ಸ. ಹಿ. ಪ್ರಾಥಮಿಕ. ಶಾಲೆ. ಬಸ್ರೂರು. (ಉರ್ದು ): ಶ್ರಮದಾನ ಕಾರ್ಯಕ್ರಮ

JANANUDI.COM NETWORK 

ಸ. ಹಿ. ಪ್ರಾಥಮಿಕ. ಶಾಲೆ. ಬಸ್ರೂರು. (ಉರ್ದು ): ಶ್ರಮದಾನ ಕಾರ್ಯಕ್ರಮ

ಬಸ್ರೂರು: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಸರಾ ರಜೆಯ ಪ್ರಯುಕ್ತ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.. ಶಾಲಾ ಆವರಣದಲ್ಲಿ ಬೆಳೆದಿರುವ ಗಿಡ -ಗಂಟಿ, ಪೊದೆಗಳನ್ನು ತೆಗೆದು, ಶಾಲಾ ಮೈದಾನವನ್ನು ಸ್ವಚ್ಛ ಮಾಡಲಾಯಿತು. . ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಅಜ಼ೀಜ಼್ ಉಪಸ್ಥಿತರಿದ್ದು , ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಶ್ರಮದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.