ಶ್ರೀನಿವಾಸಪುರ:  ವೃತ್ತಿಯಲ್ಲಿನ ಒತ್ತಡ ನಿವಾರಣೆಗೆ ಪೂರಕವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು, ಹೊಸದಾಗಿ ನೋಂದಣಿ ದಿನಾಂಕ  ಮುಂದೂಡಿಕೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ:  ವೃತ್ತಿಯಲ್ಲಿನ ಒತ್ತಡ ನಿವಾರಣೆಗೆ ಪೂರಕವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು, ಹೊಸದಾಗಿ ನೋಂದಣಿ ದಿನಾಂಕ
 ಮುಂದೂಡಿಕೆ
ಶ್ರೀನಿವಾಸಪುರ:  ವೃತ್ತಿಯಲ್ಲಿನ ಒತ್ತಡ ನಿವಾರಣೆಗೆ ಪೂರಕವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಪ್ರದರ್ಶನ ನೀಡಿ ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಬೆವಿಕಂ ಕೋಲಾರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಆರ್‌.ಸತೀಶ್‌ ಹೇಳಿದರು.
  ಪಟ್ಟಣದ ಕ್ರಿಡಾಂಗಣದಲ್ಲಿ ಸ್ವಾಭಿಮಾನಿ ಪವರ್‌ ಮ್ಯಾನ್‌ಗಳ ಬಳಗದ ವತಿಯಿಂದ ಕೆಪಿಟಿಸಿಎಲ್‌ ಹಾಗೂ ಎಲ್ಲಾ ಎಸ್ಕಾಂಗಳ ಹುತಾತ್ಮ ನೌಕರರ ಸ್ಮರನಾರ್ಥ  ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಉದ್ಘಾಟಿಸಿ ಮಾತನಾಡಿ, ಕಾರ್ಯನಿರ್ವಹಿಸುವಾಗ ಆಕಸ್ಮಿಕವಾಗಿ ವಿದ್ಯುತ್‌ ವಿದ್ಯುತ್ ಸಂಪರ್ಕಕ್ಕೆ ಸಿಕ್ಕಿ ಅಸುನೀಗುವುದು ಸಾಮಾನ್ಯವಾಗಿದೆ. ಅಂಥ ಕುಟುಂಬಗಳಿಗೆ ಸಾಂತ್ವನ ಹೇಳುವುದರ ಜತೆಗೆ ಮೃತರ ಸ್ಮರಣಾರ್ಥ ಕ್ರೀಡಾ ಕೂಟ ಏರ್ಪಡಿಸಲಾಗಿದೆ. ಇದೊಂದು ಉತ್ತಮ ನಡೆಯಾಗಿದೆ ಎಂದು ಹೇಳಿದರು.
  ಸ್ಪರ್ಧೆ ಎಂದಾಕ್ಷಣ ಗೆಲ್ಲಬೇಕು ಎನ್ನುವ ಮನೋಭಾವ ಸಹಜ. ಆದರೆ ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಕ್ರೀಡೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಉಂಟುಮಾಡುತ್ತದೆ. ಕ್ರೀಡಾ ಮನೋಭಾವ ಉಲ್ಲಾಸವನ್ನು ಉಳಿಸುತ್ತದೆ ಹಾಗೂ ಸಾಮಾಜಿ ಒಡನಾಟ ಹೆಚ್ಚಿಸುತ್ತದೆ ಎಂದು ಹೇಳಿದರು.
  ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಾಥ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಪಿಟಿಸಿಎಲ್‌ ಹಾಗೂ ಬೆಸ್ಕಾಂ ವತಿಯಿಂದ ಕೋಲಾರ ವೃತ್ತ ಮಟ್ಟದ ಪಂದ್ಯಾವಳಿ ಏರ್ಪಡಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇದರಿಂದ ನೌಕರರಲ್ಲಿ ಸ್ನೇಹ ಬೆಳೆಯಲು ಸಾಧ್ಯವಾಗುತ್ತದೆ. ಪರಸ್ಪರ ಬೆರೆಯುವುದರಿಂದ ವಿಚಾರ ವಿನಿಮಯ ಸಾಧ್ಯವಾಗುತ್ತದೆ. ಇದು ವೃತ್ತಿ ಕೌಶಲ್ಯ ವೃದ್ಧಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
  ಸ್ಥಳೀಯ ಬೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವೈ.ಟಿ.ಆರ್‌.ರಾಜೇಶ್‌, ಕೋಲಾರ ವೃತ್ತದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಂ.ವಿ.ಸ್ವಾಮಿ, ಮಮತ ಕಾಂತರಾಜ್‌, ಆರ್‌್.ಕೆ.ಬಾಬು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತೀಶ್‌ ಇದ್ದರು.
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು, ಹೊಸದಾಗಿ ನೋಂದಣಿ ದಿನಾಂಕ
ಮುಂದೂಡಿಕೆ
ಶ್ರೀನಿವಾಸಪುರ: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು, ಹೊಸದಾಗಿ ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು ಡಿ.23 ರವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್‌ ಕೆ.ಎನ್.ಸುಜಾತ ತಿಳಿಸಿದ್ದಾರೆ.
  ಅರ್ಹ ಪದವೀಧರರು ಅರ್ಜಿ ನಮೂನೆ 18, ಇತ್ತೀಚಿನ 2 ಭಾವಚಿತ್ರ, ಗೆಜಿಟೆಡ್‌ ಅಧಿಕಾರಿಯಿಂದ ದೃಢೀಕರಿಸಿದ ಪದವಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿ, ಚುನಾವಣಾ ಕ್ಷೇತ್ರದ ಮತದಾರರ ಗುರುತಿನ ಚೀಟಿ ಮತ್ತು ಗೆಜಿಟೆಡ್‌ ಅಧಿಕಾರಿಯಿಂದ ದೃಢೀಕರಿಸಿದ ಆಧಾರ್‌ ಕಾರ್ಡ್‌ ಜರಾಕ್ಸ್‌ ಪ್ರತಿಯನ್ನು ತಾಲ್ಲೂಕು ಕಚೇರಿಯ ಚುನಾವಣಾ ವಿಭಾಗದಲ್ಲಿ  ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ