ಸಮುದಾಯೋತ್ಸವ-2020 ಬಿಶಪ್ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರಿಂದ ಉದ್ಘಾಟನೆ : ನಾವು ಚರ್ಚ್ ಗೋಡೆಗಳಿಂದ ಹೊರ ಬಂದು ಇತರ ಸಮಾಜದೊಂದಿಗೆ ಬೆರೆತು ಜಿವಿಸ ಬೇಕು

JANANUDI.COM NETWORK

 

ಸಮುದಾಯೋತ್ಸವ-2020 ಬಿಶಪ್ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರಿಂದ ಉದ್ಘಾಟನೆ : ನಾವು ಚರ್ಚ್ ಗೋಡೆಗಳಿಂದ ಹೊರ ಬಂದು ಇತರ ಸಮಾಜದೊಂದಿಗೆ ಬೆರೆತು ಜಿವಿಸ ಬೇಕು

 

 

 

 

ಉಡುಪಿ : “ನಾವು ಚರ್ಚ್ ಗೋಡೆಗಳಿಂದ ಹೊರ ಬಂದು ಇತರ ಸಮಾಜದೊಂದಿಗೆ ಬೆರೆತು ಜಿವಿಸ ಬೇಕು. ನಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು.  ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಿರುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಇದರ ಉದ್ಘಾಟನೆಯನ್ನು ನೆರವೇರಿಸಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ  ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿದರು.

 

    ದೇಶದಲ್ಲಿ ಇಂದು ಪ್ರಜಾಪ್ರಭುತ್ವ ದುರ್ಬಲ ಗೊಳ್ಳುತ್ತಲಿದೆ.   ವಸ್ತುಗಳ ಬೆಲೆ ಏರುತ್ತಿದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಆರ್ಥಿಕ ಸ್ಥಿತಿ ಕಳೆಗುಂದಿದೆ, ಹೀಗಿರುವಾಗ ನಾವು ಎಚ್ಚೆತ್ತುಕೊಳ್ಳಬೇಕು.  ಇತ್ತಿಚಿನ   ವರ್ಷಗಳಿಗೆ ಹೋಲಿಸಿದರೆ ನಮ್ಮ ಧರ್ಮಪ್ರಾಂತ್ಯದ ಹಿರಿಯರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಸಮುದಾಯವಾಗಿ ನಾವು ನಮ್ಮ ಜಿಲ್ಲೆಯಲ್ಲಿ ಬಹುಮತದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಆದರೆ ನಮಗೆ ಸಿಗ ಬೇಕಾದ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲರಾಗಿದ್ದೆವೆ ನಾವು ನಮ್ಮ ಹಿಂಜರಿಯುವ ಗುಣದಿಂದಾಗಿ ನಮ್ಮ ಶಕ್ತಿಯನ್ನು ಅಥವಾ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ನಮ್ಮ ದೇಶದ ಪ್ರಜೆಗಳು. ನಾವು ಭಾರತೀಯ ಮೂಲದವರು ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದೇವೆ. ನಾವು  ಎಲ್ಲದಕ್ಕೂ ಧಾರ್ಮಿಕ ಮುಂದಾಳತ್ವಕ್ಕೆ ಹೊಂದಿಕೊಂಡು ಇದ್ದೆವೆ. ಅದು ಬಿಟ್ಟು ಸಮಾಜದ ಜನರು ಮುಂದಾಳತ್ವವನ್ನು ವಹಿಸಿಕೊಳ್ಳಬೇಕು. ಧಾರ್ಮಿಕ ಮುಖಂಡರನ್ನು ಅವಲಂಬಿಸುತ್ತಿದ್ದು ನಾವಾಗಿ ಯಾವುದೇ ನಿರ್ಧಾರ ಕೈಗೊಳ್ಳೂವ ನಿಟ್ಟಿನಲ್ಲಿ ಶಕ್ತರಾಗಬೇಕು’ ಎಂದು ಅವರು ಸಂದೇಶ ನೀಡಿದರು.

 

     ಮುಖ್ಯ ಅತಿಥಿಗಳಾಗಿ ಆಗಮಿಸಿದ ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತು ಖೇದ ವ್ಯಕ್ತಪಡಿಸಿ ಮಾತನಾಡಿ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರ ದೇಶದ ಅಭಿವೃದ್ಧಿಗೆ ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಪ್ರಸ್ತುತ ನೇರವಾಗಿ ಅಲ್ಲವಾದರೂ ಕ್ರೈಸ್ತ ಸಮುದಾಯವನ್ನು ವಿವಿಧ ರೀತಿಯಲ್ಲಿ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ಉಂಟಾಗಿದೆ.  ಉದಾಹರಣೆ ಎಂಬಂತೆ ಕನಕಪುರದ ಕ್ರಿಸ್ತ ಪ್ರತಿಮೆ ನಿರ್ಮಾಣದಲ್ಲಿ ನಡೆಯುತ್ತಿರುವ ರಾಜಕೀಯ ನಾಚಿಕೆಗೀಡು. ಅಲ್ಲಿನ ಪ್ರತಿ ಕ್ರೈಸ್ತ ಕುಟುಂಬಗಳು ಒಂದು ಲಕ್ಷ ದೇಣಿಗೆ ನೀಡಿ ಯೇಸು ಕ್ರಿಸ್ತರ ಮೂರ್ತಿ ನಿರ್ಮಾಣ ಮಾಡಲು ಹೊರಟರೆ ಅದಕ್ಕೆ ವಿರೋಧ ಮಾಡುತಿದ್ದಾರೆ.  ಇಂದು ದೇಶದಲ್ಲಿ ಪ್ರತಿಯೊಬ್ಬರ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಯಾವುದೇ ವಿರೋಧ ಇಲ್ಲ ಆದರೆ ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮಾತ್ರ ವಿರೋಧ ಯಾಕೆ ಎಂದು  ಕೇಳುತ್ತಾ. ನನ್ನ ಹಿರಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದಾರೆ, ಮೋದಿ ಮತ್ತು ಶಾ ಸ್ವಾತಂತ್ರ್ಯ ಸಂಗಾರಮದಲ್ಲಿ  ಭಾಗವಹಿಸಿದ್ದಾರಾ?    ಎಂದು ಪ್ರಶ್ನೆ ಹಾಕಿದರು, ಮೋದಿಯ ಡಿಗ್ರಿ ಸರ್ಟಿಫಿಕೆಟ್ ಇನ್ನು ಹುಡುಕಲಾಗಲಿಲ್ಲಾ, ಇತ್ತೀಚೆಗೆ ಹೊಸದಾಗಿ ಪೌರತ್ವ ನೋಂದಣಿ ಕಾಯ್ದೆಯ ಮೂಲಕ ದೇಶದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹೊಸ ಪೌರತ್ವ ನೋಂದಣಿ ಕಾಯಿದೆಯ ಪ್ರಕಾರ ನಮ್ಮ ಅಜ್ಜ ಮತ್ತು ಪೂರ್ವಜರ ಜನನ ಪ್ರಮಾಣ ಪ್ರತ್ರ ನೀಡಲು ಕೇಳುತ್ತಾರೆ.  ಮತ್ತೆ ನಾವೆಲ್ಲಾ ನಮ್ಮ ಅಜ್ಜ ಅಜ್ಜಿಯರ ದಾಖಲೆ ಹುಡುಕಲಿಕ್ಕಾಗುತ್ತೆದೆಯೊ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿಸಿದರು.ಈ ಕಾಯಿದೆ ಕ್ರೈಸ್ತರು ಮತ್ತು ಮುಸ್ಲಿಂರಿಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಎಲ್ಲಾ ಭಾರತೀಯರಿಗೆ ಸಂಬಂಧಿಸಿದೆ. ನಾನು ಭಾರತೀಯಳಾಗಿ ಜನಸಿದ್ದು ಮತ್ತೊಮ್ಮೆ ಇದನ್ನು ಸಾಬೀತುಪಡಿಸಬೇಕಾಗಿಲ್ಲ ಅದಕ್ಕಾಗಿ ಮತ್ತೊಮ್ಮೆ ಅದಕ್ಕಾಗಿ ಯಾವುದೇ ಅರ್ಜಿಯನ್ನು ಭರ್ತಿ ಮಾಡುವುದಿಲ್ಲ. ನಮ್ಮ ಏನೂ ತಿಳಿಯದ ಬಡ ಜನರ ಪ್ರಮಾಣ ಪತ್ರಗಳನ್ನು ಕೇಳುವುದು ಸರಿಯಲ್ಲ’ ಎಂದರು.

 

ಕಾರ್ಯಕ್ರಮದಲ್ಲಿ ಎಡ್ವರ್ಡ್ ಲಾರ್ಸನ್ ಡಿಸೋಜಾ ಅವರ ನಮ್ಮ ಸಂವಿಧಾನ ಮತ್ತು ಹಕ್ಕುಗಳು ಇದರ ಕೊಂಕಣಿ ಪುಸ್ತಕ ಹಾಗೂ ಡಾ|ಜೆರಾಲ್ಡ್ ಪಿಂಟೊ ರಚಿತ ಕೆಥೊಲಿಕ್ ಸಭಾ ಚರಿತ್ರೆಯ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು.

 

ಕ್ರೈಸ್ತ ಸಮುದಾಯದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ವಿಚಾರದಲ್ಲಿ ಮಾಜಿ ಶಾಸಕ ಹಾಗೂ ನಿವೃತ್ತ ಕೆ ಎಸ್ ಅಧಿಕಾರಿ ಜೆ ಆರ್ ಲೋಬೊ ಪ್ರಧಾನ ಭಾಷಣ ಮಾಡಿದರು.

 

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ, ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್,  ನಿವೃತ್ತ ಕೆ ಎ ಎಸ್ ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ನ್ಯಾಯಾವಾದಿ ವಂ|ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ, ಹಿರಿಯ ಪತ್ರಕರ್ತ ಗ್ಯಾಬ್ರಿಯಲ್ ವಾಸ್, ಮಿಲಾಗ್ರಿಸ್  ಕಾಲೇಜಿನ ಪ್ರಾಂಶುಪಾಲ ಡಾ|ವಿನ್ಸೆಂಟ್ ಆಳ್ವ, ಮುಂಬೈ ಮಾಡೆಲ್ ಬ್ಯಾಂಕಿನ ಆಲ್ಬರ್ಟ್ ಡಿಸೋಜಾ, ಎಐಸಿಯು ಕಾರ್ಯದರ್ಸಿ ಜೆನೆಟ್ ಡಿಸೋಜಾ, ಎ ಐ ಸಿಯು ಅಧ್ಯಕ್ಷ ಆಸ್ಸಿಸಿ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ರೋಲ್ಫಿ ಡಿಕೊಸ್ತಾ, ಜಾನ್ ಡಿಸಿಲ್ವಾ, ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಪ್ರಮೀಳಾ ಡೆಸಾ, ಎಲಿಯಾಸ್ ಡಿಸೋಜಾ ಸಂತೆಕಟ್ಟೆ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ವಲೆರೀಯನ್ ಫೆರ್ನಾಂಡಿಸ್, ಸಮುದಾಯೋತ್ಸವ ಸಂಚಾಲಕ ಎಲ್ ರೋಯ್ ಕಿರಣ್ ಕ್ರಾಸ್ಟೊ, ವಲಯಗಳ ಅಧ್ಯಕ್ಷರಾದ ರೊನಾಲ್ಡ್, ಹೆರಿಕ್ ಗೊನ್ಸಾಲ್ವಿಸ್, ಐಡಾ ಕರ್ನೆಲಿಯೊ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ಸಮುದಾಯೋತ್ಸವ ಕಾರ್ಯದರ್ಶಿ ಮೇರಿ ಡಿಸೋಜಾ ವಂದಿಸಿದರು. ಲೆಸ್ಲಿ ಆರೋಜಾ, ಎಡ್ವರ್ಡ್ ಲಾರ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.