JANAANUDI.COM NETWORK
ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಪ್ರತಿಭಾವಂತರಿಗೆ ಪುರಸ್ಕಾರ: ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಪ್ರತಿಭಾವಂತರಿಗೆ ಪುರಸ್ಕಾರ: ಪ್ರತಿಭೆಗಳಿಂದ ದೇಶಕ್ಕೆ ಒಳಿತನ್ನು ಮಾಡಿ
ಕುಂದಾಪುರ,ಫೆ.18: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಭಾಷಣ ಮತ್ತು ಲೇಖನ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ‘ಪ್ರತಿಭಾ ಪುರಸ್ಕಾರ’ ನೀಡುವ ಕಾರ್ಯಕ್ರಮವು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರಗಿತು
ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ‘ಈ ಪ್ರತಿಭೆ ದೇವರಿಂದ ಬಂದಂದಾಗಿದೆ, ಎಲ್ಲರಿಗೂ ಒಂದೆ ರೀತಿಯ ಪ್ರತಿಭೆಗಳಿದ್ದರೆ ಅದನ್ನು ಪ್ರತಿಭೆ ಅನ್ನುವುದಿಲ್ಲಾ, ಸಾಮನ್ಯ ಜನರಿಂದ ಹೆಚ್ಚಿನದನ್ನು ಗಳಿಸಿಕೊಂಡರೆ ಅದನ್ನು ಪ್ರತಿಭೆ ಅನ್ನುತ್ತೇವೆ. ಇಂತಹ ಪ್ರತಿಭೆ ಇದ್ದರೆ ಅದನ್ನು ಅಡಗಿಸಿಟ್ಟುಕೊಳ್ಳುವುದಲ್ಲಾ, ದೀಪ ಬೆಳಕು ನೀಡಿದಂತೆ ನಿಮ್ಮ ಪ್ರತಿಭೆ ಇತರರಿಗೆ ಉಪಕಾರವಾಗ ಬೇಕು, ನಮ್ಮ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಪ್ರತಿಭೆಗಳಿಂದ ನಾಡಿಗೆ, ದೇಶಕ್ಕೆ ಉಪಯೋಗ ಆಗಬೇಕು, ಎಂದು ಸಂದೇಶ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್, ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಥೊಲಿಕ್ ಸ್ತ್ರೀ ಸಂಘಟನೆ ಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷೆ ಪ್ರಮೀಳಾ ಡೆಸಾ ಶುಭ ಕೋರಿದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತಾ ಡೇವಿಡ್ ಸಿಕ್ವೇರಾ, ಶೆವೊಟ್ ಪ್ರತಿಷ್ಟಾನ್ ರಿ. ಇದರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಖಜಾಂಚಿ ವಿಲ್ಸನ್ ಡಿಆಲ್ಮೇಡಾ ಉಪಸ್ಥಿತರಿದ್ದರು
ಭಾಷಣ ಮತ್ತು ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಸಿ.ಬಿ.ಎಸ್.ಸಿ, ಪಿ.ಯು.ಸಿ. ಮತ್ತು ಡಿಗ್ರಿಯ ಎಲ್ಲಾ ವಿಭಾಗಗಳಲ್ಲಿನ, ಬಿ.ಎಸ್.ಸಿ., ಬಿ.ಸಿ.ಎ., ಬಿಎಡ್, ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ವಲಯ ಮಟ್ಟದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕಾರದ ಜೊತೆ ಸನ್ಮಾನಿಸಲಾಯಿತು. ಇದರ ಜೂತೆಗೆ ಸಹಕಾರಿ ಸಂಘಗಳಲ್ಲಿ ಚುನಾವಣೆ ನಡೆದು ಚುನಾಯಿತರಾದ ಕ್ರೈಸ್ತ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನಿಯೋಜಿತ ಅಧ್ಯಕ್ಷೆ, ಕಾರ್ಯಕ್ರಮದ ಸಂಚಾಲಕಿ ಮೇಬಲ್ ಡಿಸೋಜಾ ಸ್ವಾಗತಿಸಿದರು. ಕುಂದಾಪುರ ವಲಯದ ಎಲ್ಲಾ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು. ಪ್ರೇಮಾ ಡಿಕುನ್ಹಾ ಕಾರ್ಯಕ್ರವನ್ನು ನೆಡೆಸಿಕೊಟ್ಟರು.