ಸಂತ ಜೋಸೆಫ್ ಪ್ರೌಢ ಶಾಲೆ ಪೋಷಕ ಶಿಕ್ಷಕ ಸಭೆ -ಮಕ್ಕಳ ಕಲಿಕೆಯಲ್ಲಿ ಶಿಕ್ಷರಿಕ್ಕಿಂತ ಹೆಚ್ಚು ಪಾತ್ರ ಪೋಷಕರಾಗಿರುತ್ತದೆ

JANANUDI NETWORK

ಸಂತ ಜೋಸೆಫ್ ಪ್ರೌಢ ಶಾಲೆ ಪೋಷಕ ಶಿಕ್ಷಕ ಸಭೆ -ಮಕ್ಕಳ ಕಲಿಕೆಯಲ್ಲಿ ಶಿಕ್ಷರಿಕ್ಕಿಂತ ಹೆಚ್ಚು ಪಾತ್ರ ಪೋಷಕರಾಗಿರುತ್ತದೆ

ಕುಂದಾಪುರ,ಆ.3: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಆಗೋಸ್ತ್ 2 ರಂದು  ಶಾಲೆಯ ಪೋಷಕ ಶಿಕ್ಷಕ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಸಿಸ್ಟರ್ ಕೀರ್ತನ ವಹಿಸಿ ಶುಭ ಕೋರಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು

     ಪೋಷಕರಿಗೆ ತಿಳುವಳಿಕೆ ನೀಡಲು  ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗ್ದ ಮುಖ್ಯಸ್ಥ ಮೆಲ್ವಿನ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ’ಮಕ್ಕಳ ಕಲಿಕೆಯಲ್ಲಿ ಶಿಕ್ಷರಿಕ್ಕಿಂತ ಹೆಚ್ಚು ಪಾತ್ರ ಪೋಷಕರಾಗಿರುತ್ತದೆ. ಮಕ್ಕಳ ಮೇಲೆ ನಿಗಾವಹಿಸಿ ಅವರನ್ನು ಪ್ರೋತ್ಸಾಯಿಸ ಬೇಕು, ಕಲಿಯಲು ಹಿಂದೆ ಇದ್ದ ಮಕ್ಕಳೆಲ್ಲಾ ದಡ್ಡರು ಎಂದು ಭಾವಿಸವಾರದು ಪ್ರಪಂಚಕ್ಕೆ ಬೆಳಕು ನೀಡಿದ ಥೋಮಸ್ ಆಲ್ವಾಎಡಿಸನ್ ಕಲಿಯಲು ಹಿಂದೆ ಇದ್ದ ಮಗನನ್ನು ಅವರ ತಾಯಿ ಪ್ರೋತ್ಸಾಹಿಸಿ ಶಿಕ್ಷಣ ನೀಡಿದಳು. ನಿಮ್ಮ ಮಕ್ಕಳ ಪ್ರಗತಿಯ ಬಗ್ಗೆ ಆಗಾಗ ಶಾಲೆಗೆ ಬಂದು ಕಾಳಜಿ ವಹಿಸಬೇಕು’ ಎಂದು ಅವರು ತಿಳಿಸಿದರು.

    ವಿದ್ಯಾಅರ್ಥಿಗಳ ಪ್ರಗತಿಯನ್ನು ಪೋಷಕರಿಗೆ ತಿಳಿಸಲಾಯಿತು. ಶಿಕ್ಷಕಿ ಸರ್ಸ್ಪತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಿಸ್ಟರ್ ಐವಿ ನಿರ್ಮಲ ಪಿಂಟೊ ವಂದಿಸಿದರು.