ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಸೂಪರ್ಸ್ಟಾರ್ ರಜಿನಿಕಾಂತ್ ಸಹೋದರನಿಗೆ ಬೆಂಗಳೂರಿನ ಅಪೊಲೊ ಹಾಸ್ಪಿಟಲ್ನಲ್ಲಿ ಯಶಸ್ವಿ ಜೋಡಿ ಕೀಲು ಜೋಡಣೆ ಕಸಿ ಶಸ್ತ್ರಚಿಕಿತ್ಸೆ – ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ
ಕೋಲಾರ:- ಬೆಂಗಳೂರಿನ ಶೇಷಾದ್ರಿಪುರಂನ ಅಪೊಲೊ
ಹಾಸ್ಪಿಟಲ್ನಲ್ಲಿ ಬೈಲೇಟರಲ್ ನೀ ರೀಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೆ
ಒಳಗಾಗಿರುವ ತಮ್ಮ ಸಹೋದರ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರನ್ನು ಸೂಪರ್ಸ್ಟಾರ್ ರಜಿನಿಕಾಂತ್ ಬುಧವಾರ ಭೇಟಿ ಮಾಡಿದರು.
77 ವರ್ಷದ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರು ತಮ್ಮ ಮಂಡಿಯಲ್ಲಿ ಗಂಭೀರವಾದ ಅಸ್ಥಿ ಸಂಧಿವಾತ (ಓಸ್ಟಿಯೊಆರ್ಥರೈಟೀಸ್-ಓಎಸ್) ಸಮಸ್ಯೆಯಿಂದ ಬಳಲುತ್ತಿದ್ದು, ಬಹಳ ಕಾಲದಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಸತ್ಯನಾರಾಯಣ ಅವರು ಈಗ ಆರಾಮವಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ನಡೆಯಲು ಅವರಿಗೆಸಾಧ್ಯವಾಗಿದೆ.
ಮಂಡಿ ಮರು ಜೋಡಣೆ ಶಸ್ತ್ರ್ರಚಿಕಿತ್ಸೆಗೆ ಒಳಗಾದ ನನ್ನ ಎಲ್ಲ ರೋಗಿಗಳು ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ, 14 ದಿನಗಳ ನಂತರ ಹೊಲಿಗೆಗಳನ್ನು ತೆಗೆಯಲಾಗುತ್ತದೆ, ಮೂರುವಾರಗಳ ಬಳಿಕ ರೋಗಿಯು ಸ್ವಯಂ ಆಗಿ ಒಂದು ಕಿ.ಮೀ.ವರೆಗೆ ನಡೆಯಲು ಶಕ್ತರಾಗಿರುತ್ತಾರೆ. ಜತೆಜತೆಗೆ ನಿರಂತರವಾದ ದೈಹಿಕ ವ್ಯಾಯಾಮದ ಅಗತ್ಯವಿರುತ್ತದೆ. ನನ್ನ ರೋಗಿಗಳು ಪ್ರತಿದಿನ 3ರಿಂದ 5ಕೀ.ಮೀ.ಗಳವರೆಗೆ ನಡೆಯಬಲ್ಲರು ಹಾಗೂ ಅವರು ಗುಣಮಟ್ಟದ ಜೀವನ ನಡೆಸುತ್ತಿದ್ದು, ನೋವುರಹಿತ ಮತ್ತು ಸಂಸತಸಕರ ಜೀವನ
ನಡೆಸುತ್ತಿದ್ದಾರೆ ಎಂದು ಬೆಂಗಳೂರಿನ ಶೇಷಾದ್ರಿಪುರಂ ಅಪೊಲೊ ಹಾಸ್ಪಿಟಲ್ನ
ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ.ಕಿರಣ್ ಚೌಕ ತಿಳಿಸಿದರು.
ಭಾರತವು ಪ್ರಸ್ತುತ ಸಾಂಕ್ರಾಮಿಕವಾಗಿ ಮಂಡಿ ಕಾಯಿಲೆಗಳನ್ನು ಎದುರಿಸುತ್ತಿದೆ.
ಇತ್ತೀಚಿನ ಅಧ್ಯಯನದ ಪ್ರಕಾರ 10 ಕೋಟಿಗೂ ಅಧಿಕ ಭಾರತೀಯರು ಮಂಡಿಗೆ
ಸಂಬಂಧಿಸಿದ ಸಮಸ್ಯೆಗಳಾದ ಮೃದ್ವಸ್ಥಿ (ಕಾರ್ಟಿಲೇಜ್), ಎಸಿಎಲ್ ಟಿಯರ್
(ಅಸ್ಥಿರಜ್ಜಿನ ಹಾನಿ ಅಥವಾ ಉಳುಕು), ಪ್ರಮುಖ ಮಂಡಿ ಉಳುಕು ಹಾಗೂ
ವಯೋಸಹಜವಾದ ಇತರೆ ಸಮಸ್ಯೆಗಳಾದ ಕ್ಷೀಣಗೊಳ್ಳುವ ಸಂಧಿವಾತ,
ರುಮಾಟಾಯ್ಡ್ ಸಂಧಿವಾತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಥರದ
ಸಮಸ್ಯೆಗಳಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳಿಂದ
ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆಗಳ ಸಂಖ್ಯೆಯು ಹೆಚ್ಚಳವಾಗಿದೆ.
ಅಸ್ಥಿಸಂಧಿವಾತ (ಓಎಸ್) ಸಮಸ್ಯೆಯು ವಯಸ್ಸಾದವರಲ್ಲಿ ಹೆಚ್ಚು
ಕಂಡುಬರಲಿದ್ದು, 75 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಶೇ.70ರಿಂದ ಶೇ.
90ರಷ್ಟು ಮಂದಿಗೆ ಈ ಸಮಸ್ಯೆ ಕಂಡುಬರುತ್ತದೆ. ಸಾಮಾನ್ಯವಾಗಿ ಕಂಡು
ಬರುವ ಸಂಧಿವಾತ ಸಮಸ್ಯೆಗಳಲ್ಲಿ ಅಸ್ಥಿಸಂಧಿವಾತ (ಓಎಸ್)ವು
ದುರ್ಬಲಗೊಳಿಸುವ, ಗಂಭೀರವಾದ ಕಾಯಿಲೆಯಾಗಿದ್ದು, ಹಾನಿಗೊಳಗಾದ ಅಸ್ಥಿರಜ್ಜು ಮತ್ತು ಸೈನೋವಿಯಲ್ ದ್ರವ ಕ್ಷೀಣಿಸುತ್ತಿರುತ್ತದೆ” ಎಂದು ಡಾ. ಕಿರಣ್ ಚೌಕ ತಿಳಿಸಿದರು. ಭಿನ್ನ ಸ್ವರೂಪದ ಕೀಲು ಸಮಸ್ಯೆಯಿಂದ ಬಳಲುತ್ತಿರುವ ನನ್ನ ಹೆಚ್ಚಿನ ರೋಗಿಗಳು ಕೋಲಾರ ಭಾಗದಿಂದ ಬರುತ್ತಾರೆ ಎಂದು ತಿಳಿಸಿದರು.