ಸಾಹಿತ್ಯ ಸಮ್ಮೇಳನ ಈ ಬಾರಿ ಗಡಿ ಬಾಗದಲ್ಲಿ ಉತ್ತಮವಾಗಿ ಆಚರಿಸಲು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿ ಊರ ಹಬ್ಬದಂತೆ ಆಚರಿಸ ಬೇಕು:ಕಸಾಪ ಅಧ್ಯಕ್ಷ ಕುಬೇರಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಸಾಹಿತ್ಯ ಸಮ್ಮೇಳನ ಈ ಬಾರಿ ಗಡಿ ಬಾಗದಲ್ಲಿ ಉತ್ತಮವಾಗಿ ಆಚರಿಸಲು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿ ಊರ ಹಬ್ಬದಂತೆ ಆಚರಿಸ ಬೇಕು:ಕಸಾಪ ಅಧ್ಯಕ್ಷ ಕುಬೇರಗೌಡ

ಸಾಹಿತ್ಯ ಸಮ್ಮೇಳನ ಈ ಬಾರಿ ಗಡಿ ಬಾಗದಲ್ಲಿ ಉತ್ತಮವಾಗಿ ಆಚರಿಸಲು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿ ಊರ ಹಬ್ಬದಂತೆ ಆಚರಿಸಲು ಒತ್ತು ಕೊಟ್ಟು ಬಾಗವಹಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಕುಬೇರಗೌಡ ಹೇಳಿದರು.
ಇಲ್ಲಿನ ವೆಂಕಟೆಶ್ವರ ಪ್ಯಾರ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ತಾಲೂಕು 10ನೇ ಸಾಹಿತ್ಯ ಸಮ್ಮೇಳನ ಮತ್ತು ಸಮ್ಮೇಳನಾಧ್ಯಕ್ಷರ ಆಯ್ಕೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಮನೆ ಹಬ್ಬದಂತೆ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಸಲಹೆ ಸೂಚನೆಗಳು ಕೊಟ್ಟು ಸುಸೂತ್ರವಾಗಿ ನೆರವೇರಲು ಕೈ ಜೋಡಿಸಬೇಕೆಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ಎಂ.ಶ್ರೀರಾಮರೆಡ್ಡಿ, ಪಾತಮುತಕಪಲ್ಲಿ ಚಲಪತಿಗೌಡ ಮತ್ತು ವೆಂಕಟಸ್ವಾಮಿ ಸೇರಿ ನಾಲ್ಕೈದು ಮಂದಿಯ ಹೆಸರು ಪ್ರಾಸ್ತಾಪಿಸಿ ಚೆರ್ಚಿಸಿದ ನಂತರ ಪ್ರಥಮ ಪ್ರ್ರಾಶಸ್ತ್ಯ ಎಂ.ಶ್ರೀರಾಮರೆಡ್ಡಿ ಅರನ್ನು ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಗುರುತಿಸಲು ಕುಬೇರಗೌಡ ಸೂಚಿಸಿದಾಗ ಸಾಹಿತಿ ಆರ್.ಚೌಡರೆಡ್ಡಿ ದನಿಗೂಡಿಸಿದಾಗ ಸಭೆಯಲ್ಲಿದವರೆಲ್ಲ ಸಹಮತ ವ್ಯಕ್ತಪಡಿಸಿ ಅವರನ್ನೆ ಸಮ್ಮೇಳನಾಧ್ಯಕ್ಷರಾಗಿ ಮಾಡಲು ಸಮ್ಮತಿಸಿದರು.
ಈ ಬಾರಿ ಚುನಾವಣೇಗಳು ಇದಿದ್ದರಿಂದ 2019ರ ಸಮ್ಮೇಳನ ಇದೇ ತಿಂಗಳಲ್ಲಿ ಮಾಡಬೇಕು. ಇಲ್ಲವಾದರೆ ಸರಕಾರದ ಪ್ರೋತ್ಸಾಹಧನ ಬಿಡುಗಡೆ ಆಗುವುದಿಲ್ಲವೆಂದು ರಾಜ್ಯ ಮತ್ತು ಜಿಲ್ಲಿ ಸಂಘದಿಂದ ಮಾಹಿತಿ ನೀಡಿದ್ದಾರೆ. ಗೌನಿಪಲ್ಲಿ ಅಥವಾ ರಾಯಲ್ಪಾಡು ಪಂಚಾಯಿತಿ ಕೇಂದ್ರದಲ್ಲಿ ಒಂದು ಕಡೆ ಸಮ್ಮೇಳನ ಆಚರಿಸಿಲು ಅಲ್ಲಿನ ಸೌಲಭ್ಯಗಳು ನೋಡಿಕೊಂಡು ಸ್ಥಳ ನಿಗದಿ ಮಾಡಲು ತೀರ್ಮಾನಿಸಿದರು. ಕಾರ್ಯಕ್ರಮಕ್ಕೆ ಬರುವ ಗಣ್ಯರು ರಾತ್ತಿ ವೇಳೆ ಉಳಿಯಲು ಸ್ಥಳ ಇರಬೇಕು. ಕಾರ್ಯಕ್ರಮದ ವೆಚ್ಚÀಗಳಿಗೆ ಸರಕಾರದಿಂದ 1 ಲಕ್ಷ ರೂ. ಮಾತ್ರ ಬರುತ್ತಿದ್ದು. ಈ ಹಿಮದಿನ 2017ರಲ್ಲಿ 70 ಸಾವಿರ ರೂ. 2018 ರ ಸಮ್ಮೇಳನಕ್ಕೆ 80 ಸಾವಿರ ರೂ. ಹೆಚ್ಚುವರಿಯಾಗಿ ವೆಚ್ಚವಾಗಿದೆ ಎಂದು ತಿಳಿಸಿದಾಗ, ಬರುವ ಹಣ ಮತ್ತು ಕನ್ನಾಢಾಭಿ ಮಾನಿಗಳಿಂದ ಆರ್ಥಿಕ ಸಹಕಾರ ಪಡೆದುಕೊಂಡು ದುಂದು ವೆಚ್ಚ ಮಾಡದೆ ಹಣ ಸದ್ಬಳಕೆ ಮಾಡಿ ವಿವಿದ ವಲಯಗಳಲ್ಲಿ ಶ್ರಮಿಸಿರುವ ನಾಲ್ಕೈದು ಮಂದಿ ಸಾಧಕರು ಗುರುತಿಸಿ ಸನ್ಮಾನಿಸಿ, 10ನೇ ತರಗತಿ ಮಾತೃಬಾಷೆ ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡ ಗೌರವಿಸುತ್ತೆ ಸಭೆಯಲ್ಲಿ ಚೆರ್ಚಿಸಿ ತೀರ್ಮಾನಿಸಿದರು.
ಕಾರ್ಯಕ್ರಮ: ಕವಿ ಘೋಷ್ಠಿ, ವಚನ ಕಮ್ಮಟ, ಪುಸ್ತಕ ಬಿಡುಗಡೆ, ಸ್ಥಳಿಯ ಕಲಾವಿದರಿಂದ ಸುಗಮ ಸಂಗೀತ, ಕನ್ನಡ ಜಾನುಪದ ಕಲಾವಿದರಿಂದ ಹಾಡುಗಳ ಗಾಯನ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಿದರು. ವಿಧಾನಸಭ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರನ್ನು ಬೇಟಿ ಮಾಡಿ ಅವರು ಕೊಡುವ ದಿನಾಂಕದಂದು ಸಮ್ಮೇಳನ ಮಾಡಲು ತೀರ್ಮಾನಿಸಿದರು. ಜನಪ್ರತಿನಿಧಿಗಳು ಮತ್ತು ಗಣ್ಯರನ್ನು ಆಹ್ಚಾನಿಸಲಾಗುತ್ತದೆ ಎಂದು ಹೇಳಿದರು. ಗೌರವಾಧ್ಯಕ್ಷ ಆರ್.ಚೌಡರೆಡ್ಡಿ, ಕಾರ್ಯದರ್ಶಿ ವೆಂಕಟಾಚಲಪತಿ ಕಲಾ ಶಂಕರ್, ಉಪನ್ಯಾಸಕ ವಾಜೀದ್, ನಟರಾಜ್ ಉಪಸ್ಥಿತರಿದ್ದರು.
6ಶ್ರೀನಿವಾಸಪುರ1: ವೆಂಕಟೇಶ್ವರ ಪ್ಯಾರ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇನ ಪೂರ್ವಭಾವಿ ಕಾರ್ಯಕಾರಿಸಮಿತಿ ಸಭೆಯಲ್ಲಿ ಉಪನ್ಯಾಸಕ ವಾಜೀದ್ ಮಾತನಾಡಿದರು.