ವರದಿ:ಶಬ್ಬೀರ್ ಅಹ್ಮದ್
ಶ್ರೀನಿವಾಸಪುರ: ಪುರಸಭೆ ಚುನಾವಣೆ ಗರಿಗೆದರಿದೆ.
ವಾರ್ಡ್ ಗಳ ವಿಂಗಡಣೆ ಯಿಂದ ಕ್ಷೇತ್ರ ಕಳೆದುಕೊಂಡ ಕೆಲ ಹಾಲಿ ಸದಸ್ಯರು, ಆಕಾಂಕ್ಷಿಗಳು ಸೂಕ್ತ ವಾರ್ಡ್ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಪುರಸಭೆಗೆ ನೂತನವಾಗಿ ಸೇರ್ಪಡೆಗೊಂಡಶ್ರೀನಿವಾಸಪುರ: ಪುರಸಭೆ ಚುನಾವಣೆ ಗರಿಗೆದರಿದೆ. ಕೊಳ್ಳೂರು, ಬೈರಪ್ಪಲ್ಲಿ , ಉನಿಕಿಲಿ, ಎಚ್ ನಲ್ಲಪಲ್ಲಿ, ಗ್ರಾಮಗಳ ಮತದಾರರನ್ನು ಜೋಡಿಸಿ 23 ವಾರ್ಡ್ಗಳಲ್ಲಿ ಹಂಚಿಕೆ ಮಾಡಿದ್ದಾರೆ. ಕೆಲವೊಂದು ವಾರ್ಡ್ ಗಳಲ್ಲಿ ಒಂದೇ ಕುಟುಂಬ ವ್ಯಕ್ತಿಗಳನ್ನು ಎರಡು ವಾರ್ಡ್ ಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ . ನಾಮಪತ್ರ ಸಲ್ಲಿಕೆಗೆ ಮೇ 9 ರಿಂದ 16 ರವರೆಗೆ ಕಾಲಾವಕಾಶ ನೀಡಿದ್ದು 17ರಿಂದು ಪರಿಶೀಲನೆ 20 ಕ್ಕೆ ನಾಮಪತ್ರ ಹಿಂದೆಪಡೆಯಲು ಕಾಲಾವಕಾಶ ನೀಡಲಾಗಿದೆ . 29ರಂದು ಮತದಾನ ನಡೆಸಿ ಮತ ಎಣಿಕೆ ಯನ್ನು 31 ರಂದು ನಡೆಸಲಾಗುವುದು. 1) ಎಂ ಜಿ ರಸ್ತೆ ಪಶ್ಚಿಮ ಪರಿಶಿಷ್ಟ ಪಂಗಡ, 2)/ರಾಮಕೃಷ್ಣ ಬಡಾವಣೆ ಸಾಮಾನ್ಯ , 3) ಶುಭಾಶ್ ರಸ್ತೆ ಬಿಸಿಎಂ ಎ ಮಹಿಳಾ, 4) ತ್ಯಾಗರಾಜ್ ನಗರ ಸಾಮಾನ್ಯ ಮಹಿಳೆ 5) ಕಟ್ಟೆಕೆಳಗಿನ ಪಾಳ್ಯ ಸಾಮಾನ್ಯ 6)ಮೋತಿಲಾಲ್ ರಸ್ತೆ ಪರಿಶಿಷ್ಟ ಜಾತ 7) ನೆಹರೂ ರಸ್ತೆ ಬಿಸಿಎಂ ಎ 8) ಹನುಮಾನ್ ಪಾಳ್ಯ ಪರಿಶಿಷ್ಟ ಜಾತಿ 9) ನರಸಿಂಹ ಪಾಳ್ಯ ಬಿಸಿಎಂ ಬಿ 10) ಅಕ್ಬರ್ ರಸ್ತೆ ಬಿಸಿಎಂಎ ಮಹಿಳೆ 11) ಅಂಬೇಡ್ಕರ್ ಪಾಳ್ಯ ಕಾಲೋನಿ ಎಸ್ಸಿ ಮಹಿಳೆ 12) ಆಜಾದ್ ರಸ್ತೆ ಸಾಮಾನ್ಯ 13) ಗಫಾರ್ ಖಾನ್ ಮೊಹಲ್ಲಾ 1 ಸಾಮಾನ್ಯ ,14) ಗಫಾರ್ ಖಾನ್ ಮೊಹಲ್ಲಾ 2 ಬಿಸಿಎಂ ಎ 15) ಹೈದರ್ ಅಲಿ ಮೊಹಲ್ಲಾ 1 ಸಾಮಾನ್ಯ ಮಹಿಳಾ, 16) ಝಾಕಿರ್ ಹುಸೇನ್ ಮೊಹಲ್ಲಾ 2 ಸಾಮಾನ್ಯ ,17) ವೆಂಕಟೇಶ್ವರ ಬಡಾವಣೆ 2 ಸಾಮಾನ್ಯ ,18) ಎಂ.ಜಿ ರಸ್ತೆ ಪೂರ್ವ ಬಿಸಿಎಂ ಎ 19) ರಾಮಕೃಷ್ಣ ಬಡಾವಣೆ 1 ಸಾಮಾನ್ಯ ಮಹಿಳೆ 20) ರಂಗರಸ್ತೆ ಸಾಮಾನ್ಯ ಮಹಿಳೆ, 21) ಹೈದರ್ ಅಲಿ ಮೊಹಲ್ಲಾ 2 ಸಾಮಾನ್ಯ ಮಹಿಳೆ , 22)ಝಾಕಿರ್ ಹುಸೇನ್ ಮೊಹಲ್ಲಾ 1 ಸಾಮಾನ್ಯ ಮಹಿಳೆ, 23) ವೆಂಕಟೇಶ್ವರ ಬಡಾವಣೆ ಎಸ್ಸಿ ಮಹಿಳ.