ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಕೋಲಾರ : 2019-20ನೇ ಸಾಲಿಗೆ ಎನ್.ಎಸ್.ಪಿ ತಂತ್ರಾಂಶದಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಶಾಲಾ/ಕಾಲೇಜು ಹಂತದಲ್ಲಿ ಶಾಲೆ/ಕಾಲೇಜಿನ ಲಾಗಿನ್ನಿಂದ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಹಂತಕ್ಕೆ ಸಲ್ಲಿಸಬೇಕಾಗಿರುತ್ತದೆ.
ಎನ್.ಎಸ್.ಪಿ ತಂತ್ರಾಂಶದಲ್ಲಿ ಶಾಲಾ/ಕಾಲೇಜು ನೋಡಲ್ ಅಧಿಕಾರಿಗಳ ನೊಂದಣಿ ಮಾಡುವುದು ಕಡ್ಡಾಯವಾಗಿದ್ದು, ಕೋಲಾರ ಜಿಲ್ಲೆಯ ಎಲ್ಲಾ ಶಾಲೆ/ಕಾಲೇಜಿನ ಮುಖ್ಯೋಪಾದ್ಯಾಯರು ಹಾಗೂ ಪ್ರಾಂಶುಪಾಲರು ತಮ್ಮ ತಮ್ಮ ಶಾಲೆ/ಕಾಲೇಜುಗಳ ಲಾಗಿನ್ ಬಳಸಿಕೊಂಡು ಶಾಲಾ/ಕಾಲೇಜು ನೋಡಲ್ ಅಧಿಕಾರಿಗಳ ನೊಂದಣಿ ಮಾಡಲು ಹಾಗೂ ನೊಂದಣಿ ಮಾಡಿದ ನಂತರ ಶಾಲಾ ನೋಡಲ್ ಅಧಿಕಾರಿ ನೊಂದಣಿ ಅರ್ಜಿಯನ್ನು ಜಿಲ್ಲೆಯ ಉರ್ದು ಇ.ಸಿ.ಓ ರವರಿಗೆ ಹಾಗೂ ಕಾಲೇಜು ನೋಡಲ್ ಅಧಿಕಾರಿ ನೊಂದಣಿ ಅರ್ಜಿಯನ್ನು ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಛೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾಹಿತಿ ಕೇಂದ್ರ ಹನುಮೇಗೌಡ ಕಾಂಪ್ಲೆಕ್ಸ್ ನರೇಂದ್ರ ಹಾಸ್ಪಿಟಲ್ ಹಿಂಭಾಗ ಎಂ.ಬಿ ರಸ್ತೆ ಕೋಲಾರ. ತಾಲ್ಲೂಕು ಮಾಹಿತಿ ಕೇಂದ್ರ ಸೇಟ್ ಕಾಂಪೌಂಡ್ ಬಂಗಾರಪೇಟೆ. ತಾಲ್ಲೂಕು ಮಾಹಿತಿ ಕೇಂದ್ರ ಪವನ್ ಆಸ್ಪತ್ರೆ ಹಿಂಭಾಗ ಶ್ರೀನಿವಾಸಪುರ ಮತ್ತು ತಾಲ್ಲೂಕು ಮಾಹಿತಿ ಕೇಂದ್ರ ಟಿ.ಎ.ಎಸ್ ಕಾಂಪ್ಲೆಕ್ಸ್ ಕೋಲಾರ-ಮಾಲೂರು ಮುಖ್ಯ ರಸ್ತೆ ಮಾಲೂರು ಇಲ್ಲಿಗೆ ಸಂರ್ಪಕಿಸಬಹುದಾಗಿದೆ.