ಶ್ರೀನಿವಾಸಪುರ: ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮುರಿದು ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳ ಕಳವು.  

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮುರಿದು ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳ ಕಳವು.  
ಶ್ರೀನಿವಾಸಪುರ: ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮೆಂಡಿ ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳನ್ನು ಕಳವು ಮಾಡಲಾಗಿರುವ ಘಟನೆ ನಡೆದಿದೆ.
  ಲಾಕ್‌ ಡೌನ್‌ನಿಂದಾಗಿ ಬಾರ್‌ ಬಂದ್‌ ಮಾಡಲಾಗಿತ್ತು. ಶನಿವಾರ ರಾತ್ರಿ ದುಷ್ಕರ್ಮಿಗಳು ಬಾಗಿಲಿಗೆ ಹಾಕಿದದ್ದ ಕಬ್ಬಿಣದ ಸರಳು ಹಾಗೂ ಷಟರ್‌ ಅನ್ನು ಆರೆಯಿಂದ ಮೆಂಡಿ, ಒಳಗೆ ನುಸುಳಿ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲಾಗಿದೆ ಎಂದು ಎಂದು ಲಕ್ಷ್ಮಿ ಬಾರ್‌ನ ಮಾಲೀಕ ವೀರಭದ್ರೇಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
  ಈ ಬಾರ್‌ನಲ್ಲಿ ಈವರೆಗೆ 5 ಬಾರಿ ಕಳವು ಮಾಡಲಾಗಿದೆ. ಪೊಲೀಸರಿಗೆ ದೂರು ನೀಡದರೂ ಪ್ರಯೋಜನವಾಗುತ್ತಿಲ್ಲ. ಒಮ್ಮೆಯೂ ಕಳ್ಳರನ್ನು ಹಿಡಿದಿಲ್ಲ. ಪೊಲೀಸರ ನಿಷ್ಕ್ರಿಯತೆಯಿಂದಾಗಿ ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿಯ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ನ ತಿಳಿಸಿದ್ದಾರೆ.