ಸಂಪ್ರದಾಯದಂತೆ ಗರಿಗಳ ಭಾನುವಾರ ಆಚರಣೆಯಿಲ್ಲಾ, ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಬಲಿದಾನ ಅರ್ಪಿಸಿದೆವು : ಫಾ||ಸ್ಟ್ಯಾನಿ ತಾವ್ರೊ

JANANUDI.COM NET WORK

 

ಸಂಪ್ರದಾಯದಂತೆ ಗರಿಗಳ ಭಾನುವಾರ ಆಚರಣೆಯಿಲ್ಲಾ, ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಬಲಿದಾನ ಅರ್ಪಿಸಿದೆವು : ಫಾ|ಸ್ಟ್ಯಾನಿ ತಾವ್ರೊ

 

 

ಕುಂದಾಪುರ,ಎ.5: ಯೇಸು ಸ್ವಾಮಿಯು ತನ್ನ ಪಿತನ ಯೋಜನೆಯಂತೆ, ಲೋಕ ಕಲ್ಯಾಣಕ್ಕಾಗಿ,ಇಹಲೋಕದ ಜನರ ಉಳಿವಿಗಾಗಿ, ಜನರನ್ನು ಪಾಪಗಳಿಂದ ವಿಮೋಚಿಸಲಿಕ್ಕಾಗಿ ಶಿಲುಭೆಯ ಮೇಲೆ ತನ್ನ ಜೀವವದ ಬಲಿದಾನವನ್ನೆ ನೀಡುವ ಉದ್ದೇಶದಿಂದ ಜೆರುಸಾಲೆಮ್ ನಗರದೊಳಗೆ ಪ್ರವೇಶಿಸುತ್ತಾರೆ, ಅವಾಗ ಜನರು ಅವರನ್ನು ಒಲೀವ್ ಮರದ ಗರಿಗಳನ್ನು ಹಿಡಿದುಕೊಂಡು “ಹೊಸನ್ನಾ ದಾವಿದನ ಪುತ್ರನೇ ಜಯವಾಗಲಿ, ದೇವರ ನಾಮದಲ್ಲಿ ಬರುವಂತವನೇ, ಹೊಸಾನ್ನಾ ಸರ್ವ ಶ್ರೇಶ್ಠ ದೇವನಿಗೆ ಹೊಸಾನ್ನಾ” ಎಂದು ಯೇಸುವನ್ನು ಸ್ವಾಗತಿಸಿದ ಹಬ್ಬವೇ ಕ್ರೈಸ್ತರು ಆಚರಿಸುವ ಗರಿಗಳ ಭಾನುವಾರ
ಕ್ರೈಸ್ತರಿಗೆ ಇವತ್ತಿನಿಂದ ಪವಿತ್ರ ವಾರವಾಗಿದ್ದು, ಇವತ್ತು ಎಲ್ಲಾ ಕ್ರೈಸ್ತ ಚರ್ಚುಗಳಲ್ಲಿ ಭಕ್ತಿಯ ಪೂಜೆ ಪಾಠ, ಕರಾವಳಿಯಲ್ಲಿ ಒಲಿವ್ ಎಲೆಯ ಬದಲು ತೆಂಗಿನ ಗರಿಗಳನ್ನು ಹಿಡಿದು ಅದನ್ನು ಆಶಿರ್ವದಿಸಿ ವಿಧಿ ವಿಧಾನಗಳನ್ನು ಆಚರಿಸ ಬೇಕಿತ್ತು. ಆದರೆ ಕೊರೊನಾ ಸಾಂಕ್ರಮಿಕ ಪೀಡೆಯ ದೆಶೆಯಿಂದ ಭಾರತ ದೇಶದ್ಯಾಂತ ಲಾಕ್ ಡೌನ್ ಇದ್ದುದರಿಂದ ಚರ್ಚುಗಳಲ್ಲಿ ಯಾವುದೇ ಥರಹದ ಪೂಜೆ ಪಾಠಗಳು ನಡೆಯಲಿಲ್ಲಾ.

ಈ ಸಂದರ್ಭದಲ್ಲಿ 450 ವರ್ಷದ ಸುಧೀರ್ಘ ಚರಿತ್ರೆಯುಳ್ಳ ಕುಂದಾಪುರ ಹೋಲಿ ರೊಜಾರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರಿಗೆ ಮಾಧ್ಯಮದವ್ರು ಭೇಟಿಯಾದಗ ‘ನಾವು ಸರಕಾರದ ಆಜ್ಞೆಯನ್ನು ಪಾಲಿಸುತ್ತಾ ಸಾರ್ವಜನಿಕವಾಗಿ ಗರಿಗಳ ಭಾನುವಾರದ ಆಚರಣೆಯನ್ನು ಮಾಡಲಿಲ್ಲಾ, ವಯಕ್ತಿಕವಾಗಿ ತುಂಬ ಸರಳ ರೀತಿಯಲ್ಲಿ ಬಲಿದಾನ ಅರ್ಪಿಸಿದೆವು, ಗರಿಗಳನ್ನು ಕೂಡ ಪವಿತ್ರಿಕರಿಸಲಿಲ್ಲಾ, ಭಕ್ತರು ಮನೆಯಲ್ಲೆ ಟಿ.ವಿ., ಯು ಟ್ಯೂಬ್‍ಗಳಲ್ಲಿ ಬರುವಂತಹ ಬಲಿ ಪೂಜೆಯನ್ನು ಆಲಿಸಿ ತಮ್ಮ ಪ್ರಾರ್ಥನೆಯನ್ನು ದೇವರಿಗೆ ಸಲ್ಲಿಸಿದರು’ ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸುತ್ತಾ “ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಮನವಿಯಂತೆ, ಕೊರೊನಾ ಪೀಡೆಯಿಂದ ಮುಕ್ತಿ ಪಡೆಯಲು, ಜನರ ಒಳಿತಿಗಾಗಿ ದೇವರ ಕ್ರಪೆ ಜನರಿಗೆ ದೊರಕುವಂತಾಗಲು, ಸರಿಯಾಗಿ ಮಧ್ಯಾನ್ಹ 3 ಗಂಟೆಗೆ ಒಂದೆ ಸಮಯದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಎಲ್ಲಾ ಕ್ರೈಸ್ತರು ದೈವಿಕ ಕ್ರಪೆಯ ಮಾಲಾಜಪವನ್ನು, ಜಪಿಸಲಾಯಿತು. ಅದರಂತೆಯೇ ನಮ್ಮ ಕುಂದಾಪುರದ ಕ್ರೈಸ್ತರು ದೈವಿಕ ಕ್ರಪೆಯ ಮಾಲಾಜಪವನ್ನು ಜಪಿಸಿದರು’ ಎಂದು ತಿಳಿಸಿದರು.