ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರಲ್ಲಿ ತಾಲ್ಲೂಕು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ನೂತನ ಕಚೇರಿಯನ್ನು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಉದ್ಘಾಟಿಸಿದರು.
ಶ್ರೀನಿವಾಸಪುರ: ಹಂತ ಹಂತವಾಗಿ ಎಲ್ಲ ಗ್ರಾಮಗಳನ್ನೂ ಪೋಡಿ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಹೇಳಿದರು.
ಪಟ್ಟಣದ ಮಿನಿ ವಿಧಾನ ಸೌಧದ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಲ್ಲೂಕು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಈಗಾಗಲೇ ಕೆಲವು ಆಯ್ದ ಗ್ರಾಮಗಳನ್ನು ಪೋಡಿ ಮುಕ್ತ ಗೊಳಿಸಲಾಗಿದೆ. ಈ ಹಿಂದೆ ಭೂ ಮಾಪಕರ ಸಮಸ್ಯೆ ಇತ್ತಾದರೂ, ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗ 86 ಭೂ ಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭೂ ಮಾಪಕರ 7 ಸ್ಥಾನಗಳು ಖಾಲಿ ಇವೆ. ಆದರೂ ಲಭ್ಯವಿರುವ ಸಿಬ್ಬಂದಿಯ ಸೇವೆ ಪಡೆದು ಹೆಚ್ಚುವರಿ ಕೆಲಸವನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಭೂ ಮಾಪನ ಇಲಾಖೆ ಸಿಬ್ಬಂದಿ ನಿಯೋಜಿತ ಕಾರ್ಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ದಾಖಲೆಗಳ ನಿರ್ವಹಣೆ ಸಮರ್ಪಕವಾಗಿರಬೇಕು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜಯಪ್ಪ, ಮೇಲ್ವಿಚಾರಕ ಕೆ.ಆರ್.ಜಗದೀಶ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಭೂ ಮಾಪಕರಾದ ಆಂಜಿನಪ್ಪ, ರಾಮಪ್ರಕಾಶ್ ರೆಡ್ಡಿ, ವೆಂಕಟರಾಮರೆಡ್ಡಿ, ವಸಂತ, ಗುರುಪ್ರಸಾದ್, ವೇಣುಗೋಪಾಲ್, ನಾಗಾರ್ಜುನ, ರಾಜು, ರವೀಂದ್ರ, ಪುಟ್ಟರಾಜು, ಶಿವಕುಮಾರ್, ಮಂಜುನಾಥ್, ಭಾರ್ಗವ ಮತ್ತಿತರರು ಇದ್ದರು.