ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ ಹಣದ ಆಮಿಶಕ್ಕೆ ಶಿಕ್ಷಕರ ಸೇವಾ ಪುಸ್ತಕದಗೌರವವನ್ನು ಮೊಟುಕುಗೊಳಿಸಿ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ರೆಡ್ಡಿಯವರ ಆಕ್ರೋಶ
ಶ್ರೀನಿವಾಸಪುರ: ಬಿ.ಇ.ಒ.ರವರ ಗಮನಕ್ಕೆ ತರದೆ ಶಿಕ್ಷಕರ ಸೇವಾ ಪುಸ್ತಕದಗೌರವವನ್ನು ಮೊಟುಕುಗೊಳಿಸಿ ಅಧೀಕ್ಷಕ ಮಾರಪ್ಪರೆಡ್ಡಿ ಹಣದ ಆಮಿಶಕ್ಕೆ ಒಳಗಾಗಿ ನೂರಾರು ಶಿಕ್ಷಕರ ಎಸ್.ಆರ್. ಪುಸ್ತಕಗಳನ್ನು ಜೆರಾಕ್ಸ್ ಅಂಗಡಿಗಳಿಗೆ ಕಳುಹಿಸಿ ಎಸ್.ಆರ್. ನ ಗೋಪ್ಯತೆಕಾಪಾಡದೆ ಹಣದ ಆಸೆಗಾಗಿ ಅಧೀಕ್ಷಕ ಮನ ಬಂದಂತೆತನ್ನಕರ್ತವ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದುತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದಅಧ್ಯಕ್ಷಗೋವಿಂದರೆಡ್ಡಿಅಧೀಕ್ಷಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್.ಆರ್. ಪುಸ್ತಕಗಳುಜೆರಾಕ್ಸ್ ಅಂಗಡಿಗಳಲ್ಲಿ ಇರುವುದುಗೋವಿಂದರೆಡ್ಡಿ ಮನಗಂಡು ಬಿ.ಇ.ಒ. ಕಚೇರಿಗೆ ಆಗಮಿಸಿ ಅಧೀಕ್ಷಕರ ಮೇಳೆ ಕೆಂಡಾ ಮಂಡಲರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಇವರು, ತಾಲ್ಲೂಕಿನಲ್ಲಿ ಸುಮಾರು 786 ಶಿಕ್ಷಕರಿದ್ದು, ಪ್ರತಿಯೊಬ್ಬ ಶಿಕ್ಷಕರಸೇವಾ ಪುಸ್ತಕ ಬಹಳ ಮಹತ್ವವಾಗಿದ್ದು, ಶಿಕ್ಷಕರು ನೌಕರಿಗೆ ಸೇರಿದಂದಿನಿಂದ ನಿವೃತ್ತಿಯಾಗುವತನಕಎಸ್.ಆರ್. ನ ಮಹತ್ವ ಬಹಳ ಮುಖ್ಯವಾಗಿದ್ದುಇದನ್ನುಒಬ್ಬ ಶಿಕ್ಷಕ ಪಡೆಯಬೇಕಾದರೆ ಸಂಭಂಧಿಸಿದ ಬಿ.ಇ.ಒ.ರವರಿಗೆ ಮನವಿ ನೀಡಿಇವರಿಂದಅನುಮತಿ ಪಡೆದ ನಂತರಕಚೇರಿಯಗುಮಾಸ್ತ, ಶಿಕ್ಷಕರ ಜೊತೆಗೆ ಬಂದುಜೆರಾಕ್ಸ್ ಮಾಡಿಕೊಡುವುದು ನಿಯಮವಾಗಿದೆ.
6ತಿಂಗಳ ಹಿಂದೆ ಶಿಕ್ಷಣ ಅದಾಲತ್ ನಲ್ಲಿ ಪ್ರತಿಯೊಬ್ಬಶಿಕ್ಷಕರಿಗೂ ಸೇವಾ ಪುಸ್ತಕದ ನಕಲು ಅವಶ್ಯಕತೆಇದೆ. ಜೆರಾಕ್ಸ್‍ಮಾಡಿಕೊಡಲು ನಮ್ಮ ಸಂಘಕ್ಕೆ ಅನುಮತಿ ನೀಡಿದರೆಕಚೇರಿಯಿಂದ ಪಡೆದು ನಾವೆ ಜೆರಾಕ್ಸ್ ಮಾಡಿಸಿಕೊಡುತ್ತೇವೆಂದು ಮನವಿ ಮಾಡಿಕೊಂಡಾಗ, ಇದೆಅಧೀಕ್ಷಕಮಾರಪ್ಪರೆಡ್ಡಿ, ಯಾವುದೆಕಾರಣಕ್ಕೂ ಹೊರಗಡೆಕೊಡಲು ಅಗುವುದಿಲ್ಲ ಎಂದು ಹೇಳಿದ ಇವರು, ಶಿಕ್ಷಕರ ಮನವಿ ಇಲ್ಲದೆ ಬಿ.ಇ.ಒ. ಅನುಮತಿಪಡೆಯದೆನಾನೆ ಬಿ.ಇ.ಒ. ಎಂಬ ಅಹಂ ನಿಂದಇಂದು ಸುಮಾರು 50-ರಿಂದ 100 ಸೇವಾ ಪುಸ್ತಕಗಳು ಜೆರಾಕ್ಸ್ ಅಂಗಡಿಗಳಿಗೆ ಕಳುಹಿಸಿರುವುದು ಖಂಡನೀಯವಾಗಿದೆ. ಅಲ್ಲದೆಅಂಗಡಿಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯತನಕಅಲೆದಾಡುತ್ತಿದ್ದವು.
ಅನೇಕ ಶಿಕ್ಷಕರು ತಮ್ಮ ಸೇವಾ ಅವಧಿಯಎಲ್ಲ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸೇವಾ ಪುಸ್ತಕದ ನಕಲು ನೀಡಬೇಕೆಂದು ಅನೇಕ ಶಿಕ್ಷಕರು ಸಹಿಯನ್ನು ಮಾಡಿರುವ ನಕಲಿನಲ್ಲಿ ಅನೇಕ ಲೋಪಗಳು, ಹೆಸರುಗಳನ್ನು ತಿದ್ದುಪಡಿ ಮಾಡಿರುವುದುಗೋಚರವಾಗುತ್ತಿವೆ. ಇವೆಲ್ಲವನ್ನು ಗಮನಿಸಿದಾಗ ಉದ್ದೇಶ ಪೂರ್ವಕವಾಗಿ ಹಣದ ಆಮಿಶಕ್ಕೊಳಗಾಗಿ ಎಸ್. ಆರ್. ಗಳನ್ನು ಮಾರಾಟಕ್ಕಿಡುವಂತಾಗಿದೆ.
ಬಿ.ಇ.ಒ. ಉಮಾದೇವಿಯವರನ್ನು ಈ ವಿಷಯದ ಬಗ್ಗೆ 11 ಗಂಟೆ ಸಮಯದಲ್ಲಿ ತಿಳಿಸಿದಾಗ ಇದರ ಬಗ್ಗೆ ನನಗೆ ಗೊತ್ತಿಲ್ಲ, ಕೂಡಲೆ 10 ನಿಮಿಷದ ಒಳಗಡೆ ಜೆರಾಕ್ಸ್‍ಅಂಗಡಿಯಿಂದ ವಾಪಸ್‍ತರಿಸುತ್ತೇನೆಂದು ಹೇಳಿದ ಇವರ ಮಾತಿಗೆಅಧೀಕ್ಷಕಕಿಮ್ಮತ್ತುಕೊಡದೆ ಮಧ್ಯಾಹ್ನ 2 ಗಂಟೆಯಾದರೂ ಸೇವಾ ಪುಸ್ತಕಗಳು ಕಚೇರಿಗೆ ಬರಲೇಇಲ್ಲ. ಜೆರಾಕ್ಸ್ ಮಾಡಿಸುವ ಸಂದರ್ಭದಲ್ಲಿಗುಮಾಸ್ತನೂ ಸ್ಥಳದಲ್ಲಿ ಇರುವುದಿಲ್ಲ. ನಮ್ಮ ಶಿಕ್ಷಕರ ಸೇವೆಗೆ ಅಪಮಾನ ಮಾಡಿದ್ದಾರೆ. ಗುಮಾಸ್ತಉಪೇಂದ್ರನನ್ನು ಪ್ರಶ್ನೆಮಾಡಿದಾಗಅಧೀಕ್ಷಕರಅನುಮತಿಯ ಮೇರೆಗೆಜೆರಾಕ್ಸ್‍ಅಂಗಡಿಗೆ ಪುಸ್ತಕಗಳು ಹೋಗಿದೆಎಂದುಉತ್ತರ ನೀಡುತ್ತಾನೆ. ಈ ವಿಷಯವನ್ನುಇಲ್ಲಿಗೆ ನಿಲ್ಲಿಸದೆ ಸಂಭಂಧಪಟ್ಟಆಯುಕ್ತರ ಗಮನಕ್ಕು ತಂದು ನಮಗೆ ಆಗಿರುವಅಪಮಾನದ ಬಗ್ಗೆ ಮತ್ತುಕಚೇರಿಯ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮಜರುಗಿಸುವತನಕನಮ್ಮ ಶಿಕ್ಷಕರ ಸಂಘದಿಂದ ಹೋರಾಟ ನಿಲ್ಲಿಸುವುದಿಲ್ಲ ಎಂದುಗೋವಿಂದರೆಡ್ಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ.ನೌ.ಸಂಘದ ಸಂ.ಕಾ. ಕೃಷ್ಣಾರೆಡ್ಡಿ, ಶಿವರಾಮೇಗೌಡ ಮತ್ತಿತರರು ಹಾಜರಿದ್ದರು.