ಶ್ರೀನಿವಾಸಪುರ: ಅಂಗನವಾಡಿ  ಮಕ್ಕಳನ್ನು ತಮ್ಮ ಮಕ್ಕಳೆಂದು ಬಾವಿಸಿ ರುಚಿ-ಶುಚಿಕರವಾಗಿ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕು: ಪತ್ರಕರ್ತ ಆರ್. ಬಾಬು 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ: ಅಂಗನವಾಡಿ  ಮಕ್ಕಳನ್ನು ತಮ್ಮ ಮಕ್ಕಳೆಂದು ಬಾವಿಸಿ ರುಚಿ-ಶುಚಿಕರವಾಗಿ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕು: ಪತ್ರಕರ್ತ ಆರ್. ಬಾಬು 

ಶ್ರೀನಿವಾಸಪುರ: ಅಂಗನವಾಡಿ ಸಿಬ್ಬಂದಿ ಕೇಂದ್ರಗಳನ್ನು ಶುಚಿತ್ವಗಳಿಸಿಕೊಂಡು ಬರುವ ಮಕ್ಕಳನ್ನು ತಮ್ಮ ಮಕ್ಕಳೆಂದು ಬಾವಿಸಿ ರುಚಿ-ಶುಚಿಕರವಾಗಿ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕೆಂದು ಪತ್ರಕರ್ತ ಆರ್. ಬಾಬು ತಿಳಿಸಿದರು.
ಪಟ್ಟಣದ ಸಂತೇ ಮೈದಾನದಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಕ ಸಪ್ತಾಹ ಅಭಿಯಾನದ ಜಾತಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್. ಬಾಬು, ಸರ್ಕಾರದಿಂದ ಬರುವ ಪೌಷ್ಟಿಕ ಆಹಾರ ಪದಾರ್ಥಗಳು, ಶುಚಿತ್ವಗೊಳಿಸಿ ಮಕ್ಕಳಿಗೆ ಉಣ್ಣಲು ತಯಾರಿಸಿಕೊಡಲು ಅಂಗನವಾಡಿ ಸಿಬ್ಬಂದಿ ತಮ್ಮ ಮನೆಯ ಮಕ್ಕಳಂತೆ ಬಾವಿಸಿಕೊಂಡು ಪುಟ್ಟ ಮಕ್ಕಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಪೋಷಕರು ತಮ್ಮ ಮಕ್ಕಳನ್ನು ನಿಮ್ಮ ಬಳಿ ಹೆಚ್ಚು ಸಮಯ ಉಳಿಯುವಂತೆ ಕೇಂದ್ರಗಳಿಗೆ ದಾಖಲು ಮಾಡುತ್ತಾರೆ. ಮಕ್ಕಳಿಗೆ ಆಹಾರ ಮತ್ತು ಕಲಿಕೆಯನ್ನು ಪ್ರಾರಂಭದ ಹಂತದಲ್ಲಿ ಜ್ನಾನಬೋಧನೆಯನ್ನು ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಗನವಾಡಿ ಕೇಂದ್ರ ಕಾರ್ಯಕರ್ತೆ, ಶ್ರೀಲಕ್ಷ್ಮಿ ಮಾತನಾಡಿ, 3 ವರ್ಷಗಳು ಮೇಲ್ಪಟ್ಟಿರುವ ಎಲ್ಲ ಪುಟಾಣಿ ಮಕ್ಕಳನ್ನು ತಪ್ಪದೆ ಪೋಷಕರು ಅಂಗನವಾಡಿ ಕೇಂದ್ರಗಳಿಗೆ ದಾಖಲು ಮಾಡಬೇಕು, ಸರ್ಕಾರ ಮಕ್ಕಳಿಗಾಗಿ ಪೌಷ್ಟಿಕ ಆಹಾರ ಪದಾರ್ಥಗಳು, ಮೊಟ್ಟೆ, ಉತ್ತಮ ತರಕಾರಿ ಎಲ್ಲವು ಸರಬರಾಜು ಮಾಡುತ್ತಿವೆ. ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ ನಾವು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಮುಂದಾಗುತ್ತೇವೆ. ಇತ್ತೀಚೆಗೆ ಕೆಲ ಪಪೋಷಕರು 3 ವರ್ಷ ಸಮೀಪಿಸುವ ಮಕ್ಕಳನ್ನು ಖಾಸಗಿ ಪ್ಲೇ ಹೋಮ್ ಇತರೆ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಹಾಗಾಗಿ ರಾಷ್ಟ್ರೀಯ ಪೌಶ್ಟಿಕ ಸಪ್ತಾಹ ಜಾತಾ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಹಮ್ಮಿಕೊಂಡು ಪೆÇೀಷಕರ ಮನ ಸೆಳೆಯಲು ಸರ್ಕಾರ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಪೋಷಕರು ಸಹಕರಿಸಿ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಡೃಡ ಮನಸನ್ನು ಮಾಡಬೇಕೆಂದು ಕೋರಿದರು.
ಈ ಸಮಯದಲ್ಲಿ ಅಂಬೇಡ್ಕರ್ ಪಾಳ್ಯ ಕಾರ್ಯಕರ್ತೆ ಮುನಿಯಮ್ಮ, ಸ್ವೀಪರ್ ಕಾಲೋನಿ ಕಾರ್ಯಕರ್ತೆ ಸ್ವಾತಿ, ನರಸಿಂಹ ಪಳ್ಯದ ಕಾರ್ಯಕರ್ತೆ ಸಾವಿತ್ರಮ್ಮ, ಸಂತೇ ಮೈದಾನ ಸಹಾಯಕಿ ಲಕ್ಷ್ಮಮ್ಮ ಹಾಗೂ ಇತರೆ ಅಂಗನವಾಡಿ ಸಹಾಯಕರು, ಪೋಷಕರು ಹಾಗೂ ಪುಟಾಣಿ ಮಕ್ಕಳು ಹಾಜರಿದ್ದರು.