ಲಾಕ್ ಡೌನ್ ನಿಂದ ಬೆಂಗಳೂರಿನಲ್ಲಿ ಸಿಲುಕಿರುವ ವಲಸಿಗರಿಗೆ, ಬಡವರಿಗೆ ನೆರವು ಮತ್ತು ಕೌನ್ಸ್ಲಿಂಗ್ ವ್ಯವಸ್ಥೆ ಮಾಡುತ್ತಿರುವ ಸೈಂಟ್ ಜೋಸೆಫ್ಸ್ ಇಂಡಿಯನ್ ಇನ್ಸ್ಟಿಟ್ಯೂಶನ್ಸ್

 

ವರದಿ: ಫಾ|ರೋಹನ್ ಡಿಆಲ್ಮೇಡ

 

 

ಲಾಕ್ ಡೌನ್ ನಿಂದ ಬೆಂಗಳೂರಿನಲ್ಲಿ ಸಿಲುಕಿರುವ ವಲಸಿಗರಿಗೆ, ಬಡವರಿಗೆ ನೆರವು ಮತ್ತು ಕೌನ್ಸ್ಲಿಂಗ್ ವ್ಯವಸ್ಥೆ ಮಾಡುತ್ತಿರುವ ಸೈಂಟ್ ಜೋಸೆಫ್ಸ್ ಇಂಡಿಯನ್ ಇನ್ಸ್ಟಿಟ್ಯೂಶನ್ಸ್ 

 

 

ಬೆಂಗಳೂರು,ಎ.10: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತ ಸರ್ಕಾರ ಘೋಷಿಸಿದ ಅಭೂತಪೂರ್ವ ಲಾಕ್ ಡೌನ್‍ನ ಈ ಅವಧಿಯಲ್ಲಿ ಸೈಂಟ್ ಜೋಸೆಫ್ಸ್ ಇಂಡಿಯನ್ ಇನ್ಸ್ಟಿಟ್ಯೂಶನ್, ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್‍ನ ಎಸ್‍ಜೆಐಐ ನ ಎಲ್ಲಾವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಫಾ.ಲಿಯೋ ಪೆರೆರಾ, ಹಾಗೂ ಶಾಲಾ ಕಾಲೇಜುಗಳ ಪ್ರಾಚಾರ್ಯರುಗಳಾದ ಫಾ. ಹೆನ್ರಿ ಸಲ್ಡಾನ,
ಫಾ. ರೋಹನ್ ಡಿ. ಅಲ್ಮೆಡಾ, ಫಾ. ಸಿರಿಲ್ ಮೆನೆಜೆಸ್, ಫಾ. ದೀಪಕ್, ಹಾಗೂ ಇನಿಗೊ ಸದನ್ ಜೆಜ್ವಿತ್ ಸಮುದಾಯದ ಎಲ್ಲಾ ಸದಸ್ಯರುಗಳ ಸಹಭಾಗಿತ್ವದೊಂದಿಗೆ ಲಾಕ್ ಡೌನ್ ನಿಂದ ಕಂಗಾಲಾದ ವಲಸೆ ಕಾರ್ಮಿಕರಿಗೆ, ಬಡವರಿಗೆ, ಜಿಲ್ಲೆಯ ನಿರಾಶಿತರಿಗೆ ಮತ್ತು ಸ್ಥಳೀಯ ಸುತ್ತಮುತ್ತಲಿನ ನಿರ್ಗತಿಕರಿಗೆ ನಿಸ್ವಾರ್ಥ ಅಭಯ ಹಸ್ತದ ಸೇವೆಯನ್ನು ಮಾಡುವುದರ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದೆ.
ಸಂಸ್ಥೆಯ ಮುಖ್ಯಸ್ಥರಾದ ಫಾ. ಲಿಯೊ ಪಿರೆರಾ ರವರು ಮಾತನಾಡಿ ಲಾಕ್ ಡೌನ್ ನಿಂದ ಅನೇಕರಿಗೆ ತೊಂದರೆಗಳಾಗಿವೆ ಆದರೆ ಅತೀ ಹೆಚ್ಚು ತೊಂದರೆಗಳಿಂದ ಕಷ್ಟಪಡುತ್ತಿರುವವರು ಪಟ್ಟಣಗಳಲ್ಲಿ ಕೆಲಸಕ್ಕಾಗಿ ಬಂದಂತಹ ವಲಸೆ ಕಾರ್ಮಿಕರು, ಬಿಬಿಎಂಪಿಯ ಮಾಹಿತಿಯ ಪ್ರಕಾರ ಸುಮಾರು 85 ಸಾವಿರಕ್ಕು ಹೆಚ್ಚು ಕುಂಟುಂಬಗಳು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಂತವರಿಗೆ ನೆರವು ನೀಡಲು ನಮ್ಮ ಸಂಸ್ಥೆಯು ಮುಂದಾಗಿದೆ ಎಂದರು ಹಾಗು ತಮ್ಮ ಸಂಸ್ಥೆಯಿಂದ ಮಾಡಲಾಗುತ್ತಿರುವ ಇನ್ನಿತರ ಸೇವೆಯ ವಿವರವನ್ನು ನೀಡಿದರು. ಕೌನ್ಸ್‍ಲಿಂಗ್

ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ, ಸುಮಾರು 120 ವಲಸೆ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳೊಂದಿಗೆ ನಾವು ಆಶ್ರಯದ ನೆರಳು ನೀಡಿದ್ದೇವೆ. ಉತ್ತರಭಾರತದ ಸುಮಾರು 60 ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರಿಗೆ ಪ್ರತಿನಿತ್ಯ ಸಿದ್ಧಪಡಿಸಿದ ಆಹಾರದೊಂದಿಗೆ ಅವಶ್ಯಕತೆ ಇರುವ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಸೈಂಟ್ ಜೋಸೆಫ್ಸ್ ಇಂಡಿಯನ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಾಕಷ್ಟು ಪಡಿತರ ಆಹಾರ ಮತ್ತು ದಿನಸಿ ಸಾಮಾಗ್ರಿಗಳನ್ನು ನ್ಯಾಯಯುತವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಈ ಲಾಕ್ ಡೌನ್ ಸಮಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಹಿರಿಯರು ಹಾಗೂ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಸೈಂಟ್ ಜೋಸೆಫ್ಸ್ ಸ್ಕೂಲ್ ಸಿಬಿಎಸ್‍ಇ ಯ ಆಡಳಿತ ಮಂಡಳಿಯು ವ್ಯಕ್ತಿಗಳಲ್ಲಿ ಸಾಮಾಜಿಕ ಧೈರ್ಯ, ದೃಢತೆ ಹಾಗೂ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಉಚಿತವಾಗಿ ಸಲಹೆಗಳನ್ನು ಕೌನ್ಸ್ಲಿಂಗ್ ಮೂಲಕ ನೀಡುವ ವ್ಯವಸ್ಥೆಯನ್ನು ಕೂಡ ಮಾಡಿದೆ.
ಸೈಂಟ್ ಜೋಸೆಫ್ ್ಸ ಸ್ಕೂಲ್ ಸಿಬಿಎಸ್‍ಇ ಶಾಲಾ ಪೋಷಕರು ಮತ್ತು ವಿದ್ಯಾರ್ಥಿಗಳೂ ಲಾಕ್ ಡೌನ್ ಗೆ ಸಂಬಂಧಿಸಿದಂತೆ ದೂರವಾಣಿ ಕರೆ ಮಾಡಿ ಪರಿಣತ ಮನೋಶಾಸ್ತ್ರಜ್ಞ ರೊಂದಿಗೆ ಸಮಲೋಚನೆ ನಡೆಸಲು ಆನ್ ಲೈನ್ ವ್ಯವಸ್ಥೆಯನ್ನು ಮಾಡಿದ್ದು, ಜೊತೆಗೆ ಮಾನಸಿಕ ಒತ್ತಡಗಳಿಂದ ಹೊರ ಬರಲು, ಯೋಗ ಹಾಗೂ ಇತರೆ ಕ್ರಿಯಾಶೀಲಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ.

ಪ್ರತಿನಿತ್ಯ 200 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಿದ್ಧ ಪಡಿಸಿದ ಆಹಾರದ ಪ್ಯಾಕ್‍ಗಳನ್ನು ಸಾಮಾಜಿಕ ಅಂತರವನ್ನು ಗಮನದಲ್ಲಿರಿಸಿಕೊಂಡು ಹಸಿದ ಬಡವರಿಗೆ ವಿತರಿಸಲಾಗುತ್ತಿದೆ.ಕೋವಿಡ್-19 ನ ನಡುವೆಯು ಕಾರ್ಯ ನಿರ್ವಹಿಸುತ್ತಿರುವ ಬಿಬಿಎಂಪಿ ಯ ಪೌರಕಾರ್ಮಿಕರಿಗೆ ಪಡಿತರ ದವಸ ಧಾನ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಯಿತು.
ಹಾಗೆಯೇ ಈ ಮಹಾಮಾರಿ ವೈರಸ್ ನಿಂದ ರಕ್ಷಣೆ ಪಡೆಯಲು ಕೂಲಿ ಕಾರ್ಮಿಕರಿಗೆ ಸುರಕ್ಷತೆಯ ಮುಂಜಾಗೃತ ಕ್ರಮವಾಗಿ ಉಚಿತ ಮಾಸ್ಕ್ ಗಳನ್ನು ವಿತರಿಸಲಾಯಿತು.

ಕ್ವಾರ್‍ಂಟೈನ್‍ನಲ್ಲಿರುವವರ ಹಾಗೂ ಸಾರ್ವಜನಿಕ ಆಂದೋಲನವನ್ನು ನಿರ್ವಹಿಸುತ್ತಿರುವಲ್ಲಿ ದಣಿವರಿವಿಲ್ಲದೆ ಕಾರ್ಯಾನಿರ್ವಹಿಸುತ್ತಿರುವ ಪೆÇೀಲಿಸ್ ಅಧಿಕಾರಿಗಳಿಗೆ ನಾವು ನಿಯಮಿತವಾಗಿ ಉಪಹಾರ ಮತ್ತು ಚಹಾವನ್ನು ಒದಗಿಸುವ ಮೂಲಕ ನೈತಿಕ ಬೆಂಬಲವನ್ನು ನೀಡುತ್ತಿದ್ದೇವೆ.
ಕಮ್ಮನಹಳ್ಳಿಯಲ್ಲಿ ವಸತಿ ಇಲ್ಲದ ನಿರ್ಗತಿಕರಿಗೆ ನಿಬಂಧನೆಗಳ ಅಡಿಯಲ್ಲಿ ನಿವಾಸವನ್ನು ಕಲ್ಪಿಸುವ ಮುಖಾಂತರ ಐಜೆಎಎಂ ಅಂತರ ರಾಷ್ಟ್ರೀಯ ನ್ಯಾಯ ಮತ್ತು ಕರುಣೆಯ ತಳಹದಿಯಲ್ಲಿ ನಮ್ಮ ಸಹಾಯವನ್ನು ವಿಸ್ತರಿಸಿದ್ದೇವೆ. ಚಿಕ್ಕನಾಯಕನ ಹಳ್ಳಿ, ಸರ್ಜಾಪುರ ಮುಖ್ಯರಸ್ತೆ, ಮುನ್ವೇಶ್ವರ ಲೇ ಔಟ್‍ನ ಕುಷ್ಠರೋಗ ಕಾಲೋನಿ ನಿರಾಶಿತರಿಗೆ ಯುನೈಟೆಡ್ ವೆಯ್ಸ್ ಬೆಂಗಳೂರು ಇವರ ಸಹಾಯದಿಂದ ದಿನಸಿ ಸಾಮಾಗ್ರಿಗಳನ್ನು ನೀಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಲಾಯಿತು.
ಭಾರತ ಲಾಕ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರು ತಮ್ಮ ಇತರೆ ಸಹದ್ಯೋಗಿ ಸದಸ್ಯರುಗಳೊಂದಿಗೆ ಸೇರಿ ಶಾಲಾ ಪೋಷಕರು ಹಿರಿಯ ವಯಸ್ಕರೂ ಹಾಗೂ ವಿದ್ಯಾರ್ಥಿಗಳೂ ಮನೆಯಿಂದಲೇ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವಂತಹ ಮತ್ತು ವಿವಿಧ ಬಗೆಯ ಚಿಂತನಶೀಲ ಸ್ಪರ್ಧೆಗಳನ್ನು ಆಯೋಜಿಸಿದ್ದು, ಕಾರ್ಯಗತ ರೂಪದಲ್ಲಿ ನಡೆಸುತ್ತಿದೆ.
ಬಾಗಲೂರು ಕೈಗಾರಿಕ ವಲಯದಲ್ಲಿರುವ ನಿರಾಶ್ರಿತರಿಗೆ ಕೂಡ ಸಂಸ್ಥೆಯು ಸಹಾಯ ಹಸ್ತವನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ನಮ್ಮ ಸೇವೆಯನ್ನು ಕಂಡು ವಿದ್ಯಾರ್ಥಿ ಬಳಗದ ಪೋಷಕರು ಸ್ವಯಂ ಪ್ರೇರಿತರಾಗಿ ಆರ್ಥಿಕ ನೆರವನ್ನು ನೀಡಿದ್ದು ಈ ಸಹಾಯವನ್ನು ಲಾಕ್ ಡೌನ್ ಮುಗಿಯುವವರೆಗೂ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ನಾವು ಸಹ ಅವರ ಜೊತೆಗೂಡಿ ಈ ಸೇವೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎನ್ನುತ್ತಾರೆ ಶಿಕ್ಷಕಿ ವಿಜಯರಾಣಿ. ಈ ಸಂಕಷ್ಟದ ಸಂದರ್ಬದಲ್ಲಿ ನೀವು ದೇವರಂತೆ ಬಂದು ಸಹಾಯ ಮಾಡಿದ್ದಿರಿ ಅನ್ನುತ್ತಾರೆ ಜಲಂದರ್ ಮಾನ್ವಿಯಿಂದ ಬಂದ ವಲಸಿಗ.
ನಮಗೆ ಕೆಲಸಕ್ಕಾಗಿ ಕರೆದ ಕೊಟ್ರ್ಯಾಕ್ಟರ್ ನಮ್ಮನ್ನು ಈ ಸಂದಿಗ್ದ ಪರಿಸ್ಥಿತಿಯಲ್ಲಿ ಬಿಟ್ಟು ಹೊಗಿದ್ದಾರೆ ನೀವು ಕೊಟ್ಟ ಈ ಕಿರಾಣಿಯಿಂದ ನಾವು ಕೆಲವು ದಿನಗಳ ಕಾಲ ನಮ್ಮ ಹಸಿವನ್ನು ನೀಗಿಸಬಹುದು. ನಿಮಗೆ ಪುಣ್ಯ ಬರಲಿ ಎಂದರು. ರಾಮಣ್ಣ ಬಾಗಲೂರಿನಲ್ಲಿರುವ ವಲಸಿ
ಸೆಂಟರ್ ಫಾರ್ ಸೋಸಿಯಲ್ ಕನ್ಸರ್ನ್ ನಿರ್ದೇಶಕರಾದ ಫಾ ರೋಹನ್ ಮಾತನಾಡಿ”ಮನುಕುಲದ ಒಳಿತಿಗಾಗಿ ನಮ್ಮ ಸೇವೆಯನ್ನು ಮಾಡುತ್ತಿದ್ದೇವೆ. ಈ ವರದಿಯ ಮುಖ್ಯ ಉದ್ದೇಶ ಹೆಸರು ಪಡೆಯಲು ಅಲ್ಲ ಬದಲಾಗಿ ಈ ರೀತಿಯ ಸೇವೆಯ ಮೂಲಕ ಇನ್ನು ಕೆಲವರು ಇಂತಹ ನಿರ್ಗತಿಕರ ಸೇವೆಗೆ ಪ್ರೇರಣೆಯಾಗಲು ಬಯಸುತ್ತೇವೆ’ ಎಂದರು.