ಹಾಲನ್ನು ಶೀಥಲೀಕರಿಸಿ ಒಕ್ಕೂಟಕ್ಕೆ ಸರಬರಾಜು ಮಾಡಲು ಅಗತ್ಯವಾದ ವ್ಯವಸ್ಥೆಗೆ ಸಹಾಯ ಧನ ನೀಡಲಾಗುತ್ತಿದೆ : ಕೋಚಿಮುಲ್ ನಿರ್ದೇಶಕ ಎನ್‌.ಹನುಮೇಶ್‌

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ:  ಹಾಲನ್ನು ಶೀಥಲೀಕರಿಸಿ ಒಕ್ಕೂಟಕ್ಕೆ ಸರಬರಾಜು ಮಾಡುವ ಉದ್ದೇಶಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲು ಸಹಾಯ ಧನ ನೀಡಲಾಗುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.
  ಪಟ್ಟಣದ ಕೋಚಿಮುಲ್ ಶಿಬರ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿಎಂಸಿ ಘಟಕ ಅಳವಡಿಸಲು ಸಿವಿಲ್‌ ಕಾಮಗಾರಿ ಕೈಗೊಳ್ಳಲು ಹಾಗೂ ವಿವಿಧ ಕಾರಣಗಳಿಂದ ಮರಣ ಹೊಂದಿದ ಹಸುಗಳ ಮಾಲೀಕರಿಗೆ ಆರ್ಥಿಕ ನೆರವಿನ ಚೆಕ್‌ ವಿತರಿಸಿ ಮಾತನಾಡಿ, ಚೌಡನಹಳ್ಳಿ, ಕೂಳುಗುರ್ಕಿ, ನಾರವಮಾಕಲಹಳ್ಳಿ, ದೊಡ್ಡ ಬಂದಾರ್ಲಹಳ್ಳಿ ಹಾಗೂ ಕೆ.ವಡಿಗೇಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬಿಎಂಸಿ ಘಟಕ ಅಳವಡಿಸಲು ತಲಾ ರೂ.1 ಲಕ್ಷ ನೀಡಲಾಗಿದೆ ಎಂದು ಹೇಳಿದರು.
  ಒಕ್ಕೂಟದಲ್ಲಿ ಗುಂಪು ರಾಸು ವಿಮೆ ಚಾಲ್ತಿಯಲ್ಲಿದ್ದು, ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ರಾಸುಗಳಿಗೆ ವಿಮೆ ಮಾಡಲಾಗುತ್ತಿದೆ. ಎಲ್ಲ ಹಾಲು ಉತ್ಪಾದಕರೂ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಹೇಳಿದರು.
  ಉಪ ಕಚೇರಿಯ ಉಪ ವ್ಯವಸ್ಥಾಪಕ ಡಾ. ವಿ.ಎನ್‌.ಶ್ರೀಕಾಂತ್‌, ಸಹಾಯಕ ವ್ಯವಸ್ಥಾಪಕ ಕೆ.ಎಸ್‌.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್‌, ಎನ್‌.ದೇವರಾಜ್‌, ಪಿ.ಕೆ.ನರಸಿಂಹರಾಜು, ಎನ್‌.ಗಣೇಶ್‌, ಎಸ್‌.ವಿನಾಯಕ, ಕೆ.ಪಿ.ಶ್ವೇತ, ಎ.ಎನ್‌.ಶ್ರೀನಿವಾಸ ಮೂರ್ತಿ ಇದ್ದರು.