ಸೆಪ್ಟಂಬರ್ 1 ರಿಂದ ಶಾಲೆಗಳು ಆರಂಭವಾಗುವ ಸೂಚನೆಗಳು ಲಭಿಸಿವೆ,ಮೊದಲಿಗೆ 10,11,12ನೇ ತರಗತಿ

JANANUDI.COM NETWORK

ಕೇಂದ್ರ ಸರಕಾರವು ಸೆಪ್ಟಂಬರ್ 1 ರಿಂದ ಶಾಲೆಗಳು ಆರಂಭಿಸಲು ಅನುಮತಿ ನೀಡುವ ಸೂಚನೆಗಳು ಲಭಿಸಿವೆ. ಆ ಪ್ರಕಾರ ಮೊದಲ ಹಂತವಾಗಿ ಸೆಪ್ಟಂಬರ್ 1 ರಿಂದ 10,11,12ನೇ ತರಗತಿಗಳು ಆರಂಭ, ಸೆಪ್ಟಂಬರ್ 15 ರಿಂದ 6 ನೆಯಿಂದ 9 ರ ತರಗತಿಗಳು, ನವೆಂಬರ್ 15 ರಿಂದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳು ಆರಂಭಿಸುವುದಾಗಿ ಕೆಂದ್ರ ಗ್ರಹ ಇಲಾಖೆ ಸೂಚನೆನೀಡಿದೆ.
ಯಾವುದೇ ಕಾರಣಕ್ಕೆ ಈ ವರ್ಷ ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅದರೆ ರಾಜ್ಯ ಸರಕಾಗಳು ಶಾಲೆಗಳು ಆರಂಭಿಸಲು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲಾವೆಂದು ತಿಳಿದು ಬಂದಿದೆ. ಕರ್ನಾಟಕ ಸೇರಿ ಬಿಜೆಪಿ ಆಡಳಿತ ಇರುವ ರಾಜ್ಯಗಳು,ಕೇಂದ್ರಸರಕಾರದ ಸೂಚನೆಗಳನ್ನು ಪಾಲಿಸುವ ಸಾಧ್ಯತೆ ಕಂಡು ಬರುತ್ತದೆ ಎಂದು ಮಾಹಿತಿಗಳು ಲಭ್ಯವಾಗಿವೆ.
ಅದರೆ ಎಲ್ಲಾ ಕಡೆ ಕೊರೊನಾ ಸೊಂಕಿನಿಂದ ಲಾಕ್ ಡೌನ್ ಇದ್ದುದರಿಂದ ತೊಡಕಾಗುವ ಸಂದರ್ಭಗಳು ಎದುರಾಗುವ ಸಂಭವ ಇದೆ.