ವಿಷನ್ ಇಂಡಿಯಾ ಪಬ್ಲಿಕ್ ಶಾಲೆಯಲ್ಲಿ ಗಿಡ ನೆಡುವ ಮೂಲಕ ಶಾಲಾ ವಾರ್ಷಿಕೋತ್ಸವವ  ಗಣ್ಯರಿಂದ  ಉದ್ಘಾಟನೆ

 ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ವಿಷನ್ ಇಂಡಿಯಾ ಪಬ್ಲಿಕ್ ಶಾಲೆಯಲ್ಲಿ ಗಿಡ ನೆಡುವ ಮೂಲಕ ಶಾಲಾ ವಾರ್ಷಿಕೋತ್ಸವವ  ಗಣ್ಯರಿಂದ  ಉದ್ಘಾಟನೆ 

 

 

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿಗೆ ಕೊರತೆ ಇರಬಹುದು ಆದರೆ ಶಿಕ್ಷಣಕ್ಕೆ ಕೊರತೆ ಇಲ್ಲ. ಈ ಎರಡೂ ಜಿಲ್ಲೆಗಳ ರೈತರ ಮಕ್ಕಳಿಗೆ ಜೀವನಾಡಿ ಶಿಕ್ಷಣವೇ ಆಗಿರುವುದರಿಂದ ಶಿಕ್ಷಣ ಸಂಸ್ಥೆಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಿ.ಫೌಜಿಯಾ ತರನಮ್ ರವರು ತಿಳಿಸಿದರು.
ಶನಿವಾರ ಸಂಜೆ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಲಾ ವಾಷಿಕೋತ್ಸವ ಸಮಾರಂಭವನ್ನು ಸಸಿ ನೆಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಸಂಸ್ಥೆ ಗ್ರಾಮೀಣ ಭಾಗದ ಉತ್ತಮ ಪರಿಸರದಲ್ಲಿ ನಿರ್ಮಿಸಿ ಗ್ರಾಮೀಣ ವಿಧ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಆರ್.ಟಿ.ಇ. ಮೂಲಕ ಬಡ ವಿಧ್ಯಾರ್ಥಿಗಳಿಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಕ್ಕಳಿಗೆ ಹೈಟೆಕ್ ಮಾದರಿಯಲ್ಲಿಯೇ ಶೀಕ್ಷಣವನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತಿರುವುದು ಸಂಸ್ಥೆಯ ವಿಶೇಷತೆಯನ್ನು ಎತ್ತಿ ಹಿಡಿಯುವಂತಿದೆ ಎಂದರು.
ಮುಂದು ವರೆದು ಮಾತನಾಡಿದ ಅವರು ಮಕ್ಕಳಲ್ಲಿ ಏಕಾಗ್ರತೆ ಅತೀ ಮುಖ್ಯವಾಗಿ ಇರಬೇಕು ಹಾಗೂ ಗುರಿ ಮುಟ್ಟುವ ಛಲವನ್ನು ಹೊಂದಿರಬೇಕು. ಪ್ರತಿಭೆಗೆ ಹೆಣ್ಣು ಮತ್ತು ಗಂಡು ಎಂಬ ಬೇದವಿಲ್ಲ. ಉನ್ನತ ಶಿಕ್ಷಣಕ್ಕೆ ಹೋದಲ್ಲಿ ವಿಷಯ ಯಾವುದನ್ನಾದರು ಆಯ್ಕೆ ಮಡುಕೊಳ್ಳಲಿ. ಅವರ ಪ್ರತಿಭೆಗೆ ತಕ್ಕಂತೆ ಅವರ ನಿರ್ದಾರಕ್ಕೆ ಬಿಡುವುದು ಒಳ್ಳೆಯದು. ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದರಲ್ಲದೆ ನೀರನ್ನು ಮಿತವಾಗಿ ಬಳಸಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ ನಿರಿನ ಮಹತ್ವದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು ಹಾಗೂ ಮಳೆಯ ನೀರು ವ್ಯರ್ಥವಾಗದಂತೆ ಶೇಖರಣೆ ಮಾಡುವ ಕೆಲಸವನ್ನು ಮಾಡಬೇಕೆಂದರು.
ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ. ಸಿ.ಎಂ.ಪರಮೇಶ್ವರ್, ಪ್ರೊ. ಚಿನ್ನಪ್ಪರೆಡ್ಡಿ, ನಿವೃತ್ತ ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವೇಣುಗೋಪಾಲ್, ಕಾರ್ಯದರ್ಶಿ ಡಾ. ಎಂ.ಎಸ್.ಕವಿತಾ, ಸಂಸ್ಥೆಯ ಆಡಳಿತಾಧಿಕಾರಿ ಕೆ.ವಿ.ನಾಗರಾಜ್, ಪ್ರಾಂಶುಪಾಲ ಶ್ರೀನಿವಾಸಗೌಡ ಇತರರು ಉಪಸ್ಥಿತರಿದ್ದರು.