ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಗ್ರಾಮದಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಮಂಗಳವಾರ ಶೀಘ್ರ ಮಧ್ಯಸ್ಥಿಕೆ ಹಾಗೂ ಸಮನ್ವಯ ಶಿಕ್ಷಣ ಕೇಂದ್ರದ ನೂತನ ಕಟ್ಟಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ ಉದ್ಘಾಟಿಸಿದರು.
ಶ್ರೀನಿವಾಸಪುರ: ಸಮಾಜ ವಿಕಲ ಚೇತನ ಮಕ್ಕಳ ಬಗ್ಗೆ ಅನುಕಂಪ ಪಡುವ ಬದಲು ನೆರವು ನೀಡಬೇಕು. ಅವರಲ್ಲಿನ ವಿಶೇಷ ಶಕ್ತಿಯನ್ನು ಪೋಷಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ ಹೇಳಿದರು.
ತಾಲ್ಲೂಕಿನ ತಾಲ್ಲೂಕಿನ ಕಮತಂಪಲ್ಲಿ ಗ್ರಾಮದಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಮಂಗಳವಾರ ಶೀಘ್ರ ಮಧ್ಯಸ್ಥಿಕೆ ಹಾಗೂ ಸಮನ್ವಯ ಶಿಕ್ಷಣ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಜನ ಸೇವೆಯೇ ಜನಾರ್ಧನ ಸೇವೆ ಎಂಬ ಮಾತಿದೆ. ಅದರಂತೆ ಅಂಗವಿಕಲ ಮಕ್ಕಳ ಸೇವೆ ಎಲ್ಲಕ್ಕಿಂತ ಮಿಗಿಲಾದ ಸೇವೆ ಎಂಬುದನ್ನು ಮರೆಯಲಾಗದು ಎಂದು ಹೇಳಿದರು.
ಎಪಿಡಿ ಸಂಸ್ಥೆ 60 ವರ್ಷಗಳಿಂದ ಅಂಗವಿಕಲ ಮಕ್ಕಳ ಸೇವೆ ಮಾಡುತ್ತಿದೆ. ಅವರಿಗೆ ಅಗತ್ಯವಾದ ಶಿಕ್ಷಣ ಹಾಗೂ ಸಲಕರಣೆ ನೀಡುತ್ತಿದೆ. ಎಲ್ಲ ಮಕ್ಕಳಂತೆ ಕಲಿಯುವ ವಾತಾವರಣ ನಿರ್ಮಿಸಿದೆ. ಗ್ರಾಮೀನ ಮಕ್ಕಳ ಶೈಕ್ಷಣಿಕ, ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದೆ. ದಾನಿಗಳ ನೆರವಿನಿಂದ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಎಪಿಡಿ ಅಧ್ಯಕ್ಷ ಮೋಹನ್ ಸುಂದರಂ ಮಾತನಾಡಿ, ಎಪಿಡಿ ಸಂಸ್ಥೆ ವಿಕಲ ಚೇತನ ಮಕ್ಕಳ ಸೇವೆಯಲ್ಲಿ ತೊಡಗಿದೆ. ಆರು ದಶಕಗಳ ಸೇವಾವಧಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ತನ್ನ ಸೇವೆ ಮಾಡುತ್ತಿದೆ. ಪೋಷಕರು ಅಂಗವಿಲತೆ ಶಾಪವೆಂದು ತಿಳಿಯಬಾರದು. ಅಂಥ ಮಕ್ಕಳನ್ನು ನಿರ್ಲಕ್ಷಿಸಬಾರದು. ಅವರ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಬೇಕು. ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕರಿಸಬೇಕು ಎಂದು ಹೇಳಿದರು.ಎಸ್ಸೆಸ್ಸಿಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಪರೀಕ್ಷಾ ತರಬೇತಿ ನೀಡುತ್ತಿದೆ.
ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ವಿ.ವಿಜಯ ಮಾತನಾಡಿ, ಮಗುವಿನ ಹುಟ್ಟು ನ್ಯೂತ್ಯತೆಯನ್ನು ಗಮನಿಸಿ, ಸೂಕ್ತ ಕಾಲದಲ್ಲಿ ಸೂಕ್ತ ಸ್ಥಳದಲ್ಲಿ ಚಿಕಿತ್ಸೆ ಕೊಡಿಸಿದಲ್ಲಿ, ಮಗುವಿನ ನ್ಯೂನ್ಯತೆಯನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಅಂಥ ಮಕ್ಕಳು ಎಲ್ಲ ಮಕ್ಕಳಂತೆ ಬೆಳೆಯುತ್ತಾರೆ. ಅವರ ದೈಹಿಕ ಆರೋಗ್ಯ ಸುಧಾರಣೆಗೆ ಅಗತ್ಯವಾದ ಪ್ರೋತ್ಸಾಹ ನೀಡಬೇಕು. ಆರೋಗ್ಯ ಇಲಾಖೆ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್ಟಿ ಅಬ್ರಾಹಂ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ದೈಹಿಕ ನೂನ್ಯತೆಯುಳ್ಳ 55 ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ತರಬೇತಿ ಕೊಡಿಸುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಲಾಗಿದೆ. ಸ್ಥಳೀಯ ಕೇಂದ್ರದಲ್ಲಿ ಅವರಿಗೆ ಅಗತ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
ಸಮನ್ಯಯಾಧಿಕಾರಿ ಕಾಂತರಾಜ್,ಪಡಿಒ ಮಂಜುನಾಥ್, ಡಾ. ಆಯಿಷಾ ಫರ್ದೂಸ್, ವೆಂಕಟರಾಮ್, ಸಿಇಒ ಅಮರನಾಥ್, ಕೇಂದ್ರದ ಮುಖ್ಯಸ್ಥ ಲಿಂಗಪ್ಪ, ಸಿಆರ್ಪಿ ಮಂಜುನಾಥರೆಡ್ಡಿ, ಹನುಮಂತಗೌಡ, ಸಹಾಯಕ ಸಿಡಿಪಿಒ ನಾನಮ್ಮ, ಇದ್ದರು.
ಡಿಜಿಟಲ್ ಆರೋಗ್ಯ ವಾಹಿನಿ ಕಾರ್ಯಕ್ರಮದಡಿ ಟಾಟಾ ಟ್ರಸ್ಟ್ ನೇಮಿಸಿಕೊಂಡಿದ್ದ ವೈದ್ಯರು ಸೇರಿದಂತೆ 50 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು, ಸರ್ಕಾರ ಕೂಡಲೆ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಕೋರಿ ವೈದ್ಯರು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.