JANANUDI.COM NETWORK
ಸಂತ ಜೋಸೆಫ್ ಶಾಲಾ ವಾರ್ಷಿಕೋತ್ಸವ- ಮಕ್ಕಳ ಅಭಿರುಚಿಯ ಶಿಕ್ಷಣವನ್ನು ಪ್ರೋತ್ಸಾಹಿಸಿ ಪೋಶಿಸಿ
ಕುಂದಾಪುರ,ಡಿ.21: ’ಯಾವುದೇ ಮಗು ಕಲಿಯುದಿಲ್ಲವೆಂದು, ದೂಷಿಸಬೇಡಿ, ದಂಡಿಸಬೇಡಿ, ಅವರನ್ನು ಪ್ರೀತಿಯಿಂದ ವಿಧ್ಯೆಯ ಮಹತ್ವವನ್ನು ತಿಳಿಸಿ. ಮಕ್ಕಳಲ್ಲಿ ಯಾವ ವಿಷಯದಲ್ಲಿ ಅಭಿರುಚಿ ಇದೆಯೆಂದು ಮಕ್ಕಳಿಂದ ತಿಳಿದುಕೊಳ್ಳಿ, ಅವರ ಅಭಿರುಚಿಯಂತೆ ಅವರಿಗೆ ಪ್ರೋತ್ಸಾಹಿಸಿ ಪೋಶಿಸಿ ಎಂದು ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಿಸ್ಟರ್ ಮರಿಯಾ ಶುಭಾ ಹೇಳಿದರು. ಅವರು ಕುಂದಾಪುರ ಕಾರ್ಮೆಲ್ ಸಂಸ್ಥೆಯ ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆದ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ನುಡಿದರು. ‘ಬೆಳಿಗ್ಗೆ ಮಗು ಶಾಲೆಗೆ ಬರುವ ಮುಂಚೆ ಅವರಿಗೆ ಉತ್ತಮ ಆಹಾರ ಕೊಟ್ಟು ಕಳಿಸಿ, ಬೆಳಿಗ್ಗೆಯ ಸಮಯ ಕಲಿಸಿದ ವಿಧ್ಯೆ ನೆನಪಿನಲ್ಲಿ ಉಳಿಯುತ್ತದೆ, ಆದರೆ ಮಗು ಹಸಿವೆಯಲ್ಲಿದ್ದರೆ, ಮಕ್ಕಳ ಕಲಿಕೆಗೆ, ಗ್ರಹಿಕೆಗೆ ಅಡ್ಡಿಯಾಗುತ್ತದೆ’ ಎಂದು ತಿಳಿಸಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಿರ್ವಚನ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿ ಸಂದೀಪ್ ಕ್ವಾಡರ್ಸ್ ತಮ್ಮ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ‘ಶಿಕ್ಷಣ ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಕುಂದಾಪುರ ವಲಯ ಸುನೀತಾ ಬಾಂಜ್ ‘ಛಲ ಗುರಿ ಇದ್ದರೆ ಎನನ್ನೂ ಸಾಧಿಸಬಹುದು, ಟಿ.ವಿ.,ಮೊಬೈಲ್, ಅಂತರ್‍ಜಾಲಾ, ಕಂಪ್ಯೂಟರ್ ಇವುಗಳನ್ನು ನಿಮ್ಮ ಗುರುಗಳನ್ನಾಗಿಸಕೊಳ್ಳಬೇಡಿ, ನಿಮ್ಮ ಶಾಲಾಗುರುಗಳನ್ನು ನಿಮ್ಮ ನೈಜ್ಯ ಗುರುಗಳನ್ನಾಗಿಸಿಕೊಳ್ಳಿ, ಗುರು ನಿಮ್ಮ ಹಿಂದೆ ಇರುವಾಗ ಗುರಿ ಸುಲಭವಾಗಿ ಮುಟ್ಟಬಹುದು’ ಎಂದು ಅವರು ಹೇಳಿದರು.
ಸಂಸ್ಥೆಯ ಮುಖ್ಯಸ್ಥೆ ವೈಲೆಟ್ ತಾವ್ರೊ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಿರಣ್ ಪಾಯ್ಸ್, ಸಿಸ್ಟರ್ ಮಾರಿ ಎವ್ಜಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನಗಳನ್ನು ಹಂಚಿದರರು. ಮುಖ್ಯ ಶಿಕ್ಷಕಿ ಸಿಸ್ಟರ್ ಕೀರ್ತನ ಶಾಲಾ ವರದಿಯನ್ನು ವಾಚಿಸಿದರು. ನಂತರ ಮಕ್ಕಳಿಂದ ನ್ರತ್ಯ, ಕಿರು ನಾಟಕ, ಟ್ಯಾಬ್ಲೊಗಳ ಪ್ರದರ್ಶನ ನೆಡೆಯಿತು. ಶಿಕ್ಷಕಿ ನವೀತಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಶಿಕ್ಷಕರು ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಶಿಕ್ಷಕಿ ಶಾರದ ವಂದಿಸಿದರು.