ಶ್ರೀನಿವಾಸಪುರ ಹೊರ ವಲಯದಲ್ಲಿನ ಕಲ್ಲೂರು ಗ್ರಾಮದ ಸಮೀಪ ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಿಸಲು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಐ.ಎಫ್‌.ಬಿದರಿ  ಸ್ಥಳ ಪರಿಶೀಲನೆ ನಡೆಸಿದರು. 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ಹೊರ ವಲಯದಲ್ಲಿನ ಕಲ್ಲೂರು ಗ್ರಾಮದ ಸಮೀಪ ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಿಸಲು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಐ.ಎಫ್‌.ಬಿದರಿ  ಸ್ಥಳ ಪರಿಶೀಲನೆ ನಡೆಸಿದರು. 
ಶ್ರೀನಿವಾಸಪುರ: ಪಟ್ಟಣದ ಹೊರ ವಲಯದಲ್ಲಿನ ಕಲ್ಲೂರು ಗ್ರಾಮದ ಸಮೀಪ ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಿಸಲು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಐ.ಎಫ್‌.ಬಿದರಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
  ಈ ಹಿಂದೆ ಈಚಲು ಕುಂಟೆ ಕೆರೆ ಅಂಗಳದಲ್ಲಿ ನಿರ್ಮಿಸಲಾಗಿರುವ ನ್ಯಾಯಾಲಯ ಕಟ್ಟಡ ಸುರಕ್ಷಿತವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವರದಿ ನೀಡಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್‌ ಆದೇಶದ ಮೇರೆಗೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲು ಅಗತ್ಯವಾದ ಸ್ಥಳ ಪರಿಶೀಲನೆ ನಡೆಸಲಾಯಿತು ಎಂದು ಹೇಳಲಾಗಿದೆ.
  ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಮಾತನಾಡಿ, ಕಲ್ಲೂರು ಗ್ರಾಮದ ಸಮೀಪ ಸರ್ಕಾರಿ ಜಮೀನು ಲಭ್ಯವಿದ್ದು, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಜಮೀನು ನೀಡಲಾಗುವುದು ಎಂದು ಹೇಳಿದರು.
  ಸ್ಥಳೀಯ ಜೆಎಂಎಫಸಿ ನ್ಯಾಯಾಲಯದ ಅಪರ ಸಿವಿಲ್‌ ನ್ಯಾಯಾಧೀಶ ನಾಗೇಶ್‌ ನಾಯಕ್‌, ಜಿಲ್ಲಾ ಕಾನೂನು ಸೇವಾ ಸಮಿತಿಯ ನ್ಯಾಯಾಧೀಶ ಸಿ.ಎಚ್.ಗಂಗಾಧರ್‌, ತಹಶೀಲ್ದಾರ್‌ ಬಿ.ಎಸ್.ರಾಜೀವ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುಪ್ರಸಾದ್‌, ವಕೀಲರ ಸಂಘದ ಅಧ್ಯಕ್ಷ ಜಯರಾಮೇಗೌಡ, ಮಾಜಿ ಅಧ್ಯಕ್ಷ ಟಿ.ವಿ.ವೆಂಕಟೇಶ್‌, ವಕೀಲರಾದ ವಿನಯ್‌ ಕುಮಾರ್‌, ಅಶ್ವತ್ಥರೆಡ್ಡಿ, ರಾಜಗೋಪಾಲ್‌ ಇದ್ದರು.