಲವು ಗಣ್ಯರು, ಸಂಘ-ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.

ಕುಂದಾಪುರ : ಧರ್ಮಭಗಿನಿ ಮೊನಿಕಾರ ಧಾರ್ಮಿಕ ವ್ರತ್ತಿಯ ಸುವರ್ಣ ಮಹತೋತ್ಸವ


ಕುಂದಾಪುರ, ಎ.17: ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಕಡೆಯ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇದೀಗ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ತಮ್ಮ ನಿವ್ರತ್ತಿ ಜೀವನವನ್ನು ಸಾರುತ್ತಾ ಕಾನ್ವೆಂಟ್ ಮತ್ತು ಕುಂದಾಪುರ ರೋಜರಿ ಚರ್ಚಿನಲ್ಲಿ ಧಾರ್ಮಿಕ ಸೇವೆ ನೀಡುತ್ತಿರುವ ಧರ್ಮಭಗಿನಿ ಮೊನಿನಿಕಾರು ಧಾರ್ಮಿಕ ದೀಕ್ಷೆಯ ಸುವರ್ಣ ಮಹತೋತ್ಸವವನ್ನು ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿಯರು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
ಪವಿತ್ರ ಬಲಿದಾನದ ನೇತ್ರತ್ವವನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿಕೊಂಡಿದ್ದು, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ದೇವರ ವಾಕ್ಯವನ್ನು ವಿಮರ್ಶಿಸಿ “ಸಿಸ್ಟರ್ ವೆರೊನಿಕಾರಿಗೆ ಯೇಸು ಕ್ರಿಸ್ತರು ತನ್ನ ಧರ್ಮಸಭೆಯಲ್ಲಿ ಸೇವೆ ನೀಡಲು ಆರಿಸಿಲ್ಪಟ್ಟವರಾರಿದ್ದು, ಹೀಗೆ ಧರ್ಮಭಗಿನಿಯಾದ ಮೇಲೆ ಯೇಸುಕ್ರಿಸ್ತರಿಗಾಗಿ ಸಮರ್ಪಿತ ಜೀವನ ಸಾರಿದವರು. ಅವರು ಧರ್ಮಭಗಿನಿಯ ಜೀವನ ಸಾರುವಾಗ, ಶಿಕ್ಷಣ, ಧಾರ್ಮಿಕ ಸೇವೆ, ಧರ್ಮಗುರುಗಳು ಪವಿತ್ರ ಬಲಿದಾನ ಅರ್ಪಿಸುವ ಮುನ್ನ ಅವರು ಮಾಡುವ ವ್ಯವಸ್ಥೆ, ದೇವ ಪೀಠದ ಹಿಂದಿನ ಕೋಣೆಯಲ್ಲಿನ ಏರ್ಪಾಟು ಇಂತಹ ವಿವಿಧ ಥರಹದ ಸೇವೆಗಳನ್ನು ನೀಡಿದ್ದು, ಈವಾಗಲೂ ನೀಡುತ್ತಾ ಇರುವ ಸಿಸ್ಟರ್ ಮೊನಿಕಾರ ಬದುಕು ದೇವರ ಮೆಚ್ಚುಗೆಗೆ ಪಾತ್ರವಾಗಿದೆ, ಅವರು ಧಾರ್ಮಿಕ ವತ್ತಿಯ ದೀಕ್ಷೆ ಪಡೆಯುವಾಗ ಸರಳತೆ, ಸಮರ್ಪಣೆ, ತ್ಯಾಗ ಈ ಮೂರು ಆದರ್ಶತೆಯ ಧ್ಯೇಯದೊಂದಿಗೆ ಜೀವನ ಸಾಗಿಸುತ್ತೇನೆ’ ಎಂದು ಪ್ರತಿಜ್ಞಾವಿಧಿಯನ್ನು ಮಾಡಿದ್ದರು, ಅವರು ಇಂದಿಗೂ ಅದೇ ಧೇಯ್ಯದೊಂದಿಗೆ ಜೀವಿಸಿದ್ದಾರೆ” ಎಂದು ಬಣ್ಣಿಸಿದರು.
ತದ ನಂತರ ನಡೆದ ಚರ್ಚಿನ ಸಭಾಭವನದಲ್ಲಿ ನಡೆದ ಅಭಿನಂದ ಸಮಾರಂಭದಲ್ಲಿ ಕುಂದಾಪುರ ಕಾನ್ವೆಂಟಿನ ಹಿರಿಯ ಧರ್ಮಭಗಿನಿ ಸಿಸ್ಟರ್ ಆಶಾ “ಸಿಸ್ಟರ್ ಮೊನಿಕಾರು ನಮಗೆಲ್ಲರಿಗೂ ಆದರ್ಶಪ್ರಾಯರು, ಅವರೊಬ್ಬ ಉತ್ತಮ ಶಿಕ್ಷಕಿಯಾಗಿದ್ದು, ಅಪಾರ ದೈವ ಭಕ್ತಿಯುಳ್ಳವರು, ಅವರ ಮುಂದಿನ ಜೀವನದಲ್ಲಿ ದೇವರು ಇನ್ನೂ ಹೆಚ್ಚಿನ ಸೇವೆ ಮಾಡಲು ಶಕ್ತಿ ನೀಡಲಿ” ಎಂದು ಶುಭ ಕೋರಿದರು.
ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥೆ ಸಿಸ್ಟರ್ ಶಮಿತಾ “ಸಿಸ್ಟರ್ ಮೊನಿಕಾರನ್ನು ಎಲ್ಲ ಧರ್ಮಭಗಿನಿಯರು ಗೌರವ ಭಾವದಿಂದ ನೋಡುತ್ತಾರೆ, ಅವರು ಶಿಸ್ಯರು ಮೆಚ್ಚಿದ ಸಿಸ್ಟರ್, ಅವರ ವಿದ್ಯಾರ್ಥಿಗಳು ನಮಗೆ ಗಣಿತ ಕಲಿಸಿದ ಶಿಕ್ಷಕಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರು ವಿದ್ಯಾರ್ಥಿಗಳಿಗೆ ಮನದಟ್ಟಾಗುವಹಾಗೆ ಕಲಿಸುವುದು ಅವರ ವೈಶಿಷ್ಠತೆ, ಧಾರ್ಮಿಕ ವ್ರತ್ತಿಯಲ್ಲಿ ಕೂಡ ಆದರ್ಶರು, ಧರ್ಮಭಗಿನಿಯಾಗಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಯೇಸು ಕ್ರಿಸ್ತರಿಗಾಗಿ ಸಮರ್ಪಿಸಿಕೊಂಡವರು” ಎಂದು ಅವರನ್ನು ಗೌರವಿಸಿದರು.
ಕುಂದಾಪುರ ರೋಜರಿ ಚರ್ಚ್ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ‘ಸಿಸ್ಟರ್ ಮೊನಿಕಾರ ಬಗ್ಗೆ ಹೇಳುವಾಗಾ ಅವರು ಒರ್ವ ಮಹಾ ತಾಯಿ ಹಾಗೇ ಕಾಣುತ್ತಾರೆ, ಅವರು ಈ ಪ್ರಾಯದಲ್ಲಿಯೂ ಅವರು ನಾವು ಧರ್ಮಗುರುಗಳು ಬಲಿದಾನ ಅರ್ಪಿಸುವ ಮುನ್ನ ಅವರು ಮಾಡುವ ಸೇವೆ ಬಹು ಅಮೂಲ್ಯ” ಎಂದು ಹೇಳಿದರು. ಸಿಸ್ಟರ್ ಮೊನಿಕಾ ಇವರ ಕುಟುಂಬದ ಪರವಾಗಿ ಪ್ರಿನ್ಸಿಟಾ ಡಿಸೋಜಾ ಶುಭ ಹಾರೈಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಸಿಸ್ಟರ್ ಮೊನಿಕಾರವರನ್ನು ಸಂತ ಜೋಸೆಫ್ ಕಾನ್ವೆಂಟ್ ಪರವಾಗಿ, ಕುಂದಾಪುರ ಹೋಲಿ ರೋಜರಿ ಚರ್ಚ್ ಪರಾವಾಗಿ, ಕುಟುಂಬದ ಪರವಾಗಿ ಸಿಸ್ಟರ್ ಮೊನಿಕಾರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿಸ್ಟರ್ ಮೊನಿಕಾರ 75 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಸಿಸ್ಟರ್ ಮೊನಿಕಾ ಈ ಸಂಭ್ರಮವನ್ನು ಏರ್ಪಡಿಸಿ ನಡೆಸಿಕೊಟ್ಟದಕ್ಕೆ, ಮತ್ತು ನನ್ನ ಧರ್ಮಭಗಿನಿಯ ಜೀವನವನ್ನು ನಡೆಸಲು ಸಾಗಿಸಲು ಸಹಕರಿಸಿದವರಿಗೆಲ್ಲರಿಗೂ ಸ್ಮರಿಸಿ, ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಆಚರಣೆಯಲ್ಲಿ ಕೋಟ ಚರ್ಚಿನ ಧರ್ಮಗುರು ವಂ|ಆಲ್ಫೊನ್ಸ್ ಡಿಲೀಮಾ. ಕಟ್ಕೆರೆ ಬಾಲ ಯೇಸುವಿನ ಆಶ್ರಮದ ಧರ್ಮಗುರು ವಂ| ಫ್ರಾನ್ಸಿಸ್ ಡಿಸೋಜಾ, ಹಲವಾರು ಉಡುಪಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಭಗಿನಿಯರು ಕುಟುಂಬಸ್ಥರು, ಕುಂದಾಪುರ ಚರ್ಚಿನವರು ಹಾಜರಿದ್ದರು ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಂಗೀತ ಸ್ವಾಗತಿಸಿದರು, ಸಿಸ್ಟರ್ ಪ್ರೇಮಿಕಾ ನಿರೂಪಿಸಿದರು.

ಪೋಲಿಸರ ನಿರ್ಲಕ್ಷತೆಯಿಂದ 6 ವರ್ಷ ಕುಟುಂಬದಿಂದ ದೂರವಾದ ಪಾಂಡಿಚೇರಿಯ ಯುವತಿ

ಮಂಗಳೂರಿನ ಸುರತ್ಕಲ್ ನಲ್ಲಿ ಪಾಂಡಿಚೇರಿಯ ಕುಟುಂಬವೊಂದು ದಿನಗೂಲಿ ಮಾಡಿ ಜೀವಿಸುತ್ತಿತ್ತು . 2017ರಲ್ಲಿ ಕಲ್ಯಾಣಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದುರದೃಷ್ಟವಶಾತ್, ಪೊಲೀಸರು ಅವರ ದೂರನ್ನು ಸ್ವೀಕರಿಸಲಿಲ್ಲ ಮತ್ತು ತಂದೆಯೂ ಅಪಘಾತಕ್ಕೊಳಗಾಗಿ ಮರಣ ಹೊಂದಿದರು.ತದನಂತರ ಅಸಹಾಯಕ ತಾಯಿ ಮತ್ತು ಮಗ ಪಾಂಡಿಚೇರಿಗೆ ಹಿಂತಿರುಗಿದರು. ಕಲ್ಯಾಣಿಯ ಹುಡುಕಾಟ ಮತ್ತು ಆಕೆ ಮರಳಿ ಬರುವ ಭರವಸೆ ಅವರಲ್ಲಿ ಬಲವಾಗಿತ್ತು. ಕಲ್ಯಾಣಿಯನ್ನು ಮತ್ತೆ ಪಡೆಯುವ ಅವರ ವಿಶ್ವಾಸವು ಆಕೆಯು ಕಾಣೆಯಾಗಿ 6 ​​ವರ್ಷಗಳ ನಂತರ ಮಂಜೇಶ್ವರದ ಸ್ನೇಹಾಲಯದ ಮೂಲಕ ನಿಜವಾಯಿತು.


2017ರಲ್ಲಿ ನಾಪತ್ತೆಯಾಗಿದ್ದ ಕಲ್ಯಾಣಿಯನ್ನು ಕಂಕನಾಡಿ ಪೊಲೀಸರು ರಕ್ಷಿಸಿ ಪ್ರಜ್ಞಾ ಕೇಂದ್ರಕ್ಕೆ ಕರೆತಂದಿದ್ದರು. ಮತ್ತು
2023 ಎಪ್ರಿಲ್‌ನಲ್ಲಿ ಆಕೆ ಐದು ವರ್ಷಗಳಿಗೂ ಹೆಚ್ಚು ಕಾಲ ಆಶ್ರಯದಲ್ಲಿದ್ದ ಪ್ರಜ್ಞಾ ಕೇಂದ್ರದಿಂದ ಮಂಜೇಶ್ವರದ
ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಆಕೆಯ ಮನೋವೈದ್ಯಕೀಯ ಸಮಸ್ಯೆಗಳ ಚಿಕಿತ್ಸೆಗಾಗಿ ಸ್ಥಳಾಂತರಗೊಂಡಳು. ಆಕೆಗೆ ಚಿಕಿತ್ಸೆಯ ಜೊತೆಗೆ ಸ್ನೇಹಾಲಯ ತಂಡವು ವಿವಿಧ ಚಿಕಿತ್ಸಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿತು. ಆಕೆಯಿಂದ ಕೆಲವು ವಿವರಗಳನ್ನು ಪಡೆದ ನಂತರ, ತಂಡವು ಸ್ಥಳೀಯ ಸಂಸ್ಥೆ ಮತ್ತು ಪಾಂಡಿಚೇರಿಯ ಜನರನ್ನು ಸಂಪರ್ಕಿಸಿ ಆಕೆಯ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು . ಅಸಹಾಯಕ
ತಾಯಿ ಮತ್ತು ಮಗನ ಭರವಸೆ, ನಂಬಿಕೆ ಮತ್ತು ಕಲ್ಯಾಣಿ ಯನ್ನು ಹಿಂಪಡೆಯುವ ಕಾಯುವಿಕೆ ಸುಳ್ಳಾಗಲಿಲ್ಲ.ಅವರು ತಮ್ಮ ಪ್ರೀತಿಯ ಕಲ್ಯಾಣಿಯನ್ನು ಮತ್ತೆ ಸೇರಿಕೊಂಡರು . ಅವರಿಗೆ ಸ್ನೇಹಾಲಯದಿಂದ ಕರೆ ಬಂದಿತು ಮತ್ತು ಅವರು ಸ್ನೇಹಾಲಯವನ್ನು ತಲುಪಲು ಕೇರಳಕ್ಕೆ ತೆರಳಿದರು. ಕಲ್ಯಾಣಿ ತನ್ನ ಪ್ರೀತಿಯ ಕುಟುಂಬದೊಂದಿಗೆ ಮತ್ತೆ ಒಂದಾಗುತ್ತಿದ್ದಂತೆ ಸ್ನೇಹಾಲಯ ಕುಟುಂಬವು ಇಂತಹ ಉತ್ತಮ ಮತ್ತು ಸಂತೋಷದ ಕ್ಷಣಕ್ಕೆ ಸಾಕ್ಷಿಯಾಯಿತು.
ಕಲ್ಯಾಣಿಯ ಪುನರ್ಮಿಲನದಲ್ಲಿ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ
ಜೋಸೆಫ್ ಕ್ರಾಸ್ತಾ ಅವರಿಗೆ ಕಲ್ಯಾಣಿ ಮತ್ತು ಅವರ ಕುಟುಂಬ ಕೃತಜ್ಞತೆ ಸಲ್ಲಿಸಿತು.

ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ದೆ ಕುಂದಾಪುರ ರೋಜರಿ ಚರ್ಚ್ ಆವರಣದಲ್ಲಿ ಕ್ರೈಸ್ತರ ಭೇಟಿ


ಕುಂದಾಪುರ.ಎ.16: ಮುಂಬರುವ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಕುಂದಾಪುರ ಚರ್ಚ್ ಆವರಣಕ್ಕೆ ಬಂದು ಕ್ರೈಸ್ತ ಮತ ಭಾಂದವರಿಗೆ ಭೇಟಿ ನೀಡಿ ತಮಗೆ ಮತ ಹಾಕಿ ಬಹುಮತದಲ್ಲಿ ಆರಿಸಿ ವಿಧಾನ ಸಭೆಗೆ ಕಳುಹಿಸಿಕೊಡಬೇಕಾಗಿ ವಿನಂತಿಸಿಕೊಂಡರು.
“ನಾನು ಚುನಾವಣೆಗೆ ನಾಮ ಪತ್ರವನ್ನು ಸಲ್ಲಿಸಿದ್ದೇನೆ, ನನ್ನ ಗೆಲುವಿಗಾಗಿ, ನಾನು ದೇವಾಲಯಗಳಿಗೆ ಭೇಟಿ ಮಾಡಿದ್ದೇನೆ, ಈಗ ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಹೋಲಿ ರೋಜರಿ ಮಾತೆಯ ಆಶಿರ್ವಾದ ಪಡೆಯಲು ಬಂದಿದ್ದೇನೆ, ರೋಜರಿ ಮಾತೆ ನನಗೆ ಆಶಿರ್ವದಿಸುತ್ತಾಳೆಂದು ನನ್ನ ನಂಬಿಕೆ, ಹಾಗೇ ಕ್ರೈಸ್ತ ಭಾಂಧವರು ನನ್ನನ್ನು ಮತ ಹಾಕಿ ಆಶಿರ್ವದಿಸಬೇಕೆಂದು, ಎಲ್ಲರಲ್ಲೂ, ವಿನಂತಿಸಿಕೊಳ್ಳುತ್ತೇನೆ” ಎಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ “ಕಾಂಗ್ರೆಸ್ ಪಕ್ಷ ಎಲ್ಲರನೂ ಒಂದೇ ಸಮಾನವಾಗಿ ಕಾಣುತ್ತೆ, ನಮ್ಮದು ಜಾತ್ಯಾತೀತ ಪಕ್ಷ, ನಮ್ಮ ಪಕ್ಷ ಎಲ್ಲಾ ಜಾತಿ ಮತ, ಧರ್ಮ ಬಾಂಧವರೊಂದಿಗೆ ಇರುವ ಪಕ್ಷ, ಇಂತಹ ಪಕ್ಷವನ್ನು ಬಹುಮತದಲ್ಲಿ ಗೆಲ್ಲಿಸಿ, ರಾಜ್ಯದಲ್ಲಿ ಸುಭದ್ರ ಸರಕಾರ ಬರುಂವಂತೆ, ಸಹಕರಿಸಬೇಕು ಎಂದು ನಮ್ಮ ಇಚ್ಚೆ” ಎಂದು ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಅವರ ದಿನೇಶ್ ಹೆಗ್ಡೆಯವರ ತಮ್ಮ ಮಹೇಶ್ ಹೆಗ್ಡೆ, ಸ್ಥಳೀಯ ಕಾಂಗ್ರೆಸ್ ನಾಯಕರು, ವಿನೋದ್ ಕ್ರಾಸ್ಟೊ, ಶಾಲೆಟ್ ರೆಬೆಲ್ಲೊ, ಆಶಾ ಕರ್ವಾಲ್ಲೊ, ಜೇಕಬ್ ಡಿಸೋಜಾ, ಸುವರ್ಣ ಆಲ್ಮೇಡಾ, ಸ್ಟೀವನ್ ಡಿಕೋಸ್ಟಾ, ಬರ್ನಾಡ್ ಡಿಕೋಸ್ಟಾ, ಮುಂತಾದವರು ಉಪಸ್ಥಿತರಿದ್ದರು.

ಕುಂದಾಪುರ : ಉಡುಪಿ ಧರ್ಮಪ್ರಾಂತ್ಯದ ನೂತನ ಮೊನ್ಸಿಜೆಂರ್ ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರ ಭೇಟಿ


ಕುಂದಾಪುರ: ಮೂಲತಹ ಕುಂದಾಪುರದವರಾದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿ ನೂತನವಾಗಿ ಆರಿಸಲ್ಪಟ್ಟ ಅ|ವಂ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಅಧಿಕ್ರತವಾಗಿ, ಅವರ ಮಾತ್ರ ಇಗರ್ಜಿಯಾದ ಹೋಲಿ ರೋಜರಿ ಚರ್ಚಿಗೆ ಭೇಟಿ ನೀಡಿ “ದೈವಿಕ ಕ್ರಪೆ” ಯ ಹಬ್ಬದ ಬಲಿದಾನವನ್ನು ಅರ್ಪಿಸಿ, ‘ದೈವಿಕ ಕ್ರಪೆ’ ಯ ಬಗ್ಗೆ ಸಂದೇಶ ನೀಡಿ, ದೇವರು ಮಹಾ ಕ್ಷಮಾ ಭರಿತರು, ಅವರು ಎಲ್ಲಾ ಪಾಪಿಗಳನ್ನು ಕ್ಷಮಿಸುತ್ತಾರೆ, ಹಾಗೇ ನಾವೂ ಕೂಡ ನಮ್ಮಗೆ ಅನ್ಯಾಯ, ಕಷ್ಟ, ಹಿಂಸೆ, ತೊಂದರೆ ಕೊಟ್ಟವರಿಗೆ ಕ್ಷಮೆ ನೀಡಬೇಕು’ ಎಂದು ಸಂದೇಶ ನೀಡಿದರು.
ಧರ್ಮಪ್ರಾಂತ್ಯಕ್ಕೆ ಬಿಷಪ್‍ರವರು ಪ್ರಧಾನರಾದರೆ, ಮೊನ್ಸಿಜೆಂರ್ ವಿಕಾರ್ ಜನರಲ್‍ರವರು ಎರಡನೇ ಸ್ಥಾನದಲ್ಲಿರುತ್ತಾರೆ. ಅಂತಹಾ ಮಹತ್ವದ ಹುದ್ದೆಯನ್ನು ನಮ್ಮ ರೋಜರಿ ಮಾತಾ ಚರ್ಚಿನವರೇ ಆದ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಪಡೆದುಕೊಂಡಿದ್ದಾರೆ. ಇದು ನಮಗೆ ಹೆಮ್ಮೆ ಮತ್ತು ಗೌರವ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಕುಂದಾಪುರ ಚರ್ಚಿನವರೇ ಆದ ಪ್ರಸ್ತೂತ ಇಟೆಲಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಂ|ಫಾ|ಮನೋಜ್ ಬ್ರಗಾಂಜಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇವರೊಂದಿಗೆ, ಚರ್ಚಿನ ಪರವಾಗಿ ಮೊನ್ಸಿಜೆಂರ್ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್‍ರನ್ನು ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರವಾಗಿ ನಾನು ರೋಜರಿ ಮಾತೆಯ ಭಕ್ತ, ಅವಳಿಂದ ನನಗೆಲ್ಲ ಇದು ದೊರಕಿದೆ, ಇದೊಂದು ಸೇವೆ ನೀಡಲು ಸಿಕ್ಕಿದ ಭಾಗ್ಯವೆಂದು ತಿಳಿದು ಸೇವೆ ಮಾಡುತ್ತೇನೆ, ಇದಕ್ಕೆ ನಿಮ್ಮ ಪ್ರಾಥನೇಯ ಬಲ ಬೇಕಾಗಿದೆ ಎಂದು ಹೇಳಿ. ಮುಂದಿನ ತಿಂಗಳು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊರವರ ಗುರುದೀಕ್ಷೆಯ ಸುವರ್ಣಮಹೋತ್ಸವ (50 ವರ್ಷಗಳ ಆಚರಣೆ) ಮತ್ತು ಅವರ ಹುಟ್ಟು ಹಬ್ಬದ ಅಮ್ರತೋತ್ಸವ (75 ನೇ ವರ್ಷದ ಹುಟ್ಟು ಹಬ್ಬದ ಆಚರಣೆ) ಇದೆ, ಇದು ನನ್ನ ಮಾತ್ರ ಇಗರ್ಜಿ ನನಗೆ ಈ ಉತ್ಸವಕ್ಕೆ ಬರಬೇಕೆಂದು ಬಹಳ ಆಶೆ ಇತ್ತು, ಆದರೆ, ಅಂದೇ ನಮ್ಮ ಧರ್ಮಪ್ರಾಂತ್ಯದಲ್ಲಿ ಮತ್ತೊಂದು ಉತ್ಸವ ಇದೆ, ಇಲ್ಲಿ ಹಿರಿಯ ಧರ್ಮಗುರುಗಳ ಉತ್ಸವ, ಜೊತೆ ಹಿರಿಯ ಇಗರ್ಜಿ ಆದರಿಂದ ಬಿಷಪ್ ಸ್ವಾಮಿಯವರು ಇಲ್ಲಿ ಆಗಮಿಸುತ್ತಾರೆ, ಮತ್ತೊಂದು ಉತ್ಸವಕ್ಕೆ ನಾನು ಹೋಗಬೇಕಾಗಿದೆ, ಹೀಗೆ ಕಾರ್ಯಕ್ರಮ ಹಂಚಿಕೊಂಡಿದ್ದರಿಂದ ಇಲ್ಲಿನ ಉತ್ಸವಕ್ಕೆ ತನಗೆ ಅಂದು ಬರಲಾಗುವುದಿಲ್ಲವೆಂದು ಖೇದ ವ್ಯಕ್ತ ಪಡಿಸುತ್ತಾ,ಮೊನ್ಸಿಜೆಂರ್ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್‍ರವರು ಅ|ವಂ|ಸ್ಟ್ಯಾನಿ ತಾವ್ರೊರವರ ಬಾಳಿನ ಬಹುಮುಖ್ಯ ಸಂಭ್ರಮಕ್ಕೆ ಶುಭ ಕೋರಿ ಅವರನ್ನು ಸನ್ಮಾನಿಸಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರ 132ನೇ ಜನ್ಮದಿನಾಚರಣೆ


ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ನೆಹರು ಯುವ ಕೇಂದ್ರ ಉಡುಪಿ ವತಿಯಿಂದ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್‍ರವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಪುಷ್ಪಾರ್ಚನೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು ನಂತರ ಮಾತನಾಡಿವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪøಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಂಬೇಡ್ಕರ್ ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಲೇ ಬೇಕೆಂದರು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಂಘದ ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ದಿನೇಶ್ ಬೀರೊಟ್ಟು, ರಾಜೇಶ್ ಕೊಟ್ಯಾನ್, ಸತೀಶ್ ಅಬ್ಬನಡ್ಕ, ಉಪಾಧ್ಯಕ್ಷೆ ಲೀಲಾ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಮಂಡಳಿ ಅಧ್ಯಕ್ಷೆ ವೀಣಾ ಪೂಜಾರಿ, ಕಾರ್ಯದರ್ಶಿ ಪುಷ್ಪ ಕುಲಾಲ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಕೀರ್ತನ್ ಕುಮಾರ್, ಸದಸ್ಯರಾದ ಬಾಲಕೃಷ್ಣ ಮಡಿವಾಳ, ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ಹರೀಶ್ ಪೂಜಾರಿ, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ ಮೊದಲಾದವರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ : ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ತಾಲ್ಲೂಕು ಘಟಕ – ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಶ್ರೀನಿವಾಸಪುರದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಎಸ್.ಮುನಿವೆಂಕಟಪ್ಪ, ಗೌರವಾಧ್ಯಕ್ಷ ವಿ.ಹನುಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಆಂಜಪ್ಪ, ಉಪಾಧ್ಯಕ್ಷ ಟಿ.ರಮೇಶ್ ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಶ್ರೀನಿವಾಸಪುರದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಮುಖಂಡರಾದ ಎನ್.ರಾಜೇಂದ್ರ ಪ್ರಸಾದ್, ರಾಜಶೇಖರರೆಡ್ಡಿ, ಎ.ಅಶೋಕರೆಡ್ಡಿ, ಬೈರಪ್ಪ, ವೆಂಕಟೇಗೌಡ ಇದ್ದರು.