ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ಕೋಲಾರ ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ.
ಶ್ರೀನಿವಾಸಪುರ ತಾಲೂಕಿನಲ್ಲೇ ಒಟ್ಟು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಸರಕಾರ ದ್ರಾಕ್ಷಿ , ಕಲ್ಲಂಗಡಿ , ಕರಬೂಜ ಸೇರಿದಂತೆ 9 ರೀತಿಯ ಹಣ್ಣುಗಳಿಗೆ ಸರಕಾರ ಪರಿಹಾರ ಘೋಷಣೆ ಮಾಡಿರುವಂತೆ ಮಾವಿನ ಕೃಷಿಯನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ಮಾವಿಗೂ ಪರಿಹಾರ ಘೋಷಿಸಬೇಕೆಂದು ಜಿಲ್ಲಾ ಮಾವು ಬೆಳೆಗಾರ ಸಂಘ ಅಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಒತ್ತಾಯಿಸಿದ್ದಾರೆ.
ಏಷ್ಯಾ ಖಂಡದಲ್ಲೇ ಮಾವಿಗೆ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರೈತರು ದೇಶ ವಿದೇಶಗಳಿಗೆ ಮಾವು ರವಾನಿಸುತ್ತಿದ್ದಾರೆ. ಮಾವು ಬೆಳೆಗಾರರ ಪರಿಶ್ರಮವನ್ನು ಸರಕಾರ ಗಳು ಅರಿಯಬೇಕು. ನಾನಾ 9 ಹಣ್ಣುಗಳಿಗೆ ಸರಕಾರ ಪರಿಹಾರ ಕೊಡುತ್ತಿರುವುದು ಸರಿ . ತಾಲೂಕಿನಲ್ಲಿ ಜೀವನಾಡಿಯಾಗಿ ಬೆಳೆ ಯುತ್ತಿರುವ ಮಾವಿನ ಕೃಷಿಗೆ ಈ ಕಷ್ಟ ಕಾಲದಲ್ಲಿ ಎಕರೆಗೆ 20 ಸಾವಿರ ರೂ . ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.