ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ದೇಶ ಭಕ್ತಿ ಮತ್ತು ದೇಶ ಪ್ರೇಮವನ್ನು ತಮ್ಮ ಉಸಿರನ್ನಾಗಿಸಿಕೊಂಡು ದೇಶಕ್ಕಾಗಿ ದುಡಿದು ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ . ಆರ್ . ಅಶೋಕ್ ತಿಳಿಸಿದರು . ತಾಲೂಕಿನ ಬೆಗ್ಲಿಹೊಸಹಳ್ಳಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ . ಮುನಿಯಪ್ಪ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದರು . ಭಾರತದ ಜನರು ಸಮೃದ್ಧಿ ಮತ್ತು ಸಾಧನಗಳ ವೈಭವಯುತ ಇತಿಹಾಸವನ್ನು ಸಂಕ್ರಮಿಸುವ ಒಟ್ಟು ಸ್ಮರಿಸುವ ಉದ್ದೇಶದಿಂದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ತಿಳಿಸಿದರು . ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕ ರೈತ , ಸೈನಿಕ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಸ್ಮರಿಸಿದರು .
ಸ್ವಾತಂತ್ರ ಹೋರಾಟಗಾರ ಕೆ ಮುನಿಯಪ್ಪ ನೆನಪಿನಲ್ಲಿ ಶಿಕ್ಷಕರನ್ನು ಸನ್ಮಾನಿಸಿದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ರಾಷ್ಟ್ರದ ಸವಾರ್ಂಗೀಣ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಶಿಕ್ಷಕರು ಸದಾ ಕ್ರಿಯಾಶೀಲರಾಗಿ ಮತ್ತು ಅಧ್ಯಯನಶೀಲರಾಗುವಂತೆ ಸಲಹೆ ನೀಡಿದರು . ಜಿಲ್ಲಾ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಗೌರವವನ್ನು ಉಳಿಸಿಕೊಂಡಿರುವ ಶಿಕ್ಷಕರು ಉತ್ತಮ ಉದಾತ್ತ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು ಎಂದರು . ನ್ಯಾಯಾಂಗ ಇಲಾಖೆಯ ಶಿರಸ್ತೆದಾರ್ ಸರ್ವಮಂಗಳ ದೇವಿ ಮಾತನಾಡಿ , ಸ್ವಾತಂತ್ರ್ಯ ಹೋರಾಟಗಾರರು ನಿವತ ಶಿಕಕರು , ಹುತಾತರನು ನೆನಪು ಶಾಶತಗೊಳಿಸಲು ಶಿಕಕರನ್ನು ಸನ್ಮಾನಿಸುವ ಕಾರ್ಯ ಸುತಾರ್ಹ ಎಂದರು .
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡರಾದ ಚಾಮುಂಡೇಶ್ವರಿ ದೇವಿ ಅಧ್ಯಕ್ಷತೆ ವಹಿಸಿದ್ದು , ಬಗ್ಗೆಹೊಸಹಳ್ಳಿ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಸನ್ಮಾನಿಸಿದ ಈ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಮಹದೇವ ನಾಯಕ್ , ರಾಮಚಂದ್ರ , ಅನಸೂಯಮ್ಮ , ಡಾ.ಅಮೃತವಾಣಿ , ಸುಷ್ಮಾ , ಜಾಹ್ನವಿ , ಭರತ್ ಕುಮಾರ್ , ಸುಹಾಸ್ , ಸುಭಿಕ್ಷ ಮತ್ತಿತರರು ಉಪಸ್ಥಿತರಿದ್ದರು .