ಶ್ರೀನಿವಾಸಪುರ, ಸೈನಿಕರ ತ್ಯಾಗ ಹಾಗೂ ಬಲಿದಾನದ ಫಲವಾಗಿ ದೇಶ ವಾಸಿಗಳು ನಿರಾತಂಕವಾಗಿ ಜೀವನ ನಿರ್ವಹಿಸಲು ಸಾಧ್ಯವಾಗಿದೆ: ಪೊಲೀಸ್ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ, ಸೈನಿಕರ ತ್ಯಾಗ ಹಾಗೂ ಬಲಿದಾನದ ಫಲವಾಗಿ ದೇಶ ವಾಸಿಗಳು ನಿರಾತಂಕವಾಗಿ ಜೀವನ ನಿರ್ವಹಿಸಲು ಸಾಧ್ಯವಾಗಿದೆ: ಪೊಲೀಸ್ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌ 
  ಪಟ್ಟಣದ ಯೋಧರ ಸ್ಮಾರಕದ ಸಮೀಪ ಪುಲ್ವಾಮಾ ದಾಳಿಗೆ ಒಂದು ವರ್ಷವಾದ ಸಂದರ್ಭದಲ್ಲಿ ಮಾಜಿ ಯೋಧರಿಂದ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೃತ ಯೋಧರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸೈನಿಕರು ದೇಶದ ಹೆಮ್ಮೆಯ ಪುತ್ರರು. ಅವರಿಗೆ ಅಗತ್ಯವಾದ ಬೆಂಬಲ ನೀಡಬೇಕು. ಅವರ ಸೇವೆಯನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
    ಜಿಲ್ಲಾ ಮಾಜಿ ಸೈನಿಕರ ಟ್ರಸ್ಟ್‌ ಅಧ್ಯಕ್ಷ ಎಚ್‌.ಜಗನ್ನಾಥನ್‌ ಮಾತನಾಡಿ, ಸೈನಿಕನಾಗುವುದು ಹೆಮ್ಮೆಯ ವಿಷಯ. ದೇಶ ಪ್ರೇಮಿಯಾದವನು ಮಾತ್ರ ಸೈನ್ಯಕ್ಕೆ ಸೇರಲು ಮುಂದೆ ಬರುತ್ತಾನೆ. ಉಸಿರಿರುವ ತನಕ ದೇಶದ ರಕ್ಷಣೆಗಾಗಿ ಹೋರಾಡುತ್ತಾನೆ. ಸೈನಿಕರ ಸ್ಮರಣೆಯಿಂದ ದೇಶದ ಬಗ್ಗೆ ಅಭಿಮಾನ ಮೂಡುತ್ತದೆ. ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ ಎಂದು ಹೇಳಿದರು.
  ಟ್ರಸ್ಟ್‌ ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ರಾಮು, ಆನಂದ್‌, ಕುಮಾರ್‌, ಕೇಶವಮೂರ್ತಿ, ಸುರೇಶ್‌, ರಾಮಕೃಷ್ಣ, ರಮೇಶ್‌, ಮೋಹನ್‌, ವಿಶ್ವನಾಥ್‌ ಇದ್ದರು.