ಶ್ರೀನಿವಾಸಪುರ: ವಿದ್ಯಾರ್ಥಿಗಳು ಮೊಬೈಲ್‌ ಗೀಳಿಗೆ ಬೀಳಬಾರದು. ಓದಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿಆರ್‌ಪಿ ಹುಮೇಗೌಡ ಹೇಳಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಮೊಬೈಲ್‌ ಗೀಳಿಗೆ ಬೀಳಬಾರದು. ಓದಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿಆರ್‌ಪಿ ಹುಮೇಗೌಡ ಹೇಳಿದರು. 
ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಲೋಬಲ್‌ ಎಜ್ಯುಕೇಷನಲ್‌ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ಪೂರ್ಣಗೊಳಿಸುವ ಸಾಧನ. ಅದನ್ನು ಕೊಡಿಸಲು ಹಾಗೂ ಪಡೆದುಕೊಳ್ಳಲು ಮಾಡುವ ಪ್ರಯತ್ನ ಸಫಲವಾದಾಗ ಮಾತ್ರ ಉದ್ದೇಶ ಸಫಲವಾಗುತ್ತದೆ.
  ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಿ.ಶ್ರೀನಿವಾಸ್‌, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಜಿ.ಕೆ.ನಾರಾಯಣಸ್ವಾಮಿ, ಯಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್‌.ಕೆ. ಅಬ್ರಾರ್‌ ಪಾಷ, ತಾಲ್ಲೂಕು ದಾಸ ಸಾಹಿತ್ಯ ಪರಷತ್‌ ಅಧ್ಯಕ್ಷೆ ಮಾಯಾ ಬಾಲಚಂದ್ರ, ಮಂಜುಳ ವೆಂಕಟೇಶ್‌, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎನ್‌.ನಾಗೇಶ್‌ ವಿದ್ಯಾರ್ಥಿಗಳು ಹಾಗೂ ಪೊಷಕರನ್ನು ಉದ್ದೇಶಿಸಿ ಮಾತನಾಡಿದರು.
  ಸಮಾರಂಭದಲ್ಲಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
  ಶಾಲೆಯ ಕಾರ್ಯದರ್ಶಿ ರೇಖಾ, ಶಿಕ್ಷಕರಾದ ರಾಜಾರೆಡ್ಡಿ, ನಾಗೇಂದ್ರ ಬಾಬು, ಸಮೀನಾ, ಪವಿತ್ರ, ಮಂಜುಳ, ರಾಧಾ, ಸುಬ್ರಾಖಾನ್‌, ಪುಷ್ಪ ಇದ್ದರು.