Summer Camp Finale at Mount Carmel Central School

The 2023 Summer Camp at Mount Carmel Central School, Maryhill, Mangaluru which aimed at keeping the campers engaged, enthused, energetic by providing them an even platform to explore and express their creativity and curiosity came to a halt on 15th of April 2023. The valedictory programme commenced being grateful to the Almighty for the opportunities provided.

With every activity like zumba, dance, yoga, theatre and drama, fun with science, water games, art and craft, cooking without fire, outdoor games, clay modelling, mini mela, kite flying to watching a movie which the camp provided, the exuberant campers zealously participated and showcased their creativity. Thus achieving the motto of the camp ‘Involve and enrich’. The camp was earnestly appreciated and applauded by the campers and their parents. A few were happy to articulate their experiences of the camp during the valedictory programme.

The finale was an amalgamation of action song, yoga, zumba and drama followed by receiving the participation certificate. The auditorium was in a hustle and bustle as the campers bid bye-bye to the 2023 camp. The chief guest our own teacher Neetha, also the camp co-ordinator was heartily welcomed along with the administrator Sr Carissima. In her message, Sr Carissima acknowledged the presence of the parents, applauded the team work of the teachers and appreciated the involvement of the campers.The cherry on the cake was the mass zumba dance which showcased the life of the fifteen days camp.

Passed away Mrs. Rita Pinto  (80) Koteshwar

Mrs. Rita Pinto  (80) Koteshwar

W/o Late Jerome Pinto Koteshwar

M/O Felix, Lilly, Milly, Marshal, William, Michael & Late

Joel. Mother in law of David Siqueira

Funeral details,  her mortal remains will b brought to her residence in Koteshwar Behind Majestic Hall,  at 2.30pm and will be kept for final homage till 3.30pm followed by Mass at St. Antony’s Church Koteshwar 4.00pm

ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡಬೇಕು- ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಿ-ರೈತ ಸಂಘ

ಮುಳಬಾಗಿಲು-ಏ-20, ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡುವ ಜೊತೆಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ನಷ್ಠ ಬೆಳೆ ಸಮೇತ ಬೈರಕೂರು ವಿದ್ಯುತ್ ಉಪ ಕೇಂದ್ರದ ಮುಂದೆ ಹೋರಾಟ ಮಾಡಿ ಬೆಸ್ಕಂ ಅಧಿಕಾರಿ ಸಂತೋಷ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದೇವರು ವರ ಕೊಟ್ಟರು ಪೂಜಾರಿ ನೀಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ನೀರು ಹಾಯಿಸಲು ಗುಣಮಟ್ಟದ 10 ತಾಸು ವಿದ್ಯುತ್ ನೀಡುತ್ತೇವೆಂದು ಭರವಸೆ ನೀಡಿದ್ದ ಇಂದನ ಸಚಿವರ ಆದೇಶ ವಿಧಾನ ಸೌಧದ ಕೊಠಡಿಗಳಲ್ಲೇ ಸುತ್ತಿತಿದೆ ಹೊರೆತು ಆಯಾ ವ್ಯಾಪ್ತಿಯ ಬೆಸ್ಕಂ ಅಧಿಕಾರಿಗಳ ಕಛೇರಿಗೆ ತಲುಪಿಲ್ಲ. ರೈತರ ಗೊಳು ತಪ್ಪುತ್ತಿಲ್ಲವೆಂದು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಬೆಸ್ಕಂ ಅಧಿಕಾರಿಗಳ ವಿರುದ್ದ ಆಕ್ರೊಷ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಬೆಳೆ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ನಾಶವಾದರೆ ಬೇಸಿಗೆಯಲ್ಲಿ ಸಮೃದ್ದವಾದ ಬೆಳೆ ಕೈಗೆ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿರುವ ರೈತನಿಗೆ ಬೆಳೆ ರಕ್ಷಣೆ ಮಾಡುವುದು ಅರ ಸಾಹಸವಾಗಿದೆ. ಬೆಸ್ಕಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ರೈತ ವಿರೋಧಿ ದೋರಣೆಯಿಂದ ಗುಣಮಟ್ಟದ ವಿದ್ಯುತ್ ನೀಡದೆ ಬೆಳೆಗಳಿಗೆ ನೀರು ಆಯಿಸಲಾಗದೆ ಕಣ್ಣು ಮುಂದೆಯೇ ಬೆಳೆ ಒಣಗಿ ಪಸಲು ನೆಲಕ್ಕೆ ಉದುರುವ ಮೂಲಕ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ರೈತ ಸಿಲುಕಿ ಆತ್ಮಹತ್ಯ ಹತ್ತ ಮುಖ ಮಾಡುವ ಮಟ್ಟಕ್ಕೆ ಬೆಸ್ಕಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ರೈತ ಮೂರು ತಿಂಗಳು ಬೆವರು ಸುರಿಸಿ ಭೂಮಿಗೆ ಹಾಕಿದ ಬೀಜ ದ ಪಸಲು ರೈತನೇ ತಿನ್ನುವುದಿಲ್ಲ. ಎಲ್ಲಾ ಅಧಿಕಾರಿಗಳು ತಿನ್ನುವ ಮೊದಲು ತಾನು ರೈತರಿಗೆ ತೊಂದರೆ ಮಾಡಬಾರದೆಂಬ ಮನಸಾಕ್ಷಿ ಇರಬೇಕು. ಆದರೆ ಅಧಿಕಾರಿಗಳಿಗೆ ಮಾನವೀಯತೆ ಇಲ್ಲವೇ ಇಲ್ಲ. ಕಷ್ಟಾಪಡದ ಶ್ರೀಮಂತರ ಹಾಗೂ ರಾಜಕಾರಣಿಗಳ ಸಭೆ ಸಮಾರಂಭಗಳಿಗೆ ದಿನದ 24 ಗಂಟೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಭೆ ಮುಗಿಯವರೆಗೂ ಅಲ್ಲಿಯೇ ಇದ್ದು, ಯಾವುದೇ ತೊಂದರೆಯಾಗದ ರೀತಿ ಜಾಗೃತಿ ವಹಿಸುವ ಬೆಸ್ಕಂ ಅಧಿಕಾರಿಗಳೇ ರೈತರು ನಿಮಗೆ ಏನು ದ್ರೋಹ ಮಾಡಿದ್ದಾರೆ. ಕೊಡುವ ವಿದ್ಯುತ್‍ನ್ನು ಗಂಟೆಗೆ 800 ಬಾರಿ ತೆಗೆದು ರೈತರ ಬಾಳನ್ನು ಹಾಳು ಮಾಡುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಬೆಸ್ಕಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೊಂದಿರುವ ರೈತ ನಂಗಲಿ ನಾಗೇಶ್ ಧರ್ಮ ಮಾತನಾಡಿ ಒಂದು ಎಕರೆ ತೋಟಕ್ಕೆ ನೀರು ಆಯಿಸಬೇಕಾದರೆ ರೈತ ಮನೆ ಹೆಂಡತಿ ಮಕ್ಕಳನ್ನು ಬಿಟ್ಟು ದಿನದ 24 ಗಂಟೆ ಕೊಳವೆಬಾವಿಯ ಹತ್ತಿರ ಸಂಸಾರ ಮಾಡಬೇಕಾದ ಪರಿಸ್ತಿತಿ ಇದೆ. ಅದರ ಜೊತೆಗೆ ಹೋಗಿ ಬರುವ ವಿದ್ಯುತ್‍ನಿಂದ ಕೊಳವೆಬಾವಿ ಮೋಟರ್‍ಗಳು ಸುಟ್ಟು ಅದನ್ನು ರಿಪೇರಿ ಮಾಡಿಲು 20 ಸಾವಿರ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಟಿ.ಸಿ. ಏನಾದರೂ ಸುಟ್ಟರೆ ಅದನ್ನು ಸರಿಪಡಿಸಲು ರೈತರೇ ಹಣವನ್ನು ಹಾಕಿ ಲೈನ್‍ನಮ್ಯಾನ್‍ಗಳಿಗೆ ಕೊಡಬೇಕು. ಇಲ್ಲವಾಧರೆ ನೂರೊಂದು ನೆಪ ಹೇಳಿ ವಾರವಾದರು ಟಿ.ಸಿ. ಕೊಡುವುದಿಲ್ಲ. ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಂ ಇಲಾಖೆ ಎಂಬುದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಅವಶ್ಯಕತೆ ಇಲ್ಲದ ಟೆಂಡರ್‍ಗಳನ್ನು ಕರೆದು ಗುತ್ತಿಗೆದಾರರ ಜೊತೆ ಶಾಮೀಲಾಗಿ ಲಕ್ಷ ರೂಪಾಯಿ ಕಾಮಗಾರಿಗೆ 10 ಲಕ್ಷ ಅನುದಾನ ನೀಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಮೂಲಕ ಬೆಸ್ಕಂ ಇಲಾಖೆಯನ್ನು ಭ್ರಷ್ಟರ ಕೂಪವನ್ನಾಗಿ ಮಾಡಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ರೈತರಿಗೆ ಗುಣಮಟ್ಟದ 10 ತಾಸು ವಿದ್ಯುತ್‍ನ್ನು ಬೇಸಿಗೆ ಮುಗಿಯುವರೆಗೂ ನೀಡಬೇಕು. ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರತೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕು. ಇಲ್ಲವಾದರೆ ನಷ್ಟ ಬೆಳೆ ಸಮೇತ ರಾಷ್ಟ್ರೀಯ ಹೆದ್ದರಿ ಬಂದ್ ಮಾಡುವ ಎಚ್ಚರಿಕೆಯೊಂದಿ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಂ ಇಂಜನಿಯರ್ ಸಂತೋಷ್ ರವರು ಸ್ವಲ್ಪ ವಿದ್ಯುತ್ ಲೈನ್ ರಿಪೇರಿಯಿಂದ ಅಡೆತಡೆಯಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ವಿದ್ಯುತ್ ನೀಡದೆ ಬೆಳೆ ನಷ್ಟವಾಗಲು ಬಿಡುವುದಿಲ್ಲ. ರೈತರ ಜೊತೆ ಬೆಸ್ಕಂ ಅಧಿಕಾರಿಗಳು ಇರುತ್ತೇವೆಂದು ಭರವಸೆ ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ, ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ಸುನಿಲ್‍ಕುಮಾರ್, ಗುರುಮೂರ್ತಿ, ವಿಜಯ್‍ಪಾಲ್, ವಿಶ್ವ, ದೇವರಾಜ್, ಗಿರೀಶ್, ಮುಂತಾದವರು ಇದ್ದರು.

ಸಂತ ಪಿಯುಸ್ ಚರ್ಚಿನಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಶಿಬಿರ

ಕುಂದಾಪುರ: ಸಂತ ಪಿಯುಸಿ ಇಗರ್ಜಿಯ ಸಭಾಭವನದಲ್ಲಿ ಎಪ್ರಿಲ್ ೧೯ ರಿಂದ ಮಕ್ಕಳಿಗೆ ಮೂರು ದಿನಗಳ ಬೇಸಿಗೆ ರಜೆ ಶಿಬಿರ ವನ್ನು ಇಗರ್ಜಿಯ ಧರ್ಮಗುರು ವಂದನೀಯ ಆಲ್ಬರ್ಟ್ ಕ್ರಾಸ್ತಾ ರವರು ಏರ್ಪಡಿಸಿದ್ದರು. ಒಂದರಿಂದ ದ್ವಿತೀಯ ಪಿಯುಸಿ ತನಕದ 85 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ತ್ರಾಶಿ ಡಾನ್ ಬಾಸ್ಕೋ ವಿದ್ಯಾಲಯದ ಸಹಾಯಕ ಪ್ರಾಂಶುಪಾಲರಾದ ವಂದನೀಯ ರೊನಾಲ್ಡ್ ವಾಜ್ ರವರು ಹಾಗೂ ಹಾಸನ ಪ್ರಾಂತ್ಯದ ಧರ್ಮಭಗಿನಿ ಡಾಕ್ಟರ್ ಸೇವ್ರಿನ್ ಮಿನೆಜಸ್ ರವರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಲ್ಲದೆ ಅವರ ವ್ಯಕ್ತಿತ್ವ ವಿಕಸನದ ಮಾಹಿತಿಗಳನ್ನು ನೀಡಿ ಗುಂಪು ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿ ಭವಿಷ್ಯಕ್ಕೆ ಉತ್ತಮ ನಾಂದಿಯನ್ನು ಹಾಕಿದರು. ಈ ಕಾರ್ಯಕ್ರಮದಲ್ಲಿ ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೇಮ್ಸ್ ಡಿ ಮೆಲ್ಲೋ, ಕಾರ್ಯದರ್ಶಿ ರೇಷ್ಮಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ಲೀನಾ ತಾವರೊ ಅವರು, ಕ್ರೈಸ್ತ ಶಿಕ್ಷಣ ಸಂಚಾಲಕಿ ಗ್ಲೀಮ ಗೊನ್ಸಾಲ್ವಿಸ್ ಹಾಗೂ ಕ್ರೈಸ್ತ ಶಿಕ್ಷಣ ಶಿಕ್ಷಕಿಯರು ಮತ್ತು ಧರ್ಮಭಾಗಿನಿಯರು ಉಪಸ್ಥಿತರಿದ್ದರು.

ಪಡುಕೋಣೆ ಸಂತ ಅಂತೋನಿ ಚರ್ಚ್ ವತಿಯಿಂದ ವಿಧ್ಯಾರ್ಥಿಗಳಿಗೆ 3 ದಿನಗಳ ಬೇಸಿಗೆ ಶಿಬಿರ

ಪಡುಕೋಣೆ, ಎಪ್ರಿಲ್ 22: ಪಡುಕೋಣೆ ಸಂತ ಅಂತೋನಿ ಚರ್ಚ್ ವತಿಯಿಂದ ಪಡುಕೋಣೆ ಶಾಲಾ ಸಭಾಭವನದಲ್ಲಿ ಎಪ್ರಿಲ್ 20 ರಿಂದ 22 ರ ವರೆಗೆ 3 ದಿನಗಳ ಕಾಲ 1 ರಿಂದ 10 ನೇ ತರಗತಿಯ ವಿಧ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು.ಚರ್ಚಿನ ಧರ್ಮ ಗುರುಗಳಾದ  ವಂ ಫ್ರಾನ್ಸಿಸ್ ಕರ್ನೆಲಿಯೊ ರವರು ಶಿಬಿರವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಶಿಬಿರಗಳಲ್ಲಿ ಸಂಗೀತ ಅಭಿನಯ,ಆಟ,ಪಾಠ,ಮನೋರಂಜನೆ ಜೀವನ ಕೌಶಲಗಳ ಭೋಧನೆ, ವಿಧ್ಯಾಭ್ಯಾಸದ ಮುಂದಿನ ನೋಟ ಮಾರ್ಗದರ್ಶನ ಇತ್ಯಾದಿ ವಿಷಯಗಳು ಒಳಗೊಂಡಿರುವುದರಿಂದ ವ್ಯಕ್ತಿ ಯ ವ್ಯಕ್ತಿತ್ವ, ವಿಕಸನ, ಪ್ರತಿಭೆಗಳ ಪ್ರದರ್ಶನಕ್ಕೆ ಆಧಾರವಾಗಿವೆ ಎಂದು ಶುಭ ಹಾರೈಸಿದರು.

ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ ಶ್ರೀ. ಅಲೆಕ್ಸ್ ಡಿ’ಸೋಜ, 20 ಆಯೋಗಗಳ ಸಂಯೋಜಕ ಶ್ರೀ. ವಿನ್ಸೆಂಟ್ ಡಿ’ ಸೋಜ, ಸಂತ ಅಂತೋನಿ ಕಾನ್ವೆಂಟಿನ ಭಗಿನಿ ಸಿ| ಮರ್ಸಿ, ಪಾಲನಾ ಮಂಡಳಿ ಯ ಸದಸ್ಯರಾದ ಶ್ರೀ.ಗ್ರೇಶನ್ ಕ್ರಾಸ್ತಾ  ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಬ್ರ|ಶೋನ್ ಕೆಮ್ಮಣ್ಣು, ಬ್ರ|ಸ್ಟೀವನ್ ನೀಡ್ಪಳ್ಳಿ ಹಾಗೂ ಬ್ರ| ಕೆವಿನ್ ಪಡುಕೋಣೆ, ಉಪಸ್ಥಿತರಿದ್ದರು.

ಶಿಬಿರಾರ್ಥಿ ಕು|ಶೈನಿ ಆಲ್ಮೇಡಾ ಎಲ್ಲರನ್ನು ಸ್ವಾಗತಿಸಿದರು. ಕು| ರೊಯ್ಲಿನ್, ಕು| ಆಮ್ರತಾ, ಕು| ಆಶ್ಲಿಟಾ, ಹಾಗೂ ಕೆಲ್ವಿನ್ ಕ್ರಾಸ್ತಾ ಮುಂತಾದ ಶಿಬಿರಾರ್ಥಿಗಳು ಶಿಬಿರದ ಯಶಸ್ವಿಗೆ ಪ್ರಾರ್ಥನಾನಿಧಿ ನಡೆಸಿಕೊಟ್ಟರು. ಕು|ಪ್ರಿಯಾಂಕ ವಂದಿಸಿದರು ಶಿಕ್ಷಕಿ ಶ್ರೀಮತಿ ಐವಿ ಕಾರ್ಯಕ್ರಮ ನಿರೂಪಿಸಿದರು.