JANANUDI.COM NETWORK
ಕೆ.ಎಸ್.ಪಿ ಕ್ಲಿಯರ್ ಪಾಸ್
ಕೋವಿಡ್-19 ಪಾಸ್ ಪ್ರಶ್ನೋತ್ತರಗಳು
ಯಾರಿಗೆ ಪಾಸ್ ಅಗತ್ಯವಿಲ್ಲ?
ಅಗತ್ಯ ಕರ್ತವ್ಯದಲ್ಲಿರುವ ಸರ್ಕಾರಿ ಸಿಬ್ಬಂದಿ/ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸಲು ಅವರಿಗೆ ಅನುಮತಿ ಇದೆ. ಆದರೆ ಅವರು ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು.
ವೈದ್ಯಕೀಯ ವೃತ್ತಿಪರರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿಗಳು, ತಮ್ಮ ಸಮವಸ್ತ್ರದಲಿ ್ಲ ಪ್ರಯಾಣಿಸಬೇಕು.
ಮಾಧ್ಯಮ ಸಿಬ್ಬಂದಿ (ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ) ತಮ್ಮ ಮಾನ್ಯತೆ ಕಾರ್ಡ್ ಅಥವಾ ಸಂಬಂಧಪಟ್ಟ ಮಾಧ್ಯಮ ಕಂಪನಿ ನೀಡಿದ ಗುರುತಿನ ಚೀಟಿಯನ್ನು ಹೊಂದಿರಬೇಕು.
“ಜಿ” ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಸರ್ಕಾರಿ ವಾಹನಗಳು.
ಅಗತ್ಯ ಕರ್ತವ್ಯದಲ್ಲಿರುವ ಬ್ಯಾಂಕ್ ನೌಕರರು. ತಮ್ಮ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸಲು ಅನುಮತಿ ಇದೆ. ಆದರೆ ಅವರು ತಮ್ಮ ಸಂಸ್ಥೆಯಲಿ ್ಲ ನೀಡಿದ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.
ಕೆ.ಎಸ್.ಪಿ ಕ್ಲಿಯರ್ ಪಾಸ್ ಕೋವಿಡ್-19 ಪಾಸ್ ಪ್ರಶ್ನೋತ್ತರಗಳು ಯಾರಿಗೆ ಪಾಸ್ ಬೇಕು?
ಅಗತ್ಯ ಸರಕುಗಳು ಮತ್ತು ಸೇವೆಗಳ ಸರಬರಾಜಿನಲಿ ್ಲ ತೊಡಗಿರುವ ಖಾಸಗಿ ವ್ಯಕ್ತಿಗಳು ಲಾಕ್ಡೌನ್ ಸಮಯದಲಿ ್ಲ ಮುಕ್ತವಾಗಿ ಪ್ರಯಾಣಿಸಲು ಪಾಸ್ ಅಗತ್ಯವಿರುತ್ತದೆ ಮತ್ತು ಸರಬರಾಜು ಸರಪಳಿ ನಿರ್ವಹಣೆಗೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಹಾಜರಾಗುವುದು.
ಪಾಸ್ಗೆ ಅರ್ಹವಾದ ವಿಭಾಗಗಳು ಈ ಕೆಳಕಂಡಂತಿದೆ:
ಪಡಿತರ ಅಂಗಡಿಗಳು (ಪಿಡಿಎಸ್ ಅಡಿಯಲಿ ್ಲ) ಸೇರಿದಂತೆ ಅಂಗಡಿಗಳು, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್ಗಳು, ಮಾಂಸ ಮತ್ತು ಮೀನು ಅಂಗಡಿಗಳು, ಪ್ರಾಣಿಗಳಿಗೆ ಮೇವು ನೀಡುವವರು
ವಿಮಾ ಕಛೇರಿಗಳು ದೂರಸಂಪರ್ಕ, ಅಂತರ್ಜಾಲ ಸೇವೆಗಳು, ದೂರದರ್ಶನ ಪ್ರಸಾರ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು (ಅಗತ್ಯ ಸೇವೆಗಳಿಗೆ)
ಆಹಾರ ಪದಾರ್ಥಗಳು, ಔಷಧಿಗಳು, ವೈಧ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ವೆಬ್ಸೈಟ್ ಮೂಲಕ ವಿತರಿಸುವವರು
ಪೆಟ್ರೋಲ್ ಪಂಪ್ಗಳು, ಎಲ್ಪಿಜಿ ಮತ್ತು ಅನಿಲ ಚಿಲ್ಲರೆ ಮತ್ತು ಶೇಖರಣಾ ಮಳಿಗೆಗಳು
ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಘಟಕಗಳು ಮತ್ತು ಸೇವೆಗಳು ಸೆಕ್ಯುರಿಟಿ ಮತ್ತು ಎಕ್ಸ್ಚೇಂಚ್ ಬೋರ್ಡ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳು
ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳು
ಬೇಕರಿ, ಬಿಸ್ಕತ್ತು, ಕಾಂಡಿಮೆಂಟ್ಸ್ ಮತ್ತು ಸಿಹಿ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು
ಆಸ್ಪತ್ರೆಗೆ ಹೋಗಲು ನನಗೆ ಪಾಸ್ ಅಗತ್ಯವಿದೆಯೇ? ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಕುಟುಂಬ ಸದಸ್ಯರ ನಿಧನದ ಕಾರಣ ಬೆಂಗಳೂರು ವ್ಯಾಪ್ತಿಯಲಿ ್ಲ ಪ್ರಯಾಣಿಸಬೇಕಾದವರಿಗೆ ನೀಡಲು ಎಲ್ಲಾ ಪೊಲೀಸ್ ಠಾಣೆಗಳಲಿ ್ಲ ತುರ್ತು ಪಾಸ್ ಲಭ್ಯವಿದೆ. ಈ ಪಾಸ್ಗಳು ಬೆಂಗಳೂರು ವ್ಯಾಪ್ತಿಗೆ ಮಾತ್ರ ಬಳಕೆಗೆ ಬರುತ್ತದೆ ಮತ್ತು ಇದು ಕೇವಲ 12 ಗಂಟೆಗಳ ಅವಧಿಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ. ಪಾಸ್ ನೀಡಿದ 12 ಗಂಟೆಗಳೊಳಗೆ ಪೊಲೀಸ್ ಠಾಣೆಗೆ ಹಿಂತಿರುಗಿಸಬೇಕು.
ಅರ್ಜಿದಾರರು ತುರ್ತು ಪಾಸ್ ಪಡೆಯಲು ವೈಧ್ಯಕೀಯ ತುರ್ತುಸ್ಥಿತಿಗೆ ಬೆಂಗಳೂರು ನಗರದ ವ್ಯಾಪಿ ಮೀರಿ ಪ್ರಯಾಣದ ಅಗತ್ಯವಿದ್ದರೆ ಸ್ಥಳೀಯ ಡಿ.ಸಿ.ಪಿ.ಯವರ ಕಛೇರಿಗೆ ತುರ್ತು ಪರಿಸ್ಥಿತಿಯ ವಿವರಿಸುವ ಲಿಖಿತ ಅರ್ಜಿಯನ್ನು ದಾಖಲೆಗಳೊಂದಿಗೆ ನೀಡಬೇಕು. ಪಾಸ್ನ ಅವಶ್ಯಕತೆಯು ನಿಜವೆಂದು ಕಂಡುಬಂದಲಿ ್ಲ, ಅವರ ಅಂತರ-ಜಿಲ್ಲಾ ಪ್ರಯಾಣಕ್ಕೆ ಅನುಕೂಲವಾಗುವಂತೆ ಪತ್ರವನ್ನು ನೀಡಲಾಗುವುದು. ಆದಾಗ್ಯೂ ಈ ಪತ್ರವು ಇತರ ಕಾರ್ಯ ವ್ಯಾಪ್ತಿಯ ಪೋಲೀಸರ ಸಹಕಾರವನ್ನು ಖಾತರಿಪಡಿಸುವುದಿಲ್ಲ ಮತ್ತು ಅವರ ವಿವೇಚನೆಗೆ ಒಳಪಟ್ಟಿರುತ್ತದೆ.
ಅಂತರ-ಜಿಲ್ಲೆಗೆ ಪ್ರಯಾಣಿಸಲು ನನಗೆ ಪಾಸ್ ಅಗತ್ಯವಿದೆಯೇ? ವೈದ್ಯಕೀಯ ತುರ್ತುಸ್ಥಿತಿಗೆ ಬೆಂಗಳೂರು ನಗರದ ಹೊರವಲಯಕ್ಕೆ ಸಂಚರಿಸುವ ಅಗತ್ಯವಿದ್ದರೆ ಸ್ಥಳೀಯ ಡಿ.ಸಿ.ಪಿ. ಕಛೇರಿಗೆ ತುರ್ತುಸ್ಥಿತಿಯ ಸ್ವರೂಪವನ್ನು ವಿವರಿಸುವ ದಾಖಲೆಗಳೊಂದಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಬಹುದು. ಪಾಸ್ನ ಅಗತ್ಯವು ನಿಜವಾದದ್ದು ಕಂಡುಬಂದಲಿ ್ಲ, ಅರ್ಜಿದಾರರಿಗೆ ಅವರ ಅಂತರಜಿಲ್ಲಾ ಪ್ರಯಾಣಕ್ಕೆ ಅನುಕೂಲವಾಗುವಂತೆ ಪತ್ರವನ್ನು ನೀಡಲಾಗುವುದು. ಆದಾಗ್ಯೂ ಈ ಪತ್ರವು ಇತರ ಕಾರ್ಯವ್ಯಾಪ್ತಿಯ ಪೋಲೀಸರ ಸಹಕಾರವನ್ನು ಖಾತರಿಪಡಿಸುವುದಿಲ್ಲ ಮತ್ತು ಅವರ ವಿವೇಚನೆಗೆ ಒಳಪಟ್ಟಿರುತ್ತದೆ.
ಔಷಧಿಗಳನ್ನು ಖರೀದಿಸಲು ನನಗೆ ಪಾಸ್ ಅಗತ್ಯವಿದೆಯೇ? ಔಷಧಾಲಯಗಳು ಮತ್ತು ವೈದ್ಯಕೀಯ ಸರಬರಾಜು ಮಳಿಗೆಗಳು ಲಾಕ್ಡೌನ್ ಸಮಯದಲಿ ್ಲ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆದ್ದರಿಂದ ಮನೆಯ ಒಬ್ಬರು ನೆರೆಹೊರೆಯ ಅಂಗಡಿಯಿಂದ ಅಗತ್ಯವಾದ ಔಷಧಿಗಳನ್ನು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮುಖ್ಯ ರಸ್ತೆಗಳನ್ನು ಮಾತ್ರ ಪೋಲೀಸರು ಸಂಚಾರಕ್ಕಾಗಿ ನಿರ್ಭಂದಿಸಿದ್ದಾರೆ ಮತ್ತು ಸಣ್ಣ ಪುಟ್ಟ ಆಂತರಿಕ ರಸ್ತೆಗಳನ್ನು ನಿರ್ಬಂಧಿಸಲಾಗಿಲ್ಲವಾದ್ದರಿಂದ ಇದಕ್ಕೆ ಪಾಸ್ ಅಗತ್ಯವಿಲ್ಲ.
ದಿನಸಿ ವಸ್ತುಗಳನ್ನು ಖರೀದಿಸಲು ನನಗೆ ಪಾಸ್ ಬೇಕೇ?
ಎಲ್ಲಾ ದಿನಸಿ ಅಂಗಡಿಗಳಿಗೆ ಲಾಕ್ಡೌನ್ ಸಮಯದಲಿ ಕಾರ್ಯನಿರ್ವಹಿಸಲು ಅನುಮತಿ ಇದೆ. ಆದ್ದರಿಂದ ನೆರೆಹೊರೆಯ ದಿನಸಿ ಅಂಗಡಿಯಿಂದ ಅಗತ್ಯವಾದ ದಿನಸಿ ವಸ್ತುಗಳನ್ನು ಖರೀದಿಸಲು ಒಬ್ಬರಿಗೆ ಸಾಧ್ಯವಾಗುತ್ತದೆ. ಅದು ನಡೆದು ಹೋಗುವ ಅಂತರದಲ್ಲಿದ್ದರೆ ಸಾರ್ವಜನಿಕ ಸದಸ್ಯರು ಅಗತ್ಯವಾದ ನೆರೆಹೊರೆಯ ದಿನಸಿ ಸಾಮಗ್ರಿಗಳನ್ನು ಅಂತಹ ನೆರೆಹೊರೆಯ ಅಂಗಡಿಗಳಿಂದ ಖರೀದಿಸಬಹುದಾಗಿದೆ ಎಂದು ನಿರೀಕ್ಷಸಲಾಗಿದೆ. ಮುಖ್ಯ ರಸ್ತೆಗಳನ್ನು ಮಾತ್ರ ಪೋಲೀಸರು ಸಂಚಾರಕ್ಕಾಗಿ ನಿರ್ಭಂದಿಸಿದ್ದಾರೆ ಮತ್ತು ಸಣ್ಣ ಪುಟ್ಟ ಆಂತರಿಕ ರಸ್ತೆಗಳನ್ನು ನಿರ್ಬಂಧಿಸಲಾಗಿಲ್ಲವಾದ್ದರಿಂದ ಇದಕ್ಕೆ ಪಾಸ್ ಅಗತ್ಯವಿಲ್ಲ.
ಬೆಳಿಗ್ಗೆ ವಾಕ್ ಮತ್ತು ಜಾಗ್ ಮಾಡಲು ನನಗೆ ಪಾಸ್ ಅಗತ್ಯವಿದೆಯೇ? ಲಾಕ್ಡೌನ್ ಸಮಯದಲ್ಲಿ ಎಲ್ಲಾ ಅನಿವಾರ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಬೆಳಿಗ್ಗೆ ವಾಕ್ ಮತ್ತು ಜಾಗ್ ಮಾಡಬಾರದು. ಎಲ್ಲರೂ ಈ ಲಾಕ್ಡೌನ್ ಅವಧಿಯಲ್ಲಿ ದಯವಿಟ್ಟು ನಿಮ್ಮ ಮನೆಯಲ್ಲಿಯೇ ದೈಹಿಕ ವ್ಯಾಯಾಮ ಮಾಡುವುದು.
ಬ್ಯಾಂಕಿಗೆ ಹೋಗಲು ನನಗೆ ಪಾಸ್ ಬೇಕೇ?
ಎ.ಟಿ.ಎಂ. ಗಳು ಎಂದಿನಂತೆ ತೆರೆದಿರುತ್ತದೆ ಆದ್ದರಿಂದ ನಡಿಗೆಯಲಿ ್ಲ ತೆರಳಿ ಸೌಲಭ್ಯ ಪಡೆಯಬಹುದು. ನಿಯಮಿತ ಬ್ಯಾಂಕ್ ವಹಿವಾಟಿಗೆ ಆನ್ಲೈನ್ ಬ್ಯಾಂಕ್ ಸೇವೆಗಳು ಲಭ್ಯವಿದೆ. ಆನ್ಲೈನ್ ಪಾವತಿ ವಿಧಾನಗಳನ್ನು ಸಹ ಬಳಸಿಕೊಳ್ಳಬಹುದು. ಆದಾಗ್ಯೂ ಎಲ್ಲಾ ಬ್ಯಾಂಕ್ಗಳಲ್ಲಿ ಎ.ಟಿ.ಎಂ. ಸೇವೆಗಳು ಮತ್ತು ಕ್ಯಾಷಿಯರ್ ಡೆಸ್ಕ್ಗಳು ಕಾರ್ಯನಿರ್ವಹಿಸಲಿದೆ.
ನನ್ನ ವಯಸ್ಸಾದ ಪೋಷಕರನ್ನು ಭೇಟಿ ಮಾಡಲು ನಾನು ಹೋಗಬಹುದೇ? ಲಾಕ್ಡೌನ್ ಸಮಯದಲ್ಲಿ ಎಲ್ಲಾ ಅನಿವಾರ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ. ವಯಸ್ಸಾದ ಪೋಷಕರಿಗೆ ಕೆಲವು ಅಗತ್ಯ ಸಾಮಗ್ರಿಗಳು ಅಗತ್ಯವಿದ್ದರೆ, ಅದನ್ನು ಆನ್ಲೈನ್ ಮುಖಾಂತರ ಹೋಮ್ ಡೆಲಿವೆರಿ ಪಡೆದುಕೊಳ್ಳಬಹುದು. ಆನ್ಲೈನ್ ವಿತರಣೆ ಸಾಧ್ಯವಾಗದಿದ್ದರೆ ಒಬ್ಬರು ಹಿರಿಯ ಸಹಾಯವಾಣಿ (1090, 080-22943226, 9243737220, 9243737230) ಗೆ ಸಂಪರ್ಕಿಸಬಹುದು. ಅಗತ್ಯವಿರುವ ಹಿರಿಯ ನಾಗರೀಕರಿಗೆ ಸ್ಥಳೀಯ ಆಡಳಿತದ ಮೂಲಕ ಅಗತ್ಯ ಸಹಾಯ ವ್ಯವಸ್ಥೆ ಮಾಡಲಾಗುವುದು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಅಗತ್ಯವಿದ್ದರೆ, ಒಬ್ಬರು ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಬಹುದು. ಅಗತ್ಯವಿದ್ದರೆ ಸ್ಥಳೀಯ ಪೊಲೀಸರು ಸಹ ಹಿರಿಯ ನಾಗರೀಕರ ನೆರವಿಗೆ ಬರುತ್ತಾರೆ.
ಸಾಕುಪ್ರಾಣಿಗಳಿಗೆ ಆಹಾರವನ್ನು ಖರೀದಿಸಲು ನಾನು ಅಂಗಡಿಗೆ ಹೋಗಬಹುದೇ? ಸಾಕುಪ್ರಾಣಿಗಳ ಆಹಾರವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳನ್ನು ಬಳಸಬಹುದು, ಅದರಲಿ ್ಲ ಮನೆ ಬಾಗಿಲಿಗೆ ಸಾಕುಪ್ರಾಣಿಗಳಿಗೆ ಬೇಕಾಗುವ ಅವಶ್ಯಕ ವಸ್ತುಗಳು ತಲುಪಿಸಲಾಗುತ್ತದೆ.
ನನ್ನ ದಿನಸಿ ಅಂಗಡಿಯನ್ನು ನಡೆಸಲು ನನಗೆ ಪಾಸ್ ಅಗತ್ಯವಿದೆಯೇ? ದಿನಸಿ ಅಂಗಡಿಯನ್ನು ತೆರೆಯಲು ಯಾವುದೇ ಪಾಸ್ ಅಥವಾ ಪರವಾನಗಿ ಅಗತ್ಯವಿಲ್ಲ ಏಕೆಂದರೆ ದಿನಸಿ ಸಾಮಗ್ರಿಗಳು ಸಾಮಾನ್ಯ ಜನರಿಗೆ ಅಗತ್ಯವಾದ ವಸ್ತುಗಳಾಗಿವೆ. ಆದಾಗ್ಯೂ ಅಂಗಡಿಯಲಿ ್ಲ ಕೆಲಸ ಮಾಡುವ ಸಿಬ್ಬಂದಿಗೆ ಸಂಬಂಧಪಟ್ಟ ಅಂಗಡಿಗೆ ದೂರದಿಂದ ಪ್ರಯಾಣಿಸಬೇಕಾದರೆ ಮತ್ತು ಸಿಬ್ಬಂದಿ ಸರಕುಗಳ ಸಾಗಣೆಗೆ ಅಗತ್ಯವಿರುವ ವಾಹನಗಳಿಗೆ ಪಾಸ್ಗಳು ಬೇಕಾಗುವುದು ಅಂತಹ ಸಂದರ್ಭದಲಿ ್ಲ ದಿನಸಿ ಅಂಗಡಿ ಮಾಲೀಕರು ನೀಡಿರುವ ವೆಬ್ಸೈಟ್ hಣಣಠಿs://ಞsಠಿಛಿಟeಚಿಡಿಠಿಚಿss.mಥಿgಚಿಣe.ಛಿom/sigಟಿuಠಿ ನಲಿ ್ಲ ಪಾಸ್ ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಪಾಸ್ ಪಡೆಯುವುದು ಹೇಗೆ? ಅಗತ್ಯ ಸರಕುಗಳು ಮತ್ತು ಸೇವೆಗಳ ಸರಬರಾಜಿನಲಿ ್ಲ ತೊಡಗಿರುವ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗೆ ಅಗತ್ಯವಾದ ಸಿಬ್ಬಂದಿಗೆ ವ್ಯಕ್ತಿ ಪಾಸ್ಗಳನ್ನು hಣಣಠಿs://ಞsಠಿಛಿಟeಚಿಡಿಠಿಚಿss.mಥಿgಚಿಣe.ಛಿom/sigಟಿuಠಿ ನಲಿ ್ಲ ನೊಂದಾಯಿಸಿ ಮತ್ತು ಕೆಎಸ್ಪಿ ಕ್ಲಿಯರ್ ಪಾಸ್ಗೆ ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು.
ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೆ ನಾನು ಪಾಸ್ ಹೇಗೆ ಪಡೆಯುವುದು? ಲಾಕ್ಡೌನ್ ಸಮಯದಲಿ ್ಲ ಯಾವುದೇ ಖಾಸಗಿ ವಾಹನವನ್ನು ಓಡಿಸಲು ಅನುಮತಿ ಇಲ್ಲ. ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯಲಿ ್ಲ ತೊಡಗಿರುವ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳಿಗೆ ಕಾರ್ಯನಿರ್ವಹಿಸಲು ಅಗತ್ಯವಿರುವ ವಾಹನಗಳಿಗೆ ವಾಹನ ಪಾಸ್ಗಳನ್ನು ನೊಂದಾಯಿಸಿಕೊಳ್ಳಬಹುದು ಮತ್ತು ಕೆಎಸ್ಪಿ ಕ್ಲಿಯರ್ ಪಾಸ್ಗಳಿಗೆ ಅರ್ಜಿ ಸಲ್ಲಿಸಬಹುದು. hಣಣಠಿs://ಞsಠಿಛಿಟeಚಿಡಿಠಿಚಿss.mಥಿgಚಿಣe.ಛಿom/sigಟಿuಠಿ
ಪಾಸ್ನ ಸಿಂಧುತ್ವ ಏನು? ಪಾಸ್ನ ಅವಧಿ ಅರ್ಜಿದಾರರು ಬಯಸಿದ ಅವದಿü ಮತ್ತು ಪಾಸ್ ನೀಡುವ ಪ್ರಾಧಿಕಾರವು ನೀಡಿದ ಅವಧಿಯನ್ನು ಅವಲಂಬಿಸಿರುತ್ತದೆ.
ಪಾರ್ಸ್ ಹಾರ್ಡ್ ಕಾಪಿ ಅಥವಾ ಸಾಫ್ಟ್ ಕಾಪಿ ಒಯ್ಯುವ ಅಗತ್ಯವಿದೆಯೇ? ಡಿಜಿಟಲ್ ವೆಬ್ಸೈಟ್ ಪಾಸ್ನ್ನು ಅಗತ್ಯವಿದ್ದರೆ ಮುದ್ರಿಸಿಕೊಂಡು ತೋರಿಸಬಹುದು.
ಆನ್ ಲೆೈನ್ ಕೆ.ಎಸ್.ಪಿ. ಕ್ಲಿಯರ್ ಪಾಸ್ ಗೆ ಸುಂಬುಂದಿಸಿದ ಯಾವುದೆೇ ಪ್ರಶ್ೆೆಗಳಿಗೆ ದಯವಿಟ್ುು ಕೆಳಗಿನ ಸಹಾಯವಾಣಿ ಸುಂಖ್ೆೆಗಳನುೆ ಸುಂಪ್ಕ್ಲಿಸಿ: 080-22942200 080-22942325 080-22942330