ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ  ಸೈದಾನಿಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ  ಸೈದಾನಿಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

 

  ಈ ಹಿಂದೆ ಅಧ್ಯಕ್ಷೆಯಾಗಿದ್ದ ಮಂಗಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ ಜೆಡಿಎಸ್‌ ಬೆಂಬಲಿತ  ಸೈದಾನಿಬಿ ಅವಿರೋಧ ಆಯ್ಕೆಯಾದರು.

  ಪಿಡಿಒ ವೆಂಕಟರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಸದಸ್ಯರಾದ ಗಂಗಿರೆಡ್ಡಿ, ಈರಪ್ಪ, ನಾರೆಮ್ಮ, ಮಂಗಮ್ಮ, ನಿರ್ಮಲಮ್ಮ, ಚಿನ್ನಪ್ಪಯ್ಯ, ರಾಜ್‌ಕುಮಾರ್‌, ನಾಗರಾಜ್‌, ಗೋಪಾಲ್, ಎಂ.ಡಿ.ಮೌಲಾ ಇದ್ದರು.