ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶೋಶಿತರ ಪರ ಧ್ವನಿಯಾಗಿ ಸಂಘಟನೆ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ನಮ್ಮ ಸಂಘಟನೆ ನಿಸ್ವಾರ್ಥದಿಂದ ಜನ ಸೇವೆ ಮಾಡಲು ಮುಂದಾಗುತ್ತೇವೆ : ದಲಿತ ಬುದ್ದ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕ ವರ್ತನಹಳ್ಳಿ ವೆಂಕಟೇಶ್
ಶೋಶಿತರ ಪರ ಧ್ವನಿಯಾಗಿ ಸಂಘಟನೆ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ನಮ್ಮ ಸಂಘಟನೆ ನಿಸ್ವಾರ್ಥದಿಂದ ಜನ ಸೇವೆ ಮಾಡಲು ಮುಂದಾಗುತ್ತೇವೆ ಎಂದು ಕರ್ನಾಟ ದಲಿತ ಬುದ್ದ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕ ವರ್ತನಹಳ್ಳಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನು ಏಪರ್ಡಿಸಿ ಮಾತನಾಡಿದ ರಾಜ್ಯಾಧ್ಯಕ್ಷ ವೆಂಕಟೇಶ್ ಸುಮಾರು 20 ವರ್ಷಗಳ ಹಿಂದೆ ದಲಿತ ಸಂಘಟನೆಗಳ ಹೋರಾಟ ಪ್ರತಿಫಲ ಅಪಾರವಾಗಿತ್ತು. ಇತ್ತೀಚೆಗೆ ಹಲವು ಕಾರಣಗಳಿಂದ ಸಂಘಟನೆಗಳು ಹೊಡೆದುಹೋಗಿದ್ದು, ನೋವಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಆತ್ಮ ಅವಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಕ್ರಿಯಾಶೀಲರಾಗಿ ಮಾದರಿಯಾಗಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಲು ನಮ್ಮ ಸಂಘಟನೆಯು ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಕರ್ನಾಟ ದಲಿತ ಬುದ್ದ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕ ವರ್ತನಹಳ್ಳಿ ವೆಂಕಟೇಶ್ ಶ್ರೀನಿವಾಸಪುರ ಘಟಕಕ್ಕೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿ ತಾಲ್ಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮೀಪುರ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷರಾಗಿ ನಾರಾಯಣಪುರ ವೆಂಕಟೇಶ್, ಉಪಾಧ್ಯಕ್ಷರಾಗಿ ಚಿಕ್ಕತಿಮ್ಮನಹಳ್ಳಿ ಮಂಜುನಾಥ್, ಕಾರ್ಯಧ್ಯಕ್ಷರಾಗಿ ನಾಗದೇನಹಳ್ಳಿ ಜಯರಾಮ್, ಪ್ರಧಾನ ಕಾರ್ಯದರ್ಶಿಯಾಗಿ ಕೇತಗಾನಹಳ್ಳಿ ಶ್ರೀನಿವಾಸ್, ಉಪ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನಾಗರಾಜ್, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಾಗೆಯೇ ಸಂಘಟನಾ ಕಾರ್ಯದರ್ಶಿಗಳಾಗಿ ಹಾಗೂ ಶಿಸ್ತು ಆಂತರಿಕ ಸದಸ್ಯರಾಗಿ ಕೆ.ಎನ್.ಅಂಬರೀಶ್ ಕಿರುವಾರ, ಹಿಂದುಳಿದ ವರ್ಗಗಳ ನಾಗದೇನಹಳ್ಳಿ ಕೆ.ಶಿವಣ್ಣ, ಅಲ್ಪಸಂಖ್ಯಾತರ ವಿಭಾಗಕ್ಕೆ ಟೈಲರ್ ನರಸಿಂಹಪ್ಪ, ಪೌರಕಾರ್ಮಿಕರ ವಿಭಾಗಕ್ಕೆ ಬಯ್ಯಪ್ಪನಹಳ್ಳಿ ಕೃಷ್ಣಪ್ಪ, ಚರ್ಮಗಾರಿಕೆ ವಿಭಾಗಕ್ಕೆ ನಂಬಿಹಳ್ಳಿ ಮೂರ್ತಿ, ಸಂಸ್ಕøತಿಕ ವಿಭಾಗಕ್ಕೆ ಕನಿಗಾನಹಳ್ಳಿ ರವಣಪ್ಪ, ನೌಕರರ ವಿಭಾಗಕ್ಕೆ ಚಲ್ದಿಗಾನಹಳ್ಳಿ ಸಿ.ಕೆ.ಸೋಮಶೇಖರ್, ಮೀಸಗಾನಹಳ್ಳಿ ಶ್ರೀನಿವಾಸ್, ಖಜಾಂಚಿಯಾಗಿ ಶೀಗಹಳ್ಳಿ ವೆಂಕಟರವಣಪ್ಪ ಆಯ್ಕೆ ಮಾಡಲಾಯಿತು.
ನಗರ ಘಟಕ ಅಧ್ಯಕ್ಷರಾಗಿ ಅಂಬೇಡ್ಕರ್ ಪಾಳ್ಯದ ಬಿ.ನರಸಿಂಹಮೂರ್ತಿ, ಕಾರ್ಯದರ್ಶಿ ಆಂಜಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಯಲ್ದೂರು ಶಿವಕುಮಾರ್, ಸಲಹಾ ಸಮಿತಿ ಸದಸ್ಯರಾಗಿ ನರಸಿಂಹಪ್ಪ, ನರಸಿಂಹಯ್ಯ, ರೆಡ್ಡಪ್ಪ, ಪಾಪಣ್ಣ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ವರ್ತನಹಳ್ಳಿ ವೆಂಕಟೇಶ್ ತಿಳಿಸಿದರು. ನೂತನ ಪದಾಧಿಕಾರಿಗಳಿಗೆ ಶುಭ ಕೋರಿ ಶಿಸ್ತು ಸಂಯಮದಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯಗಳ ಈಡೇರಿಕೆಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಸಂಘಟನೆಯ ವತಯಿಂದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಸಂಘದ ಸದಸ್ಯತ್ವಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ದಲಿತ ಬುದ್ದ ಸೇನೆಯ ರಾಜ್ಯ ಸಮಿತಿಯ ಖಜಾಂಚಿ ದೊಡಮಲದೊಡ್ಡಿ ರಾಮಕೃಷ್ಣ, ಕೋಲಾರ ಜಿಲ್ಲೆಯ ದಲಿತ ಬುದ್ದ ಸೇನೆಯ ಅಧ್ಯಕ್ಷ ಹಾಲೇರಿ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಾಬು, ಮುನಿಸ್ವಾಮಿ, ಇನ್ನಿತರೆ ಪದಾಧಿಕಾರಿಗಳು ಹಾಜರಿದ್ದರು.