ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಲಿಂಗತಾರತಮ್ಯ ಮಾಡುವುದು ಮನೆಯಿಂದಲೇ ಬದಲಾಗಬೇಕು – ರೂಪಕ್ ದತ್ತ
ಕೋಲಾರ : ಹೆಣ್ಣು ಗಂಡು ಎಂಬ ಲಿಂಗತಾರತಮ್ಯದ ಭೇದ ಭಾವ ಮಾಡುವುದು ಮನೆಯಿಂದಲೇ ಬದಲಾವಣೆಗೊಳ್ಳಬೇಕು. ತಾಯಿಯು ಸಹ ಮಕ್ಕಳಲ್ಲಿ ಭೇದ ಭಾವ ಮಾಡಬಾರದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಶ್ರೀ ರೂಪಕ್ ದತ್ತ ಅವರು ತಿಳಿಸಿದರು.
ಇಂದು ಕೋಲಾರದ ಸರ್ಕಾರಿ ಮಹಿಳಾ ಕಾಲೇಜು ರಾಜ್ಯಶಾಸ್ತ್ರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಮಾನವ ಹಕ್ಕುಗಳು ಮತ್ತು ಮಹಿಳೆ” ಎಂಬ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಹಕ್ಕು ಅವನ ಬದುಕಿನೊಂದಿಗೆ ಅಂತರ್ಗತವಾಗಿದೆ, ಈ ಹಕ್ಕು ಧರ್ಮ, ಜಾತಿ, ವರ್ಗ ಹಾಗೂ ಲಿಂಗಭೇದವಿಲ್ಲದೆ ಪ್ರತಿಯೊಬ್ಬರೂ ಸಮಾನತೆ ಹಾಗೂ ಘನತೆಯಿಂದ ಜೀವಿಸುವ ಹಕ್ಕನ್ನು ನೀಡಿದೆ. “ಮೀಟೂ ಚಳುವಳಿ”ಯ ಮೂಲಕ ಮಹಿಳೆಯರು ತಮ್ಮ ಮೇಲೆ ನಡೆದಿರುವ ಲೈಗಿಂಕ ಶೋಷಣೆಗಳನ್ನು ತಿಳಿಸಿ ನ್ಯಾಯ ಪಡೆದುಕೊಳ್ಳಲು ವೇದಿಕೆ ರೂಪಿಸಲಾಗಿತ್ತು. ಇದರಿಂದ ತಿಳಿದು ಬಂದ ವಿಚಾರ ಉನ್ನತ ಮಟ್ಟದ ಮಹಿಳೆಯರು ಸಹ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದಾರೆ ಎಂಬುದು ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಭ್ರೂಣ ಹತ್ಯೆಗಳನ್ನು ನಡೆಸುವುದು ಶಿಕ್ಷಾರ್ಹ ಅಪರಾದ. ಸರ್ಕಾರವು ಹೆಣ್ಣು ಮಗುವಿನ ರಕ್ಷಣೆ ಮತ್ತು ಅವಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರಲು “ಭೇಟಿ ಬಚಾವೂ ಭೇಟಿ ಪಡಾವೂ” ಎಂಬ ಯೋಜನೆಯನ್ನು ರೂಪಿಸಿದೆ. ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸುವವರು ಆಯೋಗದ ನೀತಿ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ್ ಸಿ.ಹೆಚ್ ಅವರು ಮಾತನಾಡಿ “ಹೆಣ್ಣನ್ನು ಎಲ್ಲಿ ಪೂಜಿಸುತ್ತಾರೂ ಅಲ್ಲಿ ದೇವರು ನೆಲೆಸಿರುತ್ತಾರೆ. ಮಹಿಳೆಯರಿಗೆ ಉಚಿತವಾಗಿ ಕಾನೂನಿನ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದವಿದೆ, ಇದರ ಉಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದು ತಿಳಿಸಿದರು.
ಪ್ರತಿಯೊಬ್ಬರು ಸರ್ಕಾರವು ನೀಡುವ ಹಕ್ಕನ್ನು ಮಾತ್ರ ಅನುಭವಿಸದೆ ಕರ್ತವ್ಯ ಪಾಲನೆಯನ್ನು ಮಾಡಬೇಕು. ಪರಿಸರ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ನ ಬಳಕೆ ಮಾಡಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿಶೇಷಚೇತನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪಾಂ್ರಶುಪಾಲರಾದ ಪ್ರೊ. ರಾಜೇಂದ್ರ, ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯದರ್ಶಿಯಾದ ಪಂಡಿತ್ ಮುನಿವೆಂಕಟಪ್ಪ, ವಕೀಲರಾದ ಸುರೇಂದ್ರ ಕುಮಾರ್, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.