ವಿಶ್ವಕರ್ಮರ ಕಲಾ ಕೌಶಲ್ಯ ವಿಶ್ವಕರ್ಮ ಸಮುದಾಯಕ್ಕೆ ಮಾದರಿಯಾಗಿದೆ : ತಹಶೀಲ್ದಾರ್ ಮಲ್ಲೇಶ್‌

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವಿಶ್ವಕರ್ಮರ ಕಲಾ ಕೌಶಲ್ಯ ವಿಶ್ವಕರ್ಮ ಸಮುದಾಯಕ್ಕೆ ಮಾದರಿಯಾಗಿದೆ. ಸಮುದಾಯದ ಯುವ ಜನರು ವೃತ್ತಿಪರತೆ ಹೆಚ್ಚಿಸಿಕೊಳ್ಳಬೇಕು ಎಂದು ಉಪ ತಹಶೀಲ್ದಾರ್ ಮಲ್ಲೇಶ್‌ ಹೇಳಿದರು.
  ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದರು.    ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ವಿಶ್ವಕರ್ಮ ಮಾತನಾಡಿ, ಸರ್ಕಾರದ ಸೌಲಭ್ಯಗಳ ಕೊರತೆಯಿಂದಾಗಿ ಸಮುದಾಯದ ಯುವಕರು ಕುಲವೃತ್ತಿಗೆ ಬೆನ್ನುತೋರಿಸುತ್ತಿದ್ದಾರೆ. ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಈ ಸಮುದಾಯದ ನೆರವಿಗೆ ಬರಬೇಕು. ಸಮುದಾಯ ಶೈಕ್ಷಣಿಕವಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.     ಕಂದಾಯ ನಿರೀಕ್ಷಕರಾದ  ಬಿ.ವಿ.ಮುನಿರೆಡ್ಡಿಗುರುರಾಜರಾವ್‌, ವಿಶ್ವನಾಥ್‌, ಗಾಯಿತ್ರಿ, ಸಲೀಂ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ ರವೀಂದ್ರಾಚಾರಿ, ಶ್ರೀಕಂಠಾಚಾರಿ, ರತ್ನಾಚಾರಿ, ಕೆ.ಜಿ.ನಾರಾಯಣಾಚಾರಿ, ಆನಂದಬಾಬು, ಮಂಜುನಾಥಬಾಬು ಇದ್ದರು.